
ಲಖನೌ (ಫೆ.10) ಮದುವೆ, ಸಂಸಾರದಲ್ಲಿನ ಹಲವು ಸಮಸ್ಯೆಗಳು ಗಂಭೀರ ಸ್ವರೂಪ ಪಡೆದು ಸಂಬಂಧಗಳು ಮುರಿದು ಬಿದ್ದಿದ್ದು ಮಾತ್ರವಲ್ಲ, ಘನಘೋರ ದುರಂತಗಳು ನಡೆದಿದೆ. ಸದ್ಯ ವೈವಾಹಿಕ ಜೀವನಕ್ಕೆ ಕಾಲಿಡುವ ನವ ಜೋಡಿಗಳಲ್ಲಿ ಸಮಸ್ಯೆಗಳು ತೀವ್ರವಾಗಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಇದರ ನಡುವೆ ಪ್ರೇಮಾನಂದ ಮಹಾರಾಜ್ ಗುರೂಜಿ ಬಳಿ ಮಹಿಳೆಯೊಬ್ಬರು ತಮ್ಮ ಪತಿಯ ಅತೀಯಾದ ಕಾಮದ ಆಸಕ್ತಿ ಕುರಿತು ಸಮಸ್ಯೆಯೊಂದನ್ನು ಹೇಳಿಕೊಂಡು ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಇದಕ್ಕೆ ಪ್ರೇಮಾನಂದ್ ಮಹಾರಾಜ ಗುರೂಜಿ ನೀಡಿದ ಉತ್ತರ ಇದೀಗ ಟ್ರೆಂಡ್ ಆಗಿದೆ.
ಪ್ರೇಮಾನಂದ್ ಜಿ ಮಹಾರಾಜ್ ಅವರ ಶ್ರೀ ಹಿತ್ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಹಲವು ಭಕ್ತರು ಸಮಸ್ಯೆಗಳಿಗೆ ಪರಿಹಾರಕ್ಕೆ ಆಗ್ರಹಿಸುತ್ತಾರೆ. ಹೀಗೆ ಆಶ್ರಮಕ್ಕೆ ಬಂದ ಮಹಿಳೆಯೊಬ್ಬರು ತಮ್ಮ ಪತಿಯ ಅತೀಯಾದ ಕಾಮಾಸಕ್ತಿಯಿಂದ ತೀವ್ರ ಸಮಸ್ಯೆಯಾಗುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ತಾನು ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ನನ್ನ ಶರೀರದಲ್ಲಿ ದೈಹಿಕ ಬಯಕೆ ಅಂತ್ಯಗೊಂಡಿದೆ. ಆದರೆ ನನ್ನ ಪತಿಗೆ ಕಾಮ ಅತೀಯಾಗಿದೆ. ಪ್ರತಿ ದಿನ ರಾತ್ರಿ ಪತಿ ಕಾಮಕ್ಕೆ ಬಳಲಿ ಬೆಂಡಾಗುತ್ತಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಲಿ, ನನಗೆ ಮಾರ್ಗರ್ಶನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.
ಮಹಿಳೆಯ ಪ್ರಶ್ನೆ ಆಲಿಸಿದ ಪ್ರೇಮಾನಂದ್ ಜಿ ಮಹಾರಾಜ ಗುರೂಜಿ, ತಾಳ್ಮೆಯಿಂದ ಉತ್ತರಿಸಿದ್ದಾರೆ. ದಾಂಪತ್ಯದಲ್ಲಿ ಪತಿಗೆ ಅನುಕೂಲಕರವಾಗಿ ನಡೆಯುವುದು ಪತ್ನಿಯ ಧರ್ಮ. ವೈವಾಹಿಕ ಜೀವನದಲ್ಲಿ ಪರಸ್ಪರ ಸಹಕಾರ, ಹೊಂದಾಣಿಕೆ ಅತೀ ಅಗತ್ಯ. ಮಿತ್ರ ಭಾವದಿಂದ ಅಂದರೆ ಸ್ನೇಹತರಂತೆ ಜೀವನ ನಡೆಸಬೇಕು. ಆದರೆ ಇಲ್ಲಿ ನಮ್ಮ ವೈಯುಕ್ತಿ ಇಚ್ಚೆ, ಆಸಕ್ತಿ, ಬಯಕೆಗಳನ್ನು ಮತ್ತೊಬ್ಬರ ಮೇಲೆ ಬಲವಂತವಾಗಿ ಹೇರಬಾರದು ಅನ್ನೋದು ಅಷ್ಟೇ ಮುಖ್ಯವಾಗಿದೆ ಎಂದು ಪ್ರೇಮಾನಂದ್ ಮಹಾರಾಜ್ ಹೇಳಿದ್ದಾರೆ.
ಮದುವೆ ಅರ್ಥವೇ ಎರಡು ಜೀವಗಳು ಒಂದೇ ಹಾದಿಯಲ್ಲಿ ನಡೆಯುವುದು. ಇಲ್ಲಿ ಹೊಂದಾಣಿಕೆ, ಗೌರವ, ಸಹಕಾರ ಅತೀ ಅಗತ್ಯ. ಹೀಗಾಗಿ ಮದುವೆಯಾದ ಬಳಿಕ ನಮ್ಮ ಆಸಕ್ತಿಗಳು, ಬಯಕೆಗಳು ಸೇರಿದಂತೆ ಇತರ ವಿಚಾರಗಳನ್ನು ಇಬ್ಬರಿಗೂ ಪೂರಕವಾಗುವಂತೆ ಹೊಂದಿಸಿಕೊಳ್ಳಬೇಕು. ಕಾಮದಲ್ಲಿ ನಿಮಗೆ ಆಸಕ್ತಿ ಇಲ್ಲ ಎಂದರೆ ಅದನ್ನು ಪತಿಗೆ ಪ್ರೀತಯಿಂದ ಮನವರಿಕೆ ಮಾಡಿಕೊಡಬೇಕು. ಅವರ ಆಸಕ್ತಿಗಳನ್ನು ನಿಮ್ಮ ಆಧ್ಯಾತ್ಮಿಕ ಹಾದಿಗೆ ಒಗ್ಗುವಂತೆ ಪ್ರಯತ್ನ ಮಾಡಬೇಕು
ಗಂಡನ ಜೊತೆ ಪ್ರೀತಿ, ಸಂಯಮ ಅತೀ ಅಗತ್ಯ. ನಿನ್ನ ಬಯಕೆ, ದಾರಿ ಬಗ್ಗೆ ಗಂಡ ಒಪ್ಪದಿದ್ದರೆ, ಅಥವಾ ವಿರೋಧಿಸಿದರೆ ಸಮಸ್ಯೆ ಮತ್ತಷ್ಟು ಜಟಿಲವಾಗಲಿದೆ. ಕಾರಣ ನಿಮ್ಮ ವೈರಾಗ್ಯ ಅಥವಾ ಕಾಮದ ನಿರಾಸಕ್ತಿಯನ್ನು ಕೆಲ ದಿನಗಳ ಕಾಲ ಗಂಡ ಸಹಿಸಿಕೊಳ್ಳಬಹುದು. ಬಳಿಕ ಗಂಡ ಬೇರೆ ಅಥವಾ ತಪ್ಪು ದಾರಿ ಹಿಡಿದರೆ, ಅಕ್ರಮ ಸಂಬಂಧ ಹಿಡಿದರೆ ಸಮಸ್ಯೆ ಗಂಭೀರವಾಗಲಿದೆ. ಹೀಗಾಗಿ ಪತಿಯನ್ನು ಕೆಟ್ಟ ದಾರಿ ಹಿಡಿಯದಂತೆ ನೋಡಿಕೊಳ್ಳುವುದು ಪತಿಯ ಜವಾಬ್ದಾರಿಯಾಗಿದೆ. ಗಂಡನಿಗೆ ಸಾಥ್ ನೀಡಿ ಪ್ರೀತಿಯಿಂದಲೇ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.