ಬಿಟ್ಟಿ ಊಟ (Food) ಸಿಗುತ್ತೆ ಅಂದ್ರೆ ಕೆಲವೊಬ್ಬರು ಎಲ್ಲಿಗೂ ಹೋಗ್ತಾರೆ. ಕರೆಯದ ಫ್ರೆಂಡ್ ಮದುವೆಗೆ (Marriage), ಅನ್ ಇನ್‌ವೈಟೆಡ್ ಪಾರ್ಟಿಗೆ ಹೀಗೆ. ಆದ್ರೆ ಇಲ್ಲೊಬ್ಬಾಕೆ ಫ್ರೀ ಮೀಲ್ (Meal) ಸಿಗುತ್ತೆ ಅಂತ ಹೋಗಿದ್ದು ಎಲ್ಲಿಗೆ ಗೊತ್ತಾದ್ರೆ ನೀವು ಹೌದಾ, ಹೀಗೂ ಇರ್ತಾರಪ್ಪಾ ಅನ್ನೋದು ಖಂಡಿತ.
ಮನುಷ್ಯ ಆರೋಗ್ಯ (Health)ವಾಗಿರಬೇಕು ಅಂದ್ರೆ ಮೂರು ಹೊತ್ತು ಆಹಾರ (Food) ತಿನ್ನಲೇಬೇಕು. ದೇಹಕ್ಕೆ ಸರಿಯಾದ ರೀತಿಯಲ್ಲಿ ಆಹಾರ ಪೂರೈಕೆಗೆ ಆಗದಿದ್ದಾಗ ನಿಶ್ಯಕ್ತಿ, ತಲೆಸುತ್ತುವುದು ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಹೊತ್ತಿಗೆ ಸರಿಯಾಗಿ ಸಲ್ಪ ಊಟ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ಕೆಲವೊಬ್ಬರಿಗೆ ಹೊತ್ತಿಗಿಷ್ಟು ಊಟ ಮಾಡಲು ಸಹ ಹಣವಿರುವುದಿಲ್ಲ. ಹೀಗಾಗಿಯೇ ಕೆಲವರು ದೇವಸ್ಥಾನಗಳಿಗೆ ಹೋಗಿ ಊಟ ಮಾಡಿ ಬರುತ್ತಾರೆ. ಇನ್ನು ಕೆಲವರು ಕಡಿಮೆ ದುಡ್ಡಿಗೆ ಊಟ ಸಿಗುವಲ್ಲಿಗೆ ತೆರಳುತ್ತಾರೆ.
ಬಿಟ್ಟಿ ಸಿಕ್ರೆ ನಂಗೂ ಇರ್ಲಿ, ನನ್ ಪಕ್ಕದ ಮನೆಗು ಒಂದಿರ್ಲಿ ಅನ್ನೋ ಕಾಲ ಇದು. ಬಿಟ್ಟಿ ಊಟ ಸಿಗುತ್ತೆ ಅಂದ್ರೆ ಕೆಲವ್ರೊ ಎಲ್ಲಿಗೂ ಹೋಗ್ತಾರೆ. ಕರೆಯದ ಫ್ರೆಂಡ್ ಮದುವೆಗೆ, ಅನ್ ಇನ್‌ವೈಟೆಡ್ ಪಾರ್ಟಿಗೆ ಹೀಗೆ. ಆದ್ರೆ ಇಲ್ಲೊಬ್ಬಾಕೆ ಫ್ರೀ ಮೀಲ್ (Free Meal) ಸಿಗುತ್ತೆ ಅಂತ ಹೋಗಿದ್ದು ಎಲ್ಲಿಗೆ ಗೊತ್ತಾ.. ಮತ್ತೆಲ್ಲೂ ಅಲ್ಲ ಡೇಟಿಂಗ್‌ಗೆ (Dating). ಹೌದು, ಈ ಮಹಿಳೆ ಕೇವಲ ಉಚಿತ ಆಹಾರಕ್ಕಾಗಿ ಸತತವಾಗಿ 16 ದಿನ ಡೇಟಿಂಗ್‌ಗೆ ಹೋಗಿದ್ದಾಳೆ. ಪುರುಷರು ಬಿಲ್ ಪಾವತಿಸುವುದರಿಂದ ತನಗೆ ಉಚಿತ ಆಹಾರ ಸಿಗುತ್ತದೆ ಎಂದು ಮಹಿಳೆಯೊಬ್ಬರು ಸತತ 16 ದಿನಗಳ ಕಾಲ ಭೋಜನಕ್ಕೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ಗಂಡ-ಹೆಂಡ್ತಿ ಮಧ್ಯೆ ಜಗಳ ಆಗೋದು ಇದೇ ಕಾರಣಕ್ಕೆ ! ನೀವೂ ಹೀಗೆ ಮಾಡ್ತಿದ್ದೀರಾ ನೋಡ್ಕೊಳ್ಳಿ
ಹೊಟೇಲ್, ರೆಸ್ಟೋರೆಂಟ್ (Restaurant)ಗೆ ಹೋಗಿ ಊಟ ಮಾಡುವುದು ತುಂಬಾ ಕಾಸ್ಟ್ಲೀ. ಒಂದೆರಡು ಫುಡ್ ಐಟಂಗಳನ್ನು ಆರ್ಡರ್ ಮಾಡಿದರೂ ಇಷ್ಟುದ್ದ ಬಿಲ್ ಬಂದಿರುತ್ತದೆ. ಹೀಗಾಗಿಯೇ ಹಲವರು ತಾವೊಬ್ಬರೇ ಹೋದಾಗ ಒಂದೆರಡು ಫುಡ್‌ಗಳನ್ನು ಮಾತ್ರ ಆರ್ಡರ್ ಮಾಡ್ತಾರೆ. ಅದೇ ಇನ್ಯಾರೋ ಆಹಾರ ಕೊಡಿಸುತ್ತಾರೆ ಎಂದಾಗ ಬೇಕಾದ್ದನ್ನೆಲ್ಲಾ ಆರ್ಡರ್ ಮಾಡಿ ತಿನ್ನುತ್ತಾರೆ. ಆಹಾರ ಕಾಸ್ಟ್ಲೀ ಎಂಬ ಕಾರಣಕ್ಕೆ ಫ್ರೆಂಡ್ಸ್ ಜತೆ ಹೋಗೋ ಕೆಲವರು ಬಿಲ್ ಶೇರ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ದೊಡ್ಡ ದೊಡ್ಡ ಹೊಟೇಲ್ ರೆಸ್ಟೋರೆಂಟ್‌ಗಳಲ್ಲಿ ತಿನ್ನೋಕೆ ಈಕೆ ಡೇಟಿಂಗ್ ಮಾಡೋ ಐಡಿಯಾ ಮಾಡಿದ್ದಾಳೆ. ಈ ಮೂಲಕ ಡೇಟ್‌ಗೆ ಬಂದ ಹುಡುಗರ ದುಡ್ಡಲ್ಲಿ ಬೇಕಾಬಿಟ್ಟಿ ತಿಂದಿದ್ದಾಳೆ.
ಮೆಕಾಲ್ ಬ್ರಾಕ್ ಎಂಬವರಿಗೆ ಮೂರು ಹೊತ್ತು ತಿನ್ನಲು ಆಹಾರ ಖರೀದಿಸಲು ದುಡ್ಡಿರಲ್ಲಿಲ್ಲ. ಹೀಗಾಗಿ ಆಕೆ ಈ ಉಪಾಯವನ್ನು ಅನುಸಿರಿದ್ದಾಗಿ ಹೇಳಿಕೊಂಡಿದ್ದಾಳೆ. ಕಾಲೇಜಿನಲ್ಲಿ ಊಟಕ್ಕೆ ಹಣವಿಲ್ಲದೇ ಹೋದಾಗ ನಾನು ಡೇಟಿಂಗ್ ಆಪ್‌ಗೆ ಹೋಗಿದ್ದೆ ಮತ್ತು 16 ದಿನಗಳ ಕಾಲ ನಾನು ಸತತವಾಗಿ 16 ಡಿನ್ನರ್ ಡೇಟ್ (Dinner Date)ಗಳನ್ನು ಹೊಂದಿದ್ದೆ ಎಂದು ಅವರು ಟಿಕ್‌ಟಾಕ್ ವೀಡಿಯೊದಲ್ಲಿ ಹೇಳಿದ್ದಾರೆ. ಅನೇಕರು ಅವಳನ್ನು ಜೀನಿಯಸ್ ಎಂದು ಕರೆದರೆ, ಇತರರು ಫ್ರೀಯಾಗಿ ಊಟ ಮಾಡಬಹುದು ಎಂಬ ಕಾರಣಕ್ಕೆ ಡೇಟಿಂಗ್ ಮಾಡಲು ಪುರುಷರನ್ನು ಬಳಸಿಕೊಂಡಿದ್ದಾಗಿ ಆಕೆಯನ್ನು ದೂರಿದ್ದಾರೆ.
ಕಾಮಸೂತ್ರದ ಪ್ರಕಾರ ಚುಂಬಿಸಿದರೆ ಮುತ್ತಿನಿಂದ ಮತ್ತೇರುವುದು ಗ್ಯಾರಂಟಿ
ಒಬ್ಬ ಬಳಕೆದಾರರು, ಸಂಬಂಧವನ್ನು ವ್ಯವಹಾರ ಮಾಡುವುದು ಸರಿಯಲ್ಲೆ ಎಂದಿದ್ದಾರೆ. ಇನ್ನು ಕೆಲವರು ಡೇಟಿಂಗ್ ಮೂಲಕ ಬಿಟ್ಟಿ ತಿನ್ನುತ್ತಿದ್ದ ಮಹಿಳೆಯ ನಡೆಗೆ ಎ ಯೂನಿವರ್ಸಲ್ ಲೈಫ್ ಹ್ಯಾಕ್ ಎಂದು ಬರೆದಿದ್ದಾರೆ. ಮೂರನೆಯ ಬಳಕೆದಾರರು ಇದೊಂದು ಅದ್ಭುತ ಪ್ರತಿಭೆ ಎಂದು ಹೇಳಿದ್ದಾರೆ. ಕೆಲವೊಬ್ಬರು ಮಹಿಳೆ ಡೇಟಿಂಗ್‌ಗೆ ಅಹಾರ ತಿನ್ನಲು ಹೋಗುತ್ತಿದ್ದುದ್ದು ತುಂಬಾ ಚೀಪ್ ಆದ ವರ್ತನೆ ಎಂದು ಟೀಕಿಸಿದ್ದಾರೆ. ಅದೇನೆ ಇರ್ಲಿ, ತಿನ್ನೋಕೆ ದುಡ್ಡಿಲ್ಲಾಂತ ಮಹಿಳೆ ಡೇಟಿಂಗ್ ಟೆಕ್ನಿಕ್ ಬಳಸಿಕೊಂಡಿದ್ದು ನಿಜಕ್ಕೂ ವಿಚಿತ್ರಾನೇ ಸರಿ.