ಮದ್ವೇಲಿ ವರನಿಗೆ ನೋಟುಗಳದ್ದೇ ಹಾರ, ಖರ್ಚು ಮಾಡಿದ್ದು ಬರೋಬ್ಬರಿ 20 ಲಕ್ಷ ರೂ.!

By Suvarna News  |  First Published Nov 25, 2023, 5:36 PM IST

ಮದುವೆಯಲ್ಲಿ ವರನೊಬ್ಬ ನೋಟುಗಳ ಹಾರ ಧರಿಸಿರುವ ವೀಡಿಯೋವೊಂದು ಈಗ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ಆಗಿದೆ. ಬರೋಬ್ಬರಿ ನಾಲ್ಕಾರು ಅಡಿ ಉದ್ದದ ಹಾರದಲ್ಲಿ 500 ರೂಪಾಯಿಗಳ 20 ಲಕ್ಷ ರೂಪಾಯಿಗಳಿವೆ ಎಂದು ಹೇಳಲಾಗಿದೆ.
 


ತಮ್ಮ ಮದುವೆಯಲ್ಲಿ ಎಲ್ಲರ ಗಮನ ಸೆಳೆಯುವ ದಿರಿಸನ್ನು ತೊಡಬೇಕು ಎನ್ನುವುದು ಬಹಳಷ್ಟು ಜನರ ಆಸೆ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಮಹಿಳೆಯರಿಗಾದರೆ ಸ್ವರ್ಗದ ಅಪ್ಸರೆಯರನ್ನೂ ನಾಚಿಸುವ, ಮೀರಿಸುವ ವೈಭವದ ಅಲಂಕಾರಗಳನ್ನು ಮಾಡಬಹುದು. ಅಂತಹ ಉಡುಗೆ, ಆಭರಣಗಳನ್ನು ತೊಡಬಹುದು. ಲಕ್ಷಾಂತರ ರೂಪಾಯಿ ಬೆಲೆಬಾಳುವ ವಿವಿಧ ರೀತಿಯ ರೇಷ್ಮೆ ಸೀರೆಗಳನ್ನು ಧರಿಸಬಹುದು. ಹಾಗೆಯೇ, ಮದುಮಗನೂ ಲಕ್ಷಾಂತರ ರೂಪಾಯಿ ಬೆಲೆಯ ಸೂಟ್ ಧರಿಸುವ ಅವಕಾಶವಿದೆ. ಕುರ್ತಾ, ಶೆರ್ವಾನಿಯಲ್ಲಿ ಮಿಂಚುವ ಸಾಧ್ಯತೆಯಿದೆ. ಆದರೆ, ಹರಿಯಾಣ ರಾಜ್ಯದಲ್ಲಿ ಒಬ್ಬಾತ ನೋಟುಗಳ ಹಾರವನ್ನು ಧರಿಸಿ ಸುದ್ದಿಯಲ್ಲಿದ್ದಾನೆ. ನಮ್ಮ ದೇಶದಲ್ಲಿ ನೋಟುಗಳ ಹಾರವನ್ನು ಧರಿಸುವುದು, ತಯಾರಿಸುವುದು ಅಪರೂಪವೇನಲ್ಲ. ರಾಜಕಾರಣಿಗಳ ಸನ್ಮಾನ ಕಾರ್ಯಕ್ರಮಗಳಲ್ಲಿ ಇದು ಸಾಮಾನ್ಯ ನೋಟ. ಮದುವೆ ಹಾಗೂ ಇನ್ನಿತರ ಅದ್ದೂರಿ ಸಮಾರಂಭಗಳಲ್ಲಿ ನೋಟುಗಳನ್ನು ಹಾಗೆಯೇ ಹಾರವನ್ನಾಗಿ ಮಾಡಿ ಧರಿಸುವ ಶೋಕಿ ಕಂಡುಬರುತ್ತದೆ. ಹಾಗೆಯೇ, ಈತ ಕೂಡ ನೋಟುಗಳ ಹಾರವನ್ನು ಧರಿಸಿದ್ದಾನೆ. 

ಇತ್ತೀಚೆಗೆ ದಿಲ್ ಶಾದ್ ಖಾನ್ ಎಂಬುವವರ ಖಾತೆಯಿಂದ ಈ ವೀಡಿಯೋ (Video) ಶೇರ್ (Share) ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಇದರಲ್ಲಿ ವರನೊಬ್ಬ 500 ರೂಪಾಯಿ ನೋಟುಗಳ (Notes) ಹಾರವನ್ನು ಧರಿಸಿದ್ದಾನೆ. ಇದರಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿಗಳಿವೆ ಎಂದು ಹೇಳಲಾಗಿದೆ. 500 ರೂಪಾಯಿ ನೋಟುಗಳನ್ನು ಮಡಚಿ ಹಾರವನ್ನಾಗಿ (Garland) ಮಾಡಲಾಗಿದ್ದು, ಹತ್ತು ಮೀಟರ್ ನಷ್ಟು ಉದ್ದವಿದೆ. ವರನಿಗೆ (Groom) ಇದನ್ನು ಹಾಕಬೇಕೆಂದೇ ಆತನನ್ನು ಮನೆಯ ಮಾಳಿಗೆಯ ಮೇಲೆ ನಿಲ್ಲಿಸಲಾಗಿದೆ. ಇದಕ್ಕೆ ನೋಡುಗರು ಸಖತ್ತಾಗಿ ಕಾಮೆಂಟ್ ಮಾಡಿದ್ದಾರೆ. ಇಷ್ಟೊಂದು ದುಂದುವೆಚ್ಚ ಮಾಡುವ, ಸಂಪತ್ತನ್ನು ಪ್ರದರ್ಶನಕ್ಕಿಡುವ ಅಗತ್ಯವೇನಿತ್ತು ಎಂದು ಕೆಲವರು ಪ್ರಶ್ನಿಸಿದರೆ, ಕೆಲವರು ವಿಚಿತ್ರವಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನೋಟುಗಳ ಅಧಿಕೃತತೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ!

ರಶ್ಮಿಕಾ ಮಾತೃಭಾಷೆ ತೆಲುಗಾ? ಕನ್ನಡನಾ? :ಟ್ರೋಲರ್ಸ್‌ಗಳೇ ಇಲ್ಲಿ ನೋಡಿ...

Tap to resize

Latest Videos

ವಿಭಿನ್ನ ಕಾಮೆಂಟುಗಳ (Comments) ನಡುವೆ ಎಲ್ಲರೂ ಒಪ್ಪಿಕೊಂಡಿರುವ ಒಂದು ಸಂಗತಿ ಎಂದರೆ, ಇದು ಎಲ್ಲರ ಗಮನ ಸೆಳೆಯುವ ಹಾರ ಎಂದು. ಇಂತಹ ಹಾರ ಎಲ್ಲರೂ ವರನತ್ತ ದೃಷ್ಟಿಹಾಯಿಸಲು ಕಾರಣವಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಸಾಕ್ಷಿಯಾದವರಿಗೆ ಎಂದಿಗೂ ಮರೆಯದ ಸ್ಮರಣೆಯಾಗಿ ಉಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಹರಿಯಾಣದ ಖುರೇಷಿಪುರ ಗ್ರಾಮದ ಸನ್ನಿವೇಶ ಎಂದು ಇದನ್ನು ಶೇರ್ ಮಾಡಿರುವ ದಿಲ್ ಶಾದ್ ಖಾನ್ ಹೇಳಿಕೊಂಡಿದ್ದಾರೆ. ಶೇರ್ ಮಾಡಿದ ಕೆಲವೇ ಸಮಯದಲ್ಲಿ ಈ ವೀಡಿಯೋ 15 ಮಿಲಿಯನ್ ವೀಕ್ಷಣೆಗೆ (Views) ಒಳಗಾಗಿದೆ ಎಂದರೆ ಅಚ್ಚರಿಯಾಗಬೇಕು. ಅಷ್ಟೇ ಅಲ್ಲ, 3 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಸಿಕ್ಕಾಪಟ್ಟೆ ವಿಭಿನ್ನ ಕಾಮೆಂಟ್ ಗಳೂ ಹರಿದು ಬಂದಿವೆ.

ಹೆಂಡ್ತಿಗೆ ಗೊತ್ತಾಗದಂತೆ ಮ್ಯಾಚ್ ನೋಡ್ತಾ ಮನೆಯಲ್ಲೇ ಗುಂಡು ಹೀರೋದೇಗೆ: ವೀಡಿಯೋ ಸಖತ್ ವೈರಲ್

ಒಬ್ಬರು ವಿನೋದದಿಂದ “ಈ ಹಾರ ಚೆನ್ನಾಗಿದೆ, ಆದರೆ, ಇದನ್ನು ಧರಿಸಿ ವರ ಹೇಗೆ ನಡೆದು ಹೋಗುತ್ತಾನೆ?’ ಎಂದು ಪ್ರಶ್ನಿಸಿದರೆ, ಮತ್ತೊಬ್ಬರು “ನಾವು ಆದಾಯ ತೆರಿಗೆ (Income Tax) ಇಲಾಖೆಗೆ ನಾವು ವರದಿ ಮಾಡಬೇಕು’ ಎಂದು ಹೇಳಿದ್ದಾರೆ. “ಈ ನೋಟುಗಳ ಅಸಲಿತನದ ಬಗ್ಗೆ ಅನುಮಾನ ಬರುತ್ತೆ” ಎಂದೂ ಒಬ್ಬರು ಹೇಳಿದ್ದಾರೆ.

ಸಂಪತ್ತಿನ (Wealth) ದ್ಯೋತಕವಾದ ನೋಟುಗಳನ್ನೇ ಮಾಲೆಯಾಗಿ, ಹಾರವನ್ನಾಗಿ ಮಾಡಿಕೊಂಡು ಧರಿಸುವುದು ದೇಶದ ಹಲವು ಭಾಗಗಳಲ್ಲಿ ಕಂಡುಬರುತ್ತದೆ. ನೋಟನ್ನು ಧರಿಸುವುದು ಅಭಿವೃದ್ಧಿ ಮತ್ತು ಉತ್ತಮ ಅದೃಷ್ಟದ (Luck) ಸಂಕೇತವನ್ನಾಗಿ ಪರಿಗಣಿಸಲಾಗುತ್ತದೆ. ಆದರೆ, ನೋಟುಗಳಿಗೆ ಅಗೌರವ ನೀಡಿದಂತೆಯೂ ಆಗುತ್ತದೆ ಎನ್ನುವುದು ಹಲವರ ಅಭಿಪ್ರಾಯ. 
 

click me!