ಸಂಸಾರಕ್ಕೆ ಮುಳ್ಳಾಗ್ಬಹುದು ವ್ಯಾಲೆಂಟೈನ್‌ ಡೇ ದಿನ ನೀಡೋ ಈ ಗಿಫ್ಟ್‌

Published : Feb 05, 2025, 08:45 PM ISTUpdated : Feb 06, 2025, 10:40 AM IST
 ಸಂಸಾರಕ್ಕೆ ಮುಳ್ಳಾಗ್ಬಹುದು  ವ್ಯಾಲೆಂಟೈನ್‌ ಡೇ ದಿನ ನೀಡೋ ಈ ಗಿಫ್ಟ್‌

ಸಾರಾಂಶ

ಪ್ರೇಮಿಗಳ ದಿನದಂದು ಸುಗಂಧ ದ್ರವ್ಯ, ಗಡಿಯಾರ, ಗಾಜಿನ ವಸ್ತುಗಳು, ತಾಜ್‌ಮಹಲ್‌ ಪ್ರತಿಕೃತಿ ಹಾಗೂ ಕಪ್ಪು ಬಣ್ಣದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ಶಾಸ್ತ್ರಗಳ ಪ್ರಕಾರ ಇವು ಸಂಬಂಧ ಹಾಳುಮಾಡುತ್ತವೆ, ದುರಾದೃಷ್ಟ ತರುತ್ತವೆ ಮತ್ತು ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತವೆ ಎಂದು ಹೇಳಲಾಗುತ್ತದೆ.

ಫೆಬ್ರವರಿ ಪ್ರೇಮಿಗಳ ಫೆವರೆಟ್ ತಿಂಗಳು. ರೋಸ್ ಡೇ, ಚಾಕೋಲೇಟ್ ಡೇ, ಪ್ರಪೋಸ್ ಡೇ ಅಂತ ಒಂದಾದ್ಮೇಲೆ ಒಂದು ಡೇ ಶುರುವಾಗ್ತಿದೆ. ಕೊನೆಯಲ್ಲಿ ಬರೋದೇ ವ್ಯಾಲೆಂಟೈನ್ ಡೇ (Valentine Day). ಫೆಬ್ರವರಿ 14ರಂದು ಬರೋ ಪ್ರೇಮಿಗಳ ದಿನಕ್ಕೆ ಈಗಾಗಲೇ ಎಲ್ಲ ಸಿದ್ಧತೆಯನ್ನು ನೀವೆಲ್ಲ ಮಾಡ್ತಿರ್ತೀರಿ. ಪ್ರೀತಿಯ ಈ ದಿನ ಜನರು ತಮ್ಮ ಭಾವನೆಯನ್ನು ಸಂಗಾತಿ ಮುಂದೆ ಹಂಚಿಕೊಳ್ತಾರೆ. ಆ ದಿನವನ್ನು ಖುಷಿಯಾಗಿ ಆಚರಿಸೋಕೆ ಮುಂದಾಗ್ತಾರೆ. ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡ್ತಾರೆ. ಪ್ರೇಮಿ ಇರಲಿ ಸಂಗಾತಿ ಇರಲಿ, ಅವರು ನೀಡುವ  ಉಡುಗೊರೆ (gift) ವಿಶೇಷತೆಯನ್ನು ಪಡೆದಿರುತ್ತದೆ. ನೀವು ಸುಂದರ ಗುಲಾಬಿ ಹೂ ನೀಡಿ ಇಲ್ಲ ದುಬಾರಿ ಬೆಲೆಯ ಆಭರಣ ನೀಡಿ, ನೀವು ನೀಡಿದ ಗಿಫ್ಟ್ ಸಂಗಾತಿಗೆ ಸದಾ ಪ್ರಿಯವಾಗಿರುತ್ತದೆ. ಆದ್ರೆ ಸದುದ್ದೇಶದಿಂದ, ಪ್ರೀತಿ (love) ತುಂಬಿದ ಮನಸ್ಸಿನಿಂದ ನೀವು ಉಡುಗೊರೆ ನೀಡಿದ್ರೂ ಆ ಉಡುಗೊರೆ ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ನೀವಿಬ್ಬರು ಬೇರೆಯಾಗಲು ಅದು ಕಾರಣವಾಗುತ್ತೆ. ಸಂಗಾತಿ ಜೊತೆ ಸದಾ ಖುಷಿಯಾಗಿರಬೇಕು, ಜೀವನ ಪರ್ಯಂತ ಇಬ್ಬರು ಒಟ್ಟಿಗೆ ಇರ್ಬೇಕು ಎಂದಾದ್ರೆ ಪ್ರೇಮಿಗಳ ದಿನದಂದು ಅಪ್ಪಿತಪ್ಪಿಯೂ ಈ ಕೆಲ ಉಡುಗೊರೆಯನ್ನು ನೀಡ್ಬೇಡಿ. 

ಪ್ರೇಮಿಗಳ ದಿನ ಈ ಗಿಫ್ಟ್ ನೀಡ್ಬೇಡಿ : 

ಪರ್ಫ್ಯೂಮ್ : ವ್ಯಾಲೆಂಟೈನ್ ಡೇ ದಿನ ಸಂಗಾತಿಗೆ ಯಾವ ಗಿಫ್ಟ್ ನೀಡ್ಬೇಕು ಅಂತ ಆಲೋಚನೆ ಮಾಡ್ದಾಗ ಥಟ್ ಅಂತ ಹೊಳೆಯೋದು ಪರ್ಫ್ಯೂಮ್. ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ಪರ್ಫ್ಯೂಮ್ ಗಳು ಲಭ್ಯವಿದೆ. ಆದ್ರೆ ಪ್ರಾಚೀನ ಗ್ರಂಥದ ಪ್ರಕಾರ ಪ್ರೇಮಿಗಳ ದಿನದಂದು ಅಥವಾ ಯಾವುದೇ ವಿಶೇಷ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ಪರ್ಫ್ಯೂಮ್ ನೀಡ್ಬಾರದು. ಇದು ನಿಮ್ಮ ಸಂಬಂಧವನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ದಂಪತಿ ಮಧ್ಯೆ ಬಿರುಕು ಮೂಡಿಸುತ್ತದೆ. 

ಪ್ರೇಮಿಗಳ ದಿನಾಚರಣೆಗೆ ಇಂಪ್ರೆಸ್ ಮಾಡಲು ಹೋಗಿ ಈ ಎಡವಟ್ಟು ಮಾಡಬೇಡಿ

ವಾಚ್ : ಸಾಮಾನ್ಯವಾಗಿ ಪ್ರೇಮಿಗಾಗ್ಲಿ ಇಲ್ಲ ಸ್ನೇಹಿತರಿಗಾಗ್ಲಿ ಉಡುಗೊರೆ ರೂಪದಲ್ಲಿ ವಾಚ್ ನೀಡ್ಬಾರದು ಎಂದು ಶಾಸ್ತ್ರ ಹೇಳುತ್ತೆ. ಇದು ನಿಮ್ಮ ಅದೃಷ್ಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ನಿಮ್ಮ ಸಂಬಂಧ ಹಳಸಲು ಇದು ಕಾರಣವಾಗುತ್ತೆ.

ಗಾಜಿನ ವಸ್ತು : ಗಾಜಿನ ವಸ್ತುಗಳು ಕೂಡ ವ್ಯಾಲೆಂಟೈನ್ ಡೇನಲ್ಲಿ ನೀಡಲು ಸೂಕ್ತವಾಗಿಲ್ಲ. ಅವು ದುರ್ಬಲವಾಗಿರುತ್ತವೆ. ಅವು ಬೇಗ ಒಡೆಯುವ ವಸ್ತುಗಳು. ಹಾಗಾಗಿಯೇ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದು ದಂಪತಿ ಮಧ್ಯೆ ಇರುವ ಬಂಧವನ್ನು ದುರ್ಬಲಗೊಳಿಸುತ್ತದೆ.

ತಾಜ್ ಮಹಲ್ : ಪ್ರೀತಿಯ ಸಂಕೇತ ತಾಜ್ ಮಹಲ್ ಎನ್ನಲಾಗುತ್ತೆ. ಆದ್ರೆ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ನೀಡಲು ತಾಜ್ ಮಹಲ್ ಯೋಗ್ಯವಾಗಿಲ್ಲ. ಗ್ಲಾಸ್ ಒಳಗಿರುವ ಸಣ್ಣ ತಾಜ್ ಮಹಲ್ ಗಿಫ್ಟ್ ನಿಮ್ಮಿಬ್ಬರ ಮಧ್ಯೆ ಗಲಾಟೆಗೆ ಕಾರಣವಾಗುತ್ತದೆ. ಇದನ್ನು ಉಡುಗೊರೆಯಾಗಿ ಮಾತ್ರವಲ್ಲ ಮನೆಯಲ್ಲೂ ಇಡಬಾರದು ಎನ್ನಲಾಗುತ್ತದೆ. ಮನೆಯಲ್ಲಿ ತಾಜ್ ಮಹಲ್ ಇದ್ರೆ ಅದು ದುರಾದೃಷ್ಟವನ್ನು ತರುತ್ತದೆ. ನಕಾರಾತ್ಮಕ ಶಕ್ತಿ ಉತ್ಪಾದಿಸುತ್ತದೆ. ಕುಟುಂಬಸ್ಥರ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. 

ಪತ್ನಿಗೆ ಗಿಫ್ಟ್ ಕೊಡಲು ಇಲ್ಲಿವೆ 6 ಫ್ಯಾನ್ಸಿ ಗೋಲ್ಡನ್ ಪರ್ಸ್‌

ಕಪ್ಪು ಬಣ್ಣದ ವಸ್ತು : ವ್ಯಾಲೆಂಟೈನ್ ಡೇಯಂದು ನಿಮ್ಮ ಪ್ರೇಮಿ ಅಥವಾ ಸಂಗಾತಿಗೆ ಕಪ್ಪು ಬಣ್ಣದ ಯಾವುದೇ ವಸ್ತು, ಬಟ್ಟೆಯನ್ನು ಉಡುಗೊರೆಯಾಗಿ ನೀಡಬೇಡಿ. ನೀವು ಕಪ್ಪು ಬಣ್ಣದ ಬಟ್ಟೆಯನ್ನು ಗಿಫ್ಟ್ ಆಗಿ ನೀಡಿದ್ರೆ ಅದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪ್ರಭಾವ ಬೀರಿ, ನೀವಿಬ್ಬರು ಬೇರೆಯಾಗಲು ಕಾರಣವಾಗುತ್ತೆ. ಇಡೀ ದಿನ ಮನೆಯಲ್ಲಿ ಗಲಾಟೆ, ಜಗಳಕ್ಕೆ ಕಾರಣವಾಗುತ್ತೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!
ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಮುಸ್ಲಿಂ ವ್ಯಕ್ತಿಯ ಕಿರುಕುಳ; ವಿವಾಹಿತ ಮಹಿಳೆ ಆತ್ಮ*ಹತ್ಯೆ