ನಮ್ಮ ಕಾಲದಲ್ಲಿ ಹೀಗಿರಲಿಲ್ಲವಪ್ಪ..ಈಗ ಕಾಲ ಕಟ್ಟು ಹೋಗಿದೆ… ಹೀಗಂತ ನಿಮ್ಮ ಪಾಲಕರು ನಿಮಗೆ ಹೇಳಿದ್ರೆ ನೀವು ನಿಮ್ಮ ಮಕ್ಕಳಿಗೆ ಹೇಳ್ತೀರಿ. ಪ್ರತಿಯೊಬ್ಬರಿಗೂ ಅವರ ಕಾಲವೇ ಇಂಪಾರ್ಟೆಂಟ್ ಅದ್ಮೇಲೆ ಪೀಳಿಗೆ ಬಗ್ಗೆ ಅವಹೇಳನ ಮಾಡಿ ಪ್ರಯೋಜನವಿಲ್ಲ ಅಲ್ವಾ?
ಮಾತಿನ ಮೂಲಕವೇ ಜನರನ್ನು ತಿದ್ದುವ.. ಒಂದಿಷ್ಟು ಸಮಯ ತಮ್ಮ ಮಾತಿನಲ್ಲಿ ಜನರನ್ನು ಹಿಡಿದಿಟ್ಟುಕೊಳ್ಳುವ.. ಸಾಕಷ್ಟು ಜ್ಞಾನವನ್ನು ತಲೆಯಲ್ಲಿ ತುಂಬುವ ಅದ್ಭುತ ಕಲೆ ಸುಧಾ ಮೂರ್ತಿಯವರಿಗಿದೆ. ಸುಧಾ ಮೂರ್ತಿ ಯಾವುದೇ ವಿಷ್ಯವನ್ನು ಹೇಳುವುದಾದ್ರೂ ಅದನ್ನು ಮನಸ್ಸಿಗೆ ಮುಟ್ಟುವಂತೆ ಹೇಳ್ತಾರೆ. ಅಲ್ಲೊಂದು ಕಥೆ ಅಥವಾ ಉದಾಹರಣೆ ಬಂದು ಹೋಗಿರುತ್ತದೆ. ಇದ್ರಿಂದ ನಮಗೆ ಅವರು ಏನು ಹೇಳ್ತಿದ್ದಾರೆ ಎಂಬುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಕೆಲ ದಿನಗಳ ಹಿಂದೆ ಸುಧಾ ಮೂರ್ತಿ ಮುಂದಿನ ತಲೆಮಾರಿನ ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೊಮ್ಮಗಳು, ಈಜಿಪ್ಟ್ ಪ್ರವಾಸದ ಜೊತೆ ಬಾಳೆ ಹಣ್ಣು ಹುಟ್ಟಿದ್ದು ಹೇಗೆ ಎಂಬ ಪುಟ್ಟ ಕಥೆ ಮೂಲಕ ಸುಧಾ ಮೂರ್ತಿ ಮುಂದಿನ ಪೀಳಿಗೆಯವರ ಬಗ್ಗೆ ನಮ್ಮಲ್ಲಿರುವ ಕಲ್ಪನೆ ಬದಲಿಸುವ ಪ್ರಯತ್ನ ನಡೆಸಿದ್ದಾರೆ.
ಸುಧಾ ಮೂರ್ತಿ (Sudha Murthy) ಮಾತಿನಲ್ಲೇ ಹೇಳೋದಾದ್ರೆ ಅವರಿಗೆ ಇಬ್ಬರು ಮೊಮ್ಮಕ್ಕಳಿದ್ದಾರೆ. ಒಬ್ಬಳ ಹೆಸರು ಕೃಷ್ಣಾ. ಲಂಡನ್ ನಲ್ಲಿರುವ ಮೊಮ್ಮಗಳು ಎಲ್ಲ ಮಕ್ಕಳಂತೆ ಹೆಚ್ಚು ಮಾತನಾಡುವ ಹಾಗೆ ಕಡಿಮೆ ಕೇಳಿಸಿಕೊಳ್ಳುವ ಸ್ವಭಾವದವಳು. ಆಕೆಗೆ ಬಾಳೆ ಹಣ್ಣು (Banana) ತಿನ್ನುವಂತೆ ಸುಧಾ ಮೂರ್ತಿ ಹೇಳಿದಾಗ, ಯಾಕೆ ತಿನ್ನಬೇಕು ಎಂದು ಕೃಷ್ಣ ಮರು ಪ್ರಶ್ನೆ ಹಾಕಿದ್ದಳಂತೆ. ಆಗ ಸುಧಾ ಮೂರ್ತಿ ಬಾಳೆ ಹಣ್ಣು ಹುಟ್ಟಿದ ಕಥೆಯನ್ನು ಹೇಳಿದ್ದರಂತೆ.
ಹೆಣ್ಣಿಗೆ ಈ ಗುಣವಿದ್ದರೆ ಮಾತ್ರ ಮದುವೆಯಾಗಿ; ಹುಡುಗರೇ ಎಚ್ಚರ ಎಂದಿದ್ದಾರೆ ಚಾಣಕ್ಯ..!
ಬಾಳೆ ಹಣ್ಣು ಹುಟ್ಟಿದ್ದು ಹೇಗೆ ಎಂಬುದು ನಿಮಗೆ ಗೊತ್ತಾ? : ಬಾಳೆ ಹಣ್ಣು ಹುಟ್ಟಿದ್ದು ದುರ್ವಾಸ ಮುನಿಯಿಂದ. ದುರ್ವಾಸ ಹೆಸರೇ ಹೇಳುವಂತೆ ಅವರು ಕೋಪಿಷ್ಠರು. ಅವರು ಬರ್ತಿರೋದು ನೋಡಿದ್ರೆ ಎಲ್ಲರೂ ಅಲ್ಲಿಂದ ಜಾರಿಕೊಳ್ಳುತ್ತಿದ್ದರು. ಯಾಕೆಂದ್ರೆ ಸಣ್ಣ ಕೋಪ ಬಂದ್ರೂ ದುರ್ವಾಸ ಮುನಿ ಶಾಪ ನೀಡ್ತಿದ್ದರು. ಹೀಗಿರೋವಾಗ ಒಂದು ದಿನ ದುರ್ವಾಸ ಮುನಿ ಪತ್ನಿ, ಎಲ್ಲರೂ ನಿಮ್ಮನ್ನು ನೋಡಿದ್ರೆ ಹೆದರುತ್ತಾರೆ, ನಾನು ಇಷ್ಟೊಂದು ದಿನಗಳಿಂದ ನಿಮ್ಮ ಜೊತೆಗಿದ್ದೇನೆ, ನನಗೆ ನೀವು ಉಡುಗೊರೆ ಕೊಡ್ಬೇಕು ಎಂದು ಕೇಳ್ತಾರೆ. ಮೊದಲು ಕೋಪ ಬಂದ್ರೂ ನಂತ್ರ ದುರ್ವಾಸ ಮುನಿ ಇದಕ್ಕೆ ಒಪ್ಪುತ್ತಾರೆ. ಯಾವ ರೀತಿ ಉಡುಗೊರೆ ಬೇಕು ಎಂದು ಕೇಳ್ತಾರೆ.
ಆಗ ದುರ್ವಾಸ ಮುನಿ ಪತ್ನಿ ಹಣ್ಣನ್ನು ಕೇಳ್ತಾರೆ. ಅದ್ರ ಜೊತೆ ಒಂದಿಷ್ಟು ಕಂಡಿಷನ್ ಹಾಕ್ತಾರೆ. ಆ ಹಣ್ಣು ದೇವಲೋಕದಲ್ಲಿ ಹುಟ್ಟಿರಬಾರದು. ಭೂಮಿಯಲ್ಲಿ ಹುಟ್ಟಿರಬೇಕು. ವರ್ಷದಲ್ಲಿ ಒಮ್ಮೆ ಮಾತ್ರ ಹೂಬಿಡಬೇಕು. ಯಾವುದೇ ಬೀಜ ಇದಕ್ಕೆ ಇರಬಾರದು. ಗಿಡದ ಎಲ್ಲ ಭಾಗಗಳೂ ಅಡುಗೆಗೆ ಬಳಕೆಯಾಗುವಂತಿರಬೇಕು. ಮಾವಿನ ಹಣ್ಣು, ಸೇಬು ಹಣ್ಣಿನಂತೆ ಅದು ಇರಬಾರದು. ಇದನ್ನು ಪೂಜೆಗೆ ಇಡದೇ ಹೋದ್ರೆ ಪೂಜೆ ಪೂರ್ಣವಾಗಬಾರದು ಎಂದು ಆಕೆ ಹೇಳ್ತಿದ್ದಂತೆ ದುರ್ವಾಸ ಕದಳಿ ಹಣ್ಣಿನ ಗಿಡವನ್ನು ಸೃಷ್ಟಿ ಮಾಡ್ತಾರೆ. ಪತ್ನಿ ಹೇಳಿದಂತೆ ಎಲ್ಲ ಲಕ್ಷಣವನ್ನೂ ಇದೂ ಹೊಂದಿರುತ್ತದೆ.
Personality Tips: ವ್ಯಕ್ತಿತ್ವಕ್ಕೆ ತಕ್ಕಂತೆ ವೃತ್ತಿ ಆಯ್ಕೆ ಮಾಡಿಕೊಳ್ಳೋದು ಹೇಗೆ?
ಈ ಕಥೆ ಹೇಳಿದ ಸುಧಾಮೂರ್ತಿ, ಬಾಳೆ ಹಣ್ಣಿನಿಂದ ಸಾಕಷ್ಟು ಲಾಭವಿದೆ. ಕಲಿತ ವ್ಯಕ್ತಿಗಳು ಮಾತ್ರ ಇದನ್ನು ತಿನ್ನುತ್ತಾರೆ ಎಂದಾಗ ಸುಧಾ ಮೂರ್ತಿ ಮೊಮ್ಮಗಳು ಕೃಷ್ಣ ಬಾಳೆ ಹಣ್ಣನ್ನು ತಿನ್ನಲು ಒಪ್ಪುತ್ತಾಳೆ.
ಸುಧಾ ಮೂರ್ತಿ ಪ್ರಕಾರ ಪ್ರತಿಯೊಂದು ಪೀಳಿಗೆಯೂ ತನ್ನದೇ ಶಕ್ತಿಯನ್ನು ಹೊಂದಿರುತ್ತದೆ. ನಮ್ಮ ಕಾಲದಲ್ಲಿ ಎಷ್ಟೆಲ್ಲ ಸಮಸ್ಯೆಯಿತ್ತು ಅನ್ನೋದು ಸಂಪೂರ್ಣ ತಪ್ಪು ಎನ್ನುತ್ತಾರೆ ಸುಧಾ ಮೂರ್ತಿ. ಮುಂದಿನ ಪೀಳಿಗೆ ಟೈಂಗೆ ಮಾನ್ಯತೆ ನೀಡೋದಿಲ್ಲ, ಹಣಕ್ಕೆ ಗೌರವ ನೀಡೋದಿಲ್ಲ, ಹಿರಿಯರಿಗೆ ಗೌರವ ನೀಡೋದಿಲ್ಲ, ಕಡಿಮೆ ಸಾಮಾನ್ಯ ಜ್ಞಾನವಿರುತ್ತೆ, ಕಷ್ಟಪಟ್ಟು ದುಡಿಯೋದಿಲ್ಲ ಹಾಗಾಗಿ ಅವರು ಹೇಗೆ ಅಭಿವೃದ್ಧಿ ಹೊಂದುತ್ತಾರೆ ಎಂಬುದು ನನಗೆ ಗೊತ್ತಾಗ್ತಿಲ್ಲ ಎಂದು ಈಜಿಪ್ಟ್ ಪಿರಾಮಿಡ್ ಮೇಲೆ ಬರೆದಿದೆ. ಅದನ್ನು ನೆನಪು ಮಾಡಿಕೊಳ್ಳುವ ಸುಧಾ ಮೂರ್ತಿ, ನನ್ನ ಪಾಲಕರು ಕೂಡ ನನಗೆ ಇದೇ ಮಾತನ್ನು ಹೇಳಿದ್ರು ಎನ್ನುತ್ತಾರೆ.
ಪ್ರತಿಯೊಂದು ಜನರೇಷನ್, ಮುಂದಿನ ಜನರೇಷನ್ ಚೆನ್ನಾಗಿರೋದಿಲ್ಲ ಎಂದೇ ಹೇಳುತ್ತೆ. ನಾವು ತುಂಬಾ ಕಷ್ಟಪಡ್ತಿದ್ವಿ, ನೀವು ಮಾಡ್ತಿಲ್ಲ ಎನ್ನುವ ರೀತಿಯಲ್ಲೇ ಮಾತನಾಡುತ್ತದೆ. ಆದ್ರೆ ಅದು ತಪ್ಪು. ಪ್ರತಿಯೊಂದು ಪೀಳಿಕೆಯಲ್ಲೂ ಧನಾತ್ಮಕ ಹಾಗೂ ಋಣಾತ್ಮಕ ಅಂಶವಿದೆ. ಪ್ರತಿಯೊಂದು ಪೀಳಿಗೆಯೂ ಅದರದೇ ಆದ ಶಕ್ತಿ ಹೊಂದಿದೆ ಎನ್ನುತ್ತಾರೆ ಸುಧಾಮೂರ್ತಿ.