ಬಾಲಿವುಡ್ ನಟಿ ಪೂಜಾ ಭಟ್, ತಮ್ಮ ತಂದೆಯ ತೊಡೆಯ ಮೇಲೆ ಕುಳಿತು ಮೈ ಮರೆತು ಲಿಪ್‌ಲಾಕ್ ಮಾಡಿದ್ದ ಫೋಟೋ ವೈರಲ್ ಆಗಿತ್ತು. ತಂದೆ-ಮಗಳು, ತಾಯಿ-ಮಗನ ಮಧ್ಯೆ ಅಟ್ರ್ಯಾಕ್ಷನ್ ಮೂಡುವುದು ನಿಜವೇ, ಇಷ್ಟಕ್ಕೂ ತಂದೆ-ಮಗಳ ಮಧ್ಯೆ ಸೆಕ್ಸುವಲ್ ಅಟ್ರ್ಯಾಕ್ಷನ್ ಹೇಗೆ ಸಾಧ್ಯ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ವಿವಾದಗಳಿಗೆ ಸಖತ್ ಫೇಮಸ್. ಅವರ ಆಫೇರ್‌ಗಳು ಮತ್ತು ಮಗಳೊಂದಿಗಿನ ಸಂಬಂಧದ ಬಗ್ಗೆ ಅವರು ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿದ್ದಾರೆ. ಒಮ್ಮೆ ಅವರು ಮಗಳು ಪೂಜಾ ಭಟ್‌ರನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿತ್ತು. ಸದ್ಯ ಹಿಂದಿ ಬಿಗ್ ಬಾಸ್ ಓಟಿಟಿ-2 ಕಾರ್ಯಕ್ರಮ ದಿನಕಳೆದಂತೆ ರಂಗೇರುತ್ತಿದ್ದು,ಕಾರ್ಯಕ್ರಮದಲ್ಲಿ ಮುಖ್ಯವಾಗಿ ಕೆಲ ಸ್ಪರ್ಧಿಗಳು ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಆರಂಭದಲ್ಲಿ ಪ್ಯಾನೆಲಿಸ್ಟ್ ಆಗಿ ವೇದಿಕೆ ಮೇಲೆ ಕೂತಿದ್ದ ಪೂಜಾ ಭಟ್ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಪಡೆದದ್ದು ಎಲ್ಲರಿಗೂ ಶಾಕ್ ಆಗಿತ್ತು. ಅದಕ್ಕೆ ಕಾರಣ ಪೂಜಾ ಭಟ್ ಸುತ್ತ ಇರೋ ಕೆಲವು ವಿವಾದಗಳು
80ರ ದಶಕದಲ್ಲಿ ಬಾಲಿವುಡ್ ನಲ್ಲಿ ಬಿಕಿನಿ ಧರಿಸಿ ಹಾಟ್ & ಬೋಲ್ಡ್ ಲುಕ್ ನಲ್ಲಿ ಪಡ್ಡೆ ಹುಡುಗರ ಗಮನ ಸೆಳೆದವರು ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ಪೂಜಾ ಭಟ್. ಹಲವು ಯಶಸ್ವೀ ಸಿನಿಮಾಗಳನ್ನು (Movie) ನೀಡಿದ್ದ ಪೂಜಾ ಭಟ್, ಬೋಲ್ಡ್ ಆಗಿ ನಟಿಸುವ (Acting) ಮೂಲಕ ಸಿನಿಮಾರಂಗದಲ್ಲಿ ಮಿಂಚಿದ್ದರು. ಆ ಸಮಯದಲ್ಲಿ ಅವರ ಒಂದು ಫೋಟೋ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ತಂದೆ ಮಹೇಶ್ ಭಟ್ ಜೊತೆ ಲಿಪ್ ಲಾಕ್ ಮಾಡಿದ್ದ ಪೂಜಾ ಭಟ್ ಫೋಟೋ ವೈರಲ್ ಆಗಿತ್ತು.
ಸೆಕ್ಸ್ ಲೈಫನ್ನು ಸಂಪೂರ್ಣವಾಗಿ ಹಾಳು ಮಾಡುತ್ತೆಂಬ ಆತಂಕವೂ ಕಾಡುತ್ತೆ ಮನುಷ್ಯನಿಗೆ!
ತಂದೆ-ಮಗಳು ಪೂಜಾ ಭಟ್ –ಮಹೇಶ್ ಭಟ್ ಪರಸ್ಪರ ಚುಂಬಿಸುವ ಫೋಟೋ ವೈರಲ್
ಸ್ಟಾರ್ಡಸ್ಟ್ ಮ್ಯಾಗ್ ಜಿನ್‌ನಲ್ಲಿ ಪ್ರಕಟವಾದ ಫೋಟೋ ದೊಡ್ಡ ವಿವಾದ ಸೃಷ್ಟಿಸಿತ್ತು. ತಂದೆ-ಮಗಳಾಗಿರುವ ಪೂಜಾ ಭಟ್ –ಮಹೇಶ್ ಭಟ್ ಪರಸ್ಪರ ಚುಂಬಿಸುವ (Kissing) ಫೋಟೋವನ್ನು ಅಂದು ಮ್ಯಾಗ್ ಜಿನ್ ಗಾಗಿ ಶೂಟ್ ಮಾಡಲಾಗಿತ್ತು. ತಂದೆ ಮಹೇಶ್ ಭಟ್ ಮಡಿಲಿನ ಮೇಲೆ ಕೂತುಕೊಂಡು ಪೂಜಾ ಭಟ್ ಲಿಪ್ ಲಾಕ್ ಮಾಡಿರುವ ಫೋಟೋ ಮ್ಯಾಗ್ ಜಿನ್ ಮುಖಪುಟದಲ್ಲಿ ಹಾಕಲಾಗಿತ್ತು. ಫೋಟೋಗೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ತಂದೆ-ಮಗಳ ಅಶ್ಲೀಲ ವರ್ತನೆಯ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ನಿರ್ದೇಶಕ ಮಹೇಶ್ ಭಟ್ ಪ್ರತಿಕಾಗೋಷ್ಠಿ ನಡೆಸಿ ಇದಕ್ಕೆ ಸ್ಪಷ್ಟನೆ ನೀಡಲು ಮುಂದಾಗಿ, 'ಪೂಜಾ ನನ್ನ ಮಗಳಲ್ಲದಿದ್ದರೆ ನಾನು ಅವಳನ್ನು ಮದುವೆಯಾಗುತ್ತಿದ್ದೆ' ಎಂದು ಹೇಳಿದ್ದು ವಿವಾದವನ್ನು ಮತ್ತಷ್ಟು ಹೆಚ್ಚಿಸಿತ್ತು.
ಇಷ್ಟಕ್ಕೂ ತಂದೆ-ಮಗಳ ಮಧ್ಯೆ ಸೆಕ್ಸುವಲ್ ಅಟ್ರ್ಯಾಕ್ಷನ್ ಹೇಗೆ ಸಾಧ್ಯ? ತಂದೆ-ಮಗಳು, ತಾಯಿ-ಮಗನ ಮಧ್ಯೆ ಅಟ್ರ್ಯಾಕ್ಷನ್ ಮೂಡುವುದು ನಿಜವೇ, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
High Sex Drive: ಸೆಕ್ಸ್ ಬಗ್ಗೆ ಸಿಕ್ಕಾಪಟ್ಟೆ ಇಂಟರೆಸ್ಟ್, ಈ ಹೈ ಲಿಬಿಡೋಗೆ ಕಾರಣವೇ ಅರ್ಥ ಆಗ್ತಿಲ್ಲ!
ಈಡಿಪಸ್ ಕಾಂಪ್ಲೆಕ್ಸ್ ಎಂದರೇನು?
ತಂದೆ-ಮಗಳು ಅಥವಾ ತಾಯಿ-ಮಗನ ಮಧ್ಯೆ ಮೂಡುವ ಲೈಂಗಿಕ ಭಾವನೆಯನ್ನು (Sexual attraction) ಈಡಿಪಸ್ ಕಾಂಪ್ಲೆಕ್ಸ್, ಈಡಿಪಲ್ ಕಾಂಪ್ಲೆಕ್ಸ್ ಎಂದು ಕರೆಯುತ್ತಾರೆ. ಇದು ಮಗುವಿನ ವಿರುದ್ಧ ಲಿಂಗದ ಪೋಷಕರ ಮೇಲಿನ ಬಯಕೆಯ ಭಾವನೆಗಳನ್ನು ಮತ್ತು ಅವರ ಸಲಿಂಗ ಪೋಷಕರ ಕಡೆಗೆ ಅಸೂಯೆ ಮತ್ತು ಕೋಪವನ್ನು ವಿವರಿಸುತ್ತದೆ. ಈ ಪರಿಕಲ್ಪನೆಯನ್ನು ಮೊದಲು ಸಿಗ್ಮಂಡ್ ಫ್ರಾಯ್ಡ್ ಅವರು ಅಭಿವೃದ್ಧಿಯ ಮಾನಸಿಕ ಲೈಂಗಿಕ ಹಂತಗಳ ಸಿದ್ಧಾಂತದಲ್ಲಿ ಪರಿಚಯಿಸಿದರು.
ಸರಳವಾಗಿ ಹೇಳುವುದಾದರೆ, ಒಬ್ಬ ಹುಡುಗ ತನ್ನ ತಾಯಿಯನ್ನು ಸ್ವಾಧೀನಪಡಿಸಿಕೊಳ್ಳಲು ತನ್ನ ತಂದೆಯೊಂದಿಗೆ ಸ್ಪರ್ಧಿಸುತ್ತಿದ್ದೇನೆ ಎಂದು ಭಾವಿಸುತ್ತಾನೆ, ಆದರೆ ಹುಡುಗಿ ತನ್ನ ತಂದೆಯ ವಾತ್ಸಲ್ಯಕ್ಕಾಗಿ ತನ್ನ ತಾಯಿಯೊಂದಿಗೆ ಸ್ಪರ್ಧಿಸುತ್ತಿದ್ದೇನೆ ಎಂದು ಭಾವಿಸುತ್ತಾಳೆ. ಫ್ರಾಯ್ಡ್ ಪ್ರಕಾರ, ಮಕ್ಕಳು ತಮ್ಮ ಸಲಿಂಗ ಪೋಷಕರನ್ನು ವಿರುದ್ಧ ಲಿಂಗದ ಪೋಷಕರ ಗಮನ ಮತ್ತು ಪ್ರೀತಿಗೆ ಪ್ರತಿಸ್ಪರ್ಧಿಯಾಗಿ ನೋಡುತ್ತಾರೆ.