ವಿವಾಹದ ಸಮಯದಲ್ಲಿ ವಧುವಿಗೆ ವರನಾದವನು ಹಣೆಗೆ ಸಿಂಧೂರವಿಡುತ್ತಾನೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ವಧು ಸಹ ವರನ ಹಣೆಗೆ ಸಿಂಧೂರ ಇರಿಸುವುದು ಕಂಡುಬರುತ್ತದೆ. ಈ ವೀಡಿಯೋಕ್ಕೆ ಜನ ಖುಷಿ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ವೀಡಿಯೋ ನೆಟ್ಟಿಗರ ಮನಸೂರೆಗೊಂಡಿದೆ.
ಮದುವೆ ಎಂದರೆ ಸಂಪ್ರದಾಯಗಳು, ಶಾಸ್ತ್ರ, ಪದ್ಧತಿಗಳಿಗೆ ಹೆಚ್ಚಾಗಿ ಆದ್ಯತೆ ನೀಡುವ ಸಮಯ. ವಿವಾಹದ ಸಮಯದಲ್ಲಿ ಗಂಡಿನ ಕಡೆಯವರು ಒಂದು ರೀತಿಯ ಸಂಪ್ರದಾಯ ಅನುಸರಿಸಿದರೆ, ಹೆಣ್ಣಿನ ಕಡೆಯವರದ್ದು ಮತ್ತೊಂದು ರೀತಿಯ ಪದ್ಧತಿ. ಒಟ್ಟಿನಲ್ಲಿ ಎಲ್ಲ ಸಂಪ್ರದಾಯಗಳನ್ನು ಅನುಸರಿಸುತ್ತ ವಧುವರರು ಹೈರಾಣಾಗುತ್ತಾರೆ. ಎಲ್ಲ ಶಾಸ್ತ್ರ, ಸಂಪ್ರದಾಯಗಳನ್ನು ಶಿಸ್ತಾಗಿ ಪಾಲಿಸುವ ಮೂಲಕ ದಂಪತಿಯಾಗಿ ಒಂದಾಗುತ್ತಾರೆ. ಆದರೆ, ಕೆಲವು ಜೋಡಿ ಸಂಪ್ರದಾಯವನ್ನು ಮೀರುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡುತ್ತಾರೆ. ಕೆಲವು ವಧುವರರು ಸಾಮಾನ್ಯ ಪದ್ಧತಿಗಿಂತ ಬೇರೊಂದು ರೀತಿಯಲ್ಲಿ ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ತೋರಿಸಿಕೊಳ್ಳುತ್ತಾರೆ. ಇಂತಹ ವೀಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವರನಾಗಿರುವವನು ವಧುವಿಗೆ ಸಿಂಧೂರ ಇಡಿಸುವುದು ಸಂಪ್ರದಾಯ. ಈ ವೀಡಿಯೋದಲ್ಲಿ ವಧು ಕೂಡ ವರನ ಹಣೆಗೆ ಸಿಂಧೂರ ಇಡಿಸುವುದು ಕಂಡುಬರುತ್ತದೆ.
ಆಫಿಶಿಯಲ್ ಹ್ಯೂಮನ್ಸ್ ಆಫ್ ಬಾಂಬೆ ಎನ್ನುವ ಖಾತೆಯಿಂದ ಈ ಅಪರೂಪದ ವೀಡಿಯೋ ಪೋಸ್ಟ್ (Post) ಆಗಿದೆ. ಅಷ್ಟೇ ಅಲ್ಲ, ಈ ಪೋಸ್ಟ್ ಮೂಲಕ ಅವರು ತಮ್ಮ ದೀರ್ಘವಾದ ಲವ್ ಸ್ಟೋರಿಯನ್ನು (Love Story) ಸಹ ಹೇಳಿಕೊಂಡಿದ್ದಾರೆ. ಮೊದಲ ಬಾರಿ 2013ರಲ್ಲಿ ಬೆಂಗಳೂರಿನ ಜ್ಯೂಸ್ ಕೆಫೆಯೊಂದರ ಎದುರು ಕಸಕ್ (Kasak) ಎನ್ನುವ ಹುಡುಗಿಯನ್ನು ನೋಡಿದ (Meet) ಸನ್ನಿವೇಶವನ್ನು ಬರೆದುಕೊಂಡಿದ್ದಾರೆ. ಜ್ಯೂಸ್ ಶಾಪ್ ನಲ್ಲಿ ಕಸಕ್ ಜ್ಯೂಸ್ (Juice) ಕುಡಿಯುತ್ತಿರುವಾಗ ಆಕೆಯನ್ನು ಜಿಮ್ ಕಿಟಕಿಯಿಂದ ಕಂಡಿದ್ದ ಈ ಹುಡುಗ “ಎಷ್ಟು ಚೆನ್ನಾಗಿದ್ದಾಳೆ’ ಎಂದು ಮನಸಲ್ಲೇ ಹೇಳಿಕೊಂಡಿದ್ದರು. ಆಕೆ ತನ್ನ ಕೈಯಿಂದ ಕಿವಿಯ ಹಿಂದೆ ಕೂದಲನ್ನು ಎಳೆದುಕೊಂಡಾಗ ತನ್ನ ಹೃದಯ ಒಂದು ಸಮರ್ ಸಾಲ್ಟ್ ಹೊಡೆದಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
undefined
ಪ್ರತಿ ಹೆಂಡತಿಯೂ ತನ್ನ ಪತಿಯಿಂದ ಬಯಸುವ ಆ 5 ವಿಷ್ಯಗಳು ಯಾವುವು ಗೊತ್ತಾ?
ಮೊದಲ ಮಾತುಕತೆ
ಮೊದಲ ಭೇಟಿಯಲ್ಲೇ ಮನಸೂರೆಗೊಂಡಿದ್ದ ಹುಡುಗಿಯನ್ನು ಮಾತನಾಡಿಸಲು ಅವರಿಗೆ ಧೈರ್ಯ ಬಂದಿಲ್ಲ. “ಆಕೆ ತಮ್ಮ ವ್ಯಾಪ್ತಿಗೆ ದೊರೆಯುವವರಲ್ಲ ಎಂದು ತಿಳಿದಿತ್ತು’ ಎಂದು ಹೇಳಿಕೊಂಡಿದ್ದಾರೆ. ಆದರೂ ಮನಸ್ಸು ಕೇಳಲಿಲ್ಲ. ಆಕೆ ತನ್ನ ಸೀನಿಯರ್ ಜತೆ ಅಲ್ಲಿಗೆ ಜ್ಯೂಸ್ ಕುಡಿಯಲು ಬಂದಿರುವುದನ್ನು ಪತ್ತೆ ಮಾಡಿದರು. ಬಳಿಕ, ಆಕೆಯನ್ನು ಹಿಂಬಾಲಿಸಲು ಆರಂಭಿಸಿದರು. ಸರಿಯಾದ ಸಮಯಕ್ಕೆ ಅದೇ ಜ್ಯೂಸ್ ಶಾಪ್ ಬಳಿ ಹೋಗಿ ನಿಲ್ಲಲು ಆರಂಭಿಸಿದರು. ಒಂದು ದಿನ ಬೋಲ್ಡ್ ಸ್ಟೆಪ್ ತೆಗೆದುಕೊಂಡು, ವಿನೋದದಿಂದ ಎಂಬಂತೆ, “ಜ್ಯೂಸ್ ಕುಡಿದ್ರಾ?’ ಎಂದು ಪ್ರಶ್ನಿಸಿದರು. ಆಕೆಯೂ ತಿರುಗಿ “ನಂದಾಯ್ತು, ನಿಮ್ಮದು?’ ಎಂದು ಪ್ರಶ್ನಿಸಿದಾಗ ಇವರಿಗೆ ಸ್ವರ್ಗಕ್ಕೆ ಮೂರೇ ಗೇಣು. ಅಲ್ಲಿಂದ ಮುಂದೆ ಆಕೆಯನ್ನು ಭೇಟಿಯಾಗುವ ಯಾವುದೇ ಸಂದರ್ಭವನ್ನು ಸಹ ಇವರು ಮಿಸ್ ಮಾಡಿಕೊಳ್ಳಲಿಲ್ಲ. ಕ್ರಮೇಣ ಅವರಿಬ್ಬರೂ ಉತ್ತಮ ಸ್ನೇಹಿತರಾದರು.
ಡೇಟಿಂಗ್ ಆರಂಭ
ಆದರೆ, ಆಕೆಯೊಂದಿಗೆ ಇವರಿಗೆ ಇನ್ನೂ ಹೆಚ್ಚಿನ ಸಾಂಗತ್ಯ ಬೇಕಾಗಿತ್ತು. ಮೂರು ತಿಂಗಳ ಬಳಿಕ “ಐ ಲೈಕ್ ಯೂ’ ಎಂದು ಹೇಳಿದರು. ಆಕೆಯ ಉತ್ತರ “ನೋ’ ಎಂದಾಗಿತ್ತು. ಆದರೆ, ಅಲ್ಲಿಂದ ಅವರು ಹೆಚ್ಚು ಹೆಚ್ಚು ಸಮಯ (Time) ಜತೆಯಾಗಿ ಕಳೆಯಲು ಆರಂಭಿಸಿದರು. ಆಕೆ ಇವರ ಮನೆಗೆ ಬರುತ್ತಿದ್ದರು. ಅವರಿಬ್ಬರೂ ಜಗಳವಾಡುತ್ತಿದ್ದರು, ಭಿನ್ನಾಭಿಪ್ರಾಯಗಳಿಂದ ವಾದ (Fight) ಮಾಡುತ್ತಿದ್ದರು. “ಆದರೆ, ಕೊನೆಗೊಮ್ಮ ಡೇಟಿಂಗ್ (Dating) ಆರಂಭಿಸಿದೆವು. ಪ್ರೊಪೋಸ್ ಮಾಡಲೂ ಇಲ್ಲ, ಪ್ರೇಮನಿವೇದನೆಯೂ ಇರಲಿಲ್ಲ, ನಮಗೆ ತಿಳಿದಿತ್ತು’ ಎಂದು ಹೇಳಿಕೊಂಡಿದ್ದಾರೆ.
ಕೊನೆಗಂತೂ ಮದುವೆ
ತಮ್ಮ ತಾಯಿಗೆ ಹೇಳಿದಾಗ ಆಕೆ ಮೊದಲಿಗೆ ಒಪ್ಪಿಕೊಳ್ಳಲಿಲ್ಲ. ಆದರೆ, 2017ರಲ್ಲಿ ಅಮ್ಮನಿಗೆ ಆಪರೇಷನ್ ಆದಾಗ ಈಕೆ ಅವರ ಕೇರ್ (Care) ಮಾಡಿದರು. ಆಗ ಅಮ್ಮ “ಇವಳಷ್ಟು ಉತ್ತಮ ಸಂಗಾತಿ (Partner) ನಿನಗೆ ಬೇರೆ ಯಾರೂ ದೊರೆಯುವುದಿಲ್ಲ’ ಎಂದು ಹೇಳಿದಾಗ ನಾವು ಕ್ಲೌಡ್ 9 ಮೇಲಿದ್ದೆವು ಎಂದು ಹೇಳಿಕೊಂಡಿದ್ದಾರೆ. ಆದರೂ ಮುಂದಿನ 5 ವರ್ಷಗಳ ಕಾಲ ನಮ್ಮ ವೃತ್ತಿ (Career) ಜೀವನದ ಮೇಲೆ ಫೋಕಸ್ ಮಾಡಿದೆವು. 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು.
ಬಾಯ್ ಫ್ರೆಂಡ್ ಹುಡುಕೋದು ಹೇಗೆ ಗೊತ್ತಾ? ಡೇಟಿಂಗ್ ಮಾಡಿಲ್ಲವಾ ..ಚಿಂತೆ ಬಿಡಿ ಹೀಗೆ ಮಾಡಿ
“ಇವಳನ್ನು ದೂರದಿಂದ ನೋಡಿದಾಗ ನಾನು ಇವಳನ್ನೇ ಮದುವೆಯಾಗುತ್ತಿರುವುದನ್ನು ನಂಬಲು ಆಗುತ್ತಿರಲಿಲ್ಲ’ ಎಂದು ತಮ್ಮ ಉದ್ವೇಗವನ್ನು ಹೇಳಿಕೊಂಡಿರುವ ಈ ಹುಡುಗ, “ಮದುವೆಯ (Marriage) ಸಮಯದಲ್ಲಿ ತಾವು ಆಕೆಯ ಹಣೆಗೆ ಸಿಂಧೂರವಿಟ್ಟಾಗ (Sindhoor) ಅವಳಿಂದಲೂ ಇಡಿಸಿಕೊಳ್ಳಬೇಕು ಎನಿಸಿತು. ಅವಳಿಗೆ ಹುಚ್ಚು ಎನಿಸಿದರೂ ಹಣೆಗೆ ಹಣೆಗೆ ಸಿಂಧೂರವಿಟ್ಟಳು’ ಎಂದು ವಿವರಿಸಿದ್ದಾರೆ.