Libido ಗೆ ಕಾರಣವೇನು ಅಂತ ಹೇಳಲಾಗದಿದ್ದರೂ, ಇದು ಸಹಜವೆಂದು ಹೇಳಬಹುದು. ಆದರೆ, ಇನ್ನೊಬ್ಬರಿಗೆ ಹಾನಿಯಾಗುವಂತಿದ್ದರೆ ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ?
ಪ್ರಶ್ನೆ: ನನಗೆ ಮೂವತ್ತೆಂಟು ವರ್ಷ. ಗಂಡಸು. ಮದುವೆಯಾಗಿ ಒಂದು ಮಗುವಿದೆ. ಹೆಂಡತಿ ಜೊತೆ ಅನ್ಯೋನ್ಯವಾಗಿಯೇ ಇದ್ದೇನೆ. ಆದರೆ ಇತ್ತೀಚೆಗೆ ಸೆಕ್ಸ್ ಮೇಲಿನ ಆಸೆ ಹೆಚ್ಚಾಗ್ತಿದೆ. ಆಫೀಸಲ್ಲಿದ್ದರೂ, ಮನೆಯಲ್ಲಿದ್ದರೂ, ಜಿಮ್‌ನಲ್ಲಿದ್ದರೂ ಅದೇ ಯೋಚನೆ ಬರುತ್ತಿರುತ್ತದೆ. ಈಗೀಗ ಪೋರ್ನ್ ನೋಡೋ ಅಭ್ಯಾಸವೂ ಇದೆ. ಪದೇ ಪದೇ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಪತ್ನಿಗೆ ಸೆಕ್ಸ್‌ನಲ್ಲಿ ಆಸಕ್ತಿ ಇದೆಯಾದರೂ ದಿನಾ ಸೆಕ್ಸ್ ಮಾಡೋಕೆ ಅವಳು ಮುಂದೆ ಬರಲ್ಲ. ಈಗ ಮಗುವೂ ಇರುವ ಕಾರಣ ಅದು ಸಾಧ್ಯವಾಗೋದೂ ಇಲ್ಲ. ಕೆಲವೊಮ್ಮೆ ನನ್ನ ಈ ಗುಣದ ಬಗ್ಗೆ ಖುಷಿ ಅನಿಸುತ್ತೆ, ಇನ್ನೂ ಕೆಲವು ಸಲ ಇರಿಟೇಟ್ ಅನಿಸುತ್ತೆ. ಕೆಲವೊಮ್ಮೆ ಭಯವೂ ಆಗುತ್ತೆ. ಇದು ನಾರ್ಮಲ್ಲಾ ಅಥವಾ ನಂಗೆ ಏನಾದ್ರೂ ಸಮಸ್ಯೆ ಇದೆಯಾ? ಇದನ್ನು ಕಂಟ್ರೋಲ್ ಮಾಡಬೇಕಾ ಇಲ್ಲಾ ಹೀಗೆಯೇ ಬಿಡಬೇಕಾ ಏನೊಂದೂ ಗೊತ್ತಾಗ್ತಿಲ್ಲ. ಸೆಕ್ಸ್ ವಿಚಾರದಲ್ಲಿ ಇದು ನಾರ್ಮಲ್, ಇದು ಅಸಹಜ ಅಂತ ಡಿಸೈಡ್ ಮಾಡೋದು ಹೇಗೆ?
ಉತ್ತರ : ನಿಮ್ಮ ಈ ಸಮಸ್ಯೆ ಇದ್ದಕ್ಕಿದ್ದ ಹಾಗೆ ಶುರುವಾಯ್ತೋ ಅಥವಾ ಆರಂಭದಿಂದಲೂ ಹೀಗೇ ಇದ್ದೀರೋ ಅನ್ನೋದು ಗೊತ್ತಾಗ್ತಿಲ್ಲ. ಆದರೆ ಈ ಕಾಲದಲ್ಲಿ ಹೈ ಲಿಬಿಡೋ ಸಮಸ್ಯೆ ಅಪರೂಪ. ಆದರೆ ಬಹಳಷ್ಟು ಮಂದಿ ಲೋ ಲಿಬಿಡೋ ಅಂದರೆ ಕಡಿಮೆ ಸೆಕ್ಸ್ ಆಸಕ್ತಿ ಹೊಂದಿರುತ್ತಾರೆ. ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆ ಆಗೋದಕ್ಕೆ ಅನೇಕ ಕಾರಣ ಪಟ್ಟಿ ಮಾಡಬಹುದು. ವಯಸ್ಸು, ಹಾರ್ಮೋನಲ್ ಲೆವೆಲ್‌ನಲ್ಲಿ ಏರಿಳಿತ, ರಿಲೇಶನ್‌ಶಿಪ್‌ನಲ್ಲಿರುವ ಸಮಸ್ಯೆಗಳು, ಅನಾರೋಗ್ಯ, ಕೆಲವು ಔಷಧಗಳ ಸೇವನೆ, ಸೆಕ್ಸ್ ಬಗೆಗೆ ಇರುವ ಕೆಲವು ನಂಬಿಕೆಗಳು, ಹಿಂಜರಿಕೆ ಹೀಗೆ.
ಹಾಗೇ ಹೈ ಸೆಕ್ಸ್‌ಗೂ ನಮ್ಮ ಆಹಾರ, ಯೋಚನಾ ಕ್ರಮ, ಹಾರ್ಮೋನಲ್ ಏರಿಳಿತ, ವಯಸ್ಸು ಇತ್ಯಾದಿ ಕಾರಣ ಇರುತ್ತೆ. ಸೆಕ್ಸ್ ವಿಚಾರದಲ್ಲಿ ಇದು ನಾರ್ಮಲ್, ಇದು ಅಬ್‌ನಾರ್ಮಲ್ ಅಂತ ಹೊರಗಿನವರು ಹೇಳೋದು ಕಷ್ಟ. ಅದನ್ನು ನೀವೇ ಟೆಸ್ಟ್ ಮಾಡಿಕೊಳ್ಳಬೇಕು. ನನಗೆ ಇದು ನಾರ್ಮಲ್, ಇದು ನಾರ್ಮಲ್ ಗಿಂತ(Normal) ಜಾಸ್ತಿ, ಇದು ನಾರ್ಮಲ್‌ಗಿಂತ ಕಡಿಮೆ ಹೀಗೆ. ವ್ಯಕ್ತಿಯಿಂದ ವ್ಯಕ್ತಿಗೆ ಲಿಬಿಡೋದಲ್ಲಿ ವ್ಯತ್ಯಾಸ ಆಗುತ್ತಲೇ ಹೋಗುತ್ತದೆ. ನಿಮಗೆ ಸೆಕ್ಸ್ ಆಸಕ್ತಿ ಲಿಮಿಟ್(Limit) ಮೀರಿ ಹೋಗುತ್ತದೆ ಅಂದರೆ ಸೆಕ್ಸಾಲಜಿಸ್ಟ್ ಕಾಣೋದು, ಕೌನ್ಸಿಲಿಂಗ್ ಮಾಡಿಸಿಕೊಳ್ಳೋದು ಅನಿವಾರ್ಯ. ಕೆಲವು ಆಹಾರ ಪದಾರ್ಥಗಳ ಸೇವನೆಯೂ ಸೆಕ್ಸ್ ಆಸಕ್ತಿ ಕುಗ್ಗಿಸುತ್ತದೆಯಂತೆ.
Relationship Tips: ಮಾಜಿ ಸಂಗಾತಿಯನ್ನು ಸ್ಟಾಕ್ ಮಾಡೋದು ಸರೀನಾ?
ಪ್ರಶ್ನೆ: ನಾನೀಗ ಹೈಸ್ಕೂಲ್ ವಿದ್ಯಾರ್ಥಿ. ಸೆಕ್ಸ್(sex) ಬಗ್ಗೆ ತುಂಬ ಕುತೂಹಲ ಇದೆ. ಆದರೆ ಯಾರ ಹತ್ರನೂ ಬಾಯಿ ಬಿಟ್ಟು ಮಾತಾಡೋದಕ್ಕೆ ಮುಜುಗರ ಆಗುತ್ತೆ. ನಾನು ಇನ್‌ಟ್ರಾವರ್ಟ್. ಫ್ರೆಂಡ್ಸ್ ಕಡಿಮೆ. ಒಬ್ಬ ಹುಡುಗಿ ಫ್ರೆಂಡ್ ಇದ್ದಾಳೆ. ಅವಳ ಹತ್ರ ಇಂಥಾ ವಿಷಯ ಮಾತಾಡೋಕೆ ಆಗಲ್ಲ. ಏನ್ಮಾಡ್ಲಿ?
ಉತ್ತರ: ಈ ವಯಸ್ಸಲ್ಲಿ ಸೆಕ್ಸ್ ಬಗ್ಗೆ ಆಸಕ್ತಿ ಸಹಜ. ಆದರೆ ಅತೀ ಆಸಕ್ತಿಯಿಂದ(Interest) ಸಿಕ್ಕ ಸಿಕ್ಕಲ್ಲಿ ಹುಡುಕಲು ಹೋದರೆ ಅವು ನಿಮ್ಮ ದಾರಿ ತಪ್ಪಿಸೋ ಸಾಧ್ಯತೆಯೇ ಅಧಿಕ. ಸೆಕ್ಸ್ ಬಗ್ಗೆ ಕುತೂಹಲದಲ್ಲಿ ನಿಮ್ಮ ವಯಸ್ಸಿನ ಹುಡುಗ ಹುಡುಗಿಯರು ಬೇರೆ ದಾರಿ ಹಿಡಿಯೋದು ಇದೆ. ಸೆಕ್ಸ್ ಬಗ್ಗೆ ಹುಡುಗ ಹುಡುಗಿಯರಿಗೆ ತಿಳಿವಳಿಕೆ ಮೂಡಿಸೋ ಪುಸ್ತಕಗಳು (Books) ಬಂದಿವೆ. ಅದನ್ನು ಓದೋದು ಬೆಟರ್. ಅದರ ಬದಲಾಗಿ ಇಂಟರ್‌ನೆಟ್‌ನಲ್ಲಿ(Internet) ಹುಡುಕೋದಕ್ಕೆ ಹೋದರೆ ನಿಮ್ಮನ್ನು ದಾರಿ ತಪ್ಪಿಸುವ ಹಲವಾರು ವೆಬ್‌ಸೈಟ್‌ಗಳಿವೆ. ಆ ಬಗ್ಗೆ ಎಚ್ಚರ ಇರಲಿ. ಇಲ್ಲಾಂದರೆ ಒಂದು ಹೋಗಿ ಮತ್ತೊಂದಾದರೆ ಕಷ್ಟ.
ರೊಮ್ಯಾಂಟಿಕ್, ಕೇರಿಂಗ್, ಸೆಕ್ಸುವಲ್…. ಹೀಗೆಲ್ಲಾ ಕಿಸ್ ಮಾಡ್ತಾರಾ?