ಜೀವನದಲ್ಲಿ ನಾವು ಕಲ್ಪನೆ ಮಾಡಿಕೊಳ್ಳದ ಅನೇಕ ಘಟನೆಗಳು ನಡೆದಿರುತ್ತವೆ. ಎಲ್ಲರೂ ಖುಷಿಯಾಗಿರುವಾಗ್ಲೇ, ಎಲ್ಲವೂ ಸುಖಾಂತ್ಯ ಕಾಣ್ತಿದೆ ಎನ್ನುವಾಗ್ಲೇ ದೊಡ್ಡ ಆಘಾತವಾಗಿರುತ್ತೆ. ಈ ಮಹಿಳೆ ಜೀವನದಲ್ಲೂ ವಿಧಿಯ ಆಟ ಬಹಳ ಕ್ರೂರವಾಗಿದೆ.
ಮದುವೆ ಎನ್ನುವುದು ಹೆಣ್ಣಿನ ಜೀವನದ ಅತ್ಯಂತ ಮುಖ್ಯ ಘಟ್ಟ. ಮದುವೆಯ ನಂತರ ಆಕೆಯ ಜೀವನದಲ್ಲಾಗುವ ಅನೇಕ ಬದಲಾವಣೆಗಳಿಗೆ ಆಕೆ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸಿದ್ಧಳಾಗಿರಬೇಕಾಗುತ್ತದೆ. ಹಾಗೇ ಒಬ್ಬ ಹೆಣ್ಣು ತನ್ನ ಮದುವೆ, ಗಂಡ ಹಾಗೂ ತನ್ನ ಮುಂದಿನ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ಅನೇಕ ರೀತಿಯ ಯೋಜನೆಗಳನ್ನು ಕೂಡ ರೂಪಿಸುತ್ತಾಳೆ. ಆದರೆ ಕೆಲವೊಮ್ಮೆ ಎಲ್ಲವೂ ನಾವು ಅಂದುಕೊಂಡಂತೆ ಆಗೋದಿಲ್ಲ. ನಮ್ಮ ಬದುಕಿನಲ್ಲಿ ವಿಧಿಯ ಆಡುವ ಆಟ ಬೇರೆಯೇ ಇರುತ್ತದೆ.
ಅಮೆರಿಕ (America) ದ ನಿವಾಸಿಯೊಬ್ಬಳ ಜೀವನದಲ್ಲಿಯೂ ವಿಧಿಯ ಆಟ ತೀವ್ರ ಕ್ರೂರವಾಗಿತ್ತು. ಆಕೆ ತನ್ನ ಪ್ರೇಮಿ (Lover) ಯೊಂದಿಗೆ ಇಷ್ಟಪಟ್ಟು ವಿಜ್ರಂಭಣೆಯಿಂದ ಮದುವೆಯಾಗಿದ್ದೇನೋ ನಿಜ. ಆದರೆ ಆಕೆ ಕೇವಲ 1 ಗಂಟೆ ಮಾತ್ರ ವಿವಾಹಿತಳಾಗಿದ್ದಳು. ಮದುವೆಯ ದಿನವೇ ಆಕೆಯ ಪಾಲಿಗೆ ಮರೆಯಲಾಗದ ದುಃಸ್ವಪ್ನವಾಗಿತ್ತು.
ಇಷಾ ಕೊಪ್ಪೀಕರ್-ಟಿಮ್ಮಿ ನಾರಂಗ ಮಧ್ಯೆ ಪ್ರೀತಿ ಜಿಂಟಾ ಹೆಸರೇಕೆ ಬಂತು; ರಿಯಲ್ ಕಥೆ ಶುರುವಾಗಿದ್ದೇ ಅಲ್ಲಿ..!
ಮದುವೆ (Marriage) ಯ ದಿನವೇ ನಡೆದಿತ್ತು ಆ ದುರ್ಘಟನೆ : ಜಾನಿ ಡೇವಿಸ್ ಎನ್ನುವ ಮಹಿಳೆ ಅಮೆರಿಕದ ನೆಬ್ರಸ್ಕಾದಲ್ಲಿ ವಾಸಿಸುತ್ತಿದ್ದಾಳೆ. 44 ವರ್ಷದ ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಈಕೆ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ್ದಳು. ವಿಚ್ಛೇದನ ಪಡೆದ ನಂತರ ಜಾನಿಗೆ ಟೊರೆಜ್ ಎನ್ನುವವನ ಜೊತೆ ಸ್ನೇಹವಾಯಿತು. ಆತ ಕೂಡ ತನ್ನ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಹಾಗೂ ಹೆಣ್ಣು ಮಗುವಿನ ತಂದೆಯಾಗಿದ್ದ. ಕೆಲವು ದಿನಗಳ ಕಾಲ ತೋರಾಜ ಮಗಳಿಗೆ ಜಾನಿ ಡೇವಿಸ್ ಕೇರ್ ಟೇಕರ್ ಆಗಿದ್ದಳು. ಈ ಸಮಯದಲ್ಲೇ ಜಾನಿ ಮತ್ತು ಟೊರೆಜ್ ನಡುವೆ ಪ್ರೀತಿ ಬೆಳೆಯಿತು.
2017ರಲ್ಲಿ ಟೊರೆಜ್ ಜಾನಿ ಡೇವಿಸ್ ಗೆ ಪ್ರಪೋಸ್ ಮಾಡಿದ. ಇದಾದ ಹದಿನೆಂಟು ತಿಂಗಳ ನಂತರ ಇವರಿಗೆ ಒಂದು ಹೆಣ್ಣು ಮಗುವೂ ಆಯಿತು. ಮಗು ಹುಟ್ಟಿದ ನಂತರ ಇವರು ಮದುವೆಯ ಬಂಧನಕ್ಕೆ ಒಳಗಾಗುವ ನಿರ್ಧಾರಕ್ಕೆ ಬಂದರು. ಜಾನಿಯ ತಂದೆ ಕೂಡ ತೀರಿಕೊಂಡಿದ್ದರು ಮತ್ತು ಗಂಡ ಕೂಡ ಡಿವೋರ್ಸ್ ಪಡೆದಿದ್ದರಿಂದ ಜಾನಿ ಡೇವಿಸ್ ಗೆ ನೆಮ್ಮದಿ ಇಲ್ಲದಂತಾಗಿತ್ತು. ಈ ಕಾರಣಕ್ಕಾಗಿ ಆಕೆ ಟೊರೆಜ್ ನನ್ನು ಮದುವೆಯಾಗಿ ಸಂತೋಷದಿಂದ ಜೀವನವನ್ನು ನಡೆಸಲು ಬಯಸಿದಳು. 19 ಜೂನ್ 2023 ರಂದು ಜಾನಿ ಹಾಗೂ ಟೊರೆಜ್ ಮದುವೆಯಾಗುವ ನಿರ್ಧಾರ ಮಾಡಿದರು.
ಮದುವೆಯ ದಿನದಂದು ಇಬ್ಬರೂ ಚರ್ಚ್ ಗೆ ಹೋಗಿ ಮದುವೆಯ ರೀತಿ ರಿವಾಜುಗಳನ್ನೆಲ್ಲ ಮುಗಿಸಿದರು. ಮದುವೆ ಮುಗಿಸಿ ಗಂಡ –ಹೆಂಡತಿಯಾಗಿ ಚರ್ಚ್ ನಿಂದ ಹೊರಗಡೆ ಬರುತ್ತಿರುವ ಸಮಯದಲ್ಲಿ ಟೊರೆಜ್ ಗೆ ಉಸಿರಾಟದ ತೊಂದರೆ (Breathing Problem) ಕಾಣಿಸಿಕೊಂಡಿತು. ಟೊರೆಜ್ ತನಗೆ ಬಹಳ ಸೆಕೆಯಾಗುತ್ತಿದೆ ಎನ್ನುತ್ತಿದ್ದ. ಇದಾದ ಕೆಲವೇ ಕೆಲವು ಸಮಯದ ನಂತರ ಟೊರೆಜ್ ಕುಸಿದು ಬಿದ್ದ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನ ಆಗ್ಲಿಲ್ಲ. ಹೃದಯಾಘಾತದಿಂದ ಟೊರೆಜ್ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮದುವೆಯಾಗಿ ಕೇವಲ ಒಂದೇ ಒಂದು ಗಂಟೆಯಲ್ಲಿ ಜಾನಿಯ ಗಂಡ ನಿರ್ಜೀವವಾಗಿ ಮಲಗಿದ್ದ.
ಯಾರಿಗೂ ತಲೆನೋವು ಆಗ್ಬೇಡಿ, ಅನಾಸಿನ್ ಆಗಿರಿ, ಜಗಳವಾಡಬೇಡಿ, ಜಗತ್ತನ್ನೇ ಪ್ರೀತಿಸಿ; ಕತ್ರಿನಾ ಕೈಫ್
ಟೊರೆಜ್ ಮರಣದ ನಂತರ ಜಾನಿ ಸಾಕಷ್ಟು ನೋವು, ತೊಂದರೆಯನ್ನು ಅನುಭವಿಸಿದಳು. ಟೊರೆಜ್ ಮರಣದ ನಂತರ ಆಕೆಯ ಬದುಕು ಹಳಿ ತಪ್ಪಿತ್ತು. ಜಾನಿ ಮೊದಲಿನ ಸ್ಥಿತಿಗೆ ಬರಲು ಸಾಕಷ್ಟು ಸಮಯ ಹಿಡಿಯಿತು. ಈಕೆಯ ಕಷ್ಟಕ್ಕೆ ನೆರವಾದ ಸ್ನೇಹಿತರು ಈಕೆಯ ಕುಟುಂಬಕ್ಕೆ ಹಣಕಾಸಿನ ನೆರವು (Financial Aid) ನೀಡುವ ಸಲುವಾಗಿ ‘ಗೊ ಫಂಡ್ ಮೀ’ (Go Fund Me) ಎಂಬ ಅಭಿಯಾನವನ್ನು ಆರಂಭಿಸಿದರು. ಇದರಿಂದ ಸುಮಾರು 20 ಲಕ್ಷದಷ್ಟು ಹಣ ಸಂಗ್ರಹವಾಗಿದೆ. ಪತಿಯನ್ನು ಪ್ರೀತಿಸುವ ಜಾನಿ, ಆತನ ನೆನಪಿನಲ್ಲೇ ಜೀವನ ಕಳೆಯೋದಾಗಿ ಹೇಳಿದ್ದಾಳೆ.