ನೀವು ಶ್ರೀಮಂತರಾಗಿದ್ರೆ ನನ್ನ ಪತಿಯಾಗ್ಬಹುದು...ಆಫರ್ ಕೇಳಿ ದಂಗಾದ ಜನ

By Suvarna News  |  First Published Apr 11, 2024, 3:47 PM IST

ಈಗಿನ ಯುವಜನತೆ ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ತಾರೆ. ತಮ್ಮಿಷ್ಟದ ಸಂಗಾತಿ ಹುಡುಕಿಕೊಳ್ಳಲು ಭಿನ್ನ ವಿಧಾನವನ್ನೂ ಅನುಸರಿಸುತ್ತಾರೆ. ಈಗ ಯುವತಿಯೊಬ್ಬಳು ಇದೇ ವಿಷ್ಯಕ್ಕೆ ಚರ್ಚೆಯಲ್ಲಿದ್ದಾಳೆ. ಆಕೆ ಅನುಸರಿಸಿದ ವಿಧಾನ ಎಲ್ಲರನ್ನು ಬೆರಗಾಗಿಸಿದೆ. 


ಹಿಂದಿನ ಕಾಲದಲ್ಲಿ ಮದುವೆ ಜವಾಬ್ದಾರಿಯನ್ನು ಸಂಬಂಧಿಕರು, ಕುಟುಂಬಸ್ಥರು ಹೊತ್ತುಕೊಳ್ತಿದ್ದರು. ಎಲ್ಲರೂ ಒಟ್ಟಾಗಿ ಕುಳಿತು, ಚರ್ಚೆ ನಡೆಸಿ ಮದುವೆಯನ್ನು ನಿಶ್ಚಯ ಮಾಡುತ್ತಿದ್ದರು. ಇಲ್ಲಿ ವಧು-ವರರ ಭೇಟಿ ಇಲ್ಲದೆ ಮದುವೆ ಆಗುತ್ತಿತ್ತು. ಮದುವೆ ದಿನ ಪತಿ ಅಥವಾ ಪತ್ನಿಯನ್ನು ನೋಡಿದ ಅನೇಕರಿದ್ದಾರೆ. ಆದ್ರೆ ಈಗ ಕಾಲ ಹಾಗಿಲ್ಲ. ಹುಡುಗಿ – ಹುಡುಗ ಇಬ್ಬರಿಗೂ ಸಂಪೂರ್ಣ ಸ್ವಾತಂತ್ರ್ಯವಿದೆ. ಪತಿಯಾಗುವವನ ಜೊತೆ ಹೊಂದಾಣಿಕೆ ಸಾಧ್ಯವೇ ಎಂಬುದನ್ನು ಆತನ ಜೊತೆಗಿದ್ದು ನೋಡುವವರಿದ್ದಾರೆ. ಆನ್ಲೈನ್, ಆಫ್ ಲೈನ್ ನಲ್ಲಿ ಸಂಗಾತಿಯನ್ನು ಜನರು ಹುಡುಕ್ತಾರೆ.

ಟೆಕ್ನಾಲಜಿ ಬಳಸಿಕೊಂಡು ಈಗ ಜನರು ಸಂಗಾತಿ ಆಯ್ಕೆ ಮಾಡಿಕೊಳ್ತಾರೆ. ಫೇಸ್ಬುಕ್ ನಲ್ಲಿ, ವಾಟ್ಸ್ ಅಪ್ ನಲ್ಲಿ ಜಾಹೀರಾತು ನೀಡುವವರಿದ್ದಾರೆ. ಪೇಪರ್ ಗಳಲ್ಲಿಯೂ ನೀವು ಜಾಹೀರಾತು ನೋಡ್ಬಹುದು. ಡೇಟಿಂಗ್ ಅಪ್ಲಿಕೇಶನ್‌ಗಳು ಅಥವಾ ಮ್ಯಾಟ್ರಿಮೋನಿಯಲ್ ಪ್ರಸಿದ್ಧಿ ಪಡೆದಿದೆ. ಇದ್ರ ಮೂಲಕ ಸಂಗಾತಿ ಹುಡುಕುವವರ ಸಂಖ್ಯೆ ವಿಪರೀತವಾಗಿದೆ. ಆದ್ರೆ ಒಬ್ಬ ಹುಡುಗಿ ಎಲ್ಲ ಮಿತಿಯನ್ನು ಮೀರಿದ್ದಾಳೆ. ಆಕೆ ಸಂಗಾತಿಯನ್ನು ಹುಡುಕಿಕೊಳ್ಳಲು ಆಯ್ಕೆ ಮಾಡಿಕೊಂಡ ಜಾಗ ಹಾಗೂ ಆಕೆ ಷರತ್ತು ಅಚ್ಚರಿಹುಟ್ಟಿಸಿದೆ.

Tap to resize

Latest Videos

ಛಲ ಅಂದ್ರೆ ಹೀಗಿರ್ಬೇಕು! 14ಕ್ಕೆ ಮದುವೆ, 18ಕ್ಕಿಬ್ಬರು ಮಕ್ಕಳು; ಈಗೀಕೆ ಐಪಿಎಸ್ ಆಫೀಸರ್!

ಮದುವೆ (Marriage) ಯಾಗುವ ಹುಡುಗ ಹೇಗಿರಬೇಕು ಎಂದು ಹುಡುಗಿಯರನ್ನು ಕೇಳಿದ್ರೆ ಉದ್ದುದ್ದದ ಲೀಸ್ಟ್ (List) ಬರುತ್ತದೆ. ನೋಡಲು ಸುಂದರವಾಗಿರಬೇಕು, ಒಳ್ಳೆ ಉದ್ಯೋಗ ಇರಬೇಕು, ಪಾಲಕರ ಕಿರಿಕಿರಿ ಇರ್ಬಾರದು, ಉತ್ತಮ ಮಾತುಗಾರನಾಗಿರಬೇಕು ಹೀಗೆ ಒಬ್ಬೊಬ್ಬರು ಒಂದೊಂದು ವಿಷ್ಯಕ್ಕೆ ಆದ್ಯತೆ ನೀಡ್ತಾರೆ. ಈಗ ನಾವು ಹೇಳ್ತಿರೋ ಹುಡುಗಿ ಶ್ರೀಮಂತಿ (Rich )ಕೆಗೆ ಮೊದಲ ಆದ್ಯತೆ ನೀಡಿದ್ದಾಳೆ. ಆಕೆ ತನ್ನ ಪತಿಯಾಗುವವನನ್ನು ಹುಡುಕಲು ವಿಮಾನವನ್ನು ಆಯ್ದುಕೊಂಡಿದ್ದಾಳೆ. 

ಭಿನ್ನವಾಗಿ ಸಂಗಾತಿ ಹುಡುಕುತ್ತಿರುವ ಯುವತಿ : ಸುಂದರ ಹುಡುಗಿ ಕ್ಯಾರೊಲಿನಾ ಗೀಟ್ಸ್ ಭಿನ್ನವಾದ ಕೆಲಸ ಮಾಡ್ತಿದ್ದಾಳೆ. ಕೈನಲ್ಲಿ ಬೋರ್ಡ್ ಹಿಡಿದಾಗ್ಲಿ, ಪೋಸ್ಟರ್ ಹಾಕಿಯಾಗ್ಲಿ ಹುಡುಗನನ್ನು ಹುಡುಕುತ್ತಿಲ್ಲ. ಕ್ಯಾರೊಲಿನಾ ಗೀಟ್ಸ್ ವಿಮಾನದಲ್ಲಿ ತನ್ನ ಹುಟುಗನ ಹುಡುಕಾಟ ನಡೆಸುತ್ತಿದ್ದಾಳೆ. 

ತಾಯಿ ದುರ್ಗೆಯಿಂದ ಮಹಿಳೆಯರು ಎಷ್ಟೆಲ್ಲ ಕಲಿಯೋದಿದೆ, ದೇವರಿಂದ ಕಲಿಯೋದು ಅಂಥದ್ದೇನಿರುತ್ತೆ?

ಕ್ಯಾರೊಲಿನಾ ಗೀಟ್ಸ್, ವಿಮಾನ (Plane ) ಏರಿದ ನಂತ್ರ ವಿಮಾನ ಸಿಬ್ಬಂದಿಗೆ ತನ್ನ ಹುಡುಗನಿಗೆ ಯಾವ ಗುಣ ಇರಬೇಕು ಎಂದು ಹೇಳಿದ್ದಳು. ಅವರು ಅದಕ್ಕೆ ಅನುಮತಿ ನೀಡಿದ್ದರು. ನಂತ್ರ ಎದ್ದು ನಿಂತ ಕ್ಯಾರೊಲಿನಾ ಗೀಟ್ಸ್, ನನ್ನ ಹೆಸರು ಕ್ಯಾರೊಲಿನಾ ಗೀಟ್ಸ್. ನಾನು ಶ್ರೀಮಂತ ಹುಡುಗನನ್ನು ಹುಡುಕುತ್ತಿದ್ದೇನೆ. ನನ್ನ ಸೀಟ್ ಸಂಖ್ಯೆ 2A. ನೀವು ಶ್ರೀಮಂತರಾಗಿದ್ದರೆ ದಯವಿಟ್ಟು ಇಲ್ಲಿಗೆ ಬನ್ನಿ ಎಂದಿದ್ದಾಳೆ. ಆಕೆಯ ಪಕ್ಕದ ಸೀಟ್ ಖಾಲಿ ಇದ್ದ ಕಾರಣ  ಕ್ಯಾರೊಲಿನಾ ಗೀಟ್ಸ್ ಈ ಆಫರ್ ನೀಡಿದ್ದಾಳೆ. 

ಕ್ಯಾರೊಲಿನಾ ಗೀಟ್ಸ್, ವಿಮಾನದಲ್ಲಿ ಈ ಹೇಳಿಕೆ ನೀಡಿದ ನಂತ್ರ ಪ್ರತಿಕ್ರಿಯೆ ಭಿನ್ನವಾಗಿತ್ತಂತೆ. ವಿಮಾನ ಸಿಬ್ಬಂದಿ ಕ್ಯಾರೊಲಿನಾ ಗೀಟ್ಸ್ಗೆ ಸಂಪೂರ್ಣ ಬೆಂಬಲ ನೀಡಿದ್ದರು. ಸಿಬ್ಬಂದಿ ನನಗೆ ಸಹಾಯ ಮಾಡಿದರು ಎಂದು ಕ್ಯಾರೊಲಿನಾ ಗೀಟ್ಸ್ ಹೇಳಿದ್ದಾಳೆ. ನಾನು ಡೇಟಿಂಗ್ ಅಪ್ಲಿಕೇಷನ್ ಗಳನ್ನು ನಂಬುವುದಿಲ್ಲ ಎಂದು ಕ್ಯಾರೊಲಿನಾ ಗೀಟ್ಸ್ ಹೇಳುತ್ತಾಳೆ. ಕ್ಯಾರೊಲಿನಾ ಗೀಟ್ಸ್ ಕ್ಯೂಆರ್ ಕೋಡ್ ಹೊಂದಿದ್ದಾಳೆ. ಆಕೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ನಿಮಗೆ ಆಕೆಯ ಪ್ರೊಫೈಲ್ ಸಿಗುತ್ತದೆ. ಭಿನ್ನ ರೀತಿಯಲ್ಲಿ ಕ್ಯಾರೊಲಿನಾ ಗೀಟ್ಸ್ ತನ್ನ ಬಾಯ್ ಫ್ರೆಂಡ್ ಹುಡುಕಾಟ ನಡೆಸುತ್ತಿದ್ದಾಳೆ. ಆಕೆಯದ್ದು ಹೆಚ್ಚಿನ ಷರತ್ತೇನೂ ಇಲ್ಲ. ತನ್ನ ಕೈ ಹಿಡಿಯುವ ಹುಡುಗ ಶ್ರೀಮಂತನಾಗಿರಬೇಕು. ಕ್ಯಾರೊಲಿನಾ ಗೀಟ್ಸ್, ಹುಡುಗನ ಬಳಿ ಎಷ್ಟು ಆಸ್ತಿ ಇರಬೇಕು ಎಂಬುದನ್ನು ಎಲ್ಲಿಯೂ ಹೇಳಿಲ್ಲ. ನೀವೂ ಶ್ರೀಮಂತರಾಗಿದ್ದರೆ ಕ್ಯಾರೊಲಿನಾ ಗೀಟ್ಸ್ ಗೆ ಗಾಳ ಹಾಕಲು ಟ್ರೈ ಮಾಡಬಹುದು. 

click me!