ಸ್ಪರ್ಧೆ ಇದ್ದಿದ್ದು ಅಂಬೆಗಾಲಿಡೋ ಮಕ್ಕಳಿಗೆ: ಸುಸ್ತಾಗಿದ್ದು ಮಾತ್ರ ಅಮ್ಮಂದಿರು: ವೈರಲ್ ವೀಡಿಯೋ

By Suvarna News  |  First Published Sep 13, 2023, 1:05 PM IST

ಅಂಬೆಗಾಲಿಡುವ ಮಕ್ಕಳಿಗೆ ಇನ್ನು ಬುದ್ದಿ ಬಂದಿರುವುದಿಲ್ಲ, ಜಗತ್ತಿನ ಯಾವ ಚಿಂತೆಗಳು ಇಲ್ಲದೇ ತಮಗಿಷ್ಟ ಬಂದಂತೆ ಆಡುವ ಪ್ರಾಯವದು, ಇಂತಹ ಮಕ್ಕಳಿಗೆ ಸ್ಪರ್ಧೆಯನ್ನು ಆಯೋಜಿಸಿದ್ದು, ಅದು ಎಷ್ಟು ಮಜಾವಾಗಿತ್ತು ಎಂಬುದನ್ನು ನೀವು ವೀಡಿಯೋದಲ್ಲೇ ನೋಡಬೇಕು.


ಆಗಷ್ಟೇ ಕೈ ಕಾಲು ಹುಟ್ಟಿದ ಅಂಬೆಗಾಲಿಡಲು ಆರಂಭಿಸಿದ ಮಕ್ಕಳನ್ನು ನಿಭಾಯಿಸುವುದು ಬಲು ಕಷ್ಟದ ಕೆಲಸ ಕುಳಿತಲ್ಲಿ ಕೂರದ ನಿಂತಲ್ಲಿ ನಿಲ್ಲದ ಈ ಮಕ್ಕಳು ಒಂದು ಕ್ಷಣ ಕಣ್‌ ತಪ್ಪಿದರೂ ಇನ್ನೇನಾದರು ಅನಾಹುತ ಸೃಷ್ಟಿಸಿ ಬಿಡುತ್ತಾರೆ. ಇಂತಹ ಮಕ್ಕಳಿರು ಮನೆಯಲ್ಲಿ ಯಾರಾದರೊಬ್ಬರು ಇವರನ್ನು ನೋಡಿಕೊಳ್ಳಲು ಸದಾ ಇರಲೇಬೇಕು. ಹೀಗಿರುವಾಗ ಇಂತಹ ಅಂಬೆಗಾಲಿಡುವ ಮಕ್ಕಳಿಗೆ ತೆವಳೋ ಸ್ಪರ್ಧೆ ಇಟ್ಟರೆ ಹೇಗಿರುತ್ತೆ?

ಅಂಬೆಗಾಲಿಡುವ ಮಕ್ಕಳಿಗೆ ಇನ್ನು ಬುದ್ದಿ ಬಂದಿರುವುದಿಲ್ಲ, ಜಗತ್ತಿನ ಯಾವ ಚಿಂತೆಗಳು ಇಲ್ಲದೇ ತಮಗಿಷ್ಟ ಬಂದಂತೆ ಆಡುವ ಪ್ರಾಯವದು, ಇಂತಹ ಮಕ್ಕಳಿಗೆ ಸ್ಪರ್ಧೆಯನ್ನು ಆಯೋಜಿಸಿದ್ದು, ಅದು ಎಷ್ಟು ಮಜಾವಾಗಿತ್ತು ಎಂಬುದನ್ನು ನೀವು ವೀಡಿಯೋದಲ್ಲೇ ನೋಡಬೇಕು. 4 ರಿಂದ 5 ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ ಮಕ್ಕಳ ಪೋಷಕರಂತು ತಾವೇ ಈ ಸ್ಪರ್ಧೆಯಲ್ಲಿ ಭಾಗವಹಿಸಿದೆವೇನೋ ಎಂಬ ಉತ್ಸಾಹ ಆತಂಕದಲ್ಲಿ ತಮ್ಮ ಮಕ್ಕಳು ಮೊದಲು ಸ್ಥಾನ ಬರಬೇಕೆಂದು ಪಕ್ಕದಲ್ಲಿ ನಿಂತು ಬೊಬ್ಬೆ ಹೊಡೆದು ಪೇಚಾಡುತ್ತಿದ್ದಿದ್ದು ನೋಡಲು ಮಜಾವಾಗಿತ್ತು. 

Tap to resize

Latest Videos

ತಮ್ಮ ಹುಟ್ಟಿನ ರಹಸ್ಯ ಬಿಚ್ಚಿಟ್ಟು ಭಾವುಕರಾದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ!

Fabulous Mom Life ಎಂಬ ಫೇಸ್‌ಬುಕ್ ಪೇಜ್‌ನಿಂದ ಈ 59 ಸೆಕೆಂಡ್‌ಗಳ ವೀಡಿಯೋ ಪೋಸ್ಟ್ ಆಗಿದ್ದು  9 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ, ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ.

ವೀಡಿಯೋದಲ್ಲೇನಿದೆ. 

ಆಗಷ್ಟೇ ಅಂಬೆಗಾಲಿಟ್ಟು ಅತ್ತಿತ್ತ ಹೋಗಲು ಶುರು ಮಾಡಿದ ಮಕ್ಕಳಿಗೆ ಇಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಯಾರು ಮೊದಲು ತೆವಳಿಕೊಂಡು ಬಂದು  ಗುರಿ ಮುಟ್ಟುತ್ತಾರೋ ಅವರಿಗೆ ಪ್ರಶಸ್ತಿ ಅದರಂತೆ ಸ್ಪರ್ಧೆ ಆಯೋಜಿಸಲಾಗಿದ್ದು, ರೆಡಿ ಸ್ಟೆಡಿ ಕ್ರೌಲ್ ಅಂತ ಹೇಳಿದ್ದಾರೆ ಆಯೋಜಕರು. ಆದರೆ ಮಕ್ಕಳಿಗೇನು ಗೊತ್ತು ಇದು ಸ್ಪರ್ಧೆ ಮೊದಲೇ ಹೋಗಿ ಪ್ರಶಸ್ತಿ ಬಾಚಿಕೊಳ್ಳಬೇಕು ಎಂಬುದು! ಹೀಗಾಗಿ ಕೆಲ ಮಕ್ಕಳು ತೆವಳಿಕೊಂಡು ಹೋದರೆ ಮತ್ತೆ ಕೆಲ ಮಕ್ಕಳು ಅಲ್ಲೇ ಇರುವ ಪೋಷಕರ ಮುಖ ನೋಡುತ್ತಾ ಕುಳಿತಿದ್ದಾರೆ. ಇತ್ತ ಮತ್ತೊಂದು ತುದಿಯಲ್ಲಿ ತಾಯಿಯರು ನಿಂತಿದ್ದು, ಮಕ್ಕಳನ್ನು ಬನ್ನಿ ಬನ್ನಿ ಎಂದು ಕರೆಯುವುದನ್ನು ಕಾಣಬಹುದಾಗಿದೆ.

ಸ್ಪರ್ಧೆ ಆರಂಭವಾದಂತೆ ಒಂದು ಮಗು ವೇಗವಾಗಿ ತೆವಳುತ್ತಾ ಬಂದು ಫಿನಿಶಿಂಗ್ ಲೈನ್‌ಗಿಂತ ತುಸು ಹಿಂದೆ ನಿಂತು ಬಿಟ್ಟಿದೆ. ಮಗುವಿನ ತಾಯಿ ಬಾ ಬಾ ಎಂದು ಎಷ್ಟು ಕರೆದರೂ ಮಗು ಮಾತ್ರ ಫಿನಿಶಿಂಗ್ ಗೆರೆ ದಾಟಿ ಬಂದಿಲ್ಲ, ಅಲ್ಲದೇ ವಾಪಸ್ ತೆವಳಿಕೊಂಡು ಹಿಂದೆ ಹೋಗಿದೆ. ಇತ್ತ ಬೇರೆ ಮಕ್ಕಳು ಈ ನಡುವೆ ತೆವಳುತ್ತಾ ತಮ್ಮ ಅಮ್ಮ ಇರುವಲ್ಲಿಗೆ ಬಂದಿದ್ದು, ಪೋಷಕರು ತಮ್ಮ ಮಕ್ಕಳು ಫಿನಿಶಿಂಗ್ ಲೈನ್ ಮುಟ್ಟುವುದಕ್ಕಾಗಿ ಪಕ್ಕದಲ್ಲಿ ನಿಂತುಕೊಂಡು ಮಗುವಿಗಿಷ್ಟವಾದುದನ್ನು ತೋರಿಸುತ್ತಾ ತಾವೇ ಸ್ಪರ್ಧೆಯಲ್ಲಿ ಭಾಗವಹಿಸಿದಂತೆ ಉತ್ಸುಕರಾಗಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಹಾರುವ ಕಪ್ಪೆಯನ್ನು ಕೊಳಗಕ್ಕೆ ಹಾಕಿದಂತಾಗಿದೆ ಇಲ್ಲಿ ತಾಯಂದಿರ ಸ್ಥಿತಿ, ತಮ್ಮ ಮಕ್ಕಳು ಮೊದಲ ಸ್ಥಾನ ಬರಬೇಕೆಂದು ಪಕ್ಕದಲ್ಲಿ ನಿಂತು ತಾಯಾಂದಿರು ಪೇಚಾಡುವುದನ್ನು ನೋಡುವುದೇ ಒಂದು ಮಜಾ. ವೀಡಿಯೋ ನೋಡಿದ ಅನೇಕರು ಇದು ಮಜಾವಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ, ಮತ್ತೆ ಕೆಲವರು ಮಕ್ಕಳಿಗೆ ಪಕ್ಕದಲ್ಲಿ ನಿಂತು ಮೊಬೈಲ್ ಆಮಿಷ ತೋರಿದ ಪೋಷಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವಿಶ್ರಾಂತಿಗೆ ಜಾರಿದ ಅಮ್ಮ ಮಕ್ಕಳು: IFS ಅಧಿಕಾರಿ ಶೇರ್ ಮಾಡಿದ ಹುಲಿಯನ ಫ್ಯಾಮಿಲಿ ವೀಡಿಯೋ

ಒಟ್ಟಿನಲ್ಲಿ ಮಕ್ಕಳ ತುಟಾಂಟ ಯಾವುದರ ಅರಿವು ಇಲ್ಲದ ಮುಗ್ಧತೆಯ ಈ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ.

 

click me!