ಅಂಬಾನಿ ಕುಟುಂಬದ ಪ್ರತಿಯೊಂದು ಕೆಲಸ ಎಲ್ಲರ ಗಮನ ಸೆಳೆಯುತ್ತದೆ. ಶ್ರೀಮಂತ ಮನೆ ಸೊಸೆಯಾಗಿರುವ ನೀತಾ ಅಂಬಾನಿ ಕೂಡ ಎಲ್ಲಿಯೂ ತಮ್ಮ ಸಂಪ್ರದಾಯ ಬಿಟ್ಟುಕೊಟ್ಟಿಲ್ಲ. ಬರೀ ಉದ್ಯಮಿಯಾಗಿ, ಸೊಸೆಯಾಗಿ ಮಾತ್ರವಲ್ಲ ತಾಯಿಯಾಗಿ ಎಲ್ಲರಿಗೆ ಮಾದರಿ ನೀತಾ ಅಂಬಾನಿ.
ನೀತಾ ಅಂಬಾನಿ ಶಕ್ತಿಶಾಲಿ ಮಹಿಳೆ ಮಾತ್ರವಲ್ಲದೆ ಮೂರು ಮಕ್ಕಳ ತಾಯಿ. ಅವರ ಮೂವರು ಮಕ್ಕಳಾದ ಇಶಾ,ಆಕಾಶ್ ಮತ್ತು ಅನಂತ್ ತಾಯಿ ನೀತಾ ಮತ್ತು ತಂದೆ ಮುಖೇಶ್ ಅಂಬಾನಿ ಜೊತೆ ಕಾಣಿಸಿಕೊಳ್ತಾರೆ. ಅವರ ಉದ್ಯಮದಲ್ಲಿ ಕೈ ಜೋಡಿಸಿದ್ದಾರೆ. ನೀತಾ-ಮುಕೇಶ್ ಅಂಬಾನಿ ಮೇಲೆ ವಿಶ್ವದ ಜನರ ಕಣ್ಣಿದೆ. ಬರೀ ಅವರ ವ್ಯವಹಾರವನ್ನು ಜನರು ಮೆಚ್ಚಿಕೊಂಡಿಲ್ಲ. ನೀತಾ ಹಾಗೂ ಮುಖೇಶ್ ಅಂಬಾನಿ ಕೌಟುಂಬಿಕ ಮೌಲ್ಯಗಳಿಂದಾಗಿ ಜನಮನದಲ್ಲಿ ಉಳಿದಿದ್ದಾರೆ. ದೊಡ್ಡವರ ಮನೆ ಮಕ್ಕಳು, ಶ್ರೀಮಂತಿಕೆಯ ಉತ್ತುಂಗದಲ್ಲಿರುವ ಜನರ ಮಕ್ಕಳು ದಾರಿ ತಪ್ಪುತ್ತಾರೆ ಎನ್ನುವ ಮಾತಿದೆ. ಆದ್ರೆ ನೀತಾ – ಮುಖೇಶ್ ಅಂಬಾನಿ ಮಕ್ಕಳು ಇದಕ್ಕೆ ತದ್ವಿರುದ್ಧವಾಗಿದ್ದಾರೆ. ಉದ್ಯಮವನ್ನು ಮುನ್ನಡೆಸುತ್ತಿರುವ ಮಕ್ಕಳು, ಕೌಟುಂಬಿಕ ಮೌಲ್ಯಕ್ಕೆ ಬೆಲೆ ನೀಡ್ತಾರೆ. ನೀತಾ ದಂಪತಿ ಮಕ್ಕಳನ್ನು ಬೆಳೆಸಿದ ರೀತಿ ಎಲ್ಲರ ಗಮನ ಸೆಳೆದಿದೆ.
ಮೂರು ಮಕ್ಕಳ ನಡುವೆ ಯಾವುದೇ ವ್ಯತ್ಯಾಸವಿಲ್ಲ : ಗಂಡು ಮಕ್ಕಳನ್ನು ಹಾಗೆ ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿ ಭಾರತ (India) ದಲ್ಲಿ ಭಿನ್ನವಾಗಿದೆ. ಆದ್ರೆ ನೀತಾ (Nita) ಅಂಬಾನಿ ಮನೆಯಲ್ಲಿ ಈ ನಿಯಮವಿಲ್ಲ. ಸಂದರ್ಶನವೊಂದಲ್ಲಿ ಮಾತನಾಡಿದ ನೀತಾ ಅಂಬಾನಿ (Ambani), ಮೂವರಲ್ಲಿ ಯಾರನ್ನೂ ಭಿನ್ನವಾಗಿ ಕಂಡಿಲ್ಲ ಎಂದಿದ್ದಾರೆ. ನನ್ನ ಮೂವರು ಮಕ್ಕಳನ್ನು ಒಂದೇ ರೀತಿ ನೋಡುತ್ತೇನೆ. ನನ್ನ ಪುತ್ರರಾದ ಆಕಾಶ್ ಮತ್ತು ಅನಂತ್ ಯಾವು ಕೆಲಸ ಮಾಡಬಲ್ಲರೋ ಆ ಕೆಲಸವನ್ನು ಮಗಳು ಇಶಾ ಅಂಬಾನಿ ಕೂಡ ಮಾಡಬಲ್ಲರು ಎಂದು ನೀತಾ ಹೇಳಿದ್ದಾರೆ. ನನ್ನ ಮಗಳ ಬಗ್ಗೆ ನನಗೆ ಹೆಮ್ಮೆ ಇದೆ. ಇಶಾ ಅವಳಿ ಮಕ್ಕಳ ತಾಯಿ. ಅವರು ಕುಟುಂಬ, ಮಕ್ಕಳು ಮತ್ತು ವ್ಯಾಪಾರ ಎಲ್ಲವನ್ನೂ ನೋಡಿಕೊಳ್ತಿದ್ದಾರೆ ಎಂದು ನೀತಾ ಹೆಮ್ಮೆಯಿಂದ ಹೇಳಿದ್ದಾರೆ.
undefined
ವರ್ಕ್ ಫ್ರಂ ಹೋಂ, ಮೂನ್ ಲೈಟಿಂಗ್ ಆಯ್ತು ಇದೀಗ ಕಾಫಿ ಬ್ಯಾಡ್ಜಿಂಗ್ ಹೊಸ ಟ್ರೆಂಡ್!
ಹುಡುಗಿಯರು ಹುಡುಗರಿಗಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ ಎಂಬ ವಿಚಾರವನ್ನು ಮನೆಯಿಂದಲೇ ಕಲಿಸಬೇಕು ಎಂದು ನಾನು ಭಾವಿಸುತ್ತೇನೆ. ಹುಡುಗ ಮಾಡುವುದನ್ನು ಹುಡುಗಿಯೂ ಮಾಡಬಲ್ಲಳು. ಇಶಾ, ಆಕಾಶ್ ಮತ್ತು ಅನಂತ್ ನಡುವೆ ನಾನು ಯಾವತ್ತೂ ವ್ಯತ್ಯಾಸ ಮಾಡಿಲ್ಲ. ಪ್ರತಿ ಹುಡುಗಿಗೆ ಆಕೆ ಹಕ್ಕುಗಳನ್ನು ನೀಡುವ ಅವಶ್ಯಕತೆಯಿದೆ. ಅವಕಾಶ ಸಿಕ್ಕರೆ ಮಿಂಚುವ ಗಾಜಿನಂತಿದ್ದಾರೆ ಹುಡುಗಿಯರು. ಕಾರ್ಪೊರೇಟ್ ಜಗತ್ತು ಇದನ್ನು ಅರ್ಥಮಾಡಿಕೊಳ್ಳುತ್ತಿದೆ. ಪುರುಷರು ಮತ್ತು ಮಹಿಳೆಯರ ಸಂಬಳ ಸಮಾನವಾಗಿದೆ. ಈ ಬದಲಾವಣೆ ಅಗತ್ಯ ಎನ್ನುತ್ತಾರೆ ನೀತಾ.
ಮಕ್ಕಳಿಗೆ ಇಷ್ಟು ಪಾಕೆಟ್ ಮನಿ ನೀಡ್ತಿದ್ರು ನೀತಾ ಅಂಬಾನಿ : ಕೋಟಿ ಕೋಟಿ ವ್ಯವಹಾರ ನಡೆಸುವ ಮುಖೇಶ್ ಅಂಬಾನಿ ಕುಟುಂಬ ಮಕ್ಕಳನ್ನು ಬೆಳೆಸುವುದ್ರಲ್ಲಿ ಬಹಳ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಮಕ್ಕಳಿಗೆ ಬೇಕಾಬಿಟ್ಟಿ ಪಾಕೆಟ್ ಮನಿ ನೀಡಿ ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಎಂದೂ ಮಾಡಿಲ್ಲ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ನೀತಾ ಅಂಬಾನಿ, ಮಕ್ಕಳು ಚಿಕ್ಕವರಿರುವಾಗ ಅವರಿಗೆ ಅತಿ ಕಡಿಮೆ ಹಣವನ್ನು ಪಾಕೆಟ್ ಮನಿಯಾಗಿ ನೀಡ್ತಿದ್ದರಂತೆ. ನನ್ನ ಮಕ್ಕಳು ಇನ್ನೂ ಚಿಕ್ಕವರಿದ್ದಾಗ, ನಾನು ಪ್ರತಿ ಶುಕ್ರವಾರ ಶಾಲೆಯ ಕ್ಯಾಂಟೀನ್‌ನಲ್ಲಿ (School Canteen) ಖರ್ಚು ಮಾಡಲು ಅವರಿಗೆ ತಲಾ 5 ರೂಪಾಯಿ ನೀಡುತ್ತಿದ್ದೆ ಎನ್ನುತ್ತಾರೆ ನೀತಾ. ಒಂದು ದಿನ ನನ್ನ ಕಿರಿಯ ಅನಂತ್ ನನ್ನ ಮಲಗುವ ಕೋಣೆಗೆ ಓಡಿ ಬಂದು ತನಗೆ 10 ರೂಪಾಯಿ ನೀಡುವಂತೆ ಕೇಳಿದ್ದ. ಯಾಕೆ ಎಂದು ಪ್ರಶ್ನಿಸಿದಾಗ, ಐದು ರೂಪಾಯಿ ನಾಣ್ಯವನ್ನು ತೆಗೆಯುತ್ತಿದ್ದರೆ ಸ್ನೇಹಿತರು ನಗ್ತಾರೆ. ಅಂಬಾನಿಯಾ ಇಲ್ಲ ಭಿಕ್ಷುಕನಾ ಎನ್ನುತ್ತಾರೆ ಎಂದು ಹೇಳಿದ್ದರಂತೆ.
ನಾವು ಈಗಲೂ ಯುವ ಜೋಡಿಯಂತೆ ಡೈವ್ ಹೋಗುತ್ತೇವೆ: ಮುಖೇಶ್ ಅಂಬಾನಿ ಪ್ರೀತಿ ಬಗ್ಗೆ ನೀತಾ ಮಾತು
ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಮುಖೇಶ್ ಅಂಬಾನಿಗೂ ನೀತಾ ಸಲಹೆ ನೀಡಿದ್ದರಂತೆ. ರಿಲಯನ್ಸ್ ಮತ್ತು ದೇಶದ ಭವಿಷ್ಯದ ಮೇಲೆ ಪ್ರಭಾವ ಬೀರುವಲ್ಲಿ ನೀವು ನಿರತರಾಗಿರಬಹುದು, ಆದರೆ ನಿಮ್ಮ ಮಕ್ಕಳ ಭವಿಷ್ಯದ ಮೇಲೂ ನೀವು ಉತ್ತಮ ಪ್ರಭಾವ ಬೀರುತ್ತೀರಿ ಎಂಬುದನ್ನು ನೆನಪಿಡಿ. ಕ್ವಾಲಿಟಿ ಮತ್ತು ಕ್ವಾಂಟಿಟಿ ಎರಡೂ ಇಲ್ಲಿ ಮುಖ್ಯ. ಇದು ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುತ್ತದೆ ಎಂದು ನೀತಾ ಹೇಳಿದ್ದರಂತೆ.