ಯಪ್ಪಾ..ಸೆಕ್ಸ್ ಬಳಿಕ ಹುಡುಗರು ಯಾಕೆ ಹೀಗೆಲ್ಲಾ ಮಾತನಾಡ್ತಾರೆ !

Published : Aug 25, 2022, 03:52 PM IST
ಯಪ್ಪಾ..ಸೆಕ್ಸ್ ಬಳಿಕ ಹುಡುಗರು ಯಾಕೆ ಹೀಗೆಲ್ಲಾ ಮಾತನಾಡ್ತಾರೆ !

ಸಾರಾಂಶ

ಸೆಕ್ಸ್‌ ಅನ್ನೋದು ಒಂದು ಸುಂದರ ಅನುಭವ. ಆದ್ರೆ ಅದಾದ ಬಳಿಕ ಹೆಚ್ಚು ಖುಷಿ, ನೋವಿನಿಂದ ಕೆಲವೊಬ್ಬರ ಮನಸ್ಥಿತಿಯೇ ಬದಲಾಗುತ್ತದೆ. ಅದರಲ್ಲೂ ಪುರುಷರು ಲೈಂಗಿಕಕ್ರಿಯೆಯ ಬಳಿಕ ಹೀಗೆಲ್ಲಾ ವಿಚಿತ್ರವಾಗಿ ಮಾತನಾಡ್ತಾರಂತೆ.

ಲೈಂಗಿಕತೆಯ ಕ್ಷಣಗಳು ತುಂಬಾ ಉಲ್ಲಾಸಮಯವಾಗಿದೆ. ಹೆಣ್ಣು ಮತ್ತು ಗಂಡಿನ ನಡುವಿನ ಶಾರೀರಿಕ ಸಂಬಂಧ ಇಬ್ಬರನ್ನೂ ದೈಹಿಕವಾಗಿಯೂ, ಮಾನಸಿಕವಾಗಿಯೂ ಮುದಗೊಳಿಸುತ್ತದೆ. ಆದರೆ ಲೈಂಗಿಕ ಕ್ರಿಯೆಯ ಮೊದಲು, ನಂತರ ನೀವು ಏನು ಹೇಳುತ್ತೀರಿ ಮತ್ತು ವರ್ತಿಸುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ವಿಚಾರಗಳನ್ನು ಹೇಳುತ್ತದೆ. ಲೈಂಗಿಕತೆಯ ನಂತರ ಅವರು ಏನು ಮಾತನಾಡಬೇಕು ಎಂಬುದರ ಕುರಿತು ಪುರುಷರು ಕೆಲವೊಮ್ಮೆ ಗೊಂದಲಕ್ಕೊಳಗಾಗಬಹುದು ಮತ್ತು ಪರಿಣಾಮವಾಗಿ, ಅವರು ಹಾಸಿಗೆಯಲ್ಲಿ ತಮ್ಮ ಸಂಗಾತಿಗೆ ನಿಜವಾಗಿಯೂ ತಿಳಿದಿಲ್ಲದ ಉಲ್ಲಾಸದ ಅಥವಾ ನೋವುಂಟುಮಾಡುವ ವಿಷಯಗಳನ್ನು ಹೇಳುತ್ತಾರೆ. ಲೈಂಗಿಕತೆಯ ನಂತರ ಪುರುಷರು ವಿಚಿತ್ರವಾಗಿ ಏನೆಲ್ಲಾ ಮಾತನಾಡಿದ್ದಾರೆ ಎಂಬ ಅನುಭವವನ್ನು ಕೆಲ ಮಹಿಳೆಯರು ಹಂಚಿಕೊಂಡಿದ್ದಾರೆ. 

ಲೈಂಗಿಕತೆಯ ಬಗ್ಗೆ ಮಾತ್ರ ಮಾತನಾಡಿದನು: ಸೆಕ್ಸ್‌ನ ಬಳಿಕ ಆತ ಬರೀ ಲೈಂಗಿಕತೆಯ ಬಗ್ಗೆಯ ಮಾತನಾಡಿದನು ಎಂದು ಯುವತಿಯೊಬ್ಬಳು ಹೇಳಿದ್ದಾಳೆ. ಈಗಾಗಲೇ ಮಾಡಿದ ವಿಚಾರದ ಬಗ್ಗೆ ಮತ್ತೆ ಮತ್ತೆ ಮಾತನಾಡುವುದು ಬೇಸರದ ವಿಷಯ. ಆದರೆ ಆತ ನಿರಂತರವಾಗಿ ಅದನ್ನೇ ಮಾತನಾಡುತ್ತಿದ್ದನು. ಆ ವ್ಯಕ್ತಿಗೆ ಮಾತನಾಡಲು ಬೇರೇನೂ ಇರಲಿಲ್ಲ.ನನಗೂ ಆ ಮಾತುಕತೆ ತುಂಬಾ ಬೋರ್ ಹೊಡೆಸಿತು. ನಾವು ಮುಂದಿನ ಬಾರಿ ಭೇಟಿಯಾಗಲಿಲ್ಲ ಎಂದಿದ್ದಾಳೆ.

ಯಾವುದು ಅತಿಯಾದರೂ ಅಪಾಯವೇ, ಸೆಕ್ಸ್ ಸಹ ಇದಕ್ಕೆ ಹೊರತಲ್ಲ

ವಯಸ್ಸಿನ ಬಗ್ಗೆ ಸುಳ್ಳು ಹೇಳಿದನು:  ನನ್ನ ಪದವಿ ದಿನಗಳಲ್ಲಿ, ನಾನು ಸಾಕಷ್ಟು ವಯಸ್ಸಾದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದೆ. ಆದರೆ ಉತ್ತಮ ವ್ಯಕ್ತಿತ್ವವಿರುವ ಕಾರಣ ನಾನು ಅವರತ್ತ ಆಕರ್ಷಿತಗೊಂಡಿದ್ದೆ. ನಾವಿಬ್ಬರೂ ಸಂಬಂಧ (Relationship)ವನ್ನು ಹೊಂದಿದೆವು. ಹಾಸಿಗೆಯಲ್ಲಿ ಜೊತೆಯಾಗಿ ಸಮಯ ಕಳೆದ ಬಳಿಕ ಅವರು ಸಂಬಂಧದಲ್ಲಿ ನನಗಿಂತ ತುಂಬಾ ಚಿಕ್ಕವನೆಂದು ಹೇಳಿಕೊಂಡರು. ನಾನು ತಕ್ಷಣ ಕುಸಿದು ಕೋಣೆಯಿಂದ ಓಡಿಹೋದೆ, ಮತ್ತೆ ಅವರ ಬಳಿಕೆ ಹಿಂತಿರುಗಲ್ಲಿಲ್ಲ ಎಂದು ಯುವತಿಯೊಬ್ಬಳು ಹೇಳಿದ್ದಾಳೆ.

ಕನ್ಯೆ ಎಂದು ಗಾಬರಿಗೊಂಡನು: ಇನ್ನೊಬ್ಬಾಕೆ ಪುರುಷ (Men)ರೊಟ್ಟಿಗೆ ಸಂಬಂಧ ಇಟ್ಟುಕೊಂಡಾಗ ತಮ್ಮ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ಆತ ಸೆಕ್ಸ್ ಮಾಡುವ ಎಂದು ಹೇಳಿದಾಗ ನಾನು ನಿಜವಾಗಿಯೂ ಉತ್ಸುಕನಾಗಿದ್ದೆ. ಏಕೆಂದರೆ ನಾನು ಆ ವ್ಯಕ್ತಿಯನ್ನು ಇಷ್ಟಪಟ್ಟೆ ಮತ್ತು ಅದರೊಂದಿಗೆ ಮುಂದುವರಿಯಲು ಬಯಸಿದೆ. ಆದರ ನಾವು ಸಂಭೋಗಿಸುವಾಗ ಸ್ವಲ್ಪ ವಿಲಕ್ಷಣವಾಗಿ ಮತ್ತು ಗೊಂದಲಮಯವಾಗಿ ತೋರುತ್ತಿತ್ತು. ಅವನು ಅಲ್ಲಿ ಇಲ್ಲಿ ನಿಲ್ಲಿಸಿ ಚಲಿಸುತ್ತಿದ್ದನು. ಆ ಬಳಿಕ ನಾನಿನ್ನೂ ಕನ್ಯೆ ಎಂದು ತಿಳಿದಾಗ ಆತ ಸಂಪೂರ್ಣವಾಗಿ ಗಾಬರಿಗೊಂಡನು.

ಎಚ್ಚರ..! ಸೆಕ್ಸ್ ಲೈಫ್ ಹಾಳೋ ಮಾಡುತ್ತೆ ಟೋಕೋಫೋಬಿಯಾ

ರಾಶಿಚಕ್ರದ ಬಗ್ಗೆ ಮಾತನಾಡುವವನು: ನನ್ನ ಗೆಳೆಯ ಮತ್ತು ನಾನು ಮೊದಲ ಬಾರಿಗೆ ಸಂಭೋಗಿಸಿದಾಗ, ಅದು ತುಂಬಾ ಕಹಿಯಾದ ಕ್ಷಣವಾಗಿತ್ತು. ಇಬ್ಬರ ನಡುವಿನ ಸಂಬಂಧ ವಿಚಿತ್ರವಾಗಿತ್ತು.  ಆದರೆ ನಿಜವಾಗಿಯೂ ವಿಶೇಷವಾಗಿತ್ತು. ಕುತೂಹಲಕಾರಿ ಸಂಗತಿಯೆಂದರೆ, ಅವನು ರಾಶಿಚಕ್ರದ ಚಿಹ್ನೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದನು. ಮತ್ತು ಮೀನದೊಂದಿಗೆ ಲೈಂಗಿಕತೆಯು (Sex) ಅದ್ಭುತವಾಗಿದೆ ಎಂದು ಹೇಳಿದನು. ನಾನು ಸೆಕ್ಸ್ ಬಳಿಕ ಇಂಥಾ ವಿಚಾರಗಳ ಬಗ್ಗೆಯೂ ಮಾತನಾಡುತ್ತಾರಾ ಎಂದು ಆಶ್ಚರ್ಯಗೊಂಡೆ ಎಂದು ಯುವತಿಯೊಬ್ಬರು ಹೇಳಿದ್ದಾರೆ.

ಸೆಕ್ಸ್ ಮಾಡಿ ಓಡಿ ಹೋದನು: ಇನ್ನೊಬ್ಬ ಯುವತಿಯ ಅನುಭವ ಹೀಗಿದೆ. ಒಬ್ಬ ವ್ಯಕ್ತಿಯು ನನ್ನನ್ನು ಪಾರ್ಟಿಯಲ್ಲಿ ಸಂಪರ್ಕಿಸಿದನು ಮತ್ತು  ಇಬ್ಬರೂ ಪರಸ್ಪರ ಆಕರ್ಷಿತರಾಗಿದ್ದೆವು, ಆದ್ದರಿಂದ ನಾವು ಅದನ್ನು ಮುಂದುವರಿಸಲು ನಿರ್ಧರಿಸಿದೆವು.  ನಾವು ಹಾಸಿಗೆಯಲ್ಲಿ ಅದ್ಭುತ ಸಮಯವನ್ನು ಹೊಂದಿದ್ದೆವು. ಆದರೆ ಸೆಕ್ಸ್ ಆದ ಬಳಿಕ ವ್ಯಕ್ತಿ ಇದ್ದಕ್ಕಿದ್ದಂತೆ ಅವಸರದಲ್ಲಿ ತನ್ನ ಅಂಗಿಯನ್ನು ಧರಿಸಿ ಮತ್ತು ತುರ್ತು ಕೆಲಸವು ಬಂದಿದೆ ಎಂದು ಹೇಳಿ ಓಡಿಹೋದನು ಎಂದು ಹೇಳಿದ್ದಾರೆ.

ಬೆನ್ನು ನೋವಾ? ಯಾವುದ್ಯಾವುದೋ ಭಂಗಿ ಸೂಟ್ ಆಗೋಲ್ಲ

ಕುಟುಂಬದ ಸಮಸ್ಯೆಗಳ ಬಗ್ಗೆ ಮಾತನಾಡಿ ತಲೆತಿಂದನು: ಲೈಂಗಿಕ ಭಾವನೆಯು ಅದ್ಭುತವಾಗಿದೆ. ಆದರೆ ಆ ಭಾವನೆಗಳಲ್ಲಿ ತೇಲಾಡಿ ವಿಚಿತ್ರವಾಗಿ ಮಾತನಾಡುವುದನ್ನು ನೋಡಿದ್ದೇನೆ ಎಂದು ಯುವತಿಯೊಬ್ಬಳು ಹೇಳಿದ್ದಾನೆ. ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಹುಡುಗನನ್ನು ನನ್ನನ್ನೇ ತನ್ನ ಸರ್ವಸ್ವ ಎಂದು ಭಾವಿಸಿದನು. ನಿರಂತರವಾಗಿ ತನ್ನ ಕೌಟುಂಬಿಕ ಸಮಸ್ಯೆ (Family prolblem)ಗಳನ್ನು ಹೇಳುತ್ತಿದ್ದನು. ನಾನು ಅದನ್ನೆಲ್ಲಾ ಕೇಳಲು ಇಷ್ಟಪಡಲ್ಲಿಲ್ಲ. ಮತ್ತೆ ಆ ವ್ಯಕ್ತಿಯೊಂದಿಗೆ ಹೋಗಬಾರದೆಂದು ನಿರ್ಧರಿಸಿದೆ ಎಂದು ಇನ್ನೊಬ್ಬಾಕೆ ಹೇಳಿದ್ದಾಳೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!
ಸಮಂತಾ ಮದುವೆ ದಿನವೇ 'ಆ' ಪೋಸ್ಟ್ ಹಾಕಿ ನರಕಯಾತನೆಗೆ ತುತ್ತಾದ ಮಾಜಿ ಪ್ರಾಣಸ್ನೇಹಿತೆ ಸಾಧನಾ ಸಿಂಗ್!