ಪ್ರೀತಿಗೆ ಯಾವುದೇ ಗಡಿಯಿಲ್ಲ ಎನ್ನುತ್ತಾರೆ. ಇದಕ್ಕೆ ಉತ್ತರ ಎನ್ನುವಂತೆ ಉತ್ತರ ಪ್ರದೇಶದ ತಾಜ್‌ನಗರಿಯಲ್ಲಿ ವಿವಾಹಿತಿ ಮಹಿಳೆಯೊಬ್ಬಳು ಪಕ್ಕದ ಮನೆಯ ಆಂಟಿ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ.
ನವದೆಹಲಿ (ಜು.28): ಪ್ರೀತಿ ಎನ್ನುವ ವಿಚಾರದಲ್ಲಿ ಎಲ್ಲವೂ ಕುರುಡಾಗುತ್ತದೆ. ಬಹುಶಃ ಈ ಘಟನೆಯ ಸುದ್ದಿ ಓದಿದರೆ ಅದು ನಿಜ ಎಂತಲೂ ಅನಿಸಬಹುದು. ಉತ್ತರ ಪ್ರದೇಶದ ತಾಜ್‌ನಗರಿಯಲ್ಲಿ ವಿವಾಹಿತ ಮಹಿಳೆಯೊಬ್ಬಳು ನೆರಮನೆಯ ಆಂಟಿಯೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಇಬ್ಬರೂ ಪ್ರತಿ ದಿನ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಅಮದಾಜಿನ ಪ್ರಕಾರ ನಿತ್ಯ 7 ರಿಂದ 8 ಗಂಟೆಗಳ ಕಾಲ ಇವರಿಬ್ಬರೂ ಫೋನ್‌ನಲ್ಲಿಯೇ ಇರುತ್ತಿದ್ದರು. ಆದರೆ, ಮೂರು ದಿನಗಳ ಹಿಂದೆ ಪತಿಯೊಂದಿಗೆ ದಿನಸಿ ತರಲು ಮಾರುಕಟ್ಟೆಗೆ ಹೋಗಿದ್ದ ವಿವಾಹಿತ ಮಹಿಳೆ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಇದರ ಬೆನ್ನಲ್ಲಿಯೇ ಈ ಕೇಸ್ ಬೆಳಕಿಗೆ ಬಂದಿದೆ. ತನ್ನ ಪತ್ನಿಯನ್ನು ಯಾರಾದರೂ ಕಿಡ್ನಾಪ್ ಮಾಡಿರಬಹುದು ಎಂದು ಅಂದಾಜು ಮಾಡಿದ್ದ ಪತಿ ಸ್ಥಳೀಯ ಪೊಲೀಸ್ ಠಾಣೆಗೆ ಈ ಕುರಿತಾಗಿ ದೂರು ದಾಖಲು ಮಾಡಿದ್ದರು.
ಪೊಲೀಸರಿಗೂ ಕೂಡ ಪ್ರಾಥಮಿಕ ತನಿಖೆಯಲ್ಲಿ ಯುವತಿಗೆ ಏನಾಗಿರಬಹುದು ಎಂದು ಅಂದಾಜು ಮಾಡಲು ವಿಫಲರಾಗಿದ್ದರು. ಆ ಬಳಿಕ ವಿವಾಹಿತ ಮಹಿಳೆಯ ಫೋನ್ ಕರೆಗಳ ವಿವರಗಳನ್ನು ಪರಿಶೀಲಿಸಲು ಆರಂಭಿಸಿದಾಗ ಈ ಸಲಿಂಗಿ 'ಸಂಬಂಧ' ಪತ್ತೆಯಾಗಿದೆ. ವಿವಾಹಿತ ಮಹಿಳೆ ತನ್ನ ನೆರಮನೆಯ ಆಂಟಿ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಸಲಿಂಗಿ ಸಂಬಂಧವಾಗಿದ್ದ ಕಾರಣ ಹೆಚ್ಚಾಗಿ ಇದು ಯಾರಿಗೂ ಗೊತ್ತಾಗಿರಲಿಲ್ಲ. ಈ ಮಾಹಿತಿ ಪಡೆದ ಬೆನ್ನಲ್ಲಿಯೇ ನಾಪತ್ತೆಯಾಗಿರುವ ಇಬ್ಬರೂ ಮಹಿಳೆಯರನ್ನು ಹುಡುಕು ಆರಂಭಿಸಿದ್ದರು. ಸಿಸಿಟಿವಿಗಳ ಪರೀಕ್ಷೆ ಹಾಗೂ ಕೆಲ ಲಭ್ಯ ಮಾಹಿತಿಗಳ ಪ್ರಕಾರ ಇಬ್ಬರೂ ಮಹಿಳೆಯರು ದೆಹಲಿಗೆ ಹೋಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕೊನೆಗೆ ದೆಹಲಿಯಲ್ಲೂ ಇವರಿಬ್ಬರನ್ನು ಪತ್ತೆ ಹಚ್ಚಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರತಿ ದಿನ ಫೋನ್‌ನಲ್ಲಿ ಮಾತನಾಡುತ್ತಿದ್ದ ಇವರು ದಿನಗಳು ಕಳೆದಂತೆ ತಮ್ಮ ಸಂಬಂಧವನ್ನು ಇನ್ನಷ್ಟು ಆಳಕ್ಕೆ ಇರಿಸಿದ್ದರು. 7 ರಿಂದ 8 ಗಂಟೆಗಳ ಕಾಲ ಇವರು ಪ್ರತಿನಿತ್ಯ ಮಾತನಾಡುತ್ತಿದ್ದರೂ, ಮನೆಯಲ್ಲಿ ಇದು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನುವುದು ವಿಪರ್ಯಾಸ. ಹೊರಗಡೆ ತಾವಿಬ್ಬರೂ ಉತ್ತಮ ಸ್ನೇಹಿತೆಯರು ಎನ್ನುವ ಅರ್ಥದಲ್ಲಿ ತೋರಿಸಿಕೊಳ್ಳುತ್ತಿದ್ದ ಇವರು ಬೇರೆ ಊರಿಗೆ ಹೋಗಿ ಹೊಸ ಜೀವನವನ್ನು ಆರಂಭಿಸಬೇಕು ಎನ್ನುವ ನಿಟ್ಟಿನ ಆಸೆ ಹೊಂದಿದ್ದರು.
'ನಮಗೆ ದೂರು ಬಂದ ತಕ್ಷಣ ಈ ನಿಟ್ಟಿನಲ್ಲಿ ತನಿಖೆ ಆರಂಭ ಮಾಡಿದ್ದೆವು. ಆರಂಭದಲ್ಲಿ ಹೆಚ್ಚಿನ ಮಾಹಿತಿ ಸಿಕ್ಕಿರಲಿಲ್ಲ. ಆಕೆಯ ಮೊಬೈಲ್ ಕರೆ ವಿವರಗಳನ್ನು ಪಡೆದ ಬಳಿಕ, ನೆರಮನೆಯ ಮಹಿಳೆಯೊಂದಿಗೆ ದಿನದಲ್ಲಿ ಸುದೀರ್ಘ ಗಂಟೆಗಳ ಕಾಲ ಮಾತನಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ಆಕೆಯ ಮನೆಯನ್ನು ಪರಿಶೀಲಿಸಿದ ಬಳಿಕ ಅವಳೂ ಕೂಡ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಸಾಕಷ್ಟು ತನಿಖೆಯ ಬಳಿಕ ಇಬ್ಬರೂ ದೆಹಲಿಯಲ್ಲಿರುವುದು ಗೊತ್ತಾಗಿತ್ತು ಎಂದು ಎತ್ಮಾದುದ್ದೌಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ತಿಳಿಸಿದ್ದಾರೆ.
'ಬೀಸೋ ಗಾಳಿಗೂ.. ಬೀಳೋ ಮರಕ್ಕೂ ಲವ್ವಾಗಿದೆ..' 47ರ ಮಹಿಳೆಯನ್ನು ಮದುವೆಯಾದ 76ರ ವೃದ್ಧ!
ನಂತರ ದೆಹಲಿಗೆ ತೆರಳಿದ ಪೊಲೀಸರು ಇಬ್ಬರನ್ನೂ ಪತ್ತೆ ಮಾಡಿ ವಾಪಾಸ್ ಕರೆತಂದಿದ್ದಾರೆ. ಪೊಲೀಸರು ಇವರ ತೀವ್ರ ವಿಚಾರಣೆ ಮಾಡಿದ ಬಳಿಕ, ಒಟ್ಟಿಗೆ ಇಬ್ಬರೂ ಪ್ರವಾಸಕ್ಕೆ ಹೋಗುವ ಸಲುವಾಗಿ ಮನೆ ಬಿಟ್ಟಿದ್ದೆವು ಎಂದು ತಿಳಿಸಿದ್ದಾರೆ. ನಂತರ ಪೊಲೀಸ್ ವಿಚಾರಣೆಗೆ ಹೆದರಿ ಸತ್ಯ ಒಪ್ಪಿಕೊಂಡಿದ್ದಾರೆ. ಆ ಬಳಿಕ ಇಬ್ಬರಿಗೂ ಕೌನ್ಸೆಲಿಂಗ್ ನೀಡಿದ ಬಳಿಕ, ತಮ್ಮ ಮನೆಗಳಿಗೆ ಹೋಗಲು ಅವರು ನಿರ್ಧಾರ ಮಾಡಿದ್ದರು.
ಇನ್ಮುಂದೆ ಸಂಗಾತಿಯೇ ಬೇಕಾಗಿಲ್ಲ ಮಾರುಕಟ್ಟೆಗೆ ಬರಲಿದೆ AI ಸೆಕ್ಸ್ ರೋಬೋಟ್!