
ಆಕೆಗೆ ಮದುವೆಯ ಬಗ್ಗೆ ನೂರಾರು ಕನಸಿತ್ತು. ಅನುರೂಪ ವರನ ಕೈ ಹಿಡೀಬೇಕು. ಮನೆಮಂದಿಯೆಲ್ಲಾ ಆ ಸಂಭ್ರಮದಲ್ಲಿ ಭಾಗಿಯಾಗ್ಬೇಕು. ಮನದುಂಬಿ ಹರಸ್ಬೇಕು, ಕಣ್ತುಂಬಿ ಬೀಳ್ಕೊಡ್ಬೇಕು ಎಂದೆಲ್ಲಾ ಕನಸು ಕಂಡಿದ್ದಳು. ಮದುವೆಯ ದಿನವೇನೂ ಬಂತು. ಆದರೆ ಆಕೆಯ ಜೀವನದ ಪ್ರಮುಖ ವ್ಯಕ್ತಿಯೇ ಆ ದಿನವರಲ್ಲಿಲ್ಲ. ಅಪ್ಪನ ಅಕಾಲಿಕ ಮರಣದಿಂದ ಆಕೆ ತುಂಬಾ ನೊಂದುಕೊಂಡಿದ್ದಳು. ಆದರೆ ಮದುವೆ ಮಂಟಪದಲ್ಲಿ ಅಪ್ಪ ಆಕೆಗಾಗಿ ಕಾಯುತ್ತಿದ್ದರು. ಹೌದು, ಮಂಟಪದ ಸಮೀಪ ಅಪ್ಪನ ಮೇಣದ ಪ್ರತಿಮೆಯನ್ನು ಇಟ್ಟು ಆರ್ಶೀವಾದ ಪಡೆಯಲಾಯಿತು.
ತಮಿಳುನಾಡು (Tamilnadu) ರಾಜ್ಯದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿನ ತಿರುಕೋವಿಲೂರು ಸಮೀಪದ ಠಾಣಕನಂದಲ್ ಗ್ರಾಮದಲ್ಲಿ ಮಹೇಶ್ವರಿ ಎಂಬುವರು ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆ (Marriage) ಮಾಡಿಕೊಂಡಿದ್ದಾರೆ. ಮಹೇಶ್ವರಿ ತಂದೆ ಸೆಲ್ವರಾಜ್‌ಗೆ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂಬ ಆಸೆಯಿತ್ತು. ಆದ್ರೆ ಕಳೆದ ವರ್ಷ ಮಾರ್ಚ್ 3ರಂದು ಸೆಲ್ವರಾಜ್ ಅನಾರೋಗ್ಯದಿಂದ ನಿಧನರಾಗಿದ್ದರು. ಮಹೇಶ್ವರಿಗೆ ಮದುವೆಗೆ ತಂದೆಯಿಲ್ಲವೆಂಬ ಕೊರಗು ಕಾಡುತ್ತಿತ್ತು. ಆದ್ರೆ ಮೇಣದ ಪ್ರತಿಮೆ (Wax statue) ಈ ದುಃಖವನ್ನು ಸ್ಪಲ್ಪ ಮಟ್ಟಿಗೆ ನೀಗಿಸಿದೆ. ಮಹೇಶ್ವರಿ, ಮೇಣದ ಪ್ರತಿಮೆಯನ್ನು ಮಂಟಪದ ಸಮೀಪ ಇರಿಸಿ, ತಂದೆ ಜೊತೆಗೇ ಇದ್ದಾರೆಂಬ ಖುಷಿಯೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ.
ಮದುವೆ ಫಿಕ್ಸ್ ಆಗ್ತಿದ್ದಂತೆ ಶಾಕಿಂಗ್ ವಿಷ್ಯ ಸರ್ಚ್ ಮಾಡ್ತಾರಂತೆ ಹುಡುಗೀರು!
5 ಲಕ್ಷ ವೆಚ್ಚದಲ್ಲಿ ಸೆಲ್ವರಾಜ್ ಮೇಣದ ಪ್ರತಿಮೆಯನ್ನು ಸಿದ್ಧಪಡಿಸಲಾಯಿತು. ಸೆಲ್ವರಾಜ್ ರೇಷ್ಮೆ ವೇಷಭೂಷಣ ಮತ್ತು ಶರ್ಟ್‌ನಲ್ಲಿ ಕುಳಿತಿರುವಂತೆ ಅವರು ಪ್ರತಿಮೆಯನ್ನು ನೈಜವಾಗಿ ಸಿದ್ಧಪಡಿಸಲಾಗಿತ್ತು. ಸೆಲ್ವರಾಜ್ ಮೂರ್ತಿಯನ್ನು ಪುರೋಹಿತರ ಮುಂದೆ ಇಟ್ಟು ವಿವಾಹ ಕಾರ್ಯಕ್ರಮಗಳು ನಡೆಸಲಾಯಿತು. ತಂದೆಯ ಮೇಲಿನ ಮಗಳ ಪ್ರೀತಿ ಕಂಡು ಮದುವೆಗೆ ಆಗಮಿಸಿದ ಮಂದಿ ಭಾವುಕರಾದರು.
ತಂದೆ ಸೆಲ್ವರಾಜ್ ಅವರ ಪ್ರತಿಮೆ ನೋಡಿ ವಧು ಮಹೇಶ್ವರಿ ಭಾವುಕರಾದರು. ತಂದೆ-ತಾಯಿಯರ ಪಾದಗಳ ಬಳಿ ಆಶೀರ್ವಾದ ಪಡೆದರು. ಸೆಲ್ವರಾಜ್ ನಿಜರೂಪದಲ್ಲಿ ಕಾಣಿಸಿಕೊಂಡಿರುವಂತೆ ಕಾಣುತ್ತಿದ್ದರಿಂದ ಮೇಣದ ಪ್ರತಿಮೆಯಂತೆ ಕಾಣುತ್ತಿಲ್ಲ ಎಂದು ಮದುವೆಗೆ ಬಂದಿದ್ದ ಸಂಬಂಧಿಕರು ಹೇಳಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.