
ವೈವಾಹಿಕ ಜೀವನ (Married life) ದಲ್ಲಿ ಗಂಡ- ಹೆಂಡತಿ (Husband-wife) ಮಧ್ಯೆ ಆಗಿಂದಾಗೆ ಭಿನ್ನಾಭಿಪ್ರಾಯಗಳು ಬರುತ್ತವೆ. ಇಬ್ಬರ ನುಡುವೆ ಸಣ್ಣ ಪುಟ್ಟ ಜಗಳವಾಗುತ್ತಲೇ ಿರುತ್ತದೆ. ಹಾಗಂತ ಜಗಳವನ್ನು ಬಗೆಹರಿಸದೆ ಹಾಗೆಯೇ ಮುಂದುವರಿಸಿದರೆ ಸಂಬಂಧ ಹದಗೆಡುವುದು. ಪತಿ ಪತ್ನಿಯರು ಇಬ್ಬರಲ್ಲಿ ಯಾರು ಮುನಿಸಿಕೊಂಡರೂ (Angry) ಮತ್ತೊಬ್ಬರು ಅವರನ್ನು ಸಮಾಧಾನ ಮಾಡಬೇಕು. ಆದ್ರೆ ಈ ಟ್ರಿಕ್ ತುಂಬಾ ಜನ ಪುರುಷರಿಗೆ ಗೊತ್ತಿರುವುದಿಲ್ಲ. ಹೀಗಾಗಿ ಕೋಪಿಸಿಕೊಂಡ ಪತ್ನಿ (Wife)ಯನ್ನು ಹೇಗೆ ಸಮಾಧಾನ ಪಡಿಸಬೇಕು ಎಂಬುದು ತಿಳಿದುಕೊಳ್ಳುವುದು ಮುಖ್ಯ.
ಕ್ಷಮೆಯಾಚಿಸಿ: ಗಂಡ ತಪ್ಪುಗಳಿಗೆ ಕ್ಷಮೆ (Apology) ಕೇಳದ ಕಾರಣ ಹೆಂಡತಿ ಹೆಚ್ಚು ಕಾಲ ಮುನಿಸಿಕೊಂಡು ಇದ್ದುಬಿಡುತ್ತಾಳೆ. ಜಗಳವಾದಾಗ, ಒಬ್ಬ ವ್ಯಕ್ತಿಯು ತನ್ನ ಅಹಂಕಾರವನ್ನು ಬದಿಗಿಟ್ಟು ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸುವುದು ಮುಖ್ಯ. ಹೀಗಾಗಿ ಹೆಂಡತಿ ಮುನಿಸಿಕೊಂಡಿದ್ದಾಗ ಮೊದಲಿಗೆ ತಪ್ಪಾಯ್ತೆಂದು ಹೇಳಿ ಕ್ಷಮೆಯಾಚಿಸಿ. ಸಾರಿ ಎಂಬ ಮಾತಿನಿಂದ ಆಕೆಯ ಮನಸ್ಸು ಕರಗದಿದ್ದರೆ ಮತ್ತೆ ಹೇಳಿ.
ಗಂಡ ಮತ್ತೊಬ್ಬಳ ಸೆರಗು ಹಿಡಿದು ಹೋಗ್ಬಾರ್ದು ಅಂದ್ರೆ ಹೀಗೆ ಮಾಡಿ
ಸಿಟ್ಟಿಗೆದ್ದಾಗ ಶಾಂತಗೊಳಿಸಿ: ಹೆಂಡತಿ ನಿಮ್ಮ ಮೇಲೆ ಕೋಪಗೊಂಡಾಗ ಅವಳನ್ನು ಶಾಂತಗೊಳಿಸುವುದು ಮುಖ್ಯ. ಅವಳಿಗೆ ನೋವುಂಟುಮಾಡುವ ವಿಷಯಗಳನ್ನು ಹೇಳಲು ಅಥವಾ ಆಪಾದನೆಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ. ಬದಲಾಗಿ, ಅವಳೊಂದಿಗೆ ಮಾತನಾಡಲು ಪ್ರಯತ್ನಿಸಿ ಅಥವಾ ಅವಳು ನಿಮ್ಮ ಮೇಲೆ ಉದ್ಧಟತನ ತೋರಿದಾಗ ಅವಳನ್ನು ಪ್ರೀತಿಯಿಂದ ಹಿಡಿದುಕೊಂಡು ರಮಿಸಿ.
ಮಾತನ್ನು ಆಲಿಸಿ: ನಿಮ್ಮ ಹೆಂಡತಿ ನಿಮ್ಮ ಮೇಲೆ ಕೋಪಗೊಂಡಾಗ, ಅವಳ ಮಾತನ್ನು ನಿರ್ಲಕ್ಷಿಸುವ ತಪ್ಪನ್ನು ಖಂಡಿತಾ ಮಾಡಬೇಡಿ. ಇದು ಅವರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ಮೊದಲಿಗೆ ಅವರ ಮಾತುಗಳಿಗೆ ಕಿವಿಯಾಗಿ. ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನವಿಟ್ಟು ಕೇಳಿ ನಂತರ ಮಾತು ಮುಂದುವರೆಸಿ. ಅವಳ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವಳ ಕಥೆಯನ್ನು ಕೇಳುವುದು ನಿಮ್ಮ ಸ್ವಂತ ತಪ್ಪನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.
ಅಹಂಕಾರ ಸೈಡಿಗಿಡಿ: ಅದೆಷ್ಟೋ ಬಾರಿ ದಂಪತಿಯ ನಡುವಿನ ಜಗಳವನ್ನು ಸರಿಪಡಿಸಲು ಅಹಂಕಾರ ಅಡ್ಡಿಯಾಗುತ್ತದೆ. ಕೋಪಗೊಂಡ ಹೆಂಡತಿ ನಿಮ್ಮ ಕುಂದುಕೊರತೆಗಳನ್ನು ನಿಮ್ಮ ಮುಂದೆ ಹೇಳಿದಾಗ ನೀವದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ ಹಾಗೇ ಮಾಡಬೇಡಿ. ನಿಮ್ಮ ತಪ್ಪುಗಳಿದ್ದರೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಿ.
ಸಂಗಾತಿಯನ್ನು ಅಪ್ಪಿ ಮುದ್ದಾಡಿಕೊಂಡು ಮಲಗಿ, ಲೈಫ್ ಹ್ಯಾಪಿಯಾಗಿರುತ್ತೆ
ಮನವೊಲಿಸಲು ಯತ್ನಿಸಿ: ಕೋಪಗೊಂಡ ಹೆಂಡತಿ ಪ್ರೀತಿಯನ್ನು ಮರಳಿ ಪಡೆಯಲು ನೀವು ನಿಜವಾದ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಎಂದು ತಿಳಿದಾಗ ಅವಳು ಹೆಚ್ಚು ಕಾಲ ಕೋಪಗೊಳ್ಳುವುದಿಲ್ಲ. ಹೀಗಾಗಿ ಹೆಂಡತಿ ಸಿಟ್ಟಿಗೆದ್ದಾಗ ತಕ್ಷಣ ಸರ್‌ಪ್ರೈಸ್ ಉಡುಗೊರೆಗಳನ್ನು ನೀಡಿ. ಚಾಕೊಲೇಟ್, ಹೂಗಳನ್ನು ಕಳುಹಿಸಿ ಕೊಡುವುದು ಸಹ ಆಕೆಯನ್ನು ಖುಷಿಪಡಿಸುತ್ತದೆ.
ಅಡುಗೆ ಮಾಡಿ:ಹೆಂಡತಿಯ ಮನವೊಲಿಸಲು ಇನ್ನೊಂದು ಉತ್ತಮ ಉಪಾಯವೆಂದರೆ ಆಕೆಗೆ ನಿಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿ. ಮನೆಯಲ್ಲಿ ಹೆಂಡತಿ ಯಾವಾಗಲೂ ನಿಮಗೆ ಅಡುಗೆ ಮಾಡಿಕೊಡುತ್ತಾರೆ. ಪ್ರತಿ ದಿನ ಅಡುಗೆ ಮಾಡುವುದು ಅವರಿಗೂ ಬೇಜಾರು ತಂದಿರುತ್ತದೆ. ಹೀಗಾಗಿ ನೀವು ಅಡುಗೆ ಮಾಡಿಕೊಟ್ಟರೆ ಇದು ಅವರ ಕೋಪವನ್ನು ತಣಿಸಬಹುದು.
ಶಾಪಿಂಗ್ ಮಾಡಿಸಿ: ಶಾಪಿಂಗ್ ಮಾಡೋದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಶಾಪಿಂಗ್ ಮಾಡುವುದೆಂದರೆ ಬಲು ಇಷ್ಟ. ತಮ್ಮ ವಾರ್ಡ್ ರೋಬ್ ನಲ್ಲಿ ಎಷ್ಟೇ ಬಟ್ಟೆ ಇದ್ದರೂ ಮತ್ತಷ್ಟು ಶಾಪಿಂಗ್ ಮಾಡಬೇಕೆಂಬ ಹಂಬಲ ಆಕೆಗಿರುತ್ತದೆ. ಇದು ಆಕೆಯ ಕೋಪವನ್ನು ಶೀಘ್ರವಾಗಿ ಕಡಿಮೆ ಮಾಡಿ ಮೂಡ್‌ನ್ನು ಸಹಜ ಸ್ಥಿತಿಗೆ ತರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.