24 ವರ್ಷ ಅಪ್ಪನ ಕ್ರೌರ್ಯ, 7 ಮಕ್ಕಳ ಹೆತ್ತ ಮಗಳು, ಭಯಹುಟ್ಟಿಸುತ್ತೆ ಅಪರಾಧ ಜಗತ್ತು

By Suvarna NewsFirst Published Jan 17, 2024, 1:14 PM IST
Highlights

ಸ್ವಂತ ಮಕ್ಕಳನ್ನೇ ಕೊಲ್ಲುವ ಪಾಲಕರು, ಮೃಗಗಳಂತೆ ವರ್ತಿಸುವ ಮಕ್ಕಳು… ನಮ್ಮ ಜಗತ್ತಿನಲ್ಲಿ ಮನುಷ್ಯನ ಕ್ರೂರತ್ವದ ಮುಖ ಭಯಾನಕವಾಗಿದೆ. ತಂದೆಯೊಬ್ಬನ ಹೇಯಕೃತ್ಯ ಎದೆ ನಡುಗಿಸುತ್ತೆ. ಇಷ್ಟಾದ್ರೂ ಆತನಿಗೆ ಬಿಡುಗಡೆ ಭಾಗ್ಯ ಸಿಗ್ತಿದೆ. 
 

ಜಗತ್ತಿನಲ್ಲಿ ಒಂದಕ್ಕಿಂತ ಹೆಚ್ಚು ಭಯಾನಕ ಮತ್ತು ಕ್ರೂರ ಅಪರಾಧಿಗಳಿದ್ದಾರೆ. ಅವರ ಅಪರಾಧಗಳ ಬಗ್ಗೆ ಕೇಳಿದ್ರೆ ಮೈ ನಡುಗುತ್ತದೆ. ಹೊರಗಿನವರಿಗಲ್ಲ ಮನೆಯವಲ್ಲಿರುವ ತಂದೆ – ತಾಯಿ, ಪತ್ನಿ, ಮಕ್ಕಳ ಜೊತೆಯೇ ಕ್ರೂರವಾಗಿ ನಡೆದುಕೊಂಡ ಅದೆಷ್ಟೋ ಮಂದಿ ಈಗ ಜೈಲಿನಲ್ಲಿದ್ದಾರೆ. ಅಪ್ಪನಿಗೆ ಹೆಣ್ಣು ಮಕ್ಕಳೆಂದ್ರೆ ಬಲು ಪ್ರೀತಿ ಎನ್ನುವ ಮಾತಿದೆ. ಆದ್ರೆ ಈ ಮಾತನ್ನು ಆಸ್ಟ್ರಿಯಾದ ಆಮ್‌ಸ್ಟೆಟನ್‌ನ ಜೋಸೆಫ್ ಫ್ರಿಟ್ಜ್ಲ್ ಸುಳ್ಳು ಮಾಡಿದ್ದಾನೆ. ಮನುಷ್ಯತ್ವ ಇಲ್ಲದ ತಂದೆ ಜೋಸೆಫ್. ತನ್ನ ಮಗಳನ್ನೇ ಬಂದಿಸಿ, ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿ ಏಳು ಮಕ್ಕಳಿಗೆ ಆಕೆ ಜನ್ಮ ನೀಡುವಂತೆ ಮಾಡಿದ ಪಿಶಾಚಿ ಈ ಜೋಸೆಫ್. ಆತ ತನ್ನ ಮಗಳಿಗೆ ಮಾಡಿದ ಕೆಲಸ ಕೇಳಿದ್ರೆ ನೀವು ಶಾಕ್ ಆಗ್ತಿರಿ. 

ಜೋಸೆಫ್ ಫ್ರಿಟ್ಜ್ಲ್ ತನ್ನ ಸ್ವಂತ ಮಗಳು ಎಲಿಸಬೆತ್ ಫ್ರಿಟ್ಜ್ಲ್ ಅನ್ನು ಒಟ್ಟು 24 ವರ್ಷಗಳ ಕಾಲ ಜೈಲಿನಲ್ಲಿ ಬಂಧಿಸಿ ಅತ್ಯಾಚಾರ (Rape) ಎಸಗಿದ್ದ. ಎಲಿಸಬೇತ್ ತನ್ನ ತಂದೆಯ ಮಕ್ಕಳಿಗೆ ತಾಯಿ ಆಗಿದ್ದಳು.

ಯಾರೋ ನೀನು? ನೀನು ಮಗಾ ಏನೋ: ಕುಸುಮಾ ಪ್ರಶ್ನೆಗೆ ತಾಂಡವ್‌ ಬಳಿ ಉತ್ತರ ಇದೆಯಾ?

ಜೋಸೆಫ್ ಗೆ ಮೊದಲೇ ಮಗಳ ಮೇಲೆ ಕಣ್ಣಿತ್ತು.  ಎಲಿಜಬೆತ್ (Elizabeth) 11 ವರ್ಷದವಳಿದ್ದಾಗ ಜೋಸೆಫ್ ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು. ಇದೇ ಕಾರಣಕ್ಕೆ ಆಗ ಮನೆಯಿಂದ ಒಮ್ಮೆ ಓಡಿ ಹೋಗಿದ್ದಳು. ಇದ್ರಿಂದ ಮತ್ತಷ್ಟು ಕೋಪಗೊಂಡಿದ್ದ ಜೋಸೆಫ್,  ನೆಲಮಾಳಿಗೆಯೊಂದನ್ನು ಸಿದ್ಧಪಡಿಸಿದ್ದ. ಎಲಿಜಬೆತ್ ಗೆ ಹದಿನೆಂಟು ವರ್ಷ ಆಗ್ತಿದ್ದಂತೆ, ನೆಲಮಾಳಿಗೆ ಬಾಗಿಲು ಜೋಡಿಸುವ ನೆಪದಲ್ಲಿ ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಆಕೆ ಅಲ್ಲಿಗೆ ಬರ್ತಿದ್ದಂತೆ ಬಾಯಿಗೆ ಬಟ್ಟೆ ತುಂಬಿ ನೆಲ ಮಾಳಿಗೆಯಲ್ಲಿ ಕೂಡಿ ಹಾಕಿದ್ದಾನೆ. ಅಲ್ಲಿಂದ ಇಪ್ಪನ್ನಾಲ್ಕು ವರ್ಷ ಎಲಿಜಬೆತ್ ಪಡಬಾರದ ಕಷ್ಟಪಟ್ಟಿದ್ದಾಳೆ.

ಎಲಿಜಬೆತ್ ಳನ್ನು ಕೂಡಿಹಾಕಿದ ಜೋಸೆಫ್, ಹಿಂದಿನಂತೆ ಈ ಬಾರಿಯೂ ಆಕೆ ಮನೆ ಬಿಟ್ಟು ಓಡಿ ಹೋಗಿದ್ದಾಳೆಂದು ಸುಳ್ಳು ಹೇಳಿದ್ದಲ್ಲದೆ ಆಕೆ ಕೈನಿಂದ ಪತ್ರ ಬರೆಸಿದ್ದಾನೆ. ಇದನ್ನು ನೆರೆಯವರು ನಂಬಿದ್ದಾರೆ. ಪ್ರತಿ ದಿನ ಮಗಳ ಮೇಲೆ ಜೋಸೆಫ್ ಅತ್ಯಾಚಾರ ಎಸಗಿದ್ದಾನೆ. ದಿನದಲ್ಲಿ ಮೂರ್ನಾಲ್ಕು ಬಾರಿಯೂ ಅತ್ಯಾಚಾರ ಎಸಗುತ್ತಿದ್ದ. ತಂದೆ ಈ ಕ್ರೌರ್ಯಕ್ಕೆ ಎಲಿಜಬೆತ್ ಏಳು ಮಕ್ಕಳಿಗೆ ಜನ್ಮ ನೀಡಿದ್ದಳು. ಅದ್ರಲ್ಲಿ ಒಂದು ಮಗು ಹುಟ್ಟುತ್ತಲೇ ಸಾವನ್ನಪ್ಪಿತ್ತು. ಇನ್ನು ಮೂವರನ್ನು ಎಲಿಜಬೆತ್ ರೂಮಿನಲ್ಲಿಯೇ ಬಂಧಿ ಮಾಡಿದ್ದ. ಮತ್ತೆ ಮೂವರು ಮಕ್ಕಳನ್ನು ತನ್ನ ಪತ್ನಿಗೆ ನೀಡಿದ್ದ. ಮನೆ ಮುಂದೆ ಯಾರೋ ಈ ಮಕ್ಕಳನ್ನು ಬಿಟ್ಟು ಹೋಗಿದ್ದಾರೆಂದು ಸುಳ್ಳು ಹೇಳಿದ್ದ. ಮಕ್ಕಳ ಮುಂದೆಯೇ ಮಗಳ ಮೇಲೆ ಜೋಸೆಫ್ ಅತ್ಯಾಚಾರ ಎಸಗುತ್ತಿದ್ದ.

2009 ರಲ್ಲಿ ಎಲಿಜಬೆತ್ಗೆ 42 ವರ್ಷ ಇರುವಾಗ ಆತನ ಕೃತ್ಯ ಬಯಲಾಗಿದೆ. 19 ವರ್ಷದ ಮಗಳಿಗೆ ಗಂಭೀರ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಅನಾರೋಗ್ಯಕ್ಕೊಳಗಾದ ಹುಡುಗಿಯ ತಾಯಿಯನ್ನು ನೋಡಬೇಕೆಂದು ತಾಕೀತು ಮಾಡಿದ್ದರು. ಈ ಸಮಯದಲ್ಲಿ ಜೋಸೆಫ್ ಮಗಳನ್ನು ಹೊರಗೆ ತಂದ. ಆರಂಭದಲ್ಲಿ ಪೊಲೀಸ್ ಮುಂದೆ ಸತ್ಯ ಬಾಯಿಬಿಡಲು ಎಲಿಜಬೆತ್ ಹೆಸರಿದ್ದಳು. ನಂತ್ರ ಎಲ್ಲವನ್ನು ಹೇಳಿದ್ದಾಳೆ. ಇದನ್ನು ಕೇಳಿದ ಪೊಲೀಸರು ದಂಗಾಗಿ ಹೋಗಿದ್ದಾರೆ.

ಕಷ್ಟಗಳು ಬಂದಾಗ ಸುಧಾಮೂರ್ತಿ ಹೇಗೆ ಎದುರಿಸ್ತಾರೆ? ಅವರ ಬಳಿಯಿದೆ ಸರಳ ಸೂತ್ರ

ಪ್ರಕರಣ ದಾಖಲಿಸಿಕೊಂಡು ಜೋಸೆಫ್ ನನ್ನು ಪೊಲೀಸರು ಬಂಧಿಸಿದ್ದರು. ಆ ನಂತ್ರ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದ್ರೆ ಜೋಸೆಫ್ ವರ್ತನೆ ಸರಿಯಾಗಿದೆ. ಆತ ಈಗ ಅಪಾಯಕಾರಿ ಅಲ್ಲ ಎಂದು ವಕೀಲರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಕಾರಣ ಈ ವರ್ಷ ಜೋಸೆಫ್, ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಎಲಿಜಬೆತ್, ಮಕ್ಕಳ ಜೊತೆ ಯಾರಿಗೂ ತಿಳಿಯದ ಹಳ್ಳಿಯೊಂದರಲ್ಲಿ ವಾಸ ಮಾಡ್ತಿದ್ದಾಳೆ. ಆಕೆ ಮತ್ತು ಆಕೆ ಮಕ್ಕಳು ಇಪ್ಪನ್ನಾಲ್ಕು ವರ್ಷ ಕತ್ತಲೆಯಲ್ಲಿದ್ದರು. ಅವರಿಗೆ ಬೆಳಕಿಗೆ ಹೊಂದಿಕೊಳ್ಳೋದು ಕಷ್ಟವಾಗಿತ್ತು. ಹಾಗಾಗಿ ಥೆರಪಿ ನೀಡಲಾಗ್ತಿದೆ. 
 

click me!