
ಬಿಲ್ ಗೇಟ್ಸ್ ನಿಮಗೆ ಗೊತ್ತು. ಪ್ರಪಂಚದ ಅತೀ ಶ್ರೀಮಂತರಲ್ಲಿ ಒಬ್ಬ. ಪ್ರತಿ ವರ್ಷ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಈತನ ಹೆಸರಿರುತ್ತದೆ. ಸಹಜವಾಗಿಯೇ ಈತನ ಮಕ್ಕಳೂ ಹುಟ್ಟುತ್ತಾ ಕುಬೇರರು. ಇವರಲ್ಲಿ ಇಬ್ಬರು ಹೆಣ್ಣುಮಕ್ಕಳು. ಈ ಹೆಣ್ಣುಮಕ್ಕಳು ಬಡವನನ್ನು ಮದುವೆಯಾಗುತ್ತೇನೆ ಎಂದರೆ ಬಿಲ್ ಗೇಟ್ಸ್ ಒಪ್ತಾರಾ? ಈ ಒಂದು ಪ್ರಶ್ನೆಗೆ ಬಿಲ್ ನೀಡಿದ ಕುತೂಹಲಕಾರಿ ಉತ್ತರ ಇಲ್ಲಿದೆ.
ಕೆಲವು ವರ್ಷಗಳ ಹಿಂದೆ ನಾನು ಅಮೆರಿಕದಲ್ಲಿ ಒಂದು ಹೂಡಿಕೆ ಮತ್ತು ಹಣಕಾಸು ಸಮ್ಮೇಳನ ನಡೆಯಿತು. ಅದರಲ್ಲಿ ಬಿಲ್ ಗೇಟ್ಸ್ ಭಾಗವಹಿಸಿದ್ದರು. ಅಲ್ಲಿದ್ದವರಲ್ಲಿ ಒಬ್ಬರು ಪ್ರಶ್ನೋತ್ತರ ಸಮಯದಲ್ಲಿ ಬಿಲ್ ಬಳಿ ಕೇಳಿದ ಪ್ರಶ್ನೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. "ನೀವು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ನಿಮ್ಮ ಮಗಳು ಬಡ ಅಥವಾ ಸಾಮಾನ್ಯ ವ್ಯಕ್ತಿಯೊಬ್ಬನನ್ನು ಮದುವೆಯಾಗಲು ಒಪ್ಪುತ್ತೀರಾ?"
ಇದಕ್ಕೆ ಬಿಲ್ ನೀಡಿದ ಉತ್ತರ ಹೀಗಿತ್ತು: ಮೊದಲಿಗೆ, ಸಂಪತ್ತು ಎಂದರೆ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಶ್ರೀಮಂತಿಕೆ ಎಂದರೆ ತುಂಬಿ ತುಳುಕುವ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಎಂದು ಅರ್ಥವಲ್ಲ. ಸಂಪತ್ತು ಎಂದರೆ ಸಂಪತ್ತನ್ನು ಸೃಷ್ಟಿಸುವ ಸಾಮರ್ಥ್ಯ. ಈಗ ಲಾಟರಿ ಅಥವಾ ಜೂಜಿನ ಉದಾಹರಣೆಯನ್ನು ಪರಿಶೀಲಿಸೋಣ. ಒಬ್ಬ ವ್ಯಕ್ತಿ ಅವನು 10 ಕೋಟಿ ಗೆದ್ದರೂ ಅವನು ಶ್ರೀಮಂತನಲ್ಲ. ಅವನು ಬಹಳಷ್ಟು ಹಣವನ್ನು ಹೊಂದಿರುವ ಬಡ ವ್ಯಕ್ತಿ ಅಷ್ಟೆ. ಹೀಗಾಗಿಯೇ 5 ವರ್ಷಗಳ ನಂತರ 90% ಲಾಟರಿ ಮಿಲಿಯನೇರ್‌ಗಳು ಮತ್ತೆ ಬಡವರಾಗುತ್ತಾರೆ.
ತಮ್ಮ ಬಳಿ ಹಣವಿಲ್ಲದ ಶ್ರೀಮಂತರೂ ಇದ್ದಾರೆ. ಉದಾಹರಣೆಗೆ, ಹೆಚ್ಚಿನ ಉದ್ಯಮಿಗಳು. ಅವರ ಬಳಿ ಹಣವಿಲ್ಲದಿದ್ದರೂ ಸಹ, ಅವರು ಈಗಾಗಲೇ ಸಂಪತ್ತಿನ ಹಾದಿಯಲ್ಲಿದ್ದಾರೆ. ಏಕೆಂದರೆ ಅವರು ತಮ್ಮ ಆರ್ಥಿಕ ಬುದ್ಧಿವಂತಿಕೆ ಮತ್ತು ಸಂಪತ್ತನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ಶ್ರೀಮಂತರು ಮತ್ತು ಬಡವರು ಹೇಗೆ ಭಿನ್ನರಾಗುತ್ತಾರೆ? ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಬಹುದು. ಆದರೆ ಬಡವರು ಶ್ರೀಮಂತರಾಗಲು ಅವರಲ್ಲಿ ವಿಭಿನ್ನ ಗುಣವಿರಬೇಕು. ಹೊಸ ವಿಷಯಗಳ ತರಬೇತಿ ಪಡೆಯುವುದು, ಕಲಿಯುವುದು, ನಿರಂತರವಾಗಿ ಸುಧಾರಣೆ ಹೊಂದುವುದು ಇವೆಲ್ಲ ಗುಣ ಇರುವ ಯುವಕನನ್ನು ನೀವು ನೋಡಿದರೆ, ಅವನು ಶ್ರೀಮಂತ ವ್ಯಕ್ತಿ ಎಂದು ನೀವು ತಿಳಿಯಬೇಕು.
ವ್ಯವಸ್ಥೆಯಲ್ಲಿ ಸಮಸ್ಯೆ ಇದೆ, ಶ್ರೀಮಂತರೆಲ್ಲ ಧಗಾಕೋರರು ಎಂದು ನಿರಂತರವಾಗಿ ಟೀಕಿಸುವ ಯುವಕನನ್ನು ನೋಡಿದರೆ ಆತ ಬಡವನೆಂದು ತಿಳಿಯಬೇಕು. ಶ್ರೀಮಂತರಿಗೆ ಶೂನ್ಯದಿಂದ ಟೇಕಾಫ್ ಮಾಡಲು ಕೇವಲ ಮಾಹಿತಿ ಮತ್ತು ತರಬೇತಿಯ ಅಗತ್ಯವಿದೆ. ಬಡವರು ತಮಗೆ ಇತರರು ಹಣವನ್ನು ನೀಡಬೇಕೆಂದು ಭಾವಿಸುತ್ತಾರೆ.
Chanakya Niti: ಗೆಳೆಯನ ಹೆಂಡತಿ ಜೊತೆ ಹೇಗಿರಬೇಕು? ಚಾಣಕ್ಯ ಹೇಳೋದೇನು?
ನನ್ನ ಮಗಳು ಬಡವನನ್ನು ಮದುವೆಯಾಗುವುದು ನನಗೆ ಇಷ್ಟವಿಲ್ಲ. ಅದರ ಅರ್ಥವೇನು? ಇಲ್ಲಿ ನಾನು ಹಣದ ಬಗ್ಗೆ ಮಾತನಾಡುತ್ತಿಲ್ಲ. ನಾನು ಸಂಪತ್ತನ್ನು ಸೃಷ್ಟಿಸುವ ಮನುಷ್ಯನ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ಹೆಚ್ಚಿನ ಅಪರಾಧಿಗಳು ಬಡವರು. ನನ್ನ ಈ ಮಾತಿಗಾಗಿ ನನ್ನನ್ನು ಕ್ಷಮಿಸಿ. ಅವರು ಹಣವನ್ನು ನೋಡಿದಾಗ ಹುಚ್ಚರಾಗುತ್ತಾರೆ. ಆದ್ದರಿಂದ ಅವರು ಕದಿಯುತ್ತಾರೆ. ಏಕೆಂದರೆ ಸ್ವಂತವಾಗಿ ಹಣವನ್ನು ಹೇಗೆ ಗಳಿಸಬಹುದು ಎಂದು ಅವರಿಗೆ ತಿಳಿದಿಲ್ಲ.
ಒಂದು ದಿನ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ಒಂದು ಅನಾಥ ಹಣದ ಚೀಲವನ್ನು ಕಂಡು ಆ ಬ್ಯಾಗ್ ತೆಗೆದುಕೊಂಡು ಹೋಗಿ ಬ್ಯಾಂಕ್ ಮ್ಯಾನೇರ್‌ಗೆ ಒಪ್ಪಿಸಿದ. ಜನ ಈ ಸಂಭಾವಿತ ವ್ಯಕ್ತಿಯನ್ನು ಈಡಿಯಟ್ ಎಂದು ಕರೆಯಬಹುದು. ಆದರೆ ನನ್ನ ಪ್ರಕಾರ ಆತ ಕೇವಲ ಹಣವಿಲ್ಲದ ಶ್ರೀಮಂತ ವ್ಯಕ್ತಿ. ಒಂದು ವರ್ಷದ ನಂತರ, ಬ್ಯಾಂಕ್ ಆತನಿಗೆ ಮ್ಯಾನೇಜರ್ ಸ್ಥಾನವನ್ನು ನೀಡಿತು. 3 ವರ್ಷಗಳ ನಂತರ ಆತ ಗ್ರಾಹಕರ ಉಸ್ತುವಾರಿ ವಹಿಸಿಕೊಂಡ. 10 ವರ್ಷಗಳ ನಂತರ ಆತ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಮ್ಯಾನೇಜರ್ ಆದ. ನೂರಾರು ಉದ್ಯೋಗಿಗಳನ್ನು ನಿರ್ವಹಿಸಿದ. ಸಂಪತ್ತು ಎಂಬುದು ಎಲ್ಲಕ್ಕಿಂತ ಹೆಚ್ಚಾಗಿ ಮನಸ್ಸಿನ ಸ್ಥಿತಿ.
ಮುಸ್ಲಿಂ ವ್ಯಕ್ತಿಯನ್ನು ಮಾತ್ರ ಮದ್ವೆಯಾಗಲ್ಲ ಎಂದ ಉರ್ಫಿ ಜಾವೇದ್ ಕೊಟ್ಟ ಕಾರಣ ಮಾತ್ರ ಶಾಕಿಂಗ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.