Viral Video: ಕಳೆದುಹೋಗಿದ್ದ ಹಸ್ಕಿ ನಾಯಿ ಡ್ರೋನ್ ನಲ್ಲಿ ಕಂಡ್ತು; ಜತೆಗೆ ಇನ್ನೊಂದು ವಿಚಿತ್ರವೂ ಕಾದಿತ್ತು!

By Suvarna News  |  First Published Apr 12, 2024, 8:01 AM IST

ಸಾಕು ಪ್ರಾಣಿಗಳು ಕಳೆದುಹೋದರೆ ಅವುಗಳನ್ನು ಡ್ರೋನ್ ಮೂಲಕ ಹುಡುಕುವುದು ಹೊಸ ಪದ್ಧತಿ. ಅದೇ ರೀತಿ ರಷ್ಯಾದ ಹುಲ್ಲುಗಾವಲು ಪ್ರದೇಶದಲ್ಲಿ ಕಳೆದಹೋಗಿದ್ದ ಹಸ್ಕಿ ನಾಯಿಯನ್ನು ಅದರ ಮಾಲೀಕರು ಹುಡುಕಿದಾಗ ಅತ್ಯಂತ ವಿಶಿಷ್ಟ ಸನ್ನಿವೇಶ ಕಂಡುಬಂತು. 
 


ತಂತ್ರಜ್ಞಾನವನ್ನು ಸುಮ್ಮನೆ ಬೆರಗು ಕಣ್ಣಿನಿಂದ ನೋಡುವುದು ಹೆಚ್ಚು ಫಲ ಕೊಡುವುದಿಲ್ಲ. ಅದರ ಸಹಾಯ ಪಡೆದು ನಮ್ಮ ಜೀವನದ ಮಟ್ಟವನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂದು ಊಹಿಸಿ ಆ ದಿಸೆಯಲ್ಲಿ ಕೆಲಸ ಮಾಡಲು ಶುರು ಮಾಡಿದಾಗ ಅನೂಹ್ಯ ಘಟನೆಗಳಿಗೆ ಸಾಕ್ಷಿಯಾಗಲು ಸಾಧ್ಯವಾಗಬಹುದು. ಜತೆಗೆ, ಅದರಿಂದ ಸಾಕಷ್ಟು ಉತ್ತಮ ಪರಿಣಾಮಗಳೂ ಆಗಬಹುದು. ಡ್ರೋನ್ ತಂತ್ರಜ್ಞಾನದ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಕೇಳುವುದೇನು? ಹಲವಾರು ರೀತಿಯಲ್ಲಿ ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದೇವೆ.

ಡ್ರೋನ್ ಎಷ್ಟೋ ಕಡೆಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ. ಹಲವು ಭಾಗಗಳಲ್ಲಿ ಡ್ರೋನ್ ಅನ್ನು ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರಪಂಚದ ಇತರ ಹಲವು ದೇಶಗಳು ಸಹ ಡ್ರೋನ್ ಅನ್ನು ಸಾಕಷ್ಟು ವಿಶಿಷ್ಟ ಕೆಲಸಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಹಲವಾರು ಸಾಕ್ಷಿಗಳು ಆಗಾಗ ದೊರೆಯುತ್ತಲೇ ಇರುತ್ತವೆ. ಅದಕ್ಕೊಂದು ಸಾಕ್ಷಿ ಎಂಬಂತೆ ರಷ್ಯಾದಲ್ಲೊಂದು ಘಟನೆ ನಡೆದಿದೆ. ಕಳೆದುಹೋದ ಸಾಕು ಪ್ರಾಣಿಗಳ ಹುಡುಕಾಟಕ್ಕೆ ಡ್ರೋನ್ ಉಪಯುಕ್ತ. ಕಳೆದುಹೋದ ಸಾಕುಪ್ರಾಣಿಗಳನ್ನು ಎಲ್ಲೆಂದು ಹುಡುಕುವುದು ಎಂದು ಕೈಚೆಲ್ಲುವ ಹೊತ್ತಲ್ಲಿ ಡ್ರೋನ್ ಹಾರಿಸುವ ಮೂಲಕ ಅವುಗಳನ್ನು ಪತ್ತೆ ಮಾಡಲು ಸಾಧ್ಯ. ಕಾಡು, ಅರಣ್ಯಗಳ ಅಂಚಿನಲ್ಲಿರುವ ರೈತರಿಗೆ ಇದು ಹೆಚ್ಚು ಸಹಕಾರಿಯಾಗಬಲ್ಲದು. 

Latest Videos

undefined

ರಷ್ಯಾದ (Russia) ಪೂರ್ವಭಾಗದ (East) ತುದಿಯಲ್ಲಿರುವ ಕಮ್ ಚಟ್ಕಾ ಪ್ರದೇಶದಲ್ಲಿ ಒಂದು ವೈಚಿತ್ರ್ಯ ಸಂಭವಿಸಿದೆ. ಇದು ರಷ್ಯಾದ ಅತಿ ಶೀತ ಭಾಗದಲ್ಲಿ ಒಂದು. ಸುತ್ತ ಸಮುದ್ರದಿಂದ ಆವೃತವಾಗಿದ್ದರೂ ಬೇಸಿಗೆಗೂ ಮುನ್ನ ಇಲ್ಲಿ ದಟ್ಟ ಹಿಮ (Snow) ಕವಿದಿರುತ್ತದೆ. ದೊಡ್ಡ ಕಾಡು ಪ್ರದೇಶವಿಲ್ಲ. ಹುಲ್ಲುಗಾವಲು (Grassland) ಹೇರಳವಾಗಿವೆ. ಚಳಿ ಪ್ರದೇಶದ ಜನ ಹಸ್ಕಿ ನಾಯಿಗಳನ್ನು ಸಾಕುವುದು ಹೆಚ್ಚು. ಅದು ಚಳಿಗೆ ಸಹಿಷ್ಣುವಾಗಿದ್ದು, ಭಾರೀ ಶ್ರಮಜೀವಿಯಾಗಿದೆ. ಹೀಗಾಗಿ, ಅದನ್ನು ಸಾಕುವ ಪದ್ಧತಿ ಆ ಭಾಗದಲ್ಲಿದೆ. ಹೀಗೆಯೇ, ರೈತರೊಬ್ಬರು ಅಲ್ಲಿ ಹಸ್ಕಿ ಸಾಕಿದ್ದು, ಅದು ಕಳೆದುಹೋಗಿತ್ತು. ಅದನ್ನು ಹುಡುಕುವುದು ಹೇಗೆ ಎನ್ನುವ ಚಿಂತೆ ಕಾಡಿದಾಗ ನೆರವಿಗೆ ಬಂದಿದ್ದು ಇದೇ ಡ್ರೋನ್ (Drone) ತಂತ್ರಜ್ಞಾನ. 

ಕಿಡಿ ಕಾರೋದ್ರಲ್ಲಿ ಅತ್ತೆ ಜಯಾಗೆ ತಕ್ಕ ಸೊಸೆಯಾದ ಐಶ್​! ಅಷ್ಟಕ್ಕೂ ಇಬ್ಬರ ಸಿಟ್ಟು ಯಾರ ವಿರುದ್ಧ?

ಹಸ್ಕಿ ವಿತ್ ಥ್ರೀ ಕರಡಿ!
ಡ್ರೋನ್ ಹಾರಿಸಿ ಸುತ್ತಮುತ್ತಲ ಹುಲ್ಲುಗಾವಲುಗಳನ್ನು ಹುಡುಕಿದಾಗ ಹಸ್ಕಿ ಕಂಡುಬಂತು. ಅಷ್ಟೇ ಅಲ್ಲ, ಅದರ ಜತೆಗೇ ಇನ್ನೊಂದು ವಿಶಿಷ್ಟ ವಿದ್ಯಮಾನವೂ ಗೋಚರವಾಯಿತು. ಆ ಹಸ್ಕಿ ಮೂರು ಕಾಡು ಕರಡಿಗಳೊಂದಿಗೆ (Wild Bear) ಬಹಳ ಖುಷಿಯಾಗಿ (Happily) ಆಟವಾಡುತ್ತಿತ್ತು. ಅವುಗಳೊಂದಿಗೆ ನಲಿಯುತ್ತ ಹುಲ್ಲುಗಾವಲನ್ನು ಸುತ್ತುತ್ತಿತ್ತು. ಮೂರು ಕರಡಿಗಳು ಸಹ ಅದರೊಂದಿಗೆ ಖುಷಿಯಿಂದ ಆಟವಾಡುತ್ತಿದ್ದವು. ಒಂದು ಕರಡಿ ಸ್ನೇಹದಿಂದ ಆ ಹಸ್ಕಿಯನ್ನು ತಳ್ಳುತ್ತಿತ್ತೇ ಹೊರತು ನೋವುಂಟು ಮಾಡಿರಲಿಲ್ಲ. ಬಹುಶಃ ಹಸ್ಕಿಗೆ ಅವರ ಸ್ನೇಹದಿಂದ (Friendship) ಮನೆಯೇ ಮರೆತುಹೋಗಿದ್ದಿರಬೇಕು!

 


ಈ ಘಟನೆಯನ್ನು ಡ್ರೋನ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಬಳಿಕ ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಲಾಗಿದೆ. ದಿನಾಂಕವನ್ನು ಬಹಿರಂಗಪಡಿಸದ ವೀಡಿಯೋವನ್ನು ಸುಮಾರು 20 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದು, ಸಖತ್ ವೈರಲ್ (Viral) ಆಗಿದೆ. ಇದಕ್ಕೆ ತಮಾಷೆಯ ಕಾಮೆಂಟುಗಳೂ ಸಾಕಷ್ಟು ಬಂದಿವೆ. 

ನೀವು ಶ್ರೀಮಂತರಾಗಿದ್ರೆ ನನ್ನ ಪತಿಯಾಗ್ಬಹುದು...ಆಫರ್ ಕೇಳಿ ದಂಗಾದ ಜನ

ಮನೇಗ್ ಹೋಗ್ ಅಂತಿದೆ!
ಒಬ್ಬರು ತಮಾಷೆಯಾಗಿ ಮಾಡಿರುವ ಕಾಮೆಂಟ್ ಹೀಗಿದೆ, “ಗೋ ಟು ದ ಹೆಲ್ ಹೋಮ್ ಡ್ಯೂಡ್ ಎಂದು ಆ ಕರಡಿ ಹಸ್ಕಿಗೆ (Husky) ತಿವಿಯುತ್ತಿದೆ’ ಎಂದು ಹೇಳಿದ್ದಾರೆ. ಕೆಲವರು ಆ ನಾಯಿ ಮರಳಿ ಸಾಕಿದವರಿಗೆ ಸಿಕ್ಕಿತೋ ಇಲ್ಲವೋ ಎನ್ನುವುದರ ಬಗ್ಗೆ ಕುತೂಹಲ ತೋರಿದ್ದಾರೆ. ಒಬ್ಬರು, “ತಾಯಿ ಕರಡಿಯೊಂದಿಗೆ ಇನ್ನಿಬ್ಬರು ಮಕ್ಕಳು ಮನೆಗೆ ಆಗಮಿಸಿರುವ ಹೊಸ ಸದಸ್ಯನ ಕುರಿತು 

click me!