
Hardik Pandya-Mahieka Sharma dating: ಭಾರತೀಯ ಸೂಪರ್ ಮಾಡೆಲ್ ಮಹಿಕಾ ಶರ್ಮಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ಸೋಶಿಯಲ್ ಮೀಡಿಯಾ ಪಿಡಿಎ ಕೂಡ ಇಬ್ಬರ ನಡುವಿನ ಅದ್ಭುತ ಕೆಮಿಸ್ಟ್ರಿಯ ಬಗ್ಗೆ ವಿವರಿಸಿದೆ. ಇತ್ತೀಚೆಗೆ, ಮಹಿಕಾ ಮತ್ತು ಹಾರ್ದಿಕ್ ಮನೆಯಲ್ಲಿ ಹನುಮಾನ್ ಹವನ ಮಾಡಿಸಿದ್ದರು. ಜೀವನದ ಹೊಸ ಅಧ್ಯಾಯದ ಆರಂಭವನ್ನು ಗುರುತಿಸಲು ದಂಪತಿಗಳು ಆಶೀರ್ವಾದ ಪಡೆದರು ಎಂದು ನೆಟ್ಟಿಗರು ಭಾವಿಸಿ ಈ ಬಗ್ಗೆ ವ್ಯಾಪಕವಾಗಿ ಸುದ್ದಿ ಮಾಡಿದರು. ಇನ್ನೂ ಕೆಲವರು ಮಹಿಲಾ ತನ್ನ ಬೆರಳಲ್ಲಿ ಧರಿಸಿದ್ದ ದೊಡ್ಡ ಕಲ್ಲಿನ ಉಂಗುರವನ್ನು ನೋಡಿ ನಡೆದಿದ್ದು ಹವನವಲ್ಲ. ಬದಲಾಗಿ ಇವರಿಬ್ಬರ ನಿಶ್ಚಿತಾರ್ಥ ಎಂದು ಸುದ್ದಿ ಹಬ್ಬಿಸಿದ್ದರು. ಕೆಲವು ಮಾಧ್ಯಮಗಳಲ್ಲೂ ಈ ಬಗ್ಗೆ ಸುದ್ದಿಯಾಗಿತ್ತು.
ಎಂಗೇಜ್‌ಮೆಂಟ್ ರೂಮರ್‌ಗೆ ಪ್ರತಿಕ್ರಿಯೆ ನೀಡಿದ ಮಹಿಕಾ
ಎಂಗೇಜ್‌ಮೆಂಟ್ ರೂಮರ್‌ಗಳ ಬಗ್ಗೆ ತಮ್ಮ ಮೌನ ಮುರಿದಿರುವ ಮಹಿಕಾ, ಈ ಕುರಿತಾದ ಗ್ರಾಫಿಕ್ ಇಮೇಜ್‌ಅನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಆಕೆ, 'ನಾನು ಪ್ರತಿದಿನ ಧರಿಸುವ ಅತ್ಯುತ್ತಮವಾದ ಜ್ಯುವೆಲ್ಲರಿಯೊಂದಿಗೆ ಇಂಟರ್ನೆಟ್ ನಾನು ಎಂಗೇಜ್ ಆಗಿರುವುದನ್ನು ನಿರ್ಧಾರ ಮಾಡಿದೆ' ಎಂದು ಒಂದು ಪೋಸ್ಟ್‌ನಲ್ಲಿ ಬರೆದಿದ್ದರೆ, ಇನ್ನೊಂದು ಪೋಸ್ಟ್‌ನಲ್ಲಿ ಪ್ರೆಗ್ನೆನ್ಸಿ ರೂಮರ್‌ಗಳ ಬಗ್ಗೆ ಅತ್ಯಂತ ನೇರವಾಗಿ ಮಾತನಾಡಿದ್ದಾರೆ. ಇನ್ನೊಂದು ಸ್ಟೋರಿಯಲ್ಲಿ. ಹಾಗೇನಾದರೂ ನಾನು ಇದನ್ನು ಎಳೆಯಲು ಶುರು ಮಾಡಿದರೆ, ಪ್ರಗ್ನೆನ್ಸಿ ರೂಮರ್‌ಗಳು ಹೋರಾಟ ಮಾಡಲು ಆರಂಭಿಸುತ್ತದೆ ಎಂದಿದ್ದಾರೆ.
ಹಾರ್ದಿಕ್ ಮತ್ತು ಮಹಿಕಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯನ್ನು ನಿಯಮಿತ ಚಿತ್ರಗಳು ಮತ್ತು ವೀಡಿಯೊಗಳ ಮೂಲಕ ಪ್ರದರ್ಶಿಸುತ್ತಿದ್ದಾರೆ. ಕಾರ್ ವಾಶ್ ಸೆಷನ್‌ಗಳು, ಪೂಲ್ ಡೇಗಳು, ಪೂಜೆಗಳನ್ನು ಮಾಡುವವರೆಗೆ ಇಬ್ಬರು ಕೂಡ ತುಂಬಾ ಸೀರಿಯಸ್ ಆದ ರಿಲೇಷನ್‌ಷಿಪ್‌ನಲ್ಲಿದ್ದಾರೆ ಅನ್ನೋದು ಗೊತ್ತಾಗಿದೆ. ಮಹಿಕಾ ಜೊತೆ ಡೇಟಿಂಗ್ ಮಾಡುವ ಮೊದಲು, ಹಾರ್ದಿಕ್ ನತಾಶಾ ಸ್ಟಾಂಕೋವಿಕ್‌ರನ್ನು ವಿವಾಹವಾಗಿದ್ದರು ಮತ್ತು ದಂಪತಿಗೆ ಒಬ್ಬ ಮಗನಿದ್ದಾನೆ. ಅವರು ಮೇ 2020 ರಲ್ಲಿ ವಿವಾಹವಾದರು ಮತ್ತು ಫೆಬ್ರವರಿ 2023 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಮಾರಂಭಗಳೊಂದಿಗೆ ಮದುವೆ ಪ್ರತಿಜ್ಞೆ ತೆಗೆದುಕೊಂಡಿದ್ದರು.
ಜುಲೈ 2024 ರಲ್ಲಿ, ಜಂಟಿ ಹೇಳಿಕೆಯಲ್ಲಿ, "ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು ಮತ್ತು ನಮ್ಮೆಲ್ಲವನ್ನೂ ಈ ಸಂಬಂಧಕ್ಕಾಗಿ ನೀಡಿದೆವು, ಆದರೆ ಇದು ನಮ್ಮಿಬ್ಬರ ಹಿತದೃಷ್ಟಿಯಿಂದ ಎಂದು ನಾವು ನಂಬುತ್ತೇವೆ. ಕುಟುಂಬವಾಗಿ ನಾವು ಹಂಚಿಕೊಂಡ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನಿಸಿದರೆ ಇದು ಕಠಿಣ ನಿರ್ಧಾರವಾಗಿತ್ತು. ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಉಳಿಯುವ ಅಗಸ್ತ್ಯ ನಮಗೆ ಆಶೀರ್ವಾದ. ಅವನ ಸಂತೋಷವನ್ನು ಖಚಿತಪಡಿಸಿಕೊಳ್ಳಲು ನಾವು ಸಹ-ಪೋಷಕರಾಗಿ ಮುಂದುವರಿಯುತ್ತೇವೆ' ಎಂದಿದ್ದರು.
ಮಹಿಕಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ತಿಳಿದಿಲ್ಲ. ಭಾರತದ ಅತ್ಯಂತ ಕಿರಿಯ ಸೂಪರ್ ಮಾಡೆಲ್‌ಗಳಲ್ಲಿ ಒಬ್ಬರಾದ ಅವರು ಮನೀಶ್ ಮಲ್ಹೋತ್ರಾ, ಅನಿತಾ ಡೊಂಗ್ರೆ ಮತ್ತು ತರುಣ್ ತಹಿಲಿಯಾನಿಯಂತಹ ಪ್ರಸಿದ್ಧ ವಿನ್ಯಾಸಕರ ಪರವಾಗಿ ರ‍್ಯಾಂಪ್‌ನಲ್ಲಿ ನಡೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.