
ನಿಜ ಜೀವನದ ಕೆಲವು ಘಟನೆಗಳು ಸಿನಿಮಾಗಳಲ್ಲಿನ ಕಥೆಗಳಿಗಿಂತ ಹೆಚ್ಚು ಆಶ್ಚರ್ಯಕರವಾಗಿರುತ್ತವೆ. ವಿಚಿತ್ರವಾಗಿರುತ್ತವೆ. ಇದೀಗ ಇಂತಹುದೇ ಒಂದು ಘಟನೆ ನಡೆದಿದೆ. ಮಗುವನ್ನು ಪಡೆಯಲೇಬೇಕೆಂಬ ಗಂಡನ ವಿಚಿತ್ರ ನಿರ್ಧಾರವು ಅನಿರೀಕ್ಷಿತ ತಿರುವು ಪಡೆದು ನ್ಯಾಯಾಲಯಕ್ಕೆ ತಲುಪಿದೆ. ಅಂಥದ್ದು ಏನಾಯ್ತು ಎಂದು ತಿಳಿದರೆ ಒಂದು ಕ್ಷಣ ಶಾಕ್ ಆಗ್ತೀರಿ.
ಆಗಿದಿಷ್ಟು , ಸದ್ಯ ಈ ಘಟನೆ ನಡೆದಿರುವುದು ನಮ್ಮ ದೇಶದಲ್ಲಿಯಂತೂ ಅಲ್ಲವೇ ಅಲ್ಲ. ಜರ್ಮನಿಯಲ್ಲಿ. ಡೆಮೆಟ್ರಿಯಸ್ ಸೊಪೌಲೋಸ್ (Demetrius Soupolos) ಮತ್ತು ಅವರ ಪತ್ನಿ ಟ್ರೌಟ್ (Traute) ಸ್ಟಟ್‌ಗಾರ್ಟ್ ಎಂಬ ನಗರದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟ್ರೌಟ್ ಸಾಮಾನ್ಯ ಗೃಹಿಣಿಯಲ್ಲ, ಆಕೆ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯಾಗಿದ್ದವರು. ಈ ದಂಪತಿಗೆ ಮದುವೆಯಾಗಿ ಹಲವು ವರ್ಷ ಕಳೆದರೂ ಮಕ್ಕಳಾಗಿಲ್ಲ. ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ವೈದ್ಯರು ಡೆಮೆಟ್ರಿಯಸ್‌ಗೆ ಬಂಜೆತನದ ಸಮಸ್ಯೆ ಇದೆ ಮತ್ತು ಅವನು ತಂದೆಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಹೇಗಾದರೂ ತನ್ನ ಹೆಂಡತಿ ಗರ್ಭಿಣಿಯಾಗಿ, ಮಗು ಪಡೆಯಬೇಕು ಎಂದು ಆತ ವಿಚಿತ್ರವಾದ ಮಾರ್ಗವನ್ನು ಆರಿಸಿಕೊಂಡನು. ಇದೇ ಉದ್ದೇಶದಿಂದ ತನ್ನ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಫ್ರಾಂಕ್ ಮೌಸ್ (Frank Maus) ಎಂಬ ವ್ಯಕ್ತಿಯನ್ನು ಸಂಪರ್ಕಿಸಿದನು. ಡೆಮೆಟ್ರಿಯಸ್ ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿ, ಅವಳಿಗೆ ಮಗುವನ್ನು ನೀಡಿದರೆ $2500 ಪಾವತಿ ಮಾಡುತ್ತೇನೆ ಎಂದನು. ಆದರೆ ಫ್ರಾಂಕ್‌ನ ಹೆಂಡತಿ ಆರಂಭದಲ್ಲಿ ನಿರಾಕರಿಸಿದಳು. ಕೊನೆಗೆ ಫ್ರಾಂಕ್ ಹಣಕ್ಕಾಗಿ ಮಾತ್ರ ಹಾಗೆ ಮಾಡುತ್ತಿದ್ದೇನೆ ಎಂದು ಅವಳನ್ನು ಮನವೊಲಿಸಿದನು. ಹೀಗಾಗಿ ಡೆಮೆಟ್ರಿಯಸ್ ಮತ್ತು ಫ್ರಾಂಕ್ ನಡುವೆ ಲಿಖಿತ ಒಪ್ಪಂದಕ್ಕೆ ಬರಲಾಯಿತು. 6 ತಿಂಗಳ ಒಪ್ಪಂದದ ಪ್ರಕಾರ ಫ್ರಾಂಕ್ ತನ್ನ ಕೆಲಸವನ್ನು ಪ್ರಾರಂಭಿಸಿದನು. ಅವನು ವಾರಕ್ಕೆ ಮೂರು ಬಾರಿ ಡೆಮೆಟ್ರಿಯಸ್ ಮನೆಗೆ ಹೋಗುತ್ತಿದ್ದನು. ಒಮ್ಮೆ ಅಲ್ಲ, ಎರಡು ಬಾರಿ ಅಲ್ಲ, ಸತತ ಆರು ತಿಂಗಳುಗಳು ಕಳೆದವು. ಎಣಿಕೆಯ ಪ್ರಕಾರ, ಸುಮಾರು 72 ಬಾರಿ ಸಂಭೋ*ಗಿಸಿದರು. ಆದರೆ ಫಲಿತಾಂಶ ಶೂನ್ಯವಾಗಿತ್ತು. ಟ್ರೌಟ್ ಗರ್ಭ ಧರಿಸಲೇ ಇಲ್ಲ.
ಆರು ತಿಂಗಳ ನಂತರ ಯಾವುದೇ ಗುಡ್ ನ್ಯೂಸ್ ಬರದ ಕಾರಣ ಡೆಮೆಟ್ರಿಯಸ್‌ಗೆ ಕೋಪ ಬಂತು. ಎಲ್ಲೋ, ಏನೋ ತಪ್ಪಾಗಿದೆ ಎಂದು ಕಂಡುಹಿಡಿಯಲು ಫ್ರಾಂಕ್ ಕೂಡ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕೆಂದು ಅವನು ಒತ್ತಾಯಿಸಿದನು. ಪರೀಕ್ಷಾ ವರದಿಯನ್ನು ನೋಡಿದಾಗ ಎಲ್ಲರೂ ಶಾಕ್ ಆದರು. ನಿಜ ಹೇಳಬೇಕೆಂದರೆ ಡೆಮೆಟ್ರಿಯಸ್‌ನಂತೆ ಫ್ರಾಂಕ್ ಮೌಸ್ ಕೂಡ ಪುರುಷ ಬಂಜೆತನದಿಂದ ಬಳಲುತ್ತಿದ್ದನು. ಅವನಿಗೂ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ ಎಂದು ವಿಚಾರ ತಿಳಿದುಬಂದಿದೆ.
ಈ ಸುದ್ದಿ ಹೊರಬರುತ್ತಿದ್ದಂತೆ ಫ್ರಾಂಕ್‌ನ ಹೆಂಡತಿ ಮತ್ತೊಂದು ಬಾಂಬ್ ಹಾಕಿದಳು. ತಮಗಿರುವ ಇಬ್ಬರು ಮಕ್ಕಳು ಫ್ರಾಂಕ್‌ನ ರಕ್ತದಿಂದ ಹುಟ್ಟಿಲ್ಲ, ತಾನು ಸಹ ಬೇರೊಬ್ಬರ ಮೂಲಕ ಗರ್ಭಧರಿಸಿದೆ ಎಂದು ಆಕೆ ಒಪ್ಪಿಕೊಂಡಳು. ತಾನು ಮೋಸ ಹೋಗಿದ್ದೇನೆಂದು ಅರಿತುಕೊಂಡ ಡೆಮೆಟ್ರಿಯಸ್ ನ್ಯಾಯಾಲಯದ ಮೊರೆ ಹೋದರು . ಒಪ್ಪಂದ ಉಲ್ಲಂಘನೆಗಾಗಿ ಫ್ರಾಂಕ್ ವಿರುದ್ಧ ಮೊಕದ್ದಮೆ ಹೂಡಿದರು ಮತ್ತು ಹಣವನ್ನು ಹಾಗೂ ಪರಿಹಾರವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದರು. ಪ್ರಕರಣವು ಪ್ರಸ್ತುತ ವಿಚಾರಣೆಯಲ್ಲಿದೆ. ಆದರೆ ಇಂತಹ ಅನೈತಿಕ ಒಪ್ಪಂದಗಳು ಕಾನೂನುಬದ್ಧವಾಗಿದೆಯೇ ಮತ್ತು ಪ್ರಕರಣವು ಮಾನ್ಯವಾಗಿದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ಡೆಮೆಟ್ರಿಯಸ್‌ನಂತೆ ಮಗುವಿಗಾಗಿ ನೆರೆಹೊರೆಯವರನ್ನು ನಂಬುವ ಈ ವಿಚಿತ್ರ ಘಟನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.