ಫ್ಲರ್ಟ್ ಮಾಡ್ತಾನೆ ಕೆಲವರು ತಮ್ಮ ಮನಸ್ಸಿನ ಭಾವನೆಯನ್ನು ಹೊರಗೆ ಹಾಕಿರ್ತಾರೆ, ಪ್ರೀತಿ ನಿವೇದನೆ ಮಾಡಿರ್ತಾರೆ. ಫ್ಲರ್ಟಿಂಗ್ ಗೂ ಪರಿಣಿತಿ ಬೇಕು. ಈ ಸಮಯದಲ್ಲಿ ನೀವು ತಪ್ಪು ಹೆಜ್ಜೆಯಿಟ್ರೆ ಪ್ರೀತಿಸಿದವರನ್ನು ಕಳೆದುಕೊಳ್ಬೇಕಾಗುತ್ತೆ.
ಪ್ರೀತಿಯಲ್ಲಿ ಫ್ಲರ್ಟಿಂಗ್ ಇರ್ಬೇಕು. ಫ್ಲರ್ಟ್ ಮಾಡೋದನ್ನು ಒಂದು ಕಲೆ ಎಂದೇ ಹೇಳಿದ್ರೆ ತಪ್ಪಾಗೋದಿಲ್ಲ. ಎಲ್ಲರಿಗೂ ಸಂಗಾತಿಯನ್ನು ಸೆಳೆಯುಂತೆ ಫ್ಲರ್ಟ್ ಮಾಡೋಕೆ ಬರೋದಿಲ್ಲ. ಕೆಲವರು ಫ್ಲರ್ಟ್ ಮಾಡೋದ್ರಲ್ಲಿ ಎತ್ತಿದ ಕೈ. ಅವರ ವರ್ತನೆ, ಮಾತು, ಅವರು ಫ್ಲರ್ಟ್ ಮಾಡ್ಲಿದ್ದಾರೆ ಎಂಬುದನ್ನು ಗೊತ್ತುಪಡಿಸೋದಿಲ್ಲ. ಅಂಥ ಸ್ಮಾರ್ಟ್ ಹುಡುಗರಿಗೆ ಹುಡುಗಿಯರು ಮನಸೋಲುತ್ತಾರೆ.
ಈ ಫ್ಲರ್ಟ್ (Flirt) ನಿಂದಲೇ ಆರಂಭವಾಗುವ ಸಂಬಂಧ ಮುಂದೆ ದಾಂಪತ್ಯವವರೆಗೆ ಬಂದು ನಿಲ್ಲುವುದಿದೆ. ನೀವೂ ಫ್ಲರ್ಟ್ ಮಾಡುವ ವ್ಯಕ್ತಿ, ನಿಮಗೆ ಇಂಪ್ರೆಸ್ (Impress) ಆಗ್ಬೇಕು ಅಂದ್ರೆ ಫ್ಲರ್ಟ್ ಮಾಡುವಾಗ ಕೆಲ ತಪ್ಪುಗಳನ್ನು ಮಾಡಬಾರದು. ಕೆಲವರಿಗೆ ಫ್ಲರ್ಟ್ ಮಾಡೋಕೆ ಬರ್ತಾ ಇದ್ದರೂ ಪ್ರೀತಿ ಗುಂಗಿನಲ್ಲಿ ಫ್ಲರ್ಟ್ ವೇಳೆ ಯಡವಟ್ಟು ಮಾಡ್ತಾರೆ. ಇದ್ರಿಂದ ಸಂಬಂಧ ಗಟ್ಟಿಯಾಗುವ ಬದಲು ಹದಗೆಡುತ್ತದೆ. ಫ್ಲರ್ಟ್ ಮಾಡುವ ಸಂದರ್ಭದಲ್ಲಿ ಯಾವ ತಪ್ಪನ್ನು ಮಾಡಬಾರದು ಅಂತಾ ನಾವಿಂದು ನಿಮಗೆ ಹೇಳ್ತೇವೆ.
ಇವರು ಬೆಕ್ಕು-ನಾಯಿಯಂತೆ ಕಚ್ಚಾಡೋ ಗಂಡ-ಹೆಂಡತಿ; ಇದು ಯಾವ ರಾಶಿಯವರ ದೋಷ ಗೊತ್ತಾ?
ಫ್ಲರ್ಟಿಂಗ್ ವೇಳೆ ಈ ತಪ್ಪು ಮಾಡ್ಬೇಡಿ :
ತೋರ್ಪಡಿಕೆ ಬೇಡ : ಫ್ಲರ್ಟ್ ವೇಳೆ ನೀವು ನೀವಾಗಿರೋದು ಒಳ್ಳೆಯದು. ಅನೇಕರು ಅತಿಯಾಗಿ ವರ್ತಿಸುತ್ತಾರೆ. ತಮ್ಮ ಸ್ವಭಾವ (Nature) ಬಿಟ್ಟು, ತೋರ್ಪಡಿಕೆಗೆ ಬೇರೆ ಸ್ವಭಾವವನ್ನು ಅಳವಡಿಸಿಕೊಳ್ತಾರೆ. ಇದ್ರಿಂದ ಮುಂದಿರುವವರಿಗೆ ನೀವು ಅತೀ ಎನ್ನಿಸಬಹುದು. ಇಲ್ಲವೆ ಮುಂದಿನ ದಿನಗಳಲ್ಲಿ ನಿಮಗೆ ಈ ಸಂಬಂಧ ನಿಭಾಯಿಸೋದು ಕಷ್ಟವಾಗಬಹುದು. ಹಾಗಾಗಿ ನೀವು ನೀವಾಗಿರಲು ಯತ್ನಿಸಿ.
ಸುಳ್ಳಿ (Lie) ನಿಂದ ದೂರವಿರಿ : ಸಂಬಂಧ ಯಾವುದೇ ಇರಲಿ ಸುಳ್ಳಿನ ಮೇಲೆ ಹೆಚ್ಚು ದಿನ ನಿಲ್ಲೋದಿಲ್ಲ. ಅದ್ರಲ್ಲೂ ಪ್ರೀತಿ (Love) ಸಂಬಂಧವನ್ನು ಸುಳ್ಳಿನ ಮೇಲೆ ಕಟ್ಟಬಾರದು. ಫ್ಲರ್ಟ್ ಮಾಡುವ ವೇಳೆ ಸುಳ್ಳು ಹೇಳಿ ಸಂಗಾತಿ ಮೆಚ್ಚಿಸುವ ಪ್ರಯತ್ನ ನಡೆಸಬೇಡಿ. ಸುಳ್ಳಿನಿಂದ ನಿಮ್ಮಿಬ್ಬರ ಸಂಬಂಧ ಹಾಳಾಗುತ್ತದೆ. ಸಂಗಾತಿ ನಿಮ್ಮ ಮೇಲಿನ ನಂಬಿಕೆ ಕಳೆದುಕೊಳ್ತಾರೆ. ಸುಳ್ಳಿನ ಮೂಲಕ ನೀವು ಯಾರ ಹೃದಯವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂಬ ಸತ್ಯ ತಿಳಿಯಿರಿ. ಅನೇಕರು ಸಂಗಾತಿಯನ್ನು ಒಲಿಸಿಕೊಳ್ಳಲು ನಾನಾ ಸುಳ್ಳುಗಳನ್ನು ಹೇಳ್ತಾರೆ. ನೀವು ಹೇಳಿದ ಒಂದು ಸುಳ್ಳನ್ನು ಸತ್ಯ ಮಾಡಲು ನೀವು ಸಾವಿರಾರು ಸುಳ್ಳು ಹೇಳ್ಬೇಕಾಗುತ್ತದೆ. ಸತ್ಯ ಸ್ವಲ್ಪ ಕಹಿ ಎನ್ನಿಸಿದ್ರೂ ಸಮಸ್ಯೆಯಾಗೋದಿಲ್ಲ.
ಲೈಂಗಿಕತೆ ಮಾರಣಾಂತಿಕ ರೋಗ ಗುಣಪಡಿಸಬಹುದೇ? ತಜ್ಞರು ಹೇಳೋದೇನು
ಶ್ರೀಮಂತಿಕೆ ಪ್ರದರ್ಶನ ಬೇಡ (Don't Show off your richness) : ಅನೇಕರು ಸಂಗಾತಿಯನ್ನು ಒಲಿಸಿಕೊಳ್ಳಲು ಶ್ರೀಮಂತಿಕೆ ಪ್ರದರ್ಶನ ಮಾಡ್ತಾರೆ. ಸಾಲ ಮಾಡಿ ದುಬಾರಿ ಉಡುಗೊರೆ ನೀಡ್ತಾರೆ. ಸಣ್ಣ ಕೆಲಸದಲ್ಲಿದ್ರೂ ದೊಡ್ಡ ಕೆಲಸದಲ್ಲಿರುವಂತೆ ಪ್ರದರ್ಶನ ಮಾಡ್ತಾರೆ. ದುಬಾರಿ ಕಾರಿನಲ್ಲಿ ಓಡಾಡಿದ್ರೆ, ದುಬಾರಿ ವಸ್ತು ಖರೀದಿ ಮಾಡಿದ್ರೆ ಹುಡುಗಿ ಮೆಚ್ಚಿಕೊಳ್ತಾಳೆ ಎಂದುಕೊಳ್ತಾರೆ. ಅದು ತಪ್ಪು. ನಿಮ್ಮ ಪ್ರದರ್ಶನ ಮುಂದೆ ದೊಡ್ಡ ಕಂದಕ ಸೃಷ್ಟಿಸಬಹುದು.
ಭಾವನೆಗಳ ಜೊತೆ ಆಟ ಬೇಡ (Don't play with Emotions) : ಪ್ರತಿಯೊಬ್ಬರ ಭಾವನೆಯನ್ನು ಗೌರವಿಸಬೇಕು. ಫ್ಲರ್ಟ್ ಮಾಡುವ ಸಂದರ್ಭದಲ್ಲಿ ಸಂಗಾತಿಗಳ ಭಾವನೆಗೆ ಧಕ್ಕೆಯಾಗುವ ಮಾತನ್ನಾಡಬಾರದು. ಅವರು ಖುಷಿಯಾಗಿರುವಂತೆ ನೋಡ್ಬೇಕೆ ಹೊರತು ನಿಮ್ಮ ಕ್ರಶ್ ಮನಸ್ಸಿಗೆ ಘಾಸಿಯಾಗುವ ಮಾತನ್ನಾಡಬಾರದು.
ಗೌಪ್ಯತೆ ಕಾಪಾಡಿ (Maintain Secrecy): ನೀವು ಯಾವುದೇ ವ್ಯಕ್ತಿಯನ್ನು ಪ್ರೀತಿ ಮಾಡ್ತಿದ್ದರೆ ಪ್ರೀತಿ ಮಾಡ್ತಿರುವ ವ್ಯಕ್ತಿಯ ಗೌಪ್ಯತೆ ಕಾಪಾಡಿ. ಅವರ ಒಪ್ಪಿಗೆಯಿಲ್ಲದೆ ಅವರ ವೈಯಕ್ತಿಕ ಜೀವನದಲ್ಲಿ ತಲೆ ಹಾಕ್ಬೇಡಿ.
ಟಚ್ ಮಾಡುವ ಪ್ರಯತ್ನಕ್ಕೆ ಹೋಗ್ಬೇಡಿ : ಯಾವುದೇ ಹುಡುಗ ಫ್ಲರ್ಟ್ ಮಾಡ್ತಿದ್ದರೆ, ಆತ ಹುಡುಗಿಯನ್ನು ಪದೇ ಪದೇ ಟಚ್ ಮಾಡುವ ತಪ್ಪು ಮಾಡಬಾರದು. ಇದು ಅವರಿಗೆ ನಿಮ್ಮ ಮೇಲಿರುವ ಭಾವನೆಯನ್ನು ಬದಲಿಸುತ್ತದೆ. ಯಾವಾಗ್ಲೂ ಮುಂದಿರುವವರನ್ನು ರಿಸ್ಪೆಕ್ಟ್ ಮಾಡೋದು ಮುಖ್ಯ.