ಆನಿವರ್ಸರಿ ( Anniversary) ದಿನ ಹೆಂಡ್ತಿಯ (Wife) ಪಾಡು ಯಾವ ಶತ್ರುವಿಗೂ ಬೇಡ. ಗಂಡ ಈಗ ವಿಶ್ ಮಾಡ್ತಾನೆ ಅಂತ ಬೆಳಗ್ಗಿನಿಂದ ರಾತ್ರಿಯವರೆಗೂ ಕಾದು ಕೊನೆಗೆ ಸಿಗೋದು ನಿರಾಶೆನೆ. ಅಲ್ಲಾ, ಇವತ್ತು ಆನಿವರ್ಸರಿ ಅಂತಾನೆ ನೆನಪಿನಲ್ಲಾಂದ್ರೆ ಗಂಡಂದಿರಾದ್ರೂ ಏನ್ ಪ್ಲಾನ್ ಮಾಡ್ತಾರೆ. ಏನ್ ಗಿಫ್ಟ್ (Gift) ಕೊಡ್ತಾರೆ ಪಾಪ. ಹೀಗಾಗಿ ಮೊದಲಿಗೆ ಗಂಡನಿಗೆ (Husband) ಆನಿವರ್ಸರಿ ನೆನಪಿರೋ ಹಾಗೆ ಏನ್ ಮಾಡ್ಬೋದು ಅಂತ ತಿಳಿಯೋಣ.
ಮದುವೆ (Marriage)ಯೆಂಬುದು ಒಂದು ಸುಂದರ ಅನುಬಂಧ. ಎರಡು ಹೃದಯಗಳನ್ನು ಮೂರು ಗಂಟುಗಳಲ್ಲಿ ಒಂದಾಗಿಸುವ ಒಂದು ಅದ್ಭುತ ಬಾಂಧವ್ಯ. ಹೀಗಾಗಿಯೇ ಶಾಸ್ತ್ರೋಕ್ತವಾಗಿ ಒಳ್ಳೆಯ ದಿನಾನ ಎಂದು ಪರಿಶೀಲಿಸಿ ಮದುವೆ ಮಾಡುತ್ತಾರೆ. ನಿರ್ಧಿಷ್ಟ ಗಂಟೆ, ಘಳಿಗೆಯನ್ನು ಪರಿಶೀಲಿಸಿ ತಾಳಿಕಟ್ಟಲು ಸಮಯ ನಿಗದಿಪಡಿಸಲಾಗುತ್ತದೆ. ಹೀಗಾಗಿಯೇ ಮದುವೆಯೆಂಬ ಪವಿತ್ರ ಬಂಧ ಎಲ್ಲರ ಪಾಲಿಗೆ ಸ್ಪೆಷಲ್ ಆಗಿರುತ್ತದೆ. ಮದುವೆಯಾಗಿ ಎಷ್ಟೇ ವರ್ಷಗಳಾಗಿರಲಿ,ವರ್ಷ ಹೆಚ್ಚಾದಂತೆ ಸಂಬಂಧ (Relationship) ಮತ್ತಷ್ಟು ಗಟ್ಟಿಯಾಗುತ್ತದೆ. ಮದುವೆ ನೆನಪು ಸದಾ ಇರಲೆಂದು ಎಲ್ಲರೂ ಬಯಸ್ತಾರೆ. ಮದುವೆ ವಾರ್ಷಿಕೋತ್ಸವ (Anniversary) ವನ್ನು ಪ್ರತಿವರ್ಷ ನೆನಪಿಟ್ಟು ಆಚರಿಸಿಕೊಳ್ತಾರೆ.
ಮದುವೆ ವಾರ್ಷಿಕೋತ್ಸವದಂದು ಎಲ್ಲಾದರೂ ವಿಶೇಷ ಜಾಗಕ್ಕೆ ಔಟಿಂಗ್ (Outing) ಹೋಗಬೇಕು, ಸ್ಪೆಷಲ್ ರೆಸ್ಟೋರೆಂಟ್‌ನಲ್ಲಿ ಡಿನ್ನರ್ (Dinner) ಮಾಡಬೇಕು, ಗಂಡ ಪ್ರೀತಿಯಿಂದ ಸರ್‌ಪ್ರೈಸ್ ಗಿಫ್ಟ್ ಕೊಡಿಸಬೇಕೆಂದು ಎಲ್ಲಾ ಹೆಂಡತಿಯರು (Wife) ಅಂದುಕೊಳ್ಳುತ್ತಾರೆ. ಆದರೆ, ಗಂಡಂದಿರಿಗೋ (Husband) ಇವತ್ತು ನಮ್ಮ ಆನಿವರ್ಸರಿ ಅಂತಾನೇ ನೆನಪಿರೋದಿಲ್ಲ. ಬೆಳಗ್ಗಿನಿಂತಲೇ ಮುಖ ಗಂಟು ಹಾಕಿಕೊಂಡಿರೋ ಹೆಂಡ್ತಿ, ಪಾತ್ರೆಯನ್ನು ಶಬ್ದ ಬರುವಂತೆ ಕುಕ್ಕೋ ರೀತಿ, ಮಾತು ಮಾತಿಗೂ ಸಿಡುಕೋದನ್ನು ನೋಡಿ ಕೂಡಾ ಅರ್ಥಮಾಡಿಕೊಳ್ಳೋದಿಲ್ಲ.
Valentine's Day ಜೊತೆಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಿಂದೆದ್ದ ಕೃಷ್ಣ-ಮಿಲನಾ ಜೋಡಿ!
ಗಂಡ ಏನಾದ್ರೂ ಸರ್‌ಪ್ರೈಸ್ ಪ್ಲಾನ್ ಮಾಡಿರ್ಬೊದು, ಏನಾದ್ರೂ ಸ್ಪೆಷಲ್ ಗಿಫ್ಟ್ ತಂದಿರ್ಬೋದು ಅಂತ ವೈಟ್ ಮಾಡೋ ಹೆಂಡ್ತೀರು ರಾತ್ರಿಯವರೆಗೂ ಕಾದ ಮೇಲೂ ಕೊನೆಗೆ ಸಿಗೋದು ನಿರಾಶೆನೆ. ಅಲ್ಲಾ, ಆನಿವರ್ಸರಿ ಅಂತಾನೆ ನೆನಪಿನಲ್ಲಾಂದ್ರೆ ಗಂಡಂದಿರಾದ್ರೂ ಏನ್ ಪ್ಲಾನ್ ಮಾಡ್ತಾರೆ ಏನ್ ಗಿಫ್ಟ್ ಕೊಡ್ತಾರೆ ಪಾಪ. ಹೀಗಾಗಿ ಮೊದಲಿಗೆ ಗಂಡನಿಗೆ ಆನಿವರ್ಸರಿ ನೆನಪಿರೋ ಹಾಗೆ ಏನ್ ಮಾಡ್ಬೋದು ಅಂತ ತಿಳಿಯೋಣ.
ಮದುವೆಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿರಿ
ಮದುವೆ ವಾರ್ಷಿಕೋತ್ಸವಕ್ಕೆ ಇನ್ನೇನು ಕೆಲವೇ ವಾರಗಳು ಇದೆ ಎನ್ನುವಾಗಲೇ ಮದುವೆಯ ಕ್ಷಣಗಳನ್ನು ಗಂಡನ ಜೊತೆ ಹಂಚಿಕೊಳ್ಳಿ. ಹುಡುಗಿ ನೋಡಲೆಂದು ಮನೆಗೆ ಬಂದಿದ್ದು, ಹೊರಗಡೆ ಮೀಟ್ ಆಗಿದ್ದು, ಮದುವೆಯ ಹಿಂದಿನ ದಿನದ ಆತಂಕ ಎಲ್ಲವನ್ನೂ ಅವರ ಜತೆ ಹೇಳಿಕೊಳ್ಳಿ. ಮದುವೆಯ ದಿನ ಇಬ್ಬರೂ ಅದೆಷ್ಟು ಖುಷಿಯಾಗಿದ್ದೆವೆಂದು ತಿಳಿಸಿ. ಇದು ಗಂಡಂದಿರಿಗೆ ಆ ದಿನಗಳ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡುತ್ತಾರೆ. ಈ ಮೂಲಕ ಆನಿವರ್ಸರಿ ಕೂಡಾ ನೆನಪಾಗುತ್ತದೆ.
ಗಿಫ್ಟ್‌ಗಳ ಬಗ್ಗೆ ವಿಚಾರಿಸಿ
ಆನಿವರ್ಸರಿಗೆ ಕೆಲವೇ ದಿನಗಳಿರುವಾಗಲೇ ಗಿಫ್ಟ್ ಬಗ್ಗೆ ಹೆಚ್ಚೆಚ್ಚು ಮಾತನಾಡಿ. ಯಾವ ಸಂದರ್ಭಕ್ಕೆ ಯಾವ ರೀತಿಯ ಗಿಫ್ಟ್ ಒಳ್ಳೆಯದು ಎಂಬುದನ್ನೆಲ್ಲಾ ಕೇಳಿಕೊಳ್ಳಿ. ಹೀಗಾದಾಗ ಅವರಿಗೆ ಸಹಜವಾಗಿಯೇ ಆನಿವರ್ಸರಿ ದಿನಾಂಕ ನೆನಪಾಗಬಹುದು.
Wedding Anniversary ಖುಷಿ ದುಪ್ಪಟ್ಟು ಆಗ್ಬೇಕಂದ್ರೆ ಪ್ಲಾನ್ ಹೀಗಿರಲಿ
ಗಂಡನೊಂದಿಗೆ ಮದುವೆಯಲ್ಲಿ ಭಾಗವಹಿಸಿ
ಆನಿವರ್ಸರಿ ಡೇಟ್ ಸಮೀಪಿಸಿದಾಗ ಗಂಡನನ್ನು ಯಾವುದಾದರೂ ಆಪ್ತರ ಮದುವೆಗೆ ಕರೆದುಕೊಂಡು ಹೋಗಿ. ಮದುವೆ ಕಾರ್ಯಕ್ರಮವನ್ನು ನೋಡಿದಾಗ ಗಂಡನಿಗೆ ನಿಮ್ಮ ಮದುವೆಯ ಕ್ಷಣಗಳು ನೆನಪಾಗಬಹುದು. ಈ ಮೂಲಕ ಆನಿವರ್ಸರಿ ಇಷ್ಟರಲ್ಲೇ ಇದೆ ಎಂಬುದು ಗಮನಕ್ಕೆ ಬರಬಹುದು. ಇದರಿಂದ ನಿಮಗಾಗಿ ಏನಾದರೂ ಸ್ಪೆಷಲ್ ಪ್ಲಾನ್ ಮಾಡಲು ಸಾಧ್ಯವಾಗುತ್ತದೆ.
ಮದುವೆಯ ಮೊದಲ ಜೀವನ ನೆನಪಿಸಿ
ಹೀಗೊಂದು ಸೆಂಟಿಮೆಂಟಲ್ ಡ್ರಾಮಾ ಮಾಡುವುದು ನಿಮ್ಮ ರಿಸ್ಕ್‌ನಲ್ಲಾಗಿರಲಿ. ಮದುವೆಯ ಮೊದಲಿನ ಲೈಫೇ ಚೆನ್ನಾಗಿತ್ತು. ಈಗಂತೂ ಹೊರಗಡೆನೂ ಹೋಗಲ್ಲ. ಬರೀ ಕೆಲಸ ಕೆಲಸ ಅಷ್ಟೆ ಅಂತ ಸೆಂಟಿಮೆಂಟಲ್ ಡೈಲಾಗ್ ಹೊಡೆಯಿರಿ. ನಿಮ್ಮ ಬೇಸರದಿಂದ ಗಂಡಾನೂ ಬೇಸರಗೊಂಡು ಏನಾದ್ರೂ ಸ್ಪೆಷಲ್ ಆಗಿ ಪ್ಲಾನ್ ಮಾಡಿದ್ರೂ ಮಾಡ್ಬೋದು.
ಚೀಪ್ ಟ್ರಿಕ್ಸ್
ಮತ್ತೇನ್ಮಾಡೋದು ಏನಾದ್ರೊಂದು ಮಾಡ್ಲೇಬೇಕಲ್ಲ. ಮೇಲೆ ಹೇಳಿದ್ದು ಯಾವ್ದೇ ವರ್ಕೌಟ್ ಆಗದಿದ್ದಲ್ಲಿ ನಿಮ್ಮ ಕುಟುಂಬ ಸದಸ್ಯರಿಂದಲೇ ಗಂಡನಿಗೆ ಆನಿವರ್ಸರಿ ಡೇಟ್ ನೆನಪಿಸಿ. ಏನ್ ಪ್ಲಾನ್ ಮಾಡಿದ್ಯಾ ಅಂತ ಕೇಳೋಕೆ ಹೇಳಿ. ಈ ಮೂಲಕನಾದ್ರೂ ಗಂಡನಿಎಗ ಜ್ಞಾನೋದಯವಾಗಿ ಏನಾದ್ರೂ ಪ್ಲಾನ್ ಮಾಡ್ಬೇಕಲ್ವಾ ಅಂದ್ಕೊಂಡು ಸ್ಪೆಷಲ್ ಅರೇಂಜ್‌ಮೆಂಟ್ಸ್ ಮಾಡ್ಬೋದು.
ಒಟ್ನಲ್ಲಿ ಗಂಡನಿಗೆ ಅನಿವರ್ಸರಿ ಡೇಟ್ ನೆನಪೇ ಇರಲ್ವಲ್ಲಪ್ಪಾ ಅಂತ ಹೇಳಿ ಕೊರಗ್ಬೇಡಿ. ನೀವೇ ಸ್ಪೆಷಲ್ ಅರೇಂಜ್‌ಮೆಂಟ್ಸ್ ಮಾಡಿಸಿ ಗಂಡನಿಗೆ ಸರ್‌ಪ್ರೈಸ್ ನೀಡಿ. ಬಾಂಧವ್ಯಕ್ಕೆ ದಿನಾಂಕ, ಗಿಫ್ಟ್‌ಗಳ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿ.