Kids Care : ಮಗನನ್ನು ಪ್ರೀತಿ ಮಾಡ್ತಿದ್ದಾಳೆ 11 ವರ್ಷದ ಹುಡುಗಿ..! ಏನ್ ಮಾಡ್ಬೇಕು ಕೇಳ್ತಿದ್ದಾಳೆ ಅಮ್ಮ

By Suvarna News  |  First Published Jun 4, 2022, 2:48 PM IST

ಇಂದಿನ ಮಕ್ಕಳು ಬಹಳ ಬೇಗ ಮೆಚ್ಯುರ್ ಆಗ್ತಾರೆ. ಶಾಲೆಯಲ್ಲಿಯೇ ಪ್ರೀತಿ –ಪ್ರೇಮ ಶುರುವಾಗುತ್ತದೆ. ಇದು ಆಕರ್ಷಣೆ ಎಂಬುದು ತಿಳಿಯದೇ ಮಕ್ಕಳು ಭವಿಷ್ಯ ಹಾಳು ಮಾಡಿಕೊಳ್ತಾರೆ. 
 


ಇಂದಿನ ಮಕ್ಕಳ (Children) ವೇಗ ರಾಕೆಟ್ (Rocket) ನಂತಿರುತ್ತದೆ. ಡಿಜಿಟಲ್ (Digital) ಯುಗದಲ್ಲಿ ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಮುಂದಿರುತ್ತಾರೆ. ಮಕ್ಕಳ ಡೇಟಿಂಗ್ ಮಾಡುವ ಸಮಯದಲ್ಲೂ ಈಗ ದೊಡ್ಡ ಬದಲಾವಣೆಯಾಗಿದೆ. ಚಿಕ್ಕ ವಯಸ್ಸಿನಿಂದಲೇ ಗೆಳತಿ – ಗೆಳೆಯರನ್ನು ಮಾಡಿಕೊಳ್ತಾರೆ. ಮೊದಲು ಕಾಲೇಜಿನಲ್ಲಿ ಪ್ರೀತಿ ಶುರುವಾಗ್ತಿತ್ತು. ಆದ್ರೆ ಈಗ ಪ್ರಾಥಮಿಕ ಶಾಲೆಯಲ್ಲಿಯೇ ಮಕ್ಕಳು ಲವ್ ಹೆಸರು ಹೇಳ್ತಿದ್ದಾರೆ. ಅಧ್ಯಯನದ ಬಗ್ಗೆ ಮಕ್ಕಳ ಗಮನ ಕಡಿಮೆಯಾಗ್ತಿದೆ. ಮಕ್ಕಳು ಓದು ಕಡಿಮೆ ಮಾಡ್ತಿದ್ದಾರೆಂದು ಪೋಷಕರು ದೂರುತ್ತಿದ್ದಾರೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಲೇಖನದಲ್ಲಿ  ತಾಯಿಯೊಬ್ಬಳು ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಅವಳ ಸಮಸ್ಯೆ ಏನು ? ಹಾಗೆ ತಜ್ಞರು ಹೇಳೋದೇನು ಎಂಬುದನ್ನು ಎಲ್ಲ ಪಾಲಕರು ತಿಳಿಯುವ ಅಗತ್ಯವಿದೆ.  

ಶಾಲೆಯಲ್ಲಿ ಮಗ ಹಿಂದೆ ಬಿದ್ದ ಹುಡುಗಿ : ಮಹಿಳೆ ಮಗ ಪ್ರಾಥಮಿಕ ಶಾಲೆಗೆ ಹೋಗ್ತಿದ್ದಾನಂತೆ. ಶಾಲೆಯಲ್ಲಿ ಆತನ ತರಗತಿ ಹುಡುಗಿಯೊಬ್ಬಳು ಮಗನನ್ನು ಪ್ರೀತಿ ಮಾಡ್ತಿದ್ದಾಳಂತೆ. ಈ ಬಗ್ಗೆ ತಾಯಿಗೆ ಮಗ ವಿಷ್ಯ ತಿಳಿಸಿದ್ದಾನೆ. ಹುಡುಗಿ ತನಗೆ ಹೆಚ್ಚಿನ ಗಮನ ನೀಡುವ ಮೂಲಕ ತನಗೆ ಅನಾನುಕೂಲತೆಯನ್ನುಂಟುಮಾಡುತ್ತಾಳೆ ಎಂದು ಮಗ ದೂರಿದ್ದಾನೆ. ಅಲ್ಲದೆ ಶಾಲೆಯಲ್ಲಿ ಹುಡುಗಿ ಚೀಟಿ ಪಾಸ್ ಮಾಡ್ತಾಳಂತೆ. ಇದ್ರಿಂದ ಮಗನ ಓದಿಗೂ ತೊಂದೆಯಾಗ್ತಿದೆಯಂತೆ. ಅವಳಿಂದ ದೂರವಿರುವಂತೆ ಮಗನಿಗೆ ಹೇಗೆ ಹೇಳ್ಬೇಕೆಂಬುದು ನನಗೆ ಗೊತ್ತಾಗ್ತಿಲ್ಲವೆಂದು ಮಹಿಳೆ ಹೇಳಿಕೊಂಡಿದ್ದಾಳೆ. ಹುಡುಗ ಮತ್ತು ಹುಡುಗಿ ಇಬ್ಬರ ವಯಸ್ಸು ಸುಮಾರು 11 ವರ್ಷ. ಇಬ್ಬರೂ ಪ್ರೀತಿ ಅಂದ್ರೇನು ಎಂದು ಅರ್ಥ ಮಾಡಿಕೊಳ್ಳದ ವಯಸ್ಸಿನಲ್ಲಿ ಪ್ರೀತಿ ವಿಷ್ಯ ಮಾತನಾಡ್ತಿದ್ದಾರೆಂದು ಆಕೆ ಹೇಳಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಅಂತಹ ವಿಷಯಗಳಿಗೆ ಬಿದ್ದಾಗ, ಅದು ಅವರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅಥವಾ ಅವರು ಏನು ಮಾಡಬೇಕು ಎಂಬುದನ್ನು ತಜ್ಞರು ಹೇಳಿದ್ದಾರೆ.

Tap to resize

Latest Videos

ಇದನ್ನೂ ಓದಿ: RELATIONSHIP TIPS: ಕಿರಿಕಿರಿ ಮಾಡೋ ನೆಂಟರೊಂದಿಗೆ ಏಗೋದ್ ಹ್ಯಾಗೆ?

ತಜ್ಞರು ಏನು ಹೇಳುತ್ತಾರೆ? :  ಇಂಥ ವಿಷ್ಯದಲ್ಲಿ ಮಕ್ಕಳು ಸಿಕ್ಕಿಬಿದ್ದಿದ್ದಾಗ ಅವರನ್ನು ಹೊರಗೆ ತರುವುದು ತುಂಬಾ ಕಷ್ಟ. ಈ ಸಂದರ್ಭದಲ್ಲಿ ಪಾಲಕರ ಜವಾಬ್ದಾರಿ ಹೆಚ್ಚಿರುತ್ತದೆ. ಇದರ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಯಾವುದೇ ಕಾರಣಕ್ಕೂ ಈ ಬಗ್ಗೆ ಹಿಂಜರಿಯಬೇಡಿ ಎಂದು ತಜ್ಞರು ಹೇಳ್ತಾರೆ. ಮಕ್ಕಳ ಮೇಲೆ ಕೋಪಗೊಳ್ಳುವುದು ಅಥವಾ ದೈಹಿಕ ಹಿಂಸೆ ನೀಡುವುದು ಮಾಡಬಾರದು. ಪ್ರೀತಿ ಅಂದ್ರೇನು ಎಂಬುದನ್ನು ಅವರಿಗೆ ವಿವರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. 

ಆಕರ್ಷಣೆ ಸಹಜ : ಶಾಲೆಯಲ್ಲಿ ಮಕ್ಕಳು ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಆದ್ದರಿಂದ ಅವರು ಆಕರ್ಷಿತರಾಗುವುದು ಸಹಜ. ಈ ವಿಷಯಗಳ ಬಗ್ಗೆ ಹೆಚ್ಚು ಗಂಭೀರವಾಗಿರಬೇಡಿ. ಆದರೆ ಇದರಿಂದ ಯಾರಾದರೂ ಅನಾನುಕೂಲತೆಯನ್ನು ಅನುಭವಿಸಿದರೆ, ಅದು ಉಲ್ಬಣಗೊಳ್ಳುವ ಮೊದಲು ವಿಷಯವನ್ನು ಮುಕ್ತಾಯಗೊಳಿಸಲು ಪ್ರಯತ್ನಿಸಿ.  

ಪರಿಣಾಮ ಏನು ? : ಶಾಲೆಯಲ್ಲಿ ಗೆಳತಿ ಅಥವಾ ಗೆಳೆಯನನ್ನು ಹೊಂದಿರುವುದು ಅಥವಾ ಯಾರನ್ನಾದರೂ ಇಷ್ಟಪಡುವುದು ಇದೆಲ್ಲವೂ ವಿದ್ಯಾಭ್ಯಾಸದ ಮೇಲೆ ನೇರ ಪರಿಣಾಮ ಬೀರುತ್ತದೆ. ಶಾಲೆಯಲ್ಲಿ ಓದುವ ಬದಲು ಅವರು ಪ್ರೀತಿಗೆ ಮಹತ್ವ ನೀಡಲು ಶುರು ಮಾಡ್ತಾರೆ. ಇದ್ರಿಂದ ಅವರ ಅಂಕ ಕಡಿಮೆಯಾಗುತ್ತದೆ. 

ಇದನ್ನೂ ಓದಿ: ಗರ್ಲ್‌ಫ್ರೆಂಡ್‌ ಯಾರೂ ಬೇಡ, ಕಾರಿನ ಜೊತೆಗೆ ನಿಕಟ ಸಂಬಂಧವಿದೆ ಅಂತಾನೆ, ಇದೆಂಥಾ ವಿಚಿತ್ರ !

ಸ್ನೇಹಿತರಿಂದ ದೂರ : ಶಾಲೆಯಲ್ಲಿ ಪ್ರೀತಿ ಶುರುವಾದಾಗ ಊಟದ ವಿರಾಮ ಅಥವಾ ಫ್ರೀ ಟೈಂನಲ್ಲಿ ಅವರು ಪರಸ್ಪರ ಸಯ ಕಳೆಯಲು ಶುರು ಮಾಡ್ತಾರೆ. ಇದ್ರಿಂದ ಸ್ನೇಹಿತರ ಜೊತೆ ಬೆರೆಯುವುದು ಕಡಿಮೆಯಾಗುತ್ತದೆ. ಆದ್ರೆ ಸ್ನೇಹ ಅತ್ಯಗತ್ಯ. ಇದು ಮಕ್ಕಳ ಬೆಳೆವಣಿಗೆ ಮೇಲೆ ಪರಿಣಾಮ ಬೀರುತ್ತದೆ.

ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ : ಇಬ್ಬರೂ ಪರಸ್ಪರ ಇಷ್ಟಪಡ್ತಿದ್ದರೆ ಈ ವಿಷ್ಯ ಬೇರೆ. ಅದೇ ಒಬ್ಬರು ಮಾತ್ರ ಇಷ್ಟಪಡ್ತಿದ್ದರೆ ಅಪಾಯ ಹೆಚ್ಚು. ಇಬ್ಬರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಪಾಲಕರು ಇದನ್ನು ಶಾಂತವಾಗಿ ನಿಭಾಯಿಸಬೇಕು.

click me!