ಚಟಗಳು ಮನುಷ್ಯನ ಆರೋಗ್ಯವನ್ನು ಮಾತ್ರವಲ್ಲ ಆರ್ಥಿಕ ಸ್ಥಿತಿಯನ್ನು ಹಾಳು ಮಾಡುತ್ವೆ. ದಾಂಪತ್ಯ ಸಂತೋಷವನ್ನು ಕೆಡಿಸುತ್ತದೆ. ಚಟಕ್ಕೆ ಬೀಳುವ ವ್ಯಕ್ತಿ ಕುಟುಂಬದ ಸುಖ ಮರೆತು ಹಣ ಪೋಲು ಮಾಡ್ತಾನೆ. ಮಹಿಳೆಯೊಬ್ಬಳು ಗಂಡನ ದುಷ್ಚಟಕ್ಕೆ ಬೇಸತ್ತಿದ್ದಾಳೆ.
ದುಷ್ಚಟಗಳು ವ್ಯಕ್ತಿಯನ್ನು ಮಾತ್ರವಲ್ಲ ಇಡೀ ಕುಟುಂಬವನ್ನೇ ನಾಶ ಮಾಡುತ್ತದೆ. ಮದ್ಯಪಾನ, ಧೂಮಪಾನಗಳು ದೇಹವನ್ನು ಸುಡುವ ಜೊತೆಗೆ ಜೀವ ತೆಗೆಯುತ್ತವೆ. ಇದ್ರಿಂದ ಮನೆಗೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಳ್ಳುವ ಕುಟುಂಬಸ್ಥರು ಜೀವನ ನಡೆಸೋದು ಸವಾಲಾಗುತ್ತದೆ. ಮದ್ಯಪಾನ, ಧೂಮಪಾನ ಮಾತ್ರ ಚಟವಲ್ಲ. ಜೂಜು ಕೂಡ ಇಡೀ ಜೀವನವನ್ನು ಬೀದಿಗೆ ತಂದು ನಿಲ್ಲಿಸುವ ದುಷ್ಚಟವಾಗಿದೆ. ಇದು ಶ್ರೀಮಂತ ವ್ಯಕ್ತಿಯನ್ನು ಸಾಲದ ಸುಳಿಗೆ ತಂದು ನಿಲ್ಲಿಸುವ ಶಕ್ತಿ ಹೊಂದಿದೆ. ಒಮ್ಮೆ ಈ ಚಟ ಶುರುವಾದ್ರೆ ಮತ್ತೆ ನಿಲ್ಲಿಸೋದು ಬಹಳ ಕಷ್ಟ. ಜೂಜಾಡಿ ಅಭ್ಯಾಸವಾದ ವ್ಯಕ್ತಿ ಮೊದಲು ತನ್ನ ಕೈನಲ್ಲಿರುವ ಹಣ ಕಳೆದುಕೊಳ್ತಾನೆ. ನಂತ್ರ ಮನೆ ಮಾರಾಟ ಮಾಡ್ತಾನೆ. ಹೆಂಡತಿನ್ನು ಪಣಕ್ಕಿಡುವ ಸ್ಥಿತಿಗೆ ಬಂದವರಿದ್ದಾರೆ. ಈ ಮಹಿಳೆ ಕೂಡ ಗಂಡನ ಜೂಜು ಚಟಕ್ಕೆ ಬೇಸತ್ತಿದ್ದಾಳೆ. ಮುಂದೇನು ಮಾಡ್ಬೇಕು ಎಂಬುದು ಗೊತ್ತಾಗದೆ ಪರದಾಡುತ್ತಿದ್ದಾಳೆ.
ಆಕೆಗೆ ಮದುವೆ (Marriage) ಯಾಗಿ ಮೂರು ವರ್ಷ ಕಳೆದಿದೆ. ದಾಂಪತ್ಯ ಜೀವನ (Life) ಸುಖವಾಗಿದೆಯಂತೆ. ಪತಿ, ಪ್ರೀತಿ ಹಾಗೂ ಕಾಳಜಿ ತೋರಿಸ್ತಾನಂತೆ. ಕುಟುಂಬಸ್ಥರಿಂದ ಕೂಡ ಯಾವುದೇ ತೊಂದರೆ ಇಲ್ವಂತೆ. ಆದ್ರೆ ನಾನು ಮಾತ್ರ ಸಂಪೂರ್ಣ ಸಂತೋಷವಾಗಿಲ್ಲ ಎನ್ನುತ್ತಾಳೆ ಮಹಿಳೆ. ಅದಕ್ಕೆ ಆತನ ಜೂಜು ಕಾರಣ. ಅತಿಯಾಗಿ ಜೂಜಾಡುವ ಆಕೆ ಪತಿ, ಲಕ್ಷಾಂತರ ಹಣವನ್ನು ಕಳೆಯುತ್ತಿದ್ದಾನಂತೆ. ಆನ್ಲೈನ್ ಜೂಜು ಆತನಿಗೆ ಅಭ್ಯಾಸವಾಗಿದೆಯಂತೆ. ಬಂದ ಸಂಬಳವೆಲ್ಲ ಆನ್ಲೈನ್ ಜೂಜುಗೆ ಖಾಲಿಯಾಗ್ತಿದೆಯಂತೆ. ಒಮ್ಮೆ 40 ಲಕ್ಷ ಸಾಲ ಮಾಡಿದ್ದ ಎನ್ನುತ್ತಾಳೆ ಮಹಿಳೆ. ಕಳೆದ ಮೂರು ವರ್ಷಗಳಲ್ಲಿ ಆಕೆ ಪತಿ ಕಡಿಮೆ ಎಂದ್ರೂ 1 ಕೋಟಿಗೂ ಹೆಚ್ಚು ಹಣವನ್ನು ಜೂಜಿನಲ್ಲಿ ಕಳೆದಿದ್ದಾನಂತೆ. ಈ ವಿಷ್ಯವನ್ನು ನಾನು ಆತನ ಪಾಲಕರಿಗೆ ತಿಳಿಸಿಲ್ಲ. ಹಣ ಉಳಿಸುವ ಬದಲು ಮಗ ಹಣ ಕಳೆಯುತ್ತಿದ್ದಾನೆ ಎಂಬುದು ಗೊತ್ತಾದ್ರೆ ಅವರು ತೊಂದುಕೊಳ್ತಾರೆ ಎನ್ನುತ್ತಾಳೆ ಮಹಿಳೆ. ಅವರ ಆರೋಗ್ಯ ಕೂಡ ಹಾಳಾಗ್ಬಹುದು. ಹಾಗಾಗಿ ಎಲ್ಲ ನೋವನ್ನು ನಾನೇ ಅನುಭವಿಸುತ್ತಿದ್ದೇನೆ ಎನ್ನುತ್ತಾಳೆ ಮಹಿಳೆ.
CHANAKYA NITI: ಗಂಡು ಹೆಣ್ಣಿನ ಸುಖ ಸಂಸಾರಕ್ಕೆ ಆಚಾರ್ಯ ಚಾಣಕ್ಯರು ನೀಡಿದ 9 ಲೈಂಗಿಕ ಸೂತ್ರ!
ತಜ್ಞರ ಸಲಹೆ : ಜೂಜು ಕುಟುಂಬವನ್ನು ನಾಶಪಡಿಸುತ್ತದೆ. ಇದ್ರಿಂದ ಹೊರಗೆ ಬರುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು. ನಿಮ್ಮ ಪತಿ ಜೊತೆ ಈ ವಿಷ್ಯವನ್ನು ನೀವು ಚರ್ಚಿಸಬೇಕು. ಜೂಜಿನಿಂದ ಕುಟುಂಬಕ್ಕೆ ಏನೆಲ್ಲ ತೊಂದರೆಯಾಗ್ತಿದೆ, ನಿಮ್ಮಿಬ್ಬರ ಪ್ರೀತಿ ಮೇಲೆ ಇದು ಯಾವ ಪರಿಣಾಮ ಬೀರುತ್ತಿದೆ ಎಂಬುದನ್ನು ವಿವರಿಸಿ ಎನ್ನುತ್ತಾರೆ ತಜ್ಞರು. ಯಾವುದೇ ಕಾರಣಕ್ಕೂ ಮಾತುಕತೆ ವೇಳೆ ಅಸಭ್ಯ ಪದಗಳನ್ನು ಬಳಸಬೇಡಿ. ಅವರು ಒತ್ತಡದಲ್ಲಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ ಎನ್ನುತ್ತಾರೆ ತಜ್ಞರು.
ಪತಿಗೆ ಬೆಂಬಲ ನೀಡಿ : ಪತಿಗೆ ಬೆಂಬಲ ನೀಡಿ ಅಂದ್ರೆ ಜೂಜಾಡಲು ಬೆಂಬಲ ನೀಡಿ ಎಂದಲ್ಲ. ಪತಿಯ ಜೊತೆ ಸಮಯ ಕಳೆಯಿರಿ. ಅವರ ಪರಿಸ್ಥಿತಿಯನ್ನು ಅರಿಯಿರಿ. ಚಟದಿಂದ ಹೊರಗೆ ಬರಬೇಕೆಂದ್ರೆ ಅವರ ಗಮನವನ್ನು ಬೇರೆಡೆ ಸೆಳೆಯಬೇಕು. ಇಬ್ಬರು ಸೇರಿ ಉಳಿತಾಯ ಮಾಡುವಂತೆ ಅವರನ್ನು ಪ್ರೋತ್ಸಾಹಿಸಿ. ಸಣ್ಣ ಮೊತ್ತವನ್ನು ಇಬ್ಬರು ಉಳಿತಾಯ ಮಾಡಲು ಶುರು ಮಾಡಿ. ಇದ್ರಿಂದ ಅವರ ಮನಸ್ಸು ಉಳಿತಾಯದ ಕಡೆ ವಾಲಬಹುದು.
ಹಳೆ ಲವ್ ಬಗ್ಗೆ ಜೀವನ ಸಂಗಾತಿ ಬಳಿ ಹೇಳಬೇಕೇ? ಬೇಡವೇ?
ಕುಟುಂಬಸ್ಥರ ಸಹಾಯ ಪಡೆಯಿರಿ : ಎಲ್ಲವನ್ನೂ ನೀವು ಮೈಮೇಲೆ ಎಳೆದುಕೊಂಡು ಕೆಲಸ ಮಾಡುವುದು ಒಳ್ಳೆಯದಲ್ಲ. ಕುಟುಂಬಸ್ಥರ ಸಹಾಯ ಅಗತ್ಯ. ಜೂಜಾಟದ ಬಗ್ಗೆ ಮನೆಯವರಿಗೆ ತಿಳಿಸದೆ ಹೋದ್ರೂ ಅವರನ್ನು ದಾರಿಗೆ ತರುವ ಪ್ಲಾನ್ ನಲ್ಲಿ ನೀವು ಕುಟುಂಬಸ್ಥರನ್ನು ಸೇರಿಸಬಹುದು. ಕುಟುಂಬದ ಹೆಸರಿನಲ್ಲಿ ಬಜೆಟ್ ತಯಾರಿಸಿ ಅದ್ರಂತೆ ಹಣ ಖರ್ಚು ಮಾಡಲು ಪತಿಗೆ ಪ್ರೋತ್ಸಾಹ ನೀಡಬಹುದು. ಇದು ಸಾಧ್ಯವಾಗಿಲ್ಲವೆಂದ್ರೆ ಕೌನ್ಸಿಲರ್ ನೆರವು ಪಡೆಯಿರಿ.