
ಲೈಂಗಿಕ ಜೀವನ ಸುಖಮಯವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಲೈಂಗಿಕ ಜೀವನ ಆನಂದಮಯವಾಗಿದ್ದರೆ ದಾಮಪತ್ಯ ಗಟ್ಟಿಗಾಇರುತ್ತದೆ ಎಂದು ನಂಬಲಾಗುತ್ತದೆ. ಕೆಲವೊಂದು ಬಾರಿ ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ ಅಥವಾ ಶಕ್ತಿಯ ಕೊರತೆ ಕಾಡುವುದಿದೆ. ಇದಕ್ಕೆ ಅನೇಕ ಕಾರಣವಿದೆ. ಅದರಲ್ಲಿ ಕೆಲ ಜೀವಸತ್ವಗಳು ಕೂಡ ಮಹತ್ವದ ಪಾತ್ರವನ್ನು ವಹಿಸುತ್ತವೆ. ತಜ್ಞರ ಪ್ರಕಾರ. ದೇಹದಲ್ಲಿನ ಜೀವಸತ್ವಗಳ ಕೊರತೆ ವಿಶೇಷವಾಗಿ ವಿಟಮಿನ್ ಡಿ ಕೊರತೆಯಿದ್ದರೆ ಲೈಂಗಿಕ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ವಿಟಮಿನ್ ಡಿ (Vitamin D ) ಯನ್ನು ಸನ್ಶೈನ್ ವಿಟಮಿನ್ ಎಂದು ಕರೆಯಲಾಗುತ್ತದೆ. ಲೈಂಗಿಕ ಆರೋಗ್ಯದ ಮೇಲೆ ಇದರ ಪರಿಣಾಮ ಆಳವಾಗಿದೆ. ಹಾಗಾಗಿಯೇ ಇದನ್ನು ಲೈಂಗಿಕ (Sexual) ವಿಟಮಿನ್ ಎಂದೂ ಕರೆಯುವುದಿದೆ. ಸಂಭೋಗ ಬೆಳೆಸಲು ನೀವು ಸಮಸ್ಯೆ ಅನುಭವಿಸುತ್ತಿದ್ದರೆ ಮೊದಲು ನಿಮ್ಮ ದೇಹದಲ್ಲಿರುವ ವಿಟಮಿನ್ ಡಿ ಪ್ರಮಾಣವನ್ನು ಪರೀಕ್ಷೆ (Test) ಮಾಡಿಕೊಳ್ಳಿ. ಅಧ್ಯಯನ (Study) ದಲ್ಲೂ ವಿಟಮಿನ್ ಡಿ ಕೊರತೆ ಶಾರೀರಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ನಾವಿಂದು ಅಧ್ಯಯನ ಏನು ಹೇಳಿದೆ ಎಂಬುದನ್ನು ನಿಮಗೆ ಹೇಳ್ತೇವೆ.
ಹೆಣ್ಣಿಗೆ ಈ ಗುಣವಿದ್ದರೆ ಮಾತ್ರ ಮದುವೆಯಾಗಿ; ಹುಡುಗರೇ ಎಚ್ಚರ ಎಂದಿದ್ದಾರೆ ಚಾಣಕ್ಯ..!
ಯುರೋಪಿಯನ್ ಜರ್ನಲ್ ಆಫ್ ಎಂಡೋಕ್ರೈನಾಲಜಿಯಲ್ಲಿ ಈ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ. ಅಧ್ಯಯನದ ಪ್ರಕಾರ, ದೇಹದಲ್ಲಿ ವಿಟಮಿನ್ ಡಿ ಕೊರತೆಯು ಪುರುಷರು ಮತ್ತು ಮಹಿಳೆಯರ ಲೈಂಗಿಕ ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜನರು ವಿಟಮಿನ್ ಡಿ ಕೊರತೆಯಾದಾಗ ಸೆಕ್ಸ್ ಮೇಲಿನ ಆಸಕ್ತಿ ಕಳೆದುಕೊಳ್ತಾರೆ.
ಪುರುಷರ ಸೆಕ್ಸ್ ಲೈಫ್ ಮೇಲೆ ವಿಟಮಿನ್ ಡಿ ಪರಿಣಾಮ : ಕ್ಲೀವ್ಲ್ಯಾಂಡ್ ಹಾರ್ಟ್ ಲ್ಯಾಬ್ ಪ್ರಕಾರ, ವಿಟಮಿನ್ ಡಿ ಜನನಾಂಗಗಳಿಗೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರಕ್ತನಾಳಗಳ ಒಳಪದರವನ್ನು ಸುಧಾರಿಸುವ ಮೂಲಕ ರಕ್ತದ ಹರಿವನ್ನು ಬೆಂಬಲಿಸುತ್ತದೆ. ಪುರುಷರಲ್ಲಿ ವಿಟಮಿನ್ ಡಿ ಕೊರತೆ ಕಂಡು ಬಂದಲ್ಲಿ ಅದು ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಎಲ್ಲರಿಗೂ ತಿಳಿದಿರುವಂತೆ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾದಾಗ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಬಂಜೆತನ ಕಾಡುತ್ತದೆ. ಇದಲ್ಲದೆ ಪುರುಷರು ಲೈಂಗಿಕ ಕ್ರಿಯೆ ಮೇಲೆ ಆಸಕ್ತಿ ಕಲೆದುಕೊಳ್ತಾರೆ. ಅನೇಕ ಲೈಂಗಿಕ ಸಮಸ್ಯೆ ಅವರನ್ನು ಕಾಡುತ್ತದೆ.
70ರ ಅಜ್ಜ ಮದುವೆಯಾಗೋದಾಗಿ ಲವ್ ಮಾಡಿ ಕೈಕೊಟ್ಟ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಜ್ಜಿ
ಮಹಿಳೆಯರ ಸೆಕ್ಸ್ ಲೈಫ್ ಮೇಲೆ ವಿಟಮಿನ್ ಡಿ ಪರಿಣಾಮ ಏನು? : ಇನ್ನು ಮಹಿಳೆಯರ ಮೇಲೂ ವಿಟಮಿನ್ ಡಿ ಕೊರತೆ ಆಳವಾದ ಪರಿಣಾಮವನ್ನೇ ಬೀರುತ್ತದೆ. ವಿಟಮಿನ್ ಡಿ ಕೊರತೆಯು ಮಹಿಳೆಯರಲ್ಲಿ ಈಸ್ಟ್ರೊಜೆನ್ ಕೊರತೆಗೆ ಕಾರಣವಾಗುತ್ತದೆ. ಇದ್ರಿಂದಾಗಿ ಮಹಿಳೆಯರಿಗೆ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ. ವಿಟಮಿನ್ ಡಿ ಕಡಿಮೆಯಿರುವ ಮಹಿಳೆ ಯೋನಿ ಶುಷ್ಕವಾಗಿರುತ್ತದೆ. ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ರೆ ನೋವು ಕಾಣಿಸಿಕೊಳ್ಳುತ್ತದೆ. ಅವರಲ್ಲಿ ಖಿನ್ನತೆಯ ಲಕ್ಷಣಗಳೂ ಕಂಡುಬರುತ್ತವೆ. ಅಧ್ಯಯನ ಒಂದರಲ್ಲಿ ವಿಟಮಿನ್ ಡಿ ಕೊರತೆಯಿರುವ 14 ಮಹಿಳೆಯರು ಮತ್ತು 14 ಆರೋಗ್ಯವಂತ ಮಹಿಳೆಯರ ಪರೀಕ್ಷೆ ನಡೆಸಲಾಗಿದೆ. ಸಾಮಾನ್ಯ ವಿಟಮಿನ್ ಡಿ ಸ್ಥಿತಿಯನ್ನು ಹೊಂದಿರುವ ಮಹಿಳೆಯರಿಗೆ ಹೋಲಿಸಿದರೆ ವಿಟಮಿನ್ ಡಿ ಕೊರತೆಯಿರುವ ಮಹಿಳೆಯರಲ್ಲಿ ಲೈಂಗಿಕ ಬಯಕೆ, ಪರಾಕಾಷ್ಠೆ ಮತ್ತು ತೃಪ್ತಿಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಅಧ್ಯಯನದ ಫಲಿತಾಂಶಗಳು ಹೇಳಿವೆ.
ಇನ್ನು ಮುಟ್ಟು ನಿಂತಿರುವ, ವಿಟಮಿನ್ ಡಿ ಕೊರತೆಯಿರುವ ಮಹಿಳೆಯರು ಮೆಟಾಬಾಲಿಕ್ ಸಿಂಡ್ರೋಮ್ ಅಪಾಯವನ್ನು ಎದುರಿಸುತ್ತಾರೆ. ಹೊಟ್ಟೆಯಲ್ಲಿ ಹೆಚ್ಚಿದ ಕೊಬ್ಬು ಅವರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಪರಿಹಾರವೇನು? : ಲೈಂಗಿಕ ಜೀವನದಲ್ಲಿ ಸಮಸ್ಯೆ ಕಂಡು ಬಂದಾಗ ವಿಟಮಿನ್ ಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದು ಕಡಿಮೆಯಿದ್ದಾಗ ವೈದ್ಯರು ಮಾತ್ರೆಗಳನ್ನು ನೀಡ್ತಾರೆ. ಜೊತೆಗೆ ಸೂರ್ಯನ ಕಿರಣಕ್ಕೆ ಮೈ ಒಡ್ಡುವಂತೆ ಸಲಹೆ ನೀಡ್ತಾರೆ. ವಿಟಮಿನ್ ಡಿ ಹೆಚ್ಚಿರುವ ಆಹಾರವನ್ನು ಕೂಡ ನೀವು ಸೇವನೆ ಮಾಡ್ಬೇಕಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.