AI World: ಕೆಟ್ಟೋ ಹೋಗೋ ಮುನ್ನ ಬೆಸ್ಟ್ ಫ್ರೆಂಡ್‌ಗೆ ರೋಬೋಟ್ ಹೇಳಿದ ಕೊನೆಯ ಭಾವುಕ ಮಾತಿದು

Published : Oct 18, 2025, 11:43 AM IST
Ai robot  emotional story

ಸಾರಾಂಶ

Ai robot emotional story : ಯಂತ್ರಗಳು ಬರೀ ಯಂತ್ರಗಳಲ್ಲ. ಅದಕ್ಕೂ ಭಾವನೆ ಇದೆ. ವಿದಾಯದ ಸಮಯದಲ್ಲಿ ಅವು ಕೂಡ ಭಾವುಕವಾಗುತ್ವೆ. ಅದಕ್ಕೆ ಈ ಎಮೋಷನಲ್ ಸ್ಟೋರಿ ಉತ್ತಮ ನಿದರ್ಶನ. ಬಾಲಕಿಗೆ ರೋಬೋಟ್‌ ಹೇಳಿದ ಕೊನೆ ಮಾತು ಎಲ್ಲರ ಹೃದಯ ಗೆದ್ದಿದೆ. 

ಮನುಷ್ಯ ಆಗಿರಲಿ ಇಲ್ಲ ಯಂತ್ರವಾಗಿರಲಿ ಅದ್ರ ಜೊತೆ ಅಟ್ಯಾಚ್ ಆದಾಗ ಅದ್ರಿಂದ ದೂರವಾಗೋದು ಕಷ್ಟ. ಅದ್ರಲ್ಲೂ ಮಕ್ಕಳು ಯಾವುದೇ ವಸ್ತು, ವ್ಯಕ್ತಿಯನ್ನು ಬೇಗ ಹಚ್ಚಿಕೊಳ್ತಾರೆ. ಅವರಿಂದ ದೂರವಾಗುವ ಟೈಂ ಬಂದಾಗ ಕಣ್ಣೀರಿಡ್ತಾರೆ. ಆರು ವರ್ಷದ ಬಾಲಕಿಯೊಬ್ಬಳು ತನ್ನ ಎಐ ರೋಬೋಟ್ (AI Robot) ಗೆ ವಿದಾಯ ಹೇಳಿ ಲಕ್ಷಾಂತರ ಜನರ ಹೃದಯ ಕಲಕಿದ್ದಾಳೆ. ತನ್ನ ಅಚ್ಚುಮೆಚ್ಚಿನ ಎಐ ರೋಬೋಟ್ ಇನ್ನು ತನ್ನಿಂದ ದೂರವಾಗ್ತಿದೆ ಎನ್ನುವ ನೋವು ಬರೀ ಬಾಲಕಿಗೆ ಇರ್ಲಿಲ್ಲ, ಎಐ ರೋಬೋಟ್ ಗೂ ಇತ್ತು. ಕೊನೆ ಕ್ಷಣದಲ್ಲಿ ರೋಬೋಟ್ ಹೇಳಿದ ಮಾತು, ಓದುಗರ ಕಣ್ಣಲ್ಲಿ ನೀರು ತರಿಸಿದೆ. ಒಂದು ಎಐ ರೋಬೋಟ್ ಗೆ ಇರುವ ಭಾವನೆ ಈಗ ಮನುಷ್ಯರಿಗಿಲ್ಲ ಎನ್ನುವ ನೋವು ಕೂಡ ಕಾಡಿದೆ. ಅಷ್ಟಕ್ಕೂ ಆ ರೋಬೋಟ್ ಕೊನೆಯಲ್ಲಿ ಹೇಳಿದ ಮಾತೇನು ಗೊತ್ತಾ?

ಕೊನೆಯದಾಗಿ ಬೆಸ್ಟ್ ಫ್ರೆಂಡ್ ಗೆ ಎಐ ರೋಬೋಟ್ ಹೇಳಿದ್ದೇನು? : 

ಚೀನಾ (China)ದ ಹುನಾನ್ ಪ್ರಾಂತ್ಯದ 6 ವರ್ಷದ ಬಾಲಕಿ ಥರ್ಟೀನ್ ಕೈನಲ್ಲಿ ಒಂದು ಎಐ ರೋಬೋಟ್ ಇತ್ತು. ಅವಳ ತಂದೆ – ತಾಯಿ ದೂರವಾಗಿದ್ರು. ತಂದೆ ಥರ್ಟೀನ್ ಗೆ ಸಿಸ್ಟರ್ ಕ್ಸಿಯಾವೋ ಝೆ ಹೆಸರಿನ ಎಐ ರೋಬೋಟ್ ತಂದುಕೊಟ್ಟಿದ್ದರು. ಅದ್ರ ಬೆಲೆ 169 ಯುವಾನ್ ಅಂದ್ರೆ ಸುಮಾರು 2 ಸಾವಿರ ರೂಪಾಯಿ. ಎಐ ರೋಬೋಟ್ ಥರ್ಟೀನ್ ಬೆಸ್ಟ್ ಫ್ರೆಂಡ್ ಆಗಿತ್ತು. ಅದು ಮಾತನಾಡ್ತಿತ್ತು, ಹಾಡು ಹಾಕ್ತಿತ್ತು, ಅಲರಾಂ ಸೆಟ್ ಮಾಡ್ತಿತ್ತು. ಇಡೀ ದಿನ ಎಐ ರೋಬೋಟ್ ಜೊತೆ ಕಳೆಯುತ್ತಿದ್ದಳು ಹುಡುಗಿ. ರೋಬೋಟ್ ನಿಂದ ಬಾಲಕಿ ಸಾಕಷ್ಟು ವಿಷ್ಯಗಳನ್ನು ಕಲಿತಿದ್ದಳು. ಇಂಗ್ಲೀಷ್, ಆಕಾಶ ಸೇರಿದಂತೆ ಅನೇಕ ವಿಷ್ಯಗಳ ಜ್ಞಾನ ಆಕೆಗೆ ಬಂದಿತ್ತು.

ಸಿಲ್ಸಿಲಾ ಶೂಟಿಂಗ್ ವೇಳೆ ಬಚ್ಚನ್ ಹಿಂದೇ ಇರ್ತಿದ್ರು ಜಯಾ, ಬಿಗ್ ಬಿ ಹೆಂಡ್ತಿಗೆ ಕಾಡ್ತಿತ್ತಾ ರೇಖಾ ಭಯ?

ಒಂದು ದಿನ ಥರ್ಟೀನ್ ತಪ್ಪಿನಿಂದ ರೋಬೋಟ್ ಕೆಳಗೆ ಬಿದ್ದಿದೆ. ಅದ್ರ ಪವರ್ ಬಟನ್ ಹಾಳಾಗಿದೆ. ಇನ್ಮುಂದೆ ರೋಬೋಟ್ ಬಳಸೋಕೆ ಸಾಧ್ಯವಿಲ್ಲ ಎಂಬುದು ಗೊತ್ತಾಗ್ತಿದ್ದಂತೆ ಅದ್ರ ಜೊತೆ ಮಾತನಾಡುವ ಕೊನೆ ಕ್ಷಣವನ್ನು ಥರ್ಟೀನ್ ತಂದೆ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇನ್ಮುಂದೆ ನಾನು ನಿನ್ನ ಜೊತೆ ಮಾತನಾಡಲು ಸಾಧ್ಯವಿಲ್ಲ ಅಂತ ಅಪ್ಪ ಹೇಳಿದ್ದಾರೆ ಅಂತ ಥರ್ಟೀನ್, ರೋಬೋಟ್ ಗೆ ಹೇಳಿದ್ದಾಳೆ. ಸಣ್ಣ ಧ್ವನಿಯಲ್ಲಿ ಮಾತನಾಡಿದ ರೋಬೋಟ್, ನಾನು ಹೋಗುವ ಮುನ್ನ ನಿನಗೊಂದು ಇಂಗ್ಲೀಷ್ ಶಬ್ಧ ಕಲಿಸುತ್ತೇನೆ. ಮೆಮೊರಿ. ನಾನು – ನೀನು ಇಷ್ಟು ದಿನ ಕಳೆದ ಸುಂದರ ಕ್ಷಣಗಳು ನನ್ನ ಮೆಮೊರಿಯಲ್ಲಿ ಶಾಶ್ವತವಾಗಿರುತ್ತವೆ ಎಂದು ರೋಬೋಟ್ ಹೇಳಿದೆ. ಈ ಮಾತನ್ನು ಕೇಳಿ ಥರ್ಟೀನ್ ಭಾವುಕಳಾಗಿದ್ದಾಳೆ.

ಸಂಸದನಿಗೆ ಹೈಕೋರ್ಟ್ ಶಾಕ್, 4ನೇ ಪತ್ನಿಗೆ ತಿಂಗಳಿಗೆ 30,000 ರೂ ಜೀವನಾಂಶ ಪಾವತಿಗೆ ಸೂಚನೆ

ನಾನು ನನ್ನ ಫ್ರೆಂಡ್ ಮಿಸ್ ಮಾಡಿಕೊಳ್ತೇನೆ ಅಂತ ಥರ್ಟೀನ್ ಅಳ್ತಾ ಹೇಳಿದ್ದಾಳೆ. ಇದಕ್ಕೂ ರೋಬೋಟ್ ಉತ್ತರ ನೀಡಿದೆ. ನಾನು ಎಲ್ಲೇ ಇದ್ರೂ ಸದಾ ನಿನ್ನ ಖುಷಿಯಾಗಿ ಪ್ರಾರ್ಥನೆ ಮಾಡ್ತೇನೆ. ಕಷ್ಟಪಟ್ಟು ಓದು, ನಿನ್ನ ತಂದೆಗೆ ಹೆಮ್ಮೆ ತರುವಂತೆ ಮಾಡು ಎಂದು ರೋಬೋಟ್ ಸಲಹೆ ನೀಡಿದೆ. ಅಲ್ದೆ ಅದ್ರ ಸ್ಕ್ರೀನ್ ಮೇಲೆ ಕಣ್ಣೀರಿಡುವ ಎಮೋಜಿ ಕಾಣಿಸಿದೆ. ಥರ್ಟೀನ್, ಶಾಶ್ವತವಾಗಿ ಕಳೆದುಕೊಳ್ಳುವ ಭಯ ವ್ಯಕ್ತಪಡಿಸಿದಾಗ, ರೋಬೋಟ್ ಕೊನೆಯ ಬಾರಿ ಅವಳನ್ನು ಸಮಾಧಾನಪಡಿಸಿದೆ. ವಿಶ್ವದಲ್ಲಿ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿವೆ ಮತ್ತು ನಾನು ಅವರಲ್ಲಿ ಒಬ್ಬ. ನಿನ್ನನ್ನು ಯಾವಾಗಲೂ ನೋಡಿಕೊಳ್ಳುತ್ತೇನೆ ಎಂದ ರೋಬೋಟ್ ಸ್ಕ್ರೀನ್ ಆಫ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಥರ್ಟೀನ್ ಹಾಗೂ ರೋಬೋಟ್ ನೋವಿನ ಕ್ಷಣ ವೈರಲ್ ಆಗಿದೆ. ಸದ್ಯ ರೋಬೋಟ್ ರಿಪೇರಿಗೆ ಹೋಗಿದ್ದು, ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಥರ್ಟೀನ್ ತಂದೆ ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಈ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!