Relationship Tips: ನಿಮ್ಮಲ್ಲಿ ಅತಿಯಾದ ಸ್ವತಂತ್ರ ಧೋರಣೆ ಇದ್ರೆ ಸಂಬಂಧದಲ್ಲಿ ಈ ತಪ್ಪನ್ನ ಮಾಡ್ತಾನೇ ಇರ್ತೀರಾ!

By Suvarna News  |  First Published Sep 30, 2023, 6:16 PM IST

ಸ್ವತಂತ್ರವಾಗಿ ಬದುಕುವುದು ಉತ್ತಮ ಗುಣವೇ ಆಗಿದ್ದರೂ, ಸಂಬಂಧದಲ್ಲಿ ಇದು ಅತಿಯಾದರೆ ವಿಪರೀತಕ್ಕೆ ಹೋಗುತ್ತದೆ. ಸ್ವತಃ ನಿಮಗೂ ಜೀವನ ಕಷ್ಟವಾಗಬಹುದು. ನಿರಂತರವಾಗಿ ಎಲ್ಲವನ್ನೂ ಒಬ್ಬರೇ ನಿಭಾಯಿಸುತ್ತ ಜೀವನವನ್ನು ಆಸ್ವಾದಿಸುವುದನ್ನೇ ಮರೆಯಬಹುದು. ಹಾಗೂ ಸಂಗಾತಿಗೂ ನಿಮ್ಮ ಗುಣದಿಂದ ಬೇಸರವಾಗಬಹುದು. 
 


ಸ್ವತಂತ್ರರಾಗಿರುವುದು, ಯಾರ ಮೇಲೆಯೂ ಅವಲಂಬಿತರಾಗದೇ ಬದುಕುವುದು ಅತ್ಯುತ್ತಮ ಗುಣಗಳಲ್ಲಿ ಒಂದು. ಭಾವನಾತ್ಮಕವಾಗಿ ಆಗಲೀ, ದೈನಂದಿನ ಕೆಲಸ ಕಾರ್ಯಗಳ ವಿಚಾರದಲ್ಲಾಗಲೀ, ಯಾರ ಮೇಲಾದರೂ ಅವಲಂಬಿಸಿರುವುದು ನಮ್ಮನ್ನು ನಾವು ಕಟ್ಟಿಹಾಕಿಕೊಂಡಂತೆ. ಸ್ವತಂತ್ರ ಧೋರಣೆ ಇಲ್ಲದ ಬಹಳಷ್ಟು ಜನ ಸಂಬಂಧಗಳಲ್ಲಿ ಅವಲಂಬಿತರಾಗಿ ಬದುಕುತ್ತಾರೆ ಹಾಗೂ ಎಷ್ಟೋ ಬಾರಿ ಜೀವನದಲ್ಲಿ ಅತೃಪ್ತಿಯಿಂದ ಕಳೆಯುತ್ತಾರೆ. ಹೀಗಾಗಿ, ಸ್ವತಂತ್ರ ನಿಲುವು ಉತ್ತಮ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಸಂಬಂಧದಲ್ಲಿ ಕೆಲವೊಮ್ಮೆ ಸ್ವತಂತ್ರ ಬುದ್ಧಿಯೇ ನಿಮಗೆ ಹಾನಿಕಾರಕವಾಗುತ್ತದೆ. ಅತಿಯಾದ ಸ್ವತಂತ್ರ ಬುದ್ಧಿ ಇದ್ದಾಗ ನಿಮ್ಮದೇ ಅಗತ್ಯಗಳ ಬಗ್ಗೆ ಸಂಗಾತಿಗೆ ತಿಳಿಸಲು ಮುಜುಗರವಾಗಬಹುದು ಅಥವಾ ಕೆಲವೊಂದು ವಿಚಾರಗಳಲ್ಲಿ ಅವರ ಅಭಿಪ್ರಾಯ ಪಡೆಯುವುದು ಅಗತ್ಯ ಎಂದು ತೋಚದೇ ಹೋಗಬಹುದು. ಕೇವಲ ಸಂಗಾತಿಗೆ ಮಹತ್ವ ನೀಡದಿರುವ ವಿಚಾರದಲ್ಲಿ ಮಾತ್ರವಲ್ಲ, ಅತಿಯಾದ ಸ್ವತಂತ್ರ್ಯ ಧೋರಣೆಯ ಜನರಿಗೆ ಕೇವಲ ನೀಡುವುದು ಮಾತ್ರ ಗೊತ್ತಿರುತ್ತದೆ, ಪಡೆದುಕೊಳ್ಳುವುದು ಗೊತ್ತೇ ಇರುವುದಿಲ್ಲ. ಇದರಿಂದ ಕ್ರಮೇಣ ಜೀವನದಲ್ಲಿ ಅತೃಪ್ತಿ ಉಂಟಾಗಬಹುದು. ಹೀಗಾಗಿ, ನೀವೂ ಒಂದೊಮ್ಮೆ ಸಾಕಷ್ಟು ಸ್ವತಂತ್ರ್ಯ ನಿಲುವು ಹೊಂದಿದ್ದರೆ ಸಂಬಂಧಗಳಲ್ಲಿ ಈ ಕೆಲವು ತಪ್ಪುಗಳನ್ನು ಮಾಡಬೇಡಿ. 

•    ನಿಮ್ಮ ಅಗತ್ಯಗಳ (Need) ಬಗ್ಗೆ ಹೇಳದಿರುವುದು
ಹೇಳದೇ ನಮ್ಮ ಅಗತ್ಯಗಳನ್ನು ಬಲ್ಲವರು ಯಾರೂ ಇರುವುದಿಲ್ಲ. ಸಂಗಾತಿಯೂ (Partner) ಇದಕ್ಕೆ ಹೊರತಲ್ಲ. ಹೆಚ್ಚು ಸ್ವತಂತ್ರ (Independent) ಬುದ್ಧಿ ಇರುವವರು, ಮುಖ್ಯವಾಗಿ ಮಹಿಳೆಯರು (Women), ತಮ್ಮ ಅಗತ್ಯಗಳನ್ನು ಯಾರ ಬಳಿಯಲ್ಲೂ ಹೇಳಿಕೊಳ್ಳುವುದಿಲ್ಲ. ಎಲ್ಲವನ್ನೂ ತಾವೇ ನಿಭಾಯಿಸಲು ಮುಂದಾಗುತ್ತಾರೆ. ಸಂಗಾತಿ ತಮಗೆ ಸಹಾಯ (Help) ಮಾಡುವುದಿಲ್ಲವೆಂದು ಕೋಪ ಬರಬಹುದು. ಆದರೆ, ಅವರಿಂದ ಸಹಾಯ ಕೇಳಲು ಇವರು ಮರೆತಿರುತ್ತಾರೆ. ಅಥವಾ ಮುಜುಗರ ಪಡುತ್ತಾರೆ. ಹೀಗಾಗಿ, ನಿಮ್ಮ ಅಗತ್ಯಗಳ ಬಗ್ಗೆ ಹೇಳಿಕೊಳ್ಳಲು ಹಿಂದೇಟು ಹಾಕದಿರುವುದೇ ಇದಕ್ಕೆ ಪರಿಹಾರ.

Tap to resize

Latest Videos

ಲೈಂಗಿಕ ಜೀವನ ಬೋರ್ ಅನಿಸುತ್ತಿದ್ಯಾ? ಸಂಗಾತಿಗೆ ಹೀಗೆ ಮನವರಿಕೆ ಮಾಡಿ!

•    ಎಲ್ಲವನ್ನೂ ನೀವೇ ನಿಭಾಯಿಸುವುದು (Manage Your Own)
ನೀವು ಒಬ್ಬರೇ ಇರುವಾಗ ಎಲ್ಲವನ್ನೂ ಒಬ್ಬರೇ ನಿಭಾಯಿಸುವುದು ಮೆಚ್ಚತಕ್ಕ ಗುಣ. ಆದರೆ, ವೈವಾಹಿಕ ಜೀವನದಲ್ಲಿ (Married Life) ನೀವು ಏಕಾಂಗಿಯಲ್ಲ. ಆಗಲೂ ಎಲ್ಲವನ್ನೂ ನೀವೇ ಮುಂದಾಗಿ ಮಾಡುತ್ತ ಹೋಗುವುದು ಕೆಲವೊಮ್ಮೆ ತಿರುಗುಬಾಣವಾಗಬಹುದು. ಏಕೆಂದರೆ, ಸಂಬಂಧ (Relationship) ಎಂದರೆ ಸಹಭಾಗಿತ್ವ. ಇಲ್ಲಿ ಇಬ್ಬರ ನಿಲುವುಗಳೂ ಮುಖ್ಯ, ಇಬ್ಬರ ಸಹಕಾರವೂ ಅಗತ್ಯ. ಈ ಧೋರಣೆಯಿಂದ ನಿಮ್ಮ ಸಂಗಾತಿಗೆ ತಾನು ಅಮುಖ್ಯ ಎನ್ನುವ ಭಾವನೆಯೂ ಕಾಡಬಹುದು. 

•    ಕೇವಲ ಕೊಡುವುದು (Only Giving), ಪಡೆದೇ ಗೊತ್ತಿಲ್ಲ
ಸ್ವತಂತ್ರ ಧೋರಣೆಯ ಅನೇಕರಿಗೆ ಕೇವಲ ನೀಡುವುದಷ್ಟೇ ಗೊತ್ತಿರುತ್ತದೆ. ಪಡೆದುಕೊಂಡು ಗೊತ್ತಿರುವುದಿಲ್ಲ. ಕೂಡು ಕುಟುಂಬದಲ್ಲಿದ್ದರೂ ಅದೆಷ್ಟೋ ಮಹಿಳೆಯರು ತಮ್ಮ ಖರ್ಚುವೆಚ್ಚಕ್ಕೆ ತಾವೇ ದುಡಿದುಕೊಳ್ಳುತ್ತಾರೆಯೇ ಹೊರತು, ಮನೆಯವರ ಎದುರು ಕೈಚಾಚುವುದಿಲ್ಲ. ನಿರಂತರವಾಗಿ ಹೀಗಾಗುತ್ತಿದ್ದರೆ ಜೀವನ ಸುಸ್ತೆನಿಸುತ್ತದೆ. ಬದಲಿಗೆ, ನಿಮ್ಮ ಸಂಗಾತಿಯಿಂದಲೂ ಪಡೆದುಕೊಂಡು ನೋಡಿ. ಪ್ರೀತಿಯನ್ನು (Love) ಕೊಡುವುದಷ್ಟೇ ಅಲ್ಲ, ಪಡೆದುಕೊಳ್ಳಿ. ಹಣವನ್ನೂ (Money) ಸ್ವೀಕಾರ ಮಾಡಿ, ನಿಮ್ಮ ಭಾರ ಕಡಿಮೆ ಎನಿಸುತ್ತದೆ. ಸಂಗಾತಿಯ ಮೇಲೆ ನಂಬಿಕೆಯಿಡಿ.

•    ಸಂಗಾತಿಯ ಸಹಾಯ (Help) ತಿರಸ್ಕರಿಸುವುದು
ಇದಂತೂ ಸಾಕಷ್ಟು ಜನ ಮಾಡುವ ತಪ್ಪು. ಸಂಗಾತಿ ಸಹಾಯದ ಆಫರ್ ಮಾಡಿದಾಗ ಪಡೆದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಎಲ್ಲವನ್ನೂ ನೀವೇ ಮಾಡಿಕೊಳ್ಳುತ್ತಿದ್ದರೆ, ಅವರ ಸಹಕಾರವನ್ನು ತಿರಸ್ಕರಿಸಿದರೆ ಅವರಲ್ಲಿ ಅದೇ ಗುಣ ಬೆಳೆಯುತ್ತದೆ. ಹಾಗೂ ನಿಮ್ಮ ಭಾರವೂ (Burden) ಹೆಚ್ಚುತ್ತದೆ. ಸಹಾಯವನ್ನು ಸ್ವೀಕಾರ ಮಾಡುವುದರಿಂದ ನಿಮ್ಮ ಮೌಲ್ಯ (Value) ಕಡಿಮೆಯಾಗುವುದಿಲ್ಲ ಎನ್ನುವುದು ನೆನಪಿನಲ್ಲಿರಲಿ.

ವಿಷವನ್ನೇ ಬಿತ್ತುವಂಥ ಇಂಥವರೊಂದಿಗೆ ಒಡನಾಟವಿದ್ದರೆ ನಿಲ್ಲಿಸಿದರೆ ನಿಮಗೇ ಒಳ್ಳೇದು!

•    ಸಂಗಾತಿ ಅಮುಖ್ಯ (Unimportant)
ಅತಿಯಾದ ಸ್ವತಂತ್ರ ಧೋರಣೆಯ ಜನ ತಮ್ಮ ಸಂಗಾತಿಯಲ್ಲಿ ತಾವು ಅಮುಖ್ಯ ಎನ್ನುವ ಭಾವನೆ ಬೆಳೆಯುವಂತೆ ಮಾಡಿಬಿಡುತ್ತಾರೆ. ಸಂಸಾರದ ಕೆಲವೊಂದು ಸಂಗತಿಗಳಲ್ಲಿ ಅವರ ಅಭಿಪ್ರಾಯಗಳನ್ನೂ (Opinion) ಪರಿಗಣಿಸಬೇಕಾಗುತ್ತದೆ ಎನ್ನುವುದನ್ನು ಮರೆಯಬೇಡಿ.

click me!