Relationship Tips: ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಲಿ ಅನ್ನೋ ಗೊಂದಲಕ್ಕೆ ಮುಕ್ತಿ ಹಾಡಿ

By Contributor Asianet  |  First Published Oct 8, 2022, 5:00 PM IST

ಸೂಕ್ತ ಸಂಗಾತಿ ಹೊಂದುವ ಬಯಕೆ ಎಲ್ಲರಲ್ಲೂ ಸಹಜ. ಆದರೆ, ಈ ವಿಚಾರದಲ್ಲಿ ಕೆಲವರು ಮಾತ್ರವೇ ಯಶಸ್ವಿಯಾಗುತ್ತಾರೆ. ಬಹಳಷ್ಟು ಜನ ಎಡವುತ್ತಾರೆ. ಗರ್ಲ್‌ ಫ್ರೆಂಡ್‌/ ಬಾಯ್‌ ಫ್ರೆಂಡ್‌ ಗಳಲ್ಲಿ ಯಾರನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಲಿ ಎನ್ನುವ ಗೊಂದಲ ನಿವಾರಿಸಿಕೊಳ್ಳಲು ಈ ಟಿಪ್ಸ್‌ ಅನುಸರಿಸಿ.
 


ಯುವಜನಾಂಗ ಯಾವುದೇ ಪ್ರದೇಶ, ನಗರ, ಗ್ರಾಮೀಣ ಭಾಗಕ್ಕೆ ಸೇರಿರಲಿ, ಅವರೆಲ್ಲರಲ್ಲಿ ಒಂದು ಆಸೆ ಸಹಜವಾಗಿರುತ್ತದೆ. ಅದೆಂದರೆ, ಸೂಕ್ತ ಸಂಗಾತಿ ಸಿಗಲಿ ಎನ್ನುವ ಬಯಕೆ. “ಸೂಕ್ತʼ ಎಂದರೆ ಅವರಿಗೆ ತಕ್ಕಂತಹ ಸಂಗಾತಿ. ಅದು ವ್ಯಕ್ತಿಯಿಂದ ವ್ಯಕ್ತಿಗೆ, ಅವರ ನಿರೀಕ್ಷೆ, ಆಸೆ, ಆಕಾಂಕ್ಷೆ, ಸಂಸ್ಕೃತಿಗೆ ತಕ್ಕಂತೆ ಭಿನ್ನವಾಗಿರುತ್ತದೆ. ಎಲ್ಲರೂ ಈ ವಿಚಾರದಲ್ಲಿ ಸಾಕಷ್ಟು ನಿಷ್ಕರ್ಷೆ ಮಾಡಿರುತ್ತಾರೆ. ಕೆಲವರು ಯಶಸ್ವಿ ಆಗುತ್ತಾರೆ, ಕೆಲವರು ಎಡವುತ್ತಾರೆ. ಸಂಬಂಧಗಳ ಆಯ್ಕೆಯಲ್ಲಿ ತಪ್ಪು ಮಾಡುವುದು ಜೀವನದ ಬಹುದೊಡ್ಡ ಪಶ್ಚಾತ್ತಾಪಕ್ಕೆ ಕಾರಣವಾಗಬಲ್ಲದು. ಅದು ಜೀವನವನ್ನು ಬೇರೆಯದೇ ರೀತಿಯಲ್ಲಿ ತಿರುಗಿಸಿಬಿಡಬಲ್ಲದು. ಹೀಗಾಗಿ, ಆಯ್ಕೆ ಮಾಡುವಾಗ ಎಚ್ಚರಿಕೆ ಸಹಜ. ಬಹಳಷ್ಟು ಜನ ಒಬ್ಬರನ್ನೇ ಪ್ರೀತಿಸಿ, ವೈವಾಹಿಕ ಬದುಕಿಗೆ ಕಾಲಿಟ್ಟರೆ, ಅನೇಕರು ಇಬ್ಬರು, ಮೂವರ ಸ್ನೇಹ ಬೆಳೆಸಿ ಅವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಲಿ ಎನ್ನುವ ಗೊಂದಲಕ್ಕೆ ಸಿಲುಕುತ್ತಾರೆ. ಅವರಲ್ಲೇ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳುವುದು ಬಹುದೊಡ್ಡ ಸವಾಲಾಗಿ ಕಾಡುತ್ತದೆ. ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಸೂಕ್ತವಾದ ಸಂಗಾತಿ ಎಂಬಂತೆಯೇ ಭಾಸವಾಗುತ್ತಾರೆ. ಅಂತಹ ಸನ್ನಿವೇಶದಲ್ಲಿ ಬಹಳ ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಕೆಲವು ಮಾರ್ಗ ಅನುಸರಿಸುವುದು ಉತ್ತಮ.

ಇದನ್ನೂ ಓದಿ: ಮಾಜಿ ಗರ್ಲ್‌ಫ್ರೆಂಡ್ ಜೊತೆಗಿನ ಇಂಟಿಮೇಟ್‌ ಪೋಟೋ ಗಂಡ ಇನ್ನೂ ಇಟ್ಕೊಂಡಿದ್ದಾನೆ, ಏನ್ಮಾಡ್ಮಿ ?

Tap to resize

Latest Videos

•    ಉತ್ತಮ ಗುಣಗಳನ್ನು (Good Qualities) ಪಟ್ಟಿ (List) ಮಾಡಿ
ಯಾವುದೇ ವಿಚಾರದಲ್ಲಿ ಗೊಂದಲವಾದರೂ ಸರಿ, ಉಭಯ ವಿಷಯಗಳ ಗುಣಾವಗುಣ, ಪರಿಣಾಮಗಳ ಬಗ್ಗೆ ಪಟ್ಟಿ ಮಾಡಿಕೊಳ್ಳಬೇಕು. ಆಗ ನಿಮ್ಮ ಆಯ್ಕೆಯ (Choice) ಬಗ್ಗೆ ಸ್ಪಷ್ಟತೆ ಹಾಗೂ ನಿಖರ ಅಂದಾಜು ಸಿಗುತ್ತದೆ. ಇಲ್ಲೂ ಹಾಗೆಯೇ ಮಾಡಿ. ಇಬ್ಬರು ಸ್ನೇಹಿತ/ಸ್ನೇಹಿತೆಯರಿದ್ದರೆ (Friends) ಅವರಿಬ್ಬರ ಒಳ್ಳೆಯ ಹಾಗೂ ಕೆಟ್ಟ ಅಥವಾ ನಿಮಗೆ ಇಷ್ಟವಾಗದ ಗುಣಗಳನ್ನು ಪಟ್ಟಿ ಮಾಡಿ. ಇಬ್ಬರಲ್ಲಿ ಯಾವ ಗುಣಗಳು ನಿಮಗೆ ಹೆಚ್ಚು ಇಷ್ಟವಾಗುತ್ತವೆ ಎನ್ನುವುದನ್ನು ಬರೆದುಕೊಳ್ಳಿ. ನಿಮ್ಮ ಹಾಗೂ ನಿಮ್ಮ ಕುಟುಂಬ, ಸಂಸ್ಕೃತಿಗೆ ಹೊಂದುವಂತವರು ಯಾರು ಎಂದು ಗಮನಿಸಿಕೊಳ್ಳಿ. ಸಾಮಾಜಿಕ ಸ್ಥಾನಮಾನ (Social Status) ಹಾಗೂ ಸೌಂದರ್ಯಕ್ಕಿಂತ (Beauty) ಬದ್ಧತೆ (Commitment), ಗೌರವ (Respect) ಹೊಂದಿರುವವರು ಯಾರು ಎನ್ನುವುದನ್ನು ಅರಿತುಕೊಳ್ಳಿ. ಭಾವನಾತ್ಮಕ ಪ್ರಬುದ್ಧತೆ (Emotional Maturity) ಹೊಂದಿರುವವರು ಹೆಚ್ಚು ರೋಮ್ಯಾಂಟಿಕ್‌ (Romantic) ಎನಿಸದೇ ಇದ್ದರೂ ಅಥವಾ ಕೆಲವೊಮ್ಮೆ ನೀರಸ ಎನಿಸಿದರೂ ಅವರ ಸಾಂಗತ್ಯದಲ್ಲಿ ಬಾಳು ಸುಗಮವಾಗುತ್ತದೆ ಎನ್ನುವುದು ಗಮನದಲ್ಲಿ ಇರಲಿ.

•    ಆಪ್ತರ ಸಲಹೆ ಪಡೆದುಕೊಳ್ಳಿ (Opinion from Closed Ones)
ನಿಮಗೆ ತುಂಬ ಆಪ್ತರಾದವರ ಬಳಿ ನಿಮ್ಮ ಗೊಂದಲ ಹಂಚಿಕೊಂಡು ಅವರ ಅಭಿಪ್ರಾಯ ಪಡೆಯಿರಿ. ನಿಮಗೆ ಯಾವ ರೀತಿಯ ಸಂಗಾತಿ (Partner) ಸೂಕ್ತ ಎನ್ನುವುದನ್ನು ಅವರು ನಿಮಗಿಂತ ಹೆಚ್ಚಾಗಿ ಅರಿತಿರುತ್ತಾರೆ. ಅವರ ಮಾರ್ಗದರ್ಶನ ಖಂಡಿತವಾಗಿ ನಿಮಗೆ ಈ ಸಮಯದಲ್ಲಿ ಸಹಾಯ (Help) ಮಾಡುತ್ತದೆ. ವಿಶಾಲವಾದ ದೃಷ್ಟಿಕೋನದಲ್ಲಿ ಯೋಚನೆ ಮಾಡುವ ಆಪ್ತರಲ್ಲಿ ಇಂತಹ ಸಲಹೆ ಕೇಳುವುದು ಸೂಕ್ತ. ನಿಮ್ಮ ಸ್ನೇಹಿತರನ್ನೂ ಅರಿತಿರುವವರಾದರೆ ಇನ್ನೂ ಅನುಕೂಲ. ಗಡಿಬಿಡಿ ಮಾಡದೆ ಅವರಲ್ಲಿ ಸಮಯ ಪಡೆದು ಮಾತನಾಡಿ. ಅವರಿಗೂ ಯೋಚಿಸಿ ತಿಳಿಸಲು ಸಮಯ ನೀಡಿ. 

ಇದನ್ನೂ ಓದಿ: ಹೀಗೆಲ್ಲಾ ಆಗುತ್ತಾ..? ಮದ್ವೆಯಾಗಿ ಗಂಡನ ಮೇಲೆ ಲವ್ವಾಗೋಕೆ ಮೂರು ವರ್ಷ ಬೇಕಾಯ್ತಂತೆ !

•    ನಿಮ್ಮ ಭಾವನೆಗಳಿಗೆ (Feelings) ಆದ್ಯತೆ ನೀಡಿ
ಆಯ್ಕೆಯ ಗೊಂದಲದಲ್ಲಿ ಕೆಲವೊಮ್ಮೆ ನಿಮ್ಮ ಭಾವನೆಗಳನ್ನು ಗುರುತಿಸಲು, ಆದ್ಯತೆ ನೀಡಲು ವಿಫಲರಾಗಬಹುದು. ಹಾಗಾಗಲು ಬಿಡದೆ ಶಾಂತಚಿತ್ತರಾಗಿ ನಿಮ್ಮ ಭಾವನೆಗಳನ್ನು ಗುರುತಿಸಿಕೊಳ್ಳಿ. ಯಾರ ಬಗ್ಗೆ ನಿಮಗೆ ಹೆಚ್ಚು ಒಲವಿದೆ, ಯಾರನ್ನು ಕಳೆದುಕೊಳ್ಳಲು ನಿಮಗೆ ಇಷ್ಟವಿಲ್ಲ ಎಂದು ಗುರುತಿಸಿಕೊಳ್ಳಿ. ಆಕರ್ಷಣೆ, ರೋಮ್ಯಾಂಟಿಕ್‌ ಭಾವನೆಗಳು, ಸೌಂದರ್ಯದ ಸೆಳೆತಕ್ಕೆ ಆಸ್ಪದ ನೀಡದೆ ವಾಸ್ತವತೆಯ ಆಧಾರದಲ್ಲಿ ನಿರ್ಧಾರ ಕೈಗೊಳ್ಳಿ. ಒಮ್ಮೆ ನಿರ್ಧಾರ ತೆಗೆದುಕೊಂಡ ಬಳಿಕ ಪಶ್ಚಾತ್ತಾಪ (Regret) ಪಡಬೇಡಿ. ಹಾಗೂ ಅವರಲ್ಲಿ ಅಪ್ಪಿತಪ್ಪಿಯೂ ಈ ಕುರಿತು ಮಾತನಾಡಬೇಡಿ. ಆಯ್ಕೆಯಲ್ಲಿ ಪ್ರಾಮಾಣಿಕತೆ ಇರಲಿ, ಯಾರೇನು ಅಂದುಕೊಳ್ಳುತ್ತಾರೆ ಎನ್ನುವ ಹಿಂಜರಿಕೆ ಬೇಡ. 

click me!