ಪ್ರೀತಿ ಅಂದ್ರೆ ಇದು, ಹುಷಾರಿಲ್ಲದ ಪತ್ನಿಯ ಹೆಗಲ ಮೇಲೆ ಹೊತ್ತು ದೇವಸ್ಥಾನಕ್ಕೆ ಬಂದ ಅಜ್ಜ

Published : Feb 10, 2026, 04:21 PM IST
Husband Love

ಸಾರಾಂಶ

ಶುದ್ಧವಾದ ಪ್ರೀತಿ ಏನನ್ನೂ ನಿರೀಕ್ಷೆ ಮಾಡೋದಿಲ್ಲ. ಪ್ರೀತಿಸಿದವರ ಸುಖವೇ ಮುಖ್ಯವಾಗುತ್ತೆ. ಅದಕ್ಕೆ ಈ ಅಜ್ಜ ಉತ್ತಮ ನಿದರ್ಶನ. ಅನಾರೋಗ್ಯಕರ ಪತ್ನಿಯನ್ನು ಹೆಗಲ ಮೇಲೆ ಹೊತ್ತು ದೇವಸ್ಥಾನಕ್ಕೆ ಬಂದ ವಿಡಿಯೋ ಈಗ ಕಣ್ಣಂಚಲ್ಲಿ ನೀರು ತರಿಸ್ತಿದೆ.

ವ್ಯಾಲೆಂಟೈನ್ಸ್ ವೀಕ್ (Valentine's Week) ನಡೆಯುತ್ತಿದ್ದೆ. ಪ್ರೇಮಿಗಳು ಸೆಲಬ್ರೇಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪರಸ್ಪರ ಗಿಫ್ಟ್ ನೀಡಿ, ವ್ಯಾಲೆಂಟೈನ್ಸ್ ವೀಕ್ ಎಂಜಾಯ್ ಮಾಡ್ತಿದ್ದಾರೆ. ಕೆಲ ಜೋಡಿ ಮಧ್ಯೆ ತಮ್ಮಿಷ್ಟದ ಗಿಫ್ಟ್ ನೀಡಿಲ್ಲ ಎನ್ನುವ ಗಲಾಟೆ ಕಾಮನ್. ಆದ್ರೆ ಇಲ್ಲೊಬ್ಬ ಅಜ್ಜ, ಪ್ರೇಮಿಗಳ ವೀಕ್ ನಲ್ಲಿ ತನ್ನ ಪತ್ನಿಗೆ ಮರೆಯಲಾಗದ ಉಡುಗೊರೆ ನೀಡಿದ್ದಾರೆ. ಪತ್ನಿಯಿಂದ ಏನನ್ನೂ ನಿರೀಕ್ಷೆ ಮಾಡದೆ ಆಕೆಯ ಇಚ್ಛೆಯನ್ನು ಈಡೇರಿಸಿದ್ದಾರೆ.

ಅಜ್ಜನ ಪ್ರೀತಿ (love)ಗೆ ಬೆಲೆ ಕಟ್ಟೋಕೆ ಸಾಧ್ಯವಿಲ್ಲ

ಒಡಿಯಾಶ ಪುರಿ ಜಗನ್ನಾಥ ದೇವಾಲಯದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಜ್ಜ, ತನ್ನ ಅನಾರೋಗ್ಯಕರ ಪತ್ನಿಯನ್ನು ಹೆಗಲೆ ಮೇಲೆ ಹೊತ್ತು ದೇವಸ್ಥಾನಕ್ಕೆ ಕರೆ ತಂದಿದ್ದಾರೆ. ಪತ್ನಿ ಅಸ್ವಸ್ಥರಾಗಿದ್ದು, ಅವರಿಗೆ ನಡೆದಾಡಲು ಶಕ್ತಿ ಇಲ್ಲ. ಹಾಗಾಗಿ ಅಜ್ಜ, ಅಜ್ಜಿಯನ್ನು ಹೆಗಲೆ ಮೇಲೆ ಹಾಕಿಕೊಂಡು ದೇವಸ್ಥಾನಕ್ಕೆ ಬಂದಿದ್ದಾರೆ.

ಪತ್ನಿಯನ್ನು ಹೆಗಲ ಮೇಲೆ ಹೊತ್ತ ವ್ಯಕ್ತಿಗೂ ವಯಸ್ಸಾಗಿದೆ. ಆದ್ರೆ ಅವರ ವಯಸ್ಸು, ಆಯಾಸ, ನೋವು ಯಾವುದೂ ಪ್ರೀತಿಯನ್ನು ಸೋಲಿಸೋಕೆ ಆಗಲಿಲ್ಲ. ಹಣ, ಶ್ರೀಮಂತಿಕೆ ಬದಲು ಅಜ್ಜ, ಅಜ್ಜಿಯ ಆರೋಗ್ಯ ಬೇಡಿ ಪುರಿ ಜಗನ್ನಾಥ ದೇವಸ್ಥಾನಕ್ಕೆ ಬಂದಂತಿತ್ತು.

ಲವ್‌ಗೋಸ್ಕರ ಮತಾಂತರ ಆಗಿ, 2 ತಿಂಗಳ ಹಸುಗೂಸಿನ ಜೊತೆ ಬೀದಿಗೆ ಬಿದ್ದ ಬ್ರಾಹ್ಮಣ ಯುವತಿ; ವಕೀಲರ ಹೇಳಿಕೆ

ಅಜ್ಜ ಹಾಗೂ ಅಜ್ಜಿಯವರು ಯಾವೂರಿಂದ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ನೋಡಿ ಜನರ ಕಣ್ಣು ಒದ್ದೆಯಾಗಿದೆ. ಸಣ್ಣ ಸಣ್ಣ ಕಾರಣಕ್ಕೆ ದೂರವಾಗುವ ದಂಪತಿ ಮಧ್ಯೆ ಇವರು ಆದರ್ಶವಾಗಿ ನಿಲ್ತಾರೆ. ಹೆಂಡ್ತಿಗೆ ಹೆಗಲಾಗಿ, ಅವಳ ಆಸೆಯನ್ನೆಲ್ಲ ತೀರಿಸುತ್ತಿರುವ ಅಜ್ಜನನ್ನು ನೋಡಿ ಬಳಕೆದಾರರು ಭಾವುಕರಾಗಿದ್ದಾರೆ. ಆರೋಗ್ಯ ಕೆಟ್ಟಾಗಲು ಅವಳಿಂದ ದೂರವಾಗದೆ, ಅಜ್ಜಿಗೆ ಆಸೆಯಾಗಿ ನಿಂತ ಅಜ್ಜನ ವಿಡಿಯೋ ಹೃದಯಗೆದ್ದಿದೆ.

ಶುದ್ಧ ಪ್ರೀತಿಗೆ ವಯಸ್ಸಿಲ್ಲ, ಅದು ಐಶ್ವರ್ಯ, ಹಣವನ್ನು ಬಯಸೋದಿಲ್ಲ. ಅಜ್ಜ ಬರೀ ಹೆಂಡ್ತಿ ದೇಹ ಹೊತ್ತಿಲ್ಲ, ಅವಳ ಜೀವವನ್ನೇ ಹೊತ್ತಿದ್ದಾನೆ ಅಂತ ಅನೇಕರು ಕಮೆಂಟ್ ಮಾಡಿದ್ದಾರೆ. ಅವರ ಪ್ರಯಾಣದ ಪ್ರತಿಯೊಂದು ಹೆಜ್ಜೆಯೂ ದಶಕಗಳ ಒಗ್ಗಟ್ಟು, ಕಾಳಜಿ ಮತ್ತು ಮೌನ ತ್ಯಾಗವನ್ನು ಪ್ರತಿಬಿಂಬಿಸುತ್ತದೆ. ಆಳವಾದ ಆಧ್ಯಾತ್ಮಿಕ ನಂಬಿಕೆಯೊಂದಿಗೆ ಜೀವಮಾನದ ಪ್ರೀತಿಯನ್ನು ತೋರಿಸುತ್ತದೆ.

ಸಪ್ತಪದಿಯ ಅರ್ಥವನ್ನು ನವವಧುವರರಿಗೆ ಸೊಗಸಾಗಿ ವಿವರಿಸಿದ ಪುರೋಹಿತರು: ವೀಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ದಂಪತಿ ಮಧ್ಯೆ ಪ್ರೀತಿಗಿಂತ ಸ್ವಾರ್ಥ ಹೆಚ್ಚಾಗ್ತಿದೆ. ಇದು ಮದುವೆಯಾದ ಎರಡು – ಮೂರು ತಿಂಗಳಿಗೇ ಬೇರೆಯಾಗಲು ಕಾರಣವಾಗ್ತಿದೆ. ಭಾರತದಲ್ಲಿ ಡಿವೋರ್ಸ್ ಗಳ ಸಂಖ್ಯೆ ಹೆಚ್ಚಾಗ್ತಿದೆ. ಆಧುನಿಕ ದಂಪತಿ ಇವರಿಂದ ಕಲಿಯಬೇಕು. ಸಂಗಾತಿಗೆ ಮೋಸ ಮಾಡಿ, ಕೊಲೆ ಮಾಡಿ ತಪ್ಪು ದಾರಿ ಹಿಡಿಯುತ್ತಿರುವ ಜನರು, ದಾಂಪತ್ಯದಲ್ಲಿ ಶ್ರೀಮಂತಿಕೆ, ಸ್ವಾರ್ಥ ಮುಖ್ಯವಲ್ಲ, ಪ್ರೀತಿ ಹಾಗೂ ತ್ಯಾಗಕ್ಕೆ ಹೆಚ್ಚಿನ ಮಹತ್ವವಿದೆ, ಹೊಂದಾಣಿಕೆ ಅಗತ್ಯವಿದೆ ಎಂಬುದನ್ನು ಅರಿಯಬೇಕಾಗಿದೆ ಅಂತ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ದಂಪತಿಗೆ ಪುರಿ ಜಗನ್ನಾಥ ಆರೋಗ್ಯ,, ದೀರ್ಘ ಆಯಸ್ಸು ನೀಡ್ಲಿ ಅಂತ ಜನರು ಪ್ರಾರ್ಥಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲವ್‌ಗೋಸ್ಕರ ಮತಾಂತರ ಆಗಿ, 2 ತಿಂಗಳ ಹಸುಗೂಸಿನ ಜೊತೆ ಬೀದಿಗೆ ಬಿದ್ದ ಬ್ರಾಹ್ಮಣ ಯುವತಿ; ವಕೀಲರ ಹೇಳಿಕೆ
ಸಪ್ತಪದಿಯ ಅರ್ಥವನ್ನು ನವವಧುವರರಿಗೆ ಸೊಗಸಾಗಿ ವಿವರಿಸಿದ ಪುರೋಹಿತರು: ವೀಡಿಯೋ ವೈರಲ್