ಮಾತು ಎತ್ತಿದರೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುವ ಕಾಲವಿದು. ತಮಗೆ ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲವೆಂದೊ, ಜೊತೆಯಲ್ಲಿ ಇರಲು ಇಷ್ಟವಾಗುತ್ತಿಲ್ಲವೆಂದೊ ಪೋಷಕರನ್ನು ದೂಷಿಸುವ ಮಕ್ಕಳು ಅವರನ್ನು ಆಚೆ ಹಾಕುವ ಪ್ರಸಂಗಗಳೇ ಹೆಚ್ಚು. ಕೈ ತುತ್ತು ಕೊಟ್ಟ ಅಮ್ಮನನ್ನ, ಕಷ್ಟ ಬಂದಾಗ ಹೆಗಲಿಗೆ ಹೆಗಲಾಗುವ ಅಪ್ಪನನ್ನ ತಮ್ಮ ಜೊತೆಯಲ್ಲಿ ಇರಿಸಿಕೊಂಡು ಸಲಹುವವರು ಕಡಿಮೆ ಎಂದೇ ಹೇಳಬಹುದು. ಏತನ್ಮಧ್ಯೆ ವಿಡಿಯೋವೊಂದು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ನೋಡುವುದಕ್ಕೆ ಅದು ಶಾಲಾ ವಾರ್ಷಿಕೋತ್ಸವ ಸಮಾರಂಭದ ತರಹ ಕಾಣುತ್ತದೆ. ಓರ್ವ ಹುಡುಗನಿಗೆ ಪ್ರಶಸ್ತಿ ಅಥವಾ ಸರ್ಟಿಫಿಕೇಟ್ ಕೊಡಲು ಅಲ್ಲಿದ್ದ ಶಿಕ್ಷಕರು, ಗೆಸ್ಟ್ ಮುಂದಾಗುತ್ತಾರೆ. ಒಂದು ಕ್ಷಣ ಅದನ್ನು ತಡೆದ ಹುಡುಗ ಓಡಿ ಹೋಗಿ ತನ್ನ ತಾಯಿಯನ್ನು ಕರೆದುಕೊಂಡು ಬರಲು ಮುಂದಾಗುತ್ತಾನೆ. ಆತನ ತಾಯಿ ಶಾಲಾ ವಿದ್ಯಾರ್ಥಿಗಳ ಮಧ್ಯೆ ವ್ಹೀಲ್ ಚೇರ್‌ನಲ್ಲಿ ಕುಳಿತಿರುತ್ತಾಳೆ. ಎಲ್ಲರೂ ನೋಡನೋಡುತ್ತಿದ್ದಂತೆ ಆತ ತಾಯಿಯನ್ನು ಚೇರ್‌ನಿಂದ ಎತ್ತಿಕೊಂಡು ವೇದಿಕೆ ಮೇಲೆ ಕರೆತಂದು ಪ್ರಶಸ್ತಿಯನ್ನು ತೆಗೆದುಕೊಳ್ಳುತ್ತಾನೆ. ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿದ ನಂತರ ನಿಮ್ಮ ಹೃದಯವು ತುಂಬಿ ಬರದೆ ಇರಲಾರದು. ಕಾಮೆಂಟ್ ವಿಭಾಗವಂತೂ ಹುಡುಗನ ಮನೋಭಾವ ಮೆಚ್ಚಿಕೊಂಡಿದ್ದು, ಎಲ್ಲರಿಗೂ ಈತ ಮಾದರಿಯಾಗಿದ್ದಾನೆ ಎಂದು ಪ್ರಶಂಸಿಸಿದ್ದಾರೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ…
ನೆಟ್ಟಿಗರಿಂದ ಪ್ರಶಂಸೆ
ಸದ್ಯ ಈ ಘಟನೆ ನಡೆದ ಸ್ಥಳ ಎಲ್ಲಿಯದೂ ಎಂದು ತಿಳಿದುಬಂದಿಲ್ಲ. ಆದರೆ ಬಹುಶಃ ವಿದೇಶದ್ದು ಇರಬಹುದು ಎಂಬುದು ಜನರ ಮುಖ ನೋಡಿದರೆ ತಿಳಿಯುತ್ತದೆ. ವಿಡಿಯೋ ಎಲ್ಲಿಯದೇ ಆಗಿದ್ದರೂ ಹುಡುಗನ ನಡವಳಿಕೆ ಎಲ್ಲರ ಮನ ಗೆದ್ದಿದೆ. ವಿಡಿಯೋ ನೋಡಿದ ಬಳಕೆದಾರರು "ಆ ಹುಡುಗನಿಗೆ ದೇವರು ಒಳ್ಳೆಯದು ಮಾಡಲಿ", "ತಾಯಿಯೂ ಎಂದಿಗೂ ಭಾರವಲ್ಲ", "ಈ ವಿಡಿಯೋ ನೋಡಿದ ನಂತರ ನನಗನಿಸಿದ್ದು ಮಗಳನ್ನು ತುಂಬಾ ಚೆನ್ನಾಗಿ ಬೆಳೆಸಬೇಕು, ಆಗ ನಾನು ದೊಡ್ಡವಳಾದಾಗ ಅವಳು ನನ್ನ ಬಗ್ಗೆ ಹೆಮ್ಮೆ ಪಡುತ್ತಾಳೆ ಎಂದು ಅರ್ಥಮಾಡಿಕೊಂಡೆ", "ವಿಡಿಯೋ ನನಗೆ ನಿಜಕ್ಕೂ ಅಳು ತರಿಸಿತು", "ನಿನ್ನ ಬಗ್ಗೆ ಹೆಮ್ಮೆಯಾಗುತ್ತದೆ" ಎಂದು ಹೃದಯದ ಇಮೋಜಿ ಹಾಕುವ ಮೂಲಕ ಹಾಡಿ ಹೊಗಳಿದ್ದಾರೆ.
ಈ ಯುವಕನ ಐಡಿಯಾಗೂ ಫಿದಾ ಆಗಿದ್ರು ನೆಟ್ಟಿಗರು
ಇತ್ತೀಚೆಗಷ್ಟೇ ವಿಡಿಯೋವೊಂದು ವೈರಲ್ ಆಗಿತ್ತು. ವಿಡಿಯೋದಲ್ಲಿ ಮಳೆ ಬಂದು ಹೋದ ನಂತರ ರಸ್ತೆಯಲ್ಲಿ ಬಹಳಷ್ಟು ನೀರು ಸಂಗ್ರಹವಾಗಿರುವುದು ಕಂಡುಬರುತ್ತದೆ. ಇಂತಹ ಸಮಯದಲ್ಲಿ ಕಾರುಗಳು ಮತ್ತು ಬಸ್‌ಗಳಂತಹ ದೊಡ್ಡ ದೊಡ್ಡ ವಾಹನಗಳು ವೇಗವಾಗಿ ಚಲಿಸಿದಾಗ ನೀರು ದ್ವಿಚಕ್ರ ವಾಹನ ಸವಾರರ ಮೇಲೆ ಅಥವಾ ಪಾದಚಾರಿಗಳ ಮೇಲೆ ಚಿಮ್ಮುವುದರಿಂದ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದೇ ಕಾರಣಕ್ಕೆ ಒಬ್ಬ ಯುವಕ ಪರಿಹಾರವನ್ನು ಕಂಡುಕೊಂಡಿದ್ದಾನೆ. ಅದೇನೆಂದರೆ ಸ್ಕೂಟರ್ ಚಾಲನೆ ಮಾಡುವಾಗ ಅವನು ಒಂದು ಕೈಯಲ್ಲಿ ಹ್ಯಾಂಡಲ್ ಮತ್ತು ಇನ್ನೊಂದು ಕೈಯಲ್ಲಿ ಇಟ್ಟಿಗೆಯನ್ನು ಹಿಡಿದುಕೊಂಡಿದ್ದಾನೆ. "ಯಾರಾದರೂ ಒಂದು ವೇಳೆ ಸರಿಯಾಗಿ ವಾಹನ ಚಾಲನೆ ಮಾಡದಿದ್ದರೆ ಅಥವಾ ಯಾರೂ ಆತನ ಮೇಲೆ ನೀರು ಚಿಮ್ಮಿಸುತ್ತಾರೋ ಅವರ ವಾಹನದ ಗಾಜನ್ನು ಇಟ್ಟಿಗೆಯಿಂದ ಒಡೆಯಬಹುದು ಎಂದು ಅವನು ಸನ್ನೆಗಳಲ್ಲಿ ಜನರಿಗೆ ಹೇಳುತ್ತಿದ್ದಾನೆ". ಅದಕ್ಕಾಗಿಯೇ ವಿಡಿಯೋ ಕೂಡ ವೈರಲ್ ಆಗಿದೆ.
ವಿಡಿಯೋವನ್ನು @VishalMalvi_ ಎಂಬ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಮಾಡುವಾಗ, 'ಸಹೋದರ ತನ್ನ ಮೆದುಳನ್ನು 200% ಬಳಸುತ್ತಿದ್ದಾನೆ' ಎಂದು ಶೀರ್ಷಿಕೆ ಕೊಡಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.