ಒಂಟಿ ಜೀವನದ ಸುಖ ತಾತ್ಕಾಲಿಕ, ಆಯಸ್ಸೇ ಕಡಿಮೆಯಾಗುತ್ತೆ ಅನ್ನುತ್ತೆ ಅಧ್ಯಯನ

By Suvarna NewsFirst Published Aug 25, 2022, 6:01 PM IST
Highlights

ವಿವಾಹಿತರ ಸಮಸ್ಯೆ ನೋಡಿ ಕೆಲ ಅವಿವಾಹಿತರು ಖುಷಿಪಡ್ತಾರೆ. ನಿಮ್ಮ ಸಂಸಾರ ಜಂಜಾಟ ನಮಗಿಲ್ಲವೆಂದು ಆಡಿಕೊಳ್ತಾರೆ. ಆದ್ರೆ ಈ ಒಂಟ ಜೀವನದ ಸುಖ ದೀರ್ಘಕಾಲವಿರುವುದಿಲ್ಲ. ಒಂಟಿಯಾಗಿರೋದ್ರಿಂದ ಸಮಸ್ಯೆ ಕಡಿಮೆಯಾಗೋ ಬದಲು ಹೆಚ್ಚಾಗುತ್ತದೆ. 
 

ಕೆಲವರು ಒಂಟಿಯಾಗಿ ಜೀವನ ನಡೆಸಲು ಇಷ್ಟಪಡ್ತಾರೆ. ಒಂಟಿ ಜೀವನದಲ್ಲಿ ಸಿಗುವ ಅತಿಯಾದ ಸ್ವಾತಂತ್ರ್ಯವೇ ಇದಕ್ಕೆ ಕಾರಣ. ಮನಸ್ಸು ಬಯಸಿದಾಗ ಸುತ್ತಾಡಬಹುದು. ಬೇಕಾಗಿದ್ದನ್ನು ತಿನ್ನಬಹುದು, ಬೇಕಾದಾಗ ಓಡಾಡಬಹುದು. ಯಾವುದೇ ಕೆಲಸದಲ್ಲಿ ಹಸ್ತಕ್ಷೇಪವಿಲ್ಲ. ಯಾರ ಬಳಿಯೂ ಹಂಚಿಕೊಳ್ಳಬೇಕಾಗಿಲ್ಲ, ಜಗಳವಾಡ್ಬೇಕಾಗಿಲ್ಲ, ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಬೇಕಾಗಿಲ್ಲ. ಇದೇ ಕಾರಣಕ್ಕೆ ಅನೇಕ ಮಹಿಳೆಯರು ಹಾಗೂ ಪುರುಷರು ಈ ಒಂಟಿ ಜೀವನವನ್ನು ಅತಿಯಾಗಿ ಇಷ್ಟಪಡ್ತಿದ್ದಾರೆ. ಸಂಸಾರದ ತಾಪತ್ರಯ, ಜಂಜಾಟ, ಗಂಡ – ಹೆಂಡತಿ ಮಧ್ಯೆ ಹೊಂದಾಣಿಕೆ ಬಾಳ್ವೆ ಇದ್ಯಾವುದೂ ಇಲ್ಲದ ಕಾರಣ ಇತ್ತೀಚಿನ ದಿನಗಳಲ್ಲಿ ಒಂಟಿ ಜೀವನ ಎಲ್ಲರಿಗೂ ಇಷ್ಟವಾಗ್ತಿದೆ. ಸಾಧನೆಗೆ ಇಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಸಾಧಿಸಬೇಕೆಂಬ ಛಲವಿರುವವರು ಬಂಧ ಮುಕ್ತವಾಗಿರಲು ಬಯಸ್ತಾರೆ. ಆದ್ರೆ ಈ ಒಂಟಿ ಜೀವನ ಎಷ್ಟು ದಿನ ಎಂಬ ಪ್ರಶ್ನೆ ಕಾಡುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು, ಗುರಿ ತಲುಪಿದ ಮೇಲೆ ಮುಂದೇನು? 

ನೀವು ಒಂದು ವರ್ಷ, ಎರಡು ವರ್ಷ ಅಥವಾ ಐದು ವರ್ಷಗಳ ಕಾಲ ಒಬ್ಬಂಟಿಯಾಗಿ ಬದುಕಬಹುದು. ಯೌವನ (Youth) ದಲ್ಲಿ ನಿಮಗೆ ಒಂಟಿತನ (Loneliness) ಇಷ್ಟವಾಗುತ್ತದೆ. ಆದ್ರೆ ವಯಸ್ಸಾದಂತೆ ಒಂಟಿತನ ಬೇಸರತರಿಸಲು ಶುರುವಾಗುತ್ತದೆ. ನಮ್ಮೊಂದಿಗೆ ಯಾರಾದರೂ ಇರಬೇಕು ಎಂಬ ಭಾವನೆ (Feeling) ಬರಲು ಶುರುವಾಗುತ್ತದೆ. ನಮ್ಮ ಭಾವನೆಗಳು, ಸಂತೋಷಗಳು, ದುಃಖಗಳು ಮತ್ತು ನೋವುಗಳನ್ನು ಹಂಚಿಕೊಳ್ಳಲು ಒಂದು ವ್ಯಕ್ತಿ ಇದ್ದಿದ್ದರೆ ಚೆನ್ನಾಗಿತ್ತು ಎನ್ನಿಸಲು ಶುರುವಾಗುತ್ತದೆ.  ದೀರ್ಘಾವಧಿಯ ಒಂಟಿತನವು ನಿಮ್ಮನ್ನು ಮಾನಸಿಕವಾಗಿ ಅಸ್ವಸ್ಥರನ್ನಾಗಿ ಮಾಡುವ ಸಾಧ್ಯತೆಯೂ ಇದೆ. ಇಂದು ನಾವು ಏಕಾಂಗಿಯಾಗಿರುವುದ್ರಿಂದ ಉಂಟಾಗುವ ಅನಾನುಕೂಲಗಳು ಏನು ಎಂಬುದನ್ನು ನಿಮಗೆ ಹೇಳ್ತೇವೆ. 

ನೋವು ಸಹಿಸಿಕೊಳ್ಳುವ ಶಕ್ತಿ : ಮೊದಲೇ ಹೇಳಿದಂತೆ 20 ರಿಂದ 30 ವರ್ಷದವರೆಗೆ ನಿಮಗೆ ಒಂಟಿತನ ಇಷ್ಟವಾಗ್ಬಹುದು. ಆದ್ರೆ ವಯಸ್ಸು 35 ದಾಟುತ್ತಿದ್ದಂತೆ ಏಕಾಂಗಿ ಜೀವನ ಸಾಕೆನ್ನಿಸುತ್ತದೆ. ಒಂಟಿತನದ ಹಂತವು ಒಂದು ಸುಂದರವಾದ ಭಾವನೆಯಾಗಿದೆ. ಆದರೆ ಇದು ಕೆಲವು ಅನಾನುಕೂಲಗಳನ್ನು ಹೊಂದಿದೆ. ಸಂಬಂಧದಲ್ಲಿರುವವರು ತಮ್ಮ ನೋವನ್ನು ಸಹಿಸಿಕೊಳ್ಳುವ ಶಕ್ತಿ ಹೊಂದಿರುತ್ತಾರೆ ಎಂದು ಇತ್ತೀಚಿನ ಅಧ್ಯಯನ ಹೇಳಿದೆ. ಒಂಟಿಯಾಗಿದ್ದರೆ ಮಾತನಾಡಲೂ ಜನರಿರುವುದಿಲ್ಲ. ಅದೇ ನೀವು ಜಂಟಿಯಾಗಿದ್ದರೆ ನಿಮ್ಮ ಸಂಗಾತಿ ಜೊತೆ ಕಳೆದ ಮಧುರ ಕ್ಷಣಗಳನ್ನು ನೀವು ನೆನಪು ಮಾಡಿಕೊಳ್ತಾ ಸಾಗಬಹುದು. ಇಬ್ಬರು ಜೊತೆಗಿದ್ದಾಗ ಅನೇಕ ಸವಾಲುಗಳು ಎದುರಾಗುತ್ತವೆ. ಅನೇಕ ನೋವು ಕಾಡುತ್ತದೆ. ಅದೆಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ಅರಿವಿಲ್ಲದೆ ಬಂದಿರುತ್ತದೆ. ದೀರ್ಘಕಾಲದವರೆಗೆ ಒಂಟಿಯಾಗಿರುವ ಜನರು ಯಾವುದೇ ಭಾವನಾತ್ಮಕ ಸಂಬಂಧವಿಲ್ಲದೆ ನೋವು ಸಹಿಸಿಕೊಳ್ಳುವ ಶಕ್ತಿ ಕಳೆದುಕೊಳ್ತಾರೆ.  

ಭಾವನಾತ್ಮಕ ಬೆಂಬಲದ ಕೊರತೆ : ಏಕಾಂಗಿಯಾಗಿರುವ  ಜನರು ಭಾವನಾತ್ಮಕ ಬೆಂಬಲವನ್ನು ಹೊಂದಿರುವುದಿಲ್ಲ. ದೀರ್ಘಕಾಲ ಏಕಾಂಗಿಯಾಗಿರುವುದರ ಕಾರಣ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ. ಖಿನ್ನತೆ, ನೋವು, ದೈಹಿಕ ಅಸ್ವಸ್ಥತೆ ಇತ್ಯಾದಿ ಕಾಡುತ್ತದೆ. 

ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ : ಸಂಬಂಧದಲ್ಲಿದ್ದಾಗ ಸಂತೋಷ ಇರುತ್ತದೆ. ಇದು ಮಾನಸಿಕ ಆರೋಗ್ಯದ ಅಸ್ವಸ್ಥತೆಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.  ಒಂಟಿಯಾಗಿರುವಾಗ ಸಂತೋಷ ಸಿಗುವುದಿಲ್ಲ. ದೀರ್ಘಕಾಲದವರೆಗೆ ಒಂಟಿಯಾಗಿರುವ ಶೇಕಡಾ 54ರಷ್ಟು ಜನರು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಇದು ಪ್ರೀತಿಯ ಜೀವನದ ಮೇಲೂ ಪರಿಣಾಮ ಬೀರುತ್ತದೆ. ದೀರ್ಘಕಾಲ ಅವಿವಾಹಿತರಾಗಿ ಉಳಿಯುವವರಲ್ಲಿ ಸಾಮಾನ್ಯವಾದ ಆರೋಗ್ಯ ಸಮಸ್ಯೆಗಳೆಂದರೆ ಆತಂಕ, ಖಿನ್ನತೆ, ಆತ್ಮಹತ್ಯಾ ನಡವಳಿಕೆ, ನಿದ್ರಾಹೀನತೆ, ಮನಸ್ಥಿತಿ ಅಸ್ವಸ್ಥತೆಗಳು, ಹತಾಶತೆ ಇತ್ಯಾದಿ.

ಕರುಳಿನ ಆರೋಗ್ಯ ಚೆನ್ನಾಗಿ ನೋಡ್ಕೊಳ್ಳಿ..ಇಲ್ಲಾಂದ್ರೆ ಸೆಕ್ಸ್ ಲೈಫ್ ಹಾಳಾಗುತ್ತೆ !

ಸಂಬಂಧದಲ್ಲಿರುವವರು ತಮ್ಮ ಸಮಸ್ಯೆಗಳನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶವಿರುತ್ತದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ  ಅವಿವಾಹಿತರು ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಯಾರನ್ನೂ ಹೊಂದಿರುವುದಿಲ್ಲ. ಒಂಟಿ ವ್ಯಕ್ತಿಗಳು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರ ಬಳಿಗೆ ಹೋಗಲು ಪ್ರೇರೇಪಿಸುವವರು ಯಾರೂ ಇರುವುದಿಲ್ಲ. 

HEALTH FOOD: ಮಕ್ಕಳಿಗೆ ರಾಗಿ ನೀಡಿ, ಆರೋಗ್ಯ ಕಾಪಾಡಿ

ಕಡಿಮೆ ಆಯಸ್ಸು:  ದೀರ್ಘಕಾಲ ಒಂಟಿಯಾಗಿರುವುದು ಸಾವಿಗೆ ಮುಖ್ಯ ಕಾರಣವಾಗಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಒಂಟಿತನ ದಿನಕ್ಕೆ 15 ಸಿಗರೇಟು ಸೇದುವಷ್ಟು ಅಪಾಯಕಾರಿ. ದೀರ್ಘಕಾಲದವರೆಗೆ ಅವಿವಾಹಿತರಾಗಿರುವುದರಿಂದ ಹೃದ್ರೋಗದಿಂದ ಸಾವಿನ ಅಪಾಯ ಹೆಚ್ಚಾಗುತ್ತದೆ.  

click me!