ಅರೇಂಜ್ ಮ್ಯಾರೇಜ್, ಲವ್ ಮ್ಯಾರೇಜ್ ಹೆಸರನ್ನು ಮಾತ್ರ ನಾವು ಇಷ್ಟು ದಿನ ಕೇಳಿದ್ದೆವು. ಆದ್ರೀಗ ಸಪರೇಷನ್ ಮ್ಯಾರೇಜ್, ವೀಕೆಂಡ್ ಮ್ಯಾರೇಜ್ ಹೀಗೆ ಭಿನ್ನ ಭಿನ್ನ ಮ್ಯಾರೇಜ್ ಹೆಸರುಗಳು ಕೇಳಿ ಬರ್ತಿವೆ. ಜಪಾನ್ ನಲ್ಲಿ ಇವು ಪ್ರಸಿದ್ಧಿ ಪಡೆಯುತ್ತಿವೆ.
ಈಗಿನ ಜನರೇಷನ್ ಜನರ ಆಲೋಚನೆಯಲ್ಲಿ ಸಾಕಷ್ಟು ಭಿನ್ನತೆಯನ್ನು ನೀವು ಕಾಣ್ಬಹುದು. ಜಪಾನ್ ನಂತಹ ದೇಶದಲ್ಲಿ ಮದುವೆ ಕಡಿಮೆಯಾಗ್ತಿದೆ. ಮದುವೆಯಾಗುವ ಜೋಡಿ ಕೂಡ ಹಿಂದಿನಂತೆ ಜೀವನ ನಡೆಸುತ್ತಿಲ್ಲ. ಈಗ ವೀಕೆಂಡ್ ಮದುವೆ, ಪ್ರತ್ಯೇಕ ಮದುವೆ ಸೇರಿದಂತೆ ಅನೇಕ ಭಿನ್ನ ಮದುವೆಗಳು ಜಪಾನ್ ನಲ್ಲಿ ಪ್ರಸಿದ್ಧಿ ಪಡೆದಿವೆ.
ಪ್ರತ್ಯೇಕ ಮದುವೆ (Separation Marriage) ಅಂದ್ರೇನು? : ಈ ಸಪರೇಷನ್ ಮ್ಯಾರೇಜ್ ನಲ್ಲಿ, ಮದುವೆಯಾದ ಜೋಡಿ ಬೇರೆಯಾಗಿ ವಾಸಮಾಡ್ತಾರೆ. ಹಾಗಂತ ಪ್ರೀತಿ (love) ಇಲ್ಲ ಎಂದಲ್ಲ. ದಂಪತಿ ಪರಸ್ಪರ ಪ್ರೀತಿ ಮತ್ತು ಬೆಂಬಲವನ್ನು ಆನಂದಿಸುತ್ತಾರೆ. ಮತ್ತೊಂದೆಡೆ ಅವರು ತಮ್ಮ ಸಂಗಾತಿ (Partner)ಯ ಬಗ್ಗೆ ಚಿಂತಿಸದೆ ಏಕಾಂಗಿಯಾಗಿ ಬದುಕುತ್ತಾರೆ. ಈ ಪ್ರತ್ಯೇಕ ವಿವಾಹ ಪದ್ಧತಿ, ವಿವಾಹಿತ ಮತ್ತು ಏಕಾಂಗಿಯಾಗಿ ವಾಸಿಸುವ ಸಂಯೋಜಿತ ಪ್ರಯೋಜನಗಳನ್ನು ನೀಡುತ್ತದೆ. ಈ ಸಂಬಂಧದಲ್ಲಿ ಪ್ರೀತಿ ಮತ್ತು ಗೌರವ ಎರಡೂ ಸಿಗುತ್ತದೆ.
undefined
ಮುಖಕ್ಕೆ ಹೊಡದೆ ಹಾಗೆ ಮಾತನಾಡೋ, ಸೂಕ್ಷ್ಮತೆ ಇಲ್ಲದ ಮಂದಿಯಿಂದ ದೂರವಿದ್ದರೆ ಒಳ್ಳೇದು!
ಪ್ರೀತಿ, ಗೌರವವಿದೆ ಆದರೆ ಯಾವುದೇ ಹಸ್ತಕ್ಷೇಪವಿಲ್ಲ : ಪ್ರತ್ಯೇಕ ಮದುವೆ ಪದ್ಧತಿಯಲ್ಲಿ ತೊಡಗಿರುವ ಜಪಾನಿನ ಜೋಡಿಯ ಕಥೆಯನ್ನು ಕೆಲ ದಿನಗಳ ಹಿಂದೆ ಮಾದ್ಯಮದಲ್ಲಿ ಪ್ರಚಾರ ಮಾಡಲಾಗಿತ್ತು. ಪ್ರತ್ಯೇಕ ಮದುವೆಯಲ್ಲಿ ನಂಬಿಕೆ ಇಟ್ಟ ಹಿರೋಮಿ ಟಕೆಡಾ, ಫಿಟ್ನೆಸ್ ತರಬೇತುದಾರಳಾಗಿದ್ದಾಳೆ. ಜಿಮ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದಾಳೆ. ಆಕೆ ಸ್ವಾಭಿಮಾನಿ ಮತ್ತು ಸ್ವಾತಂತ್ರ್ಯ ಮಹಿಳೆಯಾಗಿದ್ದಾಳೆ. ಆಕೆ ಪತಿ, ಹಿಡೆಕಾಜು, ವ್ಯಾಪಾರ ಸಲಹೆಗಾರನಾಗಿದ್ದಾನೆ. ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಆತ, ಇಮೇಲ್ ಗೆ ಉತ್ತರ ನೀಡುವುದು, ರಿಪೋರ್ಟ್ ಬರೆಯುವುದ್ರಲ್ಲಿ ಸಮಯ ಕಳೆಯುತ್ತಾನೆ. ಇಬ್ಬರ ಲೈಫ್ ಸ್ಟೈಲ್, ಕೆಲಸ ಸಂಪೂರ್ಣ ಭಿನ್ನವಾಗಿದೆ. ಇಬ್ಬರೂ ಪರಸ್ಪರ ಪ್ರೀತಿ ಮಾಡ್ತಾರೆ. ಗೌರವ ನೀಡ್ತಾರೆ. ಆದ್ರೆ ಒಬ್ಬರ ಜೀವನದಲ್ಲಿ ಇನ್ನೊಬ್ಬರು ಇಂಟರ್‌ಫೇರ್ ಆಗಲು ಮನಸ್ಸು ಮಾಡೋದಿಲ್ಲ. ಇದೇ ಕಾರಣಕ್ಕೆ ಇಬ್ಬರು ಬೇರೆ ವಾಸಿಸಲು ನಿರ್ಧರಿಸಿದ್ದಾರೆ.
ಮದ್ವೆ ದಿನ ಬಾವನ ಸುಲಿಗೆ ಮಾಡೋ ಬಾಮೈದ: ನಮ್ಮಲ್ಲಿ ಮಾತ್ರ ಅಲ್ಲ ಅರ್ಮೇನಿಯಾದಲ್ಲೂ ಇದೇ ಈ ಆಚರಣೆ
ಹಿಡೆಕಾಜು ತನ್ನ ಎರಡನೇ ಪತ್ನಿ ಮನೆಯಲ್ಲಿ ರಾತ್ರಿ ಪೂರ್ತಿ ಇರ್ತಾರಂತೆ. ಆದ್ರೆ ಇಡೀ ದಿನ ಇಬ್ಬರೂ ಒಟ್ಟಿಗೆ ಇರೋದಿಲ್ಲ ಹಿಡೆಕಾಜು ಮೊದಲ ಮದುವೆ ಜೀವನ ಹೀಗಿರಲಿಲ್ಲವಂತೆ. ಹಿಡೆಕಾಜು ತನ್ನ ಕೆಲಸವನ್ನು ತುಂಬಾ ಪ್ರೀತಿಸುತ್ತಾರೆ. ಕೆಲಸಕ್ಕಾಗಿ ಆತ ಅನೇಕ ದಿನ ಮನೆಯಿಂದ ಹೊರಗೆ ಇರ್ತಾ ಇದ್ದನಂತೆ. ಈ ಸಮಯದಲ್ಲಿ ಪತ್ನಿ ತುಂಬಾ ಬೇಸರ ಮಾಡಿಕೊಳ್ತಿದ್ದಳಂತೆ. ಆಗ, ಮಹಿಳೆಯರು ಸ್ವತಂತ್ರವಾಗಿರುವುದು ಬಹಳ ಮುಖ್ಯ ಎಂಬ ವಿಷ್ಯವನ್ನು ಹಿಡೆಕಾಜು ತಿಳಿದುಕೊಂಡನಂತೆ. ಹಾಗಾಗಿ ಎರಡನೇ ಮದುವೆಯಲ್ಲಿ ಈ ತಪ್ಪು ಮಾಡಲು ಮುಂದಾಗಿಲ್ಲ ಎನ್ನುತ್ತಾನೆ ಹಿಡೆಕಾಜು.ಇದಕ್ಕೆ ಹಿರೋಮಿ ಟಕೆಡಾ ಕೂಡ ಧ್ವನಿಗೂಡಿಸಿದ್ದಾಳೆ. ಪತಿ ಮನೆಯಲ್ಲಿದ್ದಾಗ ಕೆಲವೊಂದು ಕೆಲಸ ಮಾಡಲು ಸಾಧ್ಯವಾಗೋದಿಲ್ಲ. ಸ್ವಾತಂತ್ರ್ಯ ಸಿಗೋದಿಲ್ಲ. ಈಗ ಇಬ್ಬರಿಗೂ ನೆಮ್ಮದಿ ಇದೆ ಎನ್ನುತ್ತಾಳೆ ಹಿರೋಮಿ ಟಕೆಡಾ.
ಹಿರೋಮಿ ಮತ್ತು ಹಿಡೆಕಾಜುಗೆ ಒಂದು ಮಗು ಕೂಡ ಇದೆ. ಮಗು ಪತ್ನಿ ಹಿರೋಮಿ ಜೊತೆ ಇರುತ್ತದೆ. ವಾರದಲ್ಲಿ ಒಂದೆರಡು ಬಾರಿ ಇಬ್ಬರು ಭೇಟಿಯಾಗ್ತಾರೆ. ಮಗುವಿನ ಆರೈಕೆಗೆ ಅವಶ್ಯಕತೆ ಇದ್ದಾಗ ಹಿಡೆಕಾಜು ಸಹಾಯ ಮಾಡ್ತಾನೆ. ಇದೇ ಕಾರಣಕ್ಕೆ ಅವರ ಅಕ್ಕಪಕ್ಕದ ಮನೆಯವರು, ಇವರಿಬ್ಬರಿಗೆ ವಿಚ್ಛೇದನವಾಗಿದೆ ಎಂದು ಭಾವಿಸಿದ್ದಾರಂತೆ. ಆದ್ರೆ ಹಿರೋಮಿ ಮತ್ತು ಹಿಡೆಕಾಜು ಆಲೋಚನೆ ಭಿನ್ನವಾಗಿದೆ. ಮದುವೆಯಾದ್ಮೇಲೆ ಒಟ್ಟಿಗೆ ವಾಸವಾಗಿರಬೇಕೆಂಬುದೇನಿಲ್ಲ ಎಂಬುದು ಅವರ ನಂಬಿಕೆ. ನಾನು ಹಾಗೂ ನನ್ನ ಪತಿ ಸಂತುಷ್ಟ ಜೀವನ ನಡೆಸುತ್ತಿದ್ದೇವೆ. ಇಬ್ಬರೂ ಖುಷಿಯಾಗಿದ್ದೇವೆ. ಭಾವನಾತ್ಮಕವಾಗಿ ಇಬ್ಬರೂ ಹತ್ತಿರವಾಗಿದ್ದೇವೆ, ವೈಯಕ್ತಿಕ ಜೀವನಶೈಲಿಯನ್ನು (Personal Lifestyle) ಸಹ ನಿರ್ವಹಿಸಲು ಸಾಧ್ಯವಾಗುತ್ತದೆ ಎನ್ನುತ್ತಾಳೆ ಹಿರೋಮಿ.