Viral Video : ನೀರಿನಲ್ಲಿ ಬಿದ್ದು ಒದ್ದಾಡ್ತಿದ್ದ ಸ್ನೇಹಿತನ ಪ್ರಾಣ ಉಳಿಸಿದ ಜೇನ್ನೊಣ!

By Suvarna News  |  First Published Apr 10, 2023, 3:20 PM IST

ಸ್ನೇಹ ಕೇವಲ ಮನುಷ್ಯರಿಗೆ ಸೀಮಿತವಾಗಿಲ್ಲ. ಪ್ರಾಣಿ, ಪಕ್ಷಿ, ಕೀಟಗಳಲ್ಲೂ ನೀವು ನೋಡ್ಬಹುದು. ಈಗ ವೈರಲ್ ಆದ ವಿಡಿಯೋದಲ್ಲಿ ಜೇನುನೊಣದ ರಕ್ಷಣೆಗೆ ಅದ್ರ ಸ್ನೇಹಿತರು ಮಾಡಿದ ಕೆಲಸವೇನು ಎಂಬುದನ್ನು ನೀವು ನೋಡ್ಬಹುದು. 
 


ಈಗಿನ ಕಾಲದಲ್ಲಿ ಮನುಷ್ಯ ಮಾನವೀಯತೆ ಮರೆಯುತ್ತಿದ್ದಾನೆ. ಪರಿಚಿತರಿರಲಿ ಆಪ್ತರ ಸಹಾಯಕ್ಕೂ ಅನೇಕ ಬಾರಿ ಹೋಗೋದಿಲ್ಲ. ಸತ್ತರೆ ಸಾಯ್ಲಿ ನಮಗೇನು ಎನ್ನುವ ಜಾಯಮಾನ ಈಗ ಶುರುವಾಗಿದೆ. ಅಪಘಾತಗಳಾದಾಗ ಅದ್ರ ವಿಡಿಯೋ ಮಾಡ್ತಾ ಕುಳಿತುಕೊಳ್ತಾರೆಯೇ ವಿನಃ ಅವರನ್ನು ರಕ್ಷಿಸುವ ಪ್ರಯತ್ನ ನಡೆಸೋದಿಲ್ಲ. ಹಾಗಂತ, ಎಲ್ಲರೂ ಇದೇ ಸ್ವಭಾವದವರು ಎಂದಲ್ಲ. ಕೆಲವು ಮಂದಿ ತಮ್ಮ ಜೊತೆ ಇನ್ನೊಬ್ಬರಿಗೂ ಬದುಕಲು ನೆರವಾಗ್ತಿದ್ದಾರೆ. ಆಪತ್ತಿನಲ್ಲಿರುವ ಸ್ನೇಹಿತರು, ಕುಟುಂಬಸ್ಥರ ಸಹಾಯಕ್ಕೆ ಬರ್ತಿದ್ದಾರೆ. ತಮ್ಮ ಪ್ರಾಣವನ್ನು ಒತ್ತೆಯಿಟ್ಟು, ಇನ್ನೊಬ್ಬರ ಪ್ರಾಣ ರಕ್ಷಣೆ ಮಾಡ್ತಿದ್ದಾರೆ.

ಈ ಸಹಾಯ, ಪ್ರಾಣ ಭಿಕ್ಷೆ ಎಲ್ಲವೂ ಬರೀ ಮನುಷ್ಯನಿಗೆ ಹಾಗೂ ಪ್ರಾಣಿಗಳಿಗೆ ಸೀಮಿತವಾಗಿಲ್ಲ. ಸಣ್ಣ ಸಣ್ಣ ಕೀಟ (Insect) ಗಳನ್ನೂ ನಾವು ಇದನ್ನು ನೋಡಬಹುದು. ಕೀಟಗಳ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಅವು ವಿಶೇಷವೆನ್ನಿಸುತ್ತವೆ. ದೊಡ್ಡ ದೊಡ್ಡ ಆಹಾರ (Food) ದ ತುಂಡನ್ನು ನಾಲ್ಕೈದು ಕೀಟಗಳು ಸೇರಿ ಹೊತ್ತೊಯ್ಯುವುದನ್ನು ನೀವು ನೋಡ್ಬಹುದು. ಹಾಗೆಯೇ ಸರತಿ ಸಾಲಿನಲ್ಲಿ ಹೋಗುವ ಇರುವೆಗಳು ಎದುರಿಗೆ ಬಂದ ಇರುವೆ ಹತ್ತಿರ ಹೋಗಿ ಮುತ್ತಿಡುವುದನ್ನು ನೀವು ನೋಡಬಹುದು. ಇದೆಲ್ಲವೂ ನಮಗೆ ವಿಚಿತ್ರವೆನ್ನಿಸುತ್ತವೆ. ಈಗ ಜೇನು ನೊಣವನ್ನು ಇನ್ನೊಂದು ನೊಣ ಬದುಕಿಸಿದ ವಿಡಿಯೋ ವೈರಲ್ (Viral) ಆಗಿದೆ. ಈ ವಿಡಿಯೋದಲ್ಲಿ ಜೇನು ನೊಣಗಳಲ್ಲೂ ಸ್ನೇಹವಿದೆ ಎಂಬುದನ್ನು ನೀವು ನೋಡ್ಬಹುದು. 

Latest Videos

undefined

Relationship Advice : ಗಂಡ ಮನೆ ಕೆಲಸದಲ್ಲಿ ಹೆಲ್ಪ್ ಮಾಡೋಲ್ಲ ಅಂತ ಗೊಣಗೋ ಬದಲು ಹೀಗ್ ಮಾಡಿ

ಇನ್ಸ್ಟಾದಲ್ಲಿ ವೈರಲ್ ಆಗಿದೆ ವಿಡಿಯೋ  : ಇಂಡಿಯಾ ಟುಡೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದ ಆರಂಭದಲ್ಲಿ ನೀರಿನ ದೊಡ್ಡ ಹನಿಯ ಮೇಲೆ ಜೇನು ನೊಣವನ್ನು ಉಲ್ಟಾ ಬಿದ್ದಿದೆ. ಅದಕ್ಕೆ ಅದ್ರಿಂದ ಹೊರಗೆ ಬರಲು ಸಾಧ್ಯವಾಗ್ತಿಲ್ಲ. ನೀರಿನ ಹನಿಯ ಅಕ್ಕಪಕ್ಕ ಮೂರ್ನಾಲ್ಕು ಜೇನು ನೊಣವನ್ನೂ ನೀವು ನೋಡ್ಬಹುದು. ಈ ಮಧ್ಯೆ ಎಲ್ಲಿಂದಲೋ ಹಾರಿ ಬರುವ ಇನ್ನೊಂದು ಜೇನು ನೊಣ, ಉಲ್ಟಾ ಬಿದ್ದಿರುವ ನೊಣವನ್ನು ಒಮ್ಮೆ ಎಳೆಯಲು ಪ್ರಯತ್ನಿಸುತ್ತದೆ. ಆದ್ರೆ ಅದು ಸಾಧ್ಯವಾಗೋದಿಲ್ಲ. ಎರಡನೇ ಬಾರಿ ಮತ್ತೆ ಬರುವ ಜೇನು ನೊಣ, ಉಲ್ಟಾ ಬಿದ್ದಿರುವ ಜೇನು ನೊಣದ ಕಾಲನ್ನು ಎಳೆದು ನೀರಿನಿಂದ ಹೊರಗೆ ಬಿಡುತ್ತದೆ. ಜೇನು ನೊಣದ ತಂಡವೊಂದು ಇನ್ನೊಂದು ಜೇನು ನೊಣದ ಜೀವ ಉಳಿಸಿದೆ ಎಂದು ಶೀರ್ಷಿಕೆ ಹಾಕಿ, ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಈವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 30 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಹಾಗೆಯೇ ಸಾಕಷ್ಟು ಕಮೆಂಟ್ ಗಳನ್ನು ನೀವು ನೋಡ್ಬಹುದು. 

ಈ ರೀತಿಯೆಲ್ಲಾ ಇದ್ರೆ…. ನಿಮ್ಮ ವೈವಾಹಿಕ ಜೀವನ ಪರ್ಫೆಕ್ಟ್ ಆಗಿದೆ ಎಂದರ್ಥ

ಸಣ್ಣ ಜೀವಿಗಳಿಗೆ ನೀರಿನ ಮೇಲ್ಮೈ ಒತ್ತಡವು ತುಂಬಾ ಪ್ರಬಲವಾಗಿರುತ್ತದೆ. ಹಾಗಾಗಿ ಜೇನು ನೊಣ ಈ ನೀರಿನಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದು ಟೀಂ ವರ್ಕ್ ಅಲ್ಲ. ಉಳಿದವರು ನೀರು ಕುಡಿಯುತ್ತಿದ್ದಾರೆ. ಅವರೆಲ್ಲ ಸ್ವಾರ್ಥಿಗಳು. ಇಲ್ಲಿ ಕೆಲಸ ಮಾಡಿದ್ದು ಒಂದೇ ಜೇನುನೊಣ ಎಂದು ಇನ್ನೊಬ್ಬರು ಬರೆದಿದ್ದಾರೆ. ಮನುಷ್ಯನಲ್ಲಿ ಮಾನವೀಯತೆ ಮರೆತು ಹೋಗಿದೆ. ಆದ್ರೆ ಪ್ರಾಣಿ, ಪಕ್ಷಿಗಳಲ್ಲಿ ಅದು ಇದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ವಿಡಿಯೋ ಮಾಡ್ತಿದ್ದ ವ್ಯಕ್ತಿ ಏನು ಮಾಡ್ತಿದ್ದ ಅಂತಾ ಕೆಲವರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಇನ್ನೊಬ್ಬ ವ್ಯಕ್ತಿ, ಮನುಷ್ಯ ಕೇವಲ ವಿಡಿಯೋ ಮಾಡ್ತಾನೆ. ಬೇರೆಯವರಿಗೆ ಸಹಾಯ ಮಾಡೋದಿಲ್ಲವೆಂದು ಕಮೆಂಟ್ ಹಾಕಿದ್ದಾರೆ. ಇನ್ನೊಬ್ಬ ಬೇಸಿಗೆ ಇದೆ, ನೀರಿನಲ್ಲಿ ನೆನೆಯಲಿ ಬಿಡಿ ಎಂದು ತಮಾಷೆಯ ಕಮೆಂಟ್ ಕೂಡ ಮಾಡಿದ್ದಾನೆ. 
 

| Bees teamed up to save another bee's life! pic.twitter.com/iPcuxL8Xw3

— Tarun Agarwal- Anti-Cruelty Officer (@Pfa_AntiCruelty)
click me!