
ಸ್ನೇಹಿತ (Friend) ರಿಲ್ಲದ ಜೀವನ (Life) ಶೂನ್ಯ (Zero) ವೆಂದ್ರೂ ತಪ್ಪಾಗಲಾರದು. ಸ್ನೇಹ ಹಾಗೂ ಸ್ನೇಹಿತರು ನೋವನ್ನು ಮರೆಸುತ್ತಾರೆ. ಬಾಲ್ಯ (Childhood) ದಲ್ಲಿಯೇ ಮಕ್ಕಳು ಸ್ನೇಹ ಬೆಳೆಸಲು ಶುರು ಮಾಡ್ತಾರೆ. ಕೆಲವು ಮಕ್ಕಳು ಅತ್ಯುತ್ತಮ ಸಾಮಾಜಿಕ ಕೌಶಲ್ಯಗಳನ್ನು ಹೊಂದಿರುತ್ತಾರೆ. ಅವರ ಅಕ್ಕ – ಪಕ್ಕ ಸ್ನೇಹಿತರ ದಂಡೇ ಇರುತ್ತದೆ. ಆದರೆ ಕೆಲವು ಮಕ್ಕಳಿಗೆ ಸ್ನೇಹಿತರನ್ನು ಪಡೆಯುವುದು ಪರ್ವತ ಹತ್ತಿದಷ್ಟು ಕಷ್ಟ. ಅವರಿಗೆ ಹೆಚ್ಚು ಮಾತನಾಡಲು ಬರುವುದಿಲ್ಲ. ಹೊಸಬರ ಜೊತೆ ಮಾತನಾಡಲು ನಾಚಿಕೆಪಡುತ್ತಾರೆ ಅಥವಾ ಇತರರೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ. ಅವರ ಈ ಸ್ವಭಾವದಿಂದಾಗಿ ಸ್ನೇಹ ಬೆಳೆಸುವುದು ಕಷ್ಟವಾಗುತ್ತದೆ. ಒಂದೋ ಎರಡೋ ಸ್ನೇಹಿತರಿರುವುದು ಅವರಿಗೆ ಅನುಮಾನ. ಇದು ವಯಸ್ಸಾದಂತೆ ಅವರ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಪಾರ್ಕ್ ನಲ್ಲಿ ಅನೇಕ ಮಕ್ಕಳು ಒಂದಾಗಿ ಆಡ್ತಿರುತ್ತಾರೆ. ಆದ್ರೆ ನಿಮ್ಮ ಮಗು ಮಾತ್ರ ಏಕಾಂಗಿಯಾಗಿ ಕುಳಿತಿರುತ್ತದೆ. ಇದನ್ನು ನೋಡಿದ ಪೋಷಕರು ಬೇಸರಪಟ್ಟುಕೊಳ್ತಾರೆ. ಮಗುವಿಗೆ ಸ್ನೇಹಿತರಿಲ್ಲ ಎಂಬ ನೋವಿನಲ್ಲಿ ನೀವು ಸುಮ್ಮನೆ ಕುಳಿತುಕೊಳ್ಳುವ ಬದಲು ನಿಮ್ಮ ಮಗುಗೆ ಸ್ನೇಹಿತರನ್ನು ಪಡೆಯಲು ನೀವೇ ಸಹಾಯ ಮಾಡಬಹುದು. ಮೊದಲು ಮಗುವಿಗೆ ಸ್ನೇಹಿತರಿಲ್ಲವೆಂದಾದ್ರೆ ಈ ಸಮಸ್ಯೆಗೆ ಕಾರಣವೇನು ಮತ್ತು ಅವರು ಸ್ನೇಹ ಬೆಳೆಸಲು ಎಲ್ಲಿ ಸಾಧ್ಯವಾಗ್ತಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಇಂದು ನಾವು, ಮಕ್ಕಳಿಗೆ ಸ್ನೇಹಿತರನ್ನು ನೀಡಲು ಪಾಲಕರು ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಮೊದಲು ಕಾರಣವನ್ನು ಅರ್ಥಮಾಡಿಕೊಳ್ಳಿ : ಮೊದಲನೆಯದಾಗಿ, ನಿಮ್ಮ ಮಗು ಸ್ನೇಹಿತರನ್ನು ಮಾಡಿಕೊಳ್ಳಲು ಏಕೆ ಹಿಂಜರಿಯುತ್ತಿದೆ ಎಂಬುದನ್ನು ಕಂಡುಹಿಡಿಯಲು ನೀವು ಪ್ರಯತ್ನಿಸಬೇಕು. ನಿಮ್ಮ ಮಗುವಿಗೆ ಏಕೆ ಸ್ನೇಹಿತರಿಲ್ಲ ಅಥವಾ ಇತರ ಮಕ್ಕಳೊಂದಿಗೆ ಏಕೆ ಆಡುವುದಿಲ್ಲ ಎಂದು ಕೇಳಿ. ಮಗುವಿನ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಮಗುವಿನ ಸಮಸ್ಯೆ ಗೊತ್ತಾದಲ್ಲಿ ಅದನ್ನು ಬಗೆಹರಿಸುವುದು ಸುಲಭ.
ಹುಡುಗ ಹೆಬ್ಬೆಟ್ಟು ಎಂದು ಮದುವೆ ಕ್ಯಾನ್ಸಲ್ ಮಾಡಿದ ವಧು !
ಇತರರನ್ನು ಕೇಳಿ : ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮಗುವಿನ ಶಾಲೆಯಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಮಾತನಾಡಿ ಮತ್ತು ನಿಮ್ಮ ಮಗುವಿಗೆ ಯಾವುದಾದ್ರೂ ಸಮಸ್ಯೆ ಇದೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸಿ. ಕೆಲವೊಮ್ಮೆ ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಮಗು ಏಕೆ ಏಕಾಂಗಿಯಾಗಿದೆ ಎಂಬುದನ್ನು ಇತರ ಮಕ್ಕಳು ವಿವರಿಸಬಹುದು.
ಸ್ನೇಹಿತರು ಏಕೆ ಮುಖ್ಯ : ಸ್ನೇಹಿತರನ್ನು ಮಾಡಿಕೊಳ್ಳುವುದು ಮತ್ತು ಇತರರೊಂದಿಗೆ ಮಾತನಾಡುವುದು ಏಕೆ ಮುಖ್ಯ ಎಂದು ನಿಮ್ಮ ಮಗುವಿಗೆ ಹೇಳಿ. ಜೀವನದಲ್ಲಿ ಕಷ್ಟಗಳು ಮತ್ತು ಸವಾಲುಗಳನ್ನು ಎದುರಿಸಲು ಇತರರ ದೃಷ್ಟಿಕೋನ ಮತ್ತು ಸಲಹೆಯ ಅಗತ್ಯವಿರುತ್ತದೆ. ಸ್ನೇಹಿತರು ಇದನ್ನು ನಿಭಾಯಿಸುತ್ತಾರೆ ಎಂದು ಮಕ್ಕಳಿಗೆ ತಿಳಿ ಹೇಳಿ.
ಹುಡುಗಿ ಮೇಕಪ್ ಹಾಕಿದ್ದಾಗ ಎಂಗೇಜ್‌ಮೆಂಟ್ ಆಯ್ತು, ವಿತೌಟ್ ಮೇಕಪ್ ಬಂದಾಗ ಮದ್ವೆ ಕ್ಯಾನ್ಸಲ್ ಆಯ್ತು !
ಸ್ನೇಹಿತರನ್ನು ಹೇಗೆ ಮಾಡುವುದು ? : ನಿಮ್ಮ ಮಗು ನಾಚಿಕೆ ಸ್ವಭಾವದ್ದಾಗಿರಬಹುದು ಅಥವಾ ಸಂಭಾಷಣೆ ಹೇಗೆ ಪ್ರಾರಂಭಿಸಬೇಕೆಂದು ತಿಳಿಯದೆ ಇರಬಹುದು. ಈ ಸಮಸ್ಯೆಯಿಂದ ಹೊರಬರಲು ಮಗುವಿಗೆ ಪಾಲಕರು ಸಹಾಯ ಮಾಡಬೇಕು. ನಮ್ಮನ್ನು ನಾವು ಹೇಗೆ ಪರಿಚಯಿಸಿಕೊಳ್ಳಬೇಕು ಮತ್ತು ಹೇಗೆ ಮುಂದುವರಿಯಬೇಕು ಎಂದು ಮಕ್ಕಳಿಗೆ ಕಲಿಸಬೇಕು.
ಮಕ್ಕಳಿಗೆ ಮಾದರಿಯಾಗಿ : ಮಕ್ಕಳಿಗೆ ಪೋಷಕರೇ ಮಾದರಿಯಾಗಿರುತ್ತಾರೆ. ಅನೇಕ ಬಾರಿ ಪೋಷಕರಿಗೆ ಸ್ನೇಹಿತರಿಲ್ಲದ ಕಾರಣ ಮಕ್ಕಳಿಗೂ ಸ್ನೇಹಿತರಿರುವುದಿಲ್ಲ. ಪಾಲಕರ ಸ್ನೇಹಿತರ ಸಂಖ್ಯೆ ಹೆಚ್ಚಾದಂತೆ ಹಾಗೂ ಸ್ನೇಹಿತರ ಜೊತೆ ಅವರು ಬೆರೆಯುತ್ತಿದ್ದರೆ ಮಕ್ಕಳು ನಿಧಾನವಾಗಿ ಅದನ್ನು ನೋಡಿ ಕಲಿಯುತ್ತಾರೆ. ನೀವು ಸ್ನೇಹಿತರ ಜೊತೆ ಮಾತನಾಡುವ ವಿಧಾನ,ಅವರ ಜೊತೆ ಒಡನಾಟ ಮಕ್ಕಳನ್ನು ಆಕರ್ಷಿಸುತ್ತದೆ. ನಿಮ್ಮಂತೆಯೇ ಮಕ್ಕಳು ತಮ್ಮ ವಯಸ್ಸಿನ ಮಕ್ಕಳ ಜೊತೆ ಬೆರೆಯಲು ಶುರು ಮಾಡ್ತಾರೆ. ನಿಧಾನವಾಗಿ ಮಾತನಾಡಲು ಶುರು ಮಾಡ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.