ಗರ್ಭಧರಿಸಲು ಎಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಿದರೆ ಒಳ್ಳೆಯದು ?

Published : Apr 22, 2022, 02:56 PM IST
ಗರ್ಭಧರಿಸಲು ಎಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಿದರೆ ಒಳ್ಳೆಯದು ?

ಸಾರಾಂಶ

ಕೆಲವೇ ಕೆಲವು ಮಹಿಳೆ (Women)ಯರು ಮಾತ್ರ ಮೊದಲ ಪ್ರಯತ್ನದಲ್ಲಿಯೇ ಗರ್ಭಿಣಿ (Preganant)ಯಾಗುತ್ತಾರೆ. ಇನ್ನು ಕೆಲವೊಬ್ಬರು ಸಾಕಷ್ಟು ಪ್ರಯತ್ನ ಮಾಡಿದ ನಂತರವೂ ಸೋಲುತ್ತಾರೆ. ಹಾಗಾಗಿ ಮಗು (Baby) ಪಡೆಯಲು ಬಯಸುತ್ತಿರುವ ಮಹಿಳೆಯರು ಯಾವಾಗ ಸಂಭೋಗಿಸಬೇಕು, ಎಷ್ಟು ಬಾರಿ ಸಂಭೋಗಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ಗರ್ಭಧಾರಣೆ (Preganancy) ಎನ್ನುವುದು ಪ್ರತೀ ಹೆಣ್ಣಿನ ಜೀವನದಲ್ಲಿ ಪ್ರಮುಖ ಭಾಗವಾಗಿದೆ. ಗರ್ಭಧಾರಣೆಗೆ ಮಾನಸಿಕ ಮತ್ತು ದೈಹಿಕ ಎರಡೂ ಸಿದ್ಧತೆಗಳು ಮುಖ್ಯ. ಮದುವೆಯಾದ ಕೂಡಲೇ ನವದಂಪತಿಗಳು ಲೈಫ್‌ ಎಂಜಾಯ್‌ ಮಾಡಬೇಕು ಎಂದು ಗರ್ಭ ದರಿಸುವುದನ್ನು ಮುಂದುಡೂತ್ತಲೇ ಬರುತ್ತಾರೆ. ಆದರೆ ನಂತರ ದಿನಗಳಲ್ಲಿ ಮಕ್ಕಳಿಲ್ಲ (Children)ಎಂದು ಕೊರಗಲು ಶುರು ಮಾಡುತ್ತಾರೆ, ಆ ಸಮಯದಲ್ಲಿ ನಿಮ್ಮ ಲೈಂಗಿಕ ಕ್ರಿಯೆಯೂ ಹೆಚ್ಚು ಪ್ರಾಮುಖತ್ಯೆ ಪಡೆಯುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಗರ್ಭಿಣಿಯಾಗಲು ಯಾವಾಗ ಮತ್ತು ಎಷ್ಟು ಬಾರಿ ಲೈಂಗಿಕ ಕ್ರಿಯೆ (Sex)ನಡೆಸಬೇಕು ಎಂದು ಅನೇಕರಿಗೆ ಮಾಹಿತಿಯಿರುವುದಿಲ್ಲ. 

ಗರ್ಭಧಾರಣೆಯ ಸಂದರ್ಭ ಹೆಣ್ಣು (Women) ದೈಹಿಕವಾಗಿ ಸದೃಢಳಾಗಿದ್ದರೆ ಮಾತ್ರ ಆರೋಗ್ಯಯುತ ಮಗುವಿಗೆ ಜನ್ಮ ನೀಡಲು ಸಾಧ್ಯ. ಇದು ಪುರುಷರಿಗೂ ಅನ್ವಯವಾಗುತ್ತದೆ. ಆರೋಗ್ಯಕರ ವೀರ್ಯಗಳು ಬಿಡುಗಡೆಯಾದರೆ ಹುಟ್ಟುವ ಮಗುವಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಕೆಲವೇ ಕೆಲವು ಮಹಿಳೆಯರು ಮಾತ್ರ ಮೊದಲ ಪ್ರಯತ್ನದಲ್ಲಿಯೇ ಗರ್ಭಿಣಿಯಾಗುತ್ತಾರೆ. ಇನ್ನು ಕೆಲವೊಬ್ಬರು ಸಾಕಷ್ಟು ಪ್ರಯತ್ನ ಮಾಡಿದ ನಂತರವೂ ಸೋಲುತ್ತಾರೆ. ಹಾಗಾಗಿ ಮಗು ಪಡೆಯಲು ಬಯಸುತ್ತಿರುವ ಮಹಿಳೆಯರು ಯಾವಾಗ ಸಂಭೋಗಿಸಬೇಕು, ಎಷ್ಟು ಬಾರಿ ಸಂಭೋಗಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ನಿಮ್ಮಿಬ್ಬರ ಈ ಗುಟ್ಟನ್ನು ಯಾರಿಗೂ ಬಿಟ್ಟುಕೊಡ್ಬೇಡಿ

ಪ್ರತೀ ಮಗುವಿಗೆ 24 ಕ್ರೊಮೋಸೋಮ್‌ಗಳು ತಂದೆಯಿಂದ ಹಾಗೂ 24 ಕ್ರೋಮೋಸೋಮ್‌ಗಳು ತಾಯಿಯಿಂದ ಸಿಗುತ್ತದೆ. ಹೀಗಾಗಿ ಮಹಿಳೆ ಮತ್ತು ಪುರುಷ ಇಬ್ಬರೂ ಆರೋಗ್ಯಯುತವಾಗಿದ್ದಾಗ ಸೇರಿದರೆ ಆರೋಗ್ಯಯುತ ಮಗುವಿಗೆ ಜನ್ಮ ನೀಡಲು ಸಾಧ್ಯ. ಹಾಗಾದರೆ ಯಾವಾಗ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭ ನಿಲ್ಲುವ ಸಾಧ್ಯತೆಗಳು ಹೆಚ್ಚು, ಅಂಡೋತ್ಪತ್ತಿ ಅಥವಾ ಓವಿಲೇಷನ್‌ನ್ನು ಯಾವಾಗಿನಿಂದ ಕೌಂಟ್‌ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ಓವಿಲೇಷನ್‌ ಅಥವಾ ಅಂಡೋತ್ಪತ್ತಿ 
ಅಂಡೋತ್ಪತ್ತಿ ಎಂದರೆ ಮಹಿಳೆಯ ಅಂಡಾಶಯದಿಂದ ಮೊಟ್ಟೆಯನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಆಗಿದೆ. ಮೊಟ್ಟೆ ಬಿಡುಗಡೆಯಾದ ನಂತರ, ಅದು ಫಾಲೋಪಿಯನ್ ಟ್ಯೂಬ್‌ನ ಕೆಳಗೆ ಚಲಿಸುತ್ತದೆ. ಅಲ್ಲಿ ವೀರ್ಯ ಕೋಶದಿಂದ ಫಲೀಕರಣ ಸಂಭವಿಸಬಹುದು. ಅಂಡೋತ್ಪತ್ತಿ ಸಾಮಾನ್ಯವಾಗಿ ಒಂದು ದಿನ ಇರುತ್ತದೆ. ಅದು ಮಹಿಳೆಯ ಋತುಚಕ್ರದ ಮಧ್ಯದಲ್ಲಿ ಸಂಭವಿಸುತ್ತದೆ. ಇದನ್ನು ಮಹಿಳೆಯರು ಗಮನಿಸಬಹುದು. ಮುಟ್ಟಿನ ದಿನಗಳು ಪ್ರಾರಂಭವಾಗುವ ಎರಡು ವಾರಗಳ ಮೊದಲು ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ಮೊಟ್ಟೆಯನ್ನು ಬಿಡುಗಡೆ ಮಾಡಿದ ನಂತರ, ಅದು ಫಲವತ್ತಾಗಲು ಸಿದ್ಧವಾಗಿದೆ ಎಂದರ್ಥ. ಆದ್ದರಿಂದ ಅಂಡೋತ್ಪತ್ತಿಯ ಹಿಂದಿನ ದಿನಗಳಲ್ಲಿ ಮತ್ತು ನೀವು ಅಂಡೋತ್ಪತ್ತಿಯಾಗುವ ದಿನದಲ್ಲಿ ಲೈಂಗಿಕತೆ ನಡೆಸಿದರೆ ಗರ್ಭಿಣಿಯಾಗಲು ಉತ್ತಮ ಅವಕಾಶವನ್ನು ನೀಡುತ್ತದೆ.

ಮುಟ್ಟಾದ ಮೊದಲ ದಿನದಿಂದ 10ನೇ ದಿನಕ್ಕೆ ಲೈಂಗಿಕತೆ ನಡೆಸಬಹುದು. 10ನೇ ದಿನದಿಂದ 20 ನೇ ದಿನದವರೆಗೆ ಸೇರಿದರೆ ಗರ್ಭನಿಲ್ಲುವ ಸಾಧ್ಯತೆ ಹೆಚ್ಚು. ಮೊಟ್ಟೆ 15 ನೇ ದಿನಕ್ಕೆ ಬಿಡುಗಡೆಯಾದರೂ 24 ಗಂಟೆಗಳು ಮಾತ್ರ ಅದು ಫಲವತ್ತತೆಯನ್ನು ಹೊಂದಿರುತ್ತದೆ. ಆದರೆ ವೀರ್ಯ ಒಂದು ಬಾರಿ ಗರ್ಭ ಸೇರಿದರೆ ಒಂದು ವಾರದವರೆಗೆ ಫಲವತ್ತಾಗಿರುತ್ತದೆ. ಹೀಗಾಗಿ ಗರ್ಭಧಾರಣೆ ಸಾಧ್ಯವಾಗುತ್ತದೆ.

ಲೈಂಗಿಕ ಜೀವನ ಚೆನ್ನಾಗಿರಬೇಕೇ? ಈ ವಾಸ್ತು ಸಲಹೆ ಪರಿಗಣಿಸಿ

ದೈಹಿಕ ಚಟುವಟಿಕೆ ಮುಖ್ಯ: ಗರ್ಭಧರಿಸುವ ಮುನ್ನ ಹೇಗೆ ದೈಹಿಕ ಚಟುವಟಿಕೆಯನ್ನು ಮಾಡುತ್ತೀರೋ ಗರ್ಭಧಾರಣೆಯ ಬಗ್ಗೆ ಖಚಿತ ಫಲಿತಾಂಶ ಬರುವವರೆಗೂ ಅದನ್ನು ಮಾಡಬೇಕು. ಪ್ರತಿದಿನ ಕನಿಷ್ಠ 30 ನಿಮಿಷವಾದರೂ ವ್ಯಾಯಾಮ ಮಾಡಬೇಕು. ವ್ಯಾಯಾಮದಿಂದ ಗರ್ಭಪಾತವಾದರೆ ಎನ್ನುವ ಭಯ ಬೇಡ. ಗರ್ಭಧಾರಣೆಯ ಪರೀಕ್ಷೆಯ ವರದಿ ಬರುವವರೆಗೂ ವ್ಯಾಯಾಮ ಮಾಡಬಹುದು. 

ಮಾನಸಿಕ ಒತ್ತಡ ಸಲ್ಲದು: ಒತ್ತಡದಲ್ಲಿದ್ದರೆ ಅಂಡೋತ್ಪತ್ತಿಗೆ ಕಷ್ಟವಾಗಬಹುದು. ಇನ್ನು ಗರ್ಭ ಧರಿಸಿದ ಮೇಲೆ ದೇಹದ ತೂಕ ಸ್ವಲ್ಪಮಟ್ಟಿಗೆ ಜಾಸ್ತಿಯಾಗುವ ಕಾರಣ ಆರಂಭದಲ್ಲಿಯೇ ಸರಿಯಾದ ವ್ಯಾಯಾಮ ಮಾಡುವ ಮೂಲಕ ದೇಹದ ತೂಕವನ್ನು ಸಮತೋಲನಕ್ಕೆ ತಂದುಕೊಳ್ಳಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!