Viral Video : 33 ವರ್ಷದ ಮಗಳನ್ನು ರೈಲು ಹತ್ತಿಸಿದ ತಂದೆ ವಿಡಿಯೋ ವೈರಲ್

By Roopa HegdeFirst Published Feb 25, 2023, 3:33 PM IST
Highlights

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋ ಪೋಸ್ಟ್ ಆಗ್ತಿರುತ್ತದೆ. ಅದ್ರಲ್ಲಿ ಕೆಲ ವಿಡಿಯೋ ಬಳಕೆದಾರರಿಗೆ ಆಪ್ತವಾಗುತ್ತವೆ. ಈಗ ತಂದೆಯೊಬ್ಬನ ಪ್ರೀತಿ ಎಲ್ಲರ ಗಮನ ಸೆಳೆದಿದೆ. ತನ್ನ ಇಳಿ ವಯಸ್ಸನ್ನು ಲೆಕ್ಕಿಸಿದೆ ಮಗಳ ಸುರಕ್ಷತೆ ಬಗ್ಗೆ ಕಾಳಜಿವಹಿಸಿದ ತಂದೆಗೆ ಎಲ್ಲರೂ ಕೈಮುಗಿಯುತ್ತಿದ್ದಾರೆ.
 

ಎರಡು ದಿನಗಳ ಹಿಂದಷ್ಟೆ, 22 ವರ್ಷದ ಮಗನಿಗೆ ರೈಲಿನಲ್ಲಿ ಅಪರಿಚಿತರಿಂದ ತಿಂಡಿ ತಿನ್ಬೇಡ ಎಂದು ಪಾಲಕರು ಕಳುಹಿಸಿದ್ದ ಸಂದೇಶ ವೈರಲ್ ಆಗಿತ್ತು. ಆಗ ತಂದೆ – ತಾಯಿಯ ಕಾಳಜಿ ಬಗ್ಗೆ ಎಲ್ಲರೂ ಮಾತನಾಡಿದ್ರು. ಈಗ ಮತ್ತೊಂದು ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ತಂದೆ – ತಾಯಿ ಎಂದೂ ನಿವೃತ್ತಿ ಹೊಂದೋದಿಲ್ಲ. ಜೀವನ ಪರ್ಯಂತ ಯಾವುದೇ ನಿರೀಕ್ಷೆ ಇಲ್ಲದೆ ಮಕ್ಕಳ ಸೇವೆಯನ್ನು ಅವರು ಮಾಡ್ತಾರೆ. ತಮ್ಮ ಆರೋಗ್ಯಕ್ಕಿಂತ ಮಕ್ಕಳ ಆರೋಗ್ಯಕ್ಕೆ ಅವರು ಮಹತ್ವ ನೀಡ್ತಾರೆ. ಮಕ್ಕಳ ಪಾಲನೆ, ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮೊಮ್ಮಕ್ಕಳ ಪಾಲನೆ ಹೀಗೆ ಒಂದಾದ್ಮೇಲೆ ಒಂದರಂತೆ ಅವರು ಕೆಲಸ ಮಾಡ್ತಿರುತ್ತಾರೆ. 

ತಂದೆ (Father) ಯಾದವನಿಗೆ ಮಗಳೆಂದ್ರೆ ಹೆಚ್ಚು ಪ್ರೀತಿ (Love) ಎನ್ನುವ ಮಾತಿದೆ. ಮಗನಿಗಿಂತ ಹೆಣ್ಣು ಮಗಳನ್ನು ಆತ ಮತ್ತಷ್ಟು ಕಾಳಜಿಯಿಂದ ನೋಡಿಕೊಳ್ತಾನೆ. ಮಗಳು ಎಷ್ಟೇ ದೊಡ್ಡವಳಾಗಿರಲಿ ಆಕೆಯ ಸುರಕ್ಷತೆ ತಂದೆಯ ಜವಾಬ್ದಾರಿ. ಇದೇ ಕಾರಣಕ್ಕೆ ಅದೆಷ್ಟೋ ಮಕ್ಕಳಿಗೆ ತಂದೆ ಹೀರೋ ಆಗಿರ್ತಾನೆ. ಈಗ ಮತ್ತೊಬ್ಬ ಹೀರೋ ತಂದೆಯ ವಿಡಿಯೋ ವೈರಲ್ ಆಗಿದೆ. 33 ವರ್ಷದ ಮಗಳನ್ನು ರೈಲ್ವೆ (Railway) ನಿಲ್ದಾಣಕ್ಕೆ ಡ್ರಾಪ್ ಮಾಡಿದ ತಂದೆ ಸಾಮಾಜಿಕ ಜಾಲತಾಣ (Social Network) ದಲ್ಲಿ ಎಲ್ಲರ ಮೆಚ್ಚಿನ ಅಪ್ಪನಾಗಿದ್ದಾರೆ. 

ಕೆಟ್ಟು ನಿಂತ ಲಿಫ್ಟ್‌, ತಮ್ಮದೇ ಆರತಕ್ಷತೆ ಮಿಸ್ ಮಾಡ್ಕೊಂಡ NRI ಜೋಡಿ

ವೈರಲ್ ಆಯ್ತು ತಂದೆಯ ಕಾಳಜಿ : ಶ್ರೀಲಕ್ಷ್ಮಿ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 33 ವರ್ಷದ ಮಹಿಳೆ, ತಂದೆ ರೈಲ್ವೆ ನಿಲ್ದಾಣಕ್ಕೆ ಡ್ರಾಪ್ ಮಾಡಿದ ವಿಡಿಯೋ ಹಂಚಿಕೊಂಡಿದ್ದಾಳೆ. ಬೆಳಿಗ್ಗೆ ಕಾರಿನಲ್ಲಿ ಮಗಳನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಬಂದ ತಂದೆ, ರೈಲ್ವೆ ನಿಲ್ದಾಣದ ಒಳಕ್ಕೆ ಬಂದಿದ್ದಾರೆ. ರೈಲಿನ ಪ್ಲಾಟ್ಫಾರ್ಮ್ ಹುಡುಕಿ, ರೈಲಿನೊಳಗೆ ಹೋಗಿ, ಮಗಳ ಸೀಟ್ ಪತ್ತೆ ಮಾಡಿದ್ದಾರೆ. ಮಗಳು ಆರಾಮವಾಗಿ ಕುಳಿತುಕೊಂಡಿದ್ದಾಳೆ ಎಂಬುದು ಖಚಿತವಾದ್ಮೇಲೆ ಅವರು ರೈಲ್ವೆ ನಿಲ್ದಾಣದಿಂದ ಹೊರಗೆ ಹೋಗಿದ್ದಾರೆ.
ನನಗೆ 33 ವರ್ಷ. ನನ್ನ ತಂದೆ ನನ್ನನ್ನು ಕಿಂಡರ್ಗಾರ್ಡನ್ ಗೆ ಕರೆದುಕೊಂಡು ಹೋಗುವಂತೆ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡುನ ಬಂದಿದ್ದಾರೆ. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಅವರು ನನ್ನನ್ನು ಡ್ರಾಪ್ ಮಾಡಲು ಬಂದಿದ್ದಾರೆ ಎಂದು ಶ್ರೀಲಕ್ಷ್ಮಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೀಕ್ಷಣೆ ಮಾಡಿದ ಜನರು ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಶ್ರೀಲಕ್ಷ್ಮಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರೀತಿ ನೀಡಿದ ಬಳಕೆದಾರರಿಗೆ ಧನ್ಯವಾದ ಹೇಳಿದ್ದಾರೆ. ನನ್ನ ತಂದೆಗೆ ತಿಳಿಯದೆ ನಾನು ಈ ವಿಡಿಯೋ ಮಾಡಿದ್ದೇನೆ. ಗೊತ್ತಾಗ್ತಿದ್ದಂತೆ ಅವರ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ತಂದೆಯ ಈ ನಿರ್ಮಲ ಪ್ರೀತಿ ನೋಡಿ, ವಿಡಿಯೋ ಮಾಡುವಾಗ ನನಗೆ ಅಳು ಬಂದಿತ್ತು ಎನ್ನುತ್ತಾರೆ ಶ್ರೀಲಕ್ಷ್ಮಿ.

 

ಮಗಳು ಪೋಸ್ಟ್ ಮಾಡಿದ ವಿಡಿಯೋಕ್ಕೆ ಅಪ್ಪ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ನೀನು ನನ್ನ ಲೈಫ್ ಮೈ ಡಿಯರ್ ಎಂದು ತಂದೆ ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರು ಕೂಡ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು, ತಂದೆಯಂದಿರುವ ತಾವು ಮಾಡಿದ ಕೆಲಸಕ್ಕೆ ಮನ್ನಣೆ ಪಡೆಯೋದಿಲ್ಲ. ತಾವು ಅನುಭವಿಸುವ ನೋವನ್ನು ಅವರು ಯಾರಿಗೂ ಹೇಳೋದಿಲ್ಲ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, ಪ್ರತಿಯೊಬ್ಬ ತಂದೆಯೂ ಸರ್ವಶಕ್ತನು. ಅವರಿಗೆ ದೀರ್ಘ ಆರೋಗ್ಯಕರ ಜೀವನ ಸಿಗಲಿ ಎಂದು ಹಾರೈಸಿದ್ದಾರೆ. 

Parenting Tips : ಒಂದೇ ಮಗು ಅಂತ ಸಿಕ್ಕಾಪಟ್ಟೆ ಮುದ್ದು ಮಾಡೋ ಪೋಷಕರಿಗೆ ಕಿವಿ ಮಾತು!

ಕೆಲ ದಿನಗಳ ಹಿಂದೆ ವಿಜ್ಯುವಲ್ ಆರ್ಟಿಸ್ಟ್ ಒಬ್ಬರು ಇಂಥಹದ್ದೇ ವಿಡಿಯೋ ಹಂಚಿಕೊಂಡಿದ್ದರು. ತಂದೆ ಪ್ರತಿ ಬಾರಿ ನನ್ನನ್ನು ರೈಲ್ವೆ ನಿಲ್ದಾಣಕ್ಕೆ ಬಿಡ್ತಾರೆ. ರೈಲು ಹೊರಡುವವರೆಗೂ ನನಗೆ ಕಂಪನಿ ನೀಡ್ತಾರೆ ಎಂದು ಬರೆದಿದ್ದರು.
 

click me!