ಹಸೆಮಣೆ ಏರುವ ಮುನ್ನ ಎಕ್ಸ್​ ಬಾಯ್​ಫ್ರೆಂಡ್​ ಜೊತೆ ಕೊನೆಯ ಹಗ್ ಮಾಡಿದ ವಧು! ಹೀಗೂ ಉಂಟು- ವಿಡಿಯೋ ವೈರಲ್​

Published : Dec 15, 2025, 07:38 PM IST
Bride's love story

ಸಾರಾಂಶ

ಮದುವೆಗೆ ಕೆಲವೇ ಗಂಟೆಗಳ ಮೊದಲು, ವಧುವೊಬ್ಬಳು ತನ್ನ ಮಾಜಿ ಪ್ರೇಮಿಯನ್ನು ಭೇಟಿಯಾಗಿ ಅಪ್ಪಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಕುಟುಂಬದ ಒತ್ತಡದಿಂದ ಬೇರೆಯವರನ್ನು ಮದುವೆಯಾಗುತ್ತಿರುವ ಆಕೆ, ಕೊನೆಯ ಬಾರಿ ಪ್ರೇಮಿಗೆ ವಿದಾಯ ಹೇಳಲು ಬಂದಿದ್ದಳು.   

ಕುಟುಂಬದ ಒತ್ತಡದಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಯುವತಿ, ಬೇರೆಯವರನ್ನು ಮದುವೆಯಾಗಲು ಒಪ್ಪಿಕೊಂಡರೂ, ಅವಳು ತನ್ನ ಪ್ರೇಮಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಮದುಮಗಳೊಬ್ಬಳು ಮದುವೆಗೆ ಎರಡು ಗಂಟೆಗಳ ಮೊದಲು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಹೋಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಕೆಂಪು ಉಡುಗೆ ತೊಟ್ಟ ವಧು ತನ್ನ ಪ್ರೇಮಿಗೆ ಅಂತಿಮ ವಿದಾಯ ಹೇಳಲು ಹವಣಿಸಿದ್ದಾಳೆ ಎನ್ನುವುದು ಈ ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ.

ಮಾಜಿ ಪ್ರೇಮಿ ನೆನಪು

ವಧು ಮದುವೆಗೆ ಮೊದಲು ತನ್ನ ಪ್ರೇಮಿಯನ್ನು ನೆನಪಿಸಿಕೊಂಡಿದ್ದಾಳೆ. ಕೊನೆಗೆ ಆತನನ್ನು ಕೊನೆಯ ಬಾರಿ ನೋಡುವ ನಿರ್ಧಾರ ಮಾಡಿದ್ದಾಳೆ. ತನ್ನ ಪ್ರೇಮಿಗಾಗಿ ಹಂಬಲಿಸಿ, ಅವನನ್ನು ಭೇಟಿಯಾಗಲು ನಿರ್ಧರಿಸಿ ಕೊನೆಗೆ ತನ್ನ ಸ್ನೇಹಿತನೊಬ್ಬನ ಸಹಾಯ ಪಡೆದಿದ್ದಾಳೆ. ಅವಳು ತನ್ನ ಸ್ನೇಹಿತನಿಗೆ ಕರೆ ಮಾಡಿ ಅವನನ್ನು ಭೇಟಿಯಾಗಲು ತನ್ನ ಕಾರಿನಲ್ಲಿ ಹೋಗಿದ್ದಾಳೆ. ಅದಾಗಲೇ ಒಂದು ಜಾಗಕ್ಕೆ ಬರುವಂತೆ ಆಕೆ ಹೇಳಿದ್ದಳು. ಅದರಂತೆ ಎಕ್ಸ್​ ಬಾಯ್​ಫ್ರೆಂಡ್ ಬಂದಿದ್ದ.

ಮಾಜಿಯನ್ನು ಅಪ್ಪಿಕೊಂಡಳು

ಮುತ್ತುಗಳಿಂದ ಕೂಡಿದ ಕೆಂಪು ಮದುವೆಯ ಉಡುಪನ್ನು ಧರಿಸಿರುವ ಈ ಯುವತಿ, ಅದೇ ಮದುಮಗಳ ಡ್ರೆಸ್​ನಲ್ಲಿ ಓಡಿ ಹೋಗಿ ಪ್ರಿಯಕರನನ್ನು ಭೇಟಿಯಾಗಿದ್ದಾಳೆ. ಅವಳ ಕೈಗಳಲ್ಲಿ ಬಳೆಗಳು ಮತ್ತು ಕಿವಿಗಳಲ್ಲಿ ಕಿವಿಯೋಲೆಗಳೊಂದಿಗೆ, ಹುಡುಗಿ ಮದುವೆಗೆ ಸಿದ್ಧಳಾಗಿದ್ದಾಳೆ ಎನ್ನುವುದನ್ನು ನೋಡಬಹುದು. ಕಾರಿನಿಂದ ಇಳಿದ ಅವಳು, ತಕ್ಷಣ ಎಕ್ಸ್​ ಬಳಿ ಹೋಗಿ ಅವನನ್ನು ಅಪ್ಪಿಕೊಂಡಳು. ಅಷ್ಟರಲ್ಲಿ, ಕಾರಿನಲ್ಲಿ ಕುಳಿತಿದ್ದ ಸ್ನೇಹಿತೆ= ಇಡೀ ಘಟನೆಯನ್ನು ವೀಡಿಯೊದಲ್ಲಿ ವಿವರಿಸಿದ್ದಾನೆ.

 

ಎರಡು ಗಂಟೆಯಲ್ಲಿ ಮದುವೆ

ಹುಡುಗಿ ತನ್ನ ಮದುವೆಗೆ ಎರಡು ಗಂಟೆಗಳು ಉಳಿದಿವೆ ಮತ್ತು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಳೆ ಎಂದು ಸ್ನೇಹಿತ ಹೇಳಿದ್ದಾನೆ. ಈ ಹುಡುಗಿ ನನ್ನ ಸ್ನೇಹಿತೆ ಶ್ರೇಯಾ. ಕೊನೆಯ ಬಾರಿಗೆ ತನ್ನೊಂದಿಗೆ ಭೇಟಿಯಾಗಲು ವ್ಯವಸ್ಥೆ ಮಾಡುವಂತೆ ಅವಳು ಕೇಳಿಕೊಂಡಿದ್ದಳು. ಕುಟುಂಬದ ಒತ್ತಡದಿಂದಾಗಿ ಹುಡುಗಿ ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದು ಸ್ನೇಹಿತ ವಿವರಿಸಿದ್ದಾನೆ. ಅವಳು ಎಲ್ಲಿದ್ದಾಳೆಂದು ಅವಳ ಕುಟುಂಬಕ್ಕೂ ತಿಳಿದಿಲ್ಲ. ಇದು ನಿಜವಾದ ಪ್ರೀತಿ, ಇದನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದಿದ್ದಾನೆ.

ಇದು ನಿಜನಾ?

ಹೇಳಿ ಕೇಳಿ ಇದು ರೀಲ್ಸ್​ ಜಮಾನಾ. ಇದು ಕೂಡ ಸ್ಕ್ರಿಪ್ಟೆಡ್​ ಇರಬಹುದು ಎಂದು ಹಲವರು ಹೇಳುತ್ತಿದ್ದಾರೆ. ಹೀಗೆ ಖುಲ್ಲಂಖುಲ್ಲಾ ಆಗಿ ಯಾರಾದರೂ ಈ ರೀತಿ ವಿಡಿಯೋ ಮಾಡಲು ಸಾಧ್ಯವೇ ಇಲ್ಲ, ಅದು ಕೂಡ ವೈರಲ್​ ಆಗುವ ರೀತಿಯಲ್ಲಿ ಪೋಸ್ಟ್​ ಮಾಡುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಹುಡುಗಿಯ ಮುಖ ಚೆನ್ನಾಗಿ ಕಾಣಿಸುತ್ತದೆ. ಇದು ನಿಜವಾಗಿದ್ದರೆ ಅದು ಆಕೆಯ ಮದುವೆಯ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಇದು ಸುಮ್ಮನೇ ಲೈಕ್ಸ್​ ಮತ್ತು ವೈರಲ್​ಗೋಸ್ಕರ ಎನ್ನುತ್ತಿದ್ದಾರೆ ಕಮೆಂಟಿಗರು.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bhagyalakshmi Serial: ಆ ಪ್ರಶ್ನೆಯನ್ನು ಆದಿಗೆ ಕೇಳಿ ಬಿರುಗಾಳಿ ಎಬ್ಬಿಸಿದ ಕುಸುಮಾ! ಫ್ಯಾನ್ಸ್​ ಬೇಸರ
ಶಾರುಖ್ ಸೀಕ್ರೆಟ್ ಒಂದನ್ನು ಹೇಳಿ ಶಾಕ್ ಕೊಟ್ಟ ದೀಪಿಕಾ ಪಡುಕೋಣೆ; ಓಹೋ.. 'ಓಂ ಶಾಂತಿ ಓಂ' ಎಂದ ನೆಟ್ಟಿಗರು!