ಇಲ್ಲೊಂದು ಮಗುವಿಗೆ ನೇತ್ರದಾನಿಗಳ ನೆರವಿನಿಂದ ಮೊದಲ ಬಾರಿಗೆ ಜಗತ್ತು ನೋಡುವಂತಾಗಿದ್ದು, ಆ ಮಗುವಿನ ಪ್ರತಿಕ್ರಿಯೆ ಹೇಗಿತ್ತು ಎಂಬ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕೆಲ ಮಕ್ಕಳಿಗೆ ಜನಿಸುತ್ತಲೇ ಕೆಲ ನ್ಯೂನ್ಯತೆಗಳಿರುತ್ತವೆ. ಕೆಲವು ಮಕ್ಕಳು ದೃಷ್ಟಿಹೀನರಾಗಿದ್ದರೆ ಮತ್ತೆ ಕೆಲವರಿಗೆ ಕಿವಿ ಕೇಳುವುದಿಲ್ಲ, ಕಿವಿ ಕೇಳದೇ ಇರುವವರಿಗೆ ಈಗ ಹೊಸ ಹೊಸ ತಂತ್ರಜ್ಞಾನಗಳು ಯಂತ್ರಗಳು ಬಂದಿವೆ. ಆದರೆ ದೃಷ್ಟಿಹೀನ ಮಕ್ಕಳಿಗೆ ಅಂಗಾಂಗ ದಾನಿಗಳ ಅಥವಾ ನೇತ್ರದಾನಿಗಳ ಸಹಾಯ ಬಹಳ ಅಗತ್ಯವಿದೆ. ಹಾಗೆಯೇ ಇಲ್ಲೊಂದು ಮಗುವಿಗೆ ನೇತ್ರದಾನಿಗಳ ನೆರವಿನಿಂದ ಮೊದಲ ಬಾರಿಗೆ ಜಗತ್ತು ನೋಡುವಂತಾಗಿದ್ದು, ಆ ಮಗುವಿನ ಪ್ರತಿಕ್ರಿಯೆ ಹೇಗಿತ್ತು ಎಂಬ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ನಮಗೆ ದೇವರು ಕೊಟ್ಟಿರುವ ಸಹಜವಾಗಿ ಸಿಕ್ಕಿರುವ ಸಮರ್ಪಕ ಕೈಕಾಲು, ಸಧೃಡ ದೇಹ, ಉತ್ತಮ ಆರೋಗ್ಯ ಯಾವುದೇ ರೋಗಗಳಿಲ್ಲದ ಬದುಕೇ ದೊಡ್ಡ ಆಸ್ತಿ. ಇವುಗಳನ್ನು ದುಡ್ಡು ಕೊಟ್ಟು ಪಡೆಯಲು ಸಾಧ್ಯವೂ ಇಲ್ಲ, ಪಡೆದರು ಅದೂ ನೈಜವಾಗಿ ಇರುವುದಿಲ್ಲ, ಇವರಲ್ಲಿಒಂದು ನ್ಯೂನ್ಯತೆ ಇದ್ದವರನ್ನು ನೋಡಿದರೆ ಸಾಕು ನಾವೆಷ್ಟು ಅದೃಷ್ಟವಂತರು ಎಂಬುದು ನಮಗೆ ತಿಳಿಯುತ್ತದೆ. ಹೀಗಿರುವಾಗ ಬಹುತೇಕರು ಶ್ರೀಮಂತಿಕೆ ಇಲ್ಲ ಚೆಂದದ ಮನೆ ಇಲ್ಲ, ಪ್ರೀತಿಸೋ ಹುಡುಗಿ/ಹುಡುಗ ಇಲ್ಲ ಎಂದು ಕೊರಗುತ್ತಾರೆ. ಹೀಗಿರುವಾಗ ಇಲ್ಲೊಂದು ಪುಟ್ಟ ಪಾಪುವಿಗೆ ಹುಟ್ಟುತ್ತಲೇ ಸ್ಪಷ್ಟವಾದ ಕಣ್ ದೃಷ್ಟಿ ಇಲ್ಲ, ಇಂತಹ ಮಗುವಿಗೆ ಅಪರೇಷನ್ ಮಾಡಿಯೋ ಅಥವಾ ಸ್ಪಷ್ಟವಾಗಿ ದೃಷ್ಟಿ ಕಾಣಿಸುವ ಕನ್ನಡಕದಿಂದಲೂ ಮೊದಲ ಬಾರಿಗೆ ತನ್ನ ಸುತ್ತಲ ಪ್ರಪಂಚ ಚೆನ್ನಾಗಿ ಕಾಣಿಸಲು ಆರಂಭಿಸಿದೆ. ದೃಷ್ಟಿ ಸಮರ್ಪಕವಾಗಿ ಕಾಣಿಸುವ ಕನ್ನಡಕ ಹಾಕಿದ್ದು, ಈ ಕನ್ನಡದ ಮೂಲಕ ಮೊದಲ ಬಾರಿ ತನ್ನನ ಹೆತ್ತಮ್ಮನನ್ನು ನೋಡುವ ಈ ಕಂದನ ಮುಖದ ಭಾವನೆಗಳೇ ಒಮ್ಮೆಗೆ ಬದಲಾಗಿ ಹೋಗಿದ್ದು, ನೋಡುಗರಲ್ಲಿ ಕಣ್ಣೀರು ತರಿಸುತ್ತಿದೆ.
ವೀಡಿಯೋದಲ್ಲಿ ಕಾಣಿಸುವಂತೆ ಮೊದಲ ಬಾರಿಗೆ ಮಗುವಿಗೆ ಕನ್ನಡಕ ಹಾಕಿದಾಗ ಕಿರಿಕಿರಿ ಎನಿಸಿ ತೆಗೆದೆಸೆಯಲು ನೋಡುತ್ತದೆ. ಆದರೆ ಜೊತೆಯಲ್ಲಿದ್ದವರು ಬಿಡದೇ ಕನ್ನಡಕವನ್ನು ಮಗುವಿನ ಕಣ್ಣಿಗೆ ಸರಿ ಹೋಗುವಂತೆ ಕೂರಿಸಿದಾಗ ಮೊದಲ ಬಾರಿ ಅಮ್ಮನ ನೋಡಿ ಆ ಮಗುವಿನ ಮೊಗದಲ್ಲಿ ಕಿರಿಕಿರಿಯ ಲವಲೇಶವೂ ಕಾಣದೇ ಬಾಯ್ತುಂಬ ಮುದ್ದು ಮುದ್ದಾದ ನಗು ಕಾಣಿಸುತ್ತಿದೆ. ಇನ್ನು ಹಲ್ಲು ಹುಟ್ಟದ ಈ ಮಗು ಕನ್ನಡಕ ಧರಿಸಿದ ನಂತರ ಇನ್ನು ಹಲ್ಲು ಹುಟ್ಟದಿರುವ ತೆರೆದ ಬಾಯಿಯಿಂದ ಮಗು ಆಶ್ಚರ್ಯದಿಂದ ಕಣ್ಣರಳಿಸಿ ಅಮ್ಮನನ್ನು ನೋಡುತ್ತಿದೆ. ಈ ವೀಡಿಯೋವನ್ನು @Vinod_r108 ಎಂಬ ಟ್ವಿಟ್ಟರರ ಪೇಜ್‌ನಿಂದ ಈ 30 ಸೆಕೆಂಡ್‌ಗಳ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಈ ಪೋಸ್ಟನ್ನು ಸಾವಿರಾರು ಜನ ವೀಕ್ಷಿಸುವುದರ ಜೊತೆ ರಿಟ್ವಿಟ್ ಮಾಡಿದ್ದಾರೆ.
ವೀಡಿಯೋ ನೋಡಿದ ಬಹುತೇಕರು ಇದು ತುಂಬಾ ಸುಂದರವಾದ ವೀಡಿಯೋ, ವೀಡಿಯೋ ನೋಡಿ ಭಾವುಕನಾದೆ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸುಂದರ ವೀಡಿಯೋವನ್ನು ನೀವು ಒಮ್ಮೆ ನೋಡಿ
Baby boy sees his mother clearly for the first time wearing his new glasses, smile says it all ❤️🥰pic.twitter.com/8u9VLYG83d
— Lohith_Rebelified🔥🦖 (@Rebelism_18)