ಅಬ್ಬಾ ನೋಡಿದ್ರೇನೆ ಭಯವಾಗುತ್ತೆ..ಚಲಿಸುವ ರೈಲಿನಲ್ಲಿ ಜೋಡಿಯಿಂದ ಇದೆಂಥಾ ಹುಚ್ಚಾಟ..!

By Suvarna News  |  First Published Jul 5, 2023, 9:26 AM IST

ದೆಹಲಿ ಮೆಟ್ರೋ ಅಂದ್ರೆ ಕಪಲ್‌ ಕಿಸ್ ಎಂಬಂತಾಗಿದೆ. ಮೆಟ್ರೋದಲ್ಲಿ ಜೋಡಿ ಲಿಪ್ ಲಾಕ್ ಮಾಡಿಕೊಳ್ಳುವ ವಿಡಿಯೋ ಆಗಾಗ ವೈರಲ್ ಆಗುತ್ತಿರುತ್ತದೆ. ಈಗ ಇಂಡಿಯನ್‌ ರೈಲ್ವೇ ಸರದಿ. ಜೋಡಿ ರೈಲಿನ ಬಾಗಿಲಿಗೆ ನೇತಾಡಿಕೊಂಡು ಕಿಸ್ ಮಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಇಂಡಿಯನ್ ರೈಲ್ವೇ ಸಾಕಷ್ಟು ಅಚ್ಚರಿಯ ಘಟನೆಗಳಿಗೆ ಸುದ್ದಿಯಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಖುಷಿಯ ಘಟನೆಗಳಾದರೆ ಇನ್ನು ಕೆಲವೊಮ್ಮೆ ಕೆಟ್ಟ ಘಟನೆಗಳಿಂದಾಗಿ ಸುದ್ದಿಯಾಗುತ್ತದೆ. ಅದರಲ್ಲೂ ಇತ್ತೀಚಿಗೆ ರೀಲ್ಸ್ ಟ್ರೆಂಡ್ ಹೆಚ್ಚಾಗಿರುವ ಕಾರಣ ಜನರು ಹೋದಲ್ಲಿ ಬಂದಲ್ಲಿ ರೀಲ್ಸ್ ಮಾಡಿ ಡ್ಯಾನ್ಸ್ ಮಾಡುವುದು ಸಾಮಾನ್ಯವಾಗಿದೆ. ರೈಲು ಪ್ರಯಾಣದಲ್ಲಿ ಜನರು ಇಂಥಾ ವಿಡಿಯೋ ಮಾಡೋದನ್ನು ಮಿಸ್ ಮಾಡೋದಿಲ್ಲ. ಚಲಿಸುವ ರೈಲಿನಲ್ಲಿ ಸಖತ್ ಆಗಿ ಡ್ಯಾನ್ಸ್‌ ಮಾಡಿ ರೀಲ್ಸ್ ಮಾಡುತ್ತಾರೆ. ಹಾಗೆಯೇ ಇಲ್ಲೊಂದು ಜೋಡಿ, ರೈಲಿನ ಬಾಗಿಲಿಗೆ ನೇತಾಡಿಕೊಂಡು ಕಿಸ್ ಮಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟ್ವಿಟರ್ ಬಳಕೆದಾರರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ರೈಲಿನಲ್ಲಿ ಜೋಡಿಯ ಹುಚ್ಚಾಟ, ನೆಟ್ಟಿಗರ ಕ್ಲಾಸ್
ದೆಹಲಿ ಮೆಟ್ರೋ ಅಂದ್ರೆ ಕಪಲ್‌ ಕಿಸ್ ಎಂಬಂತಾಗಿದೆ. ಮೆಟ್ರೋದಲ್ಲಿ ಜೋಡಿ ಲಿಪ್ ಲಾಕ್ ಮಾಡಿಕೊಳ್ಳುವ ವಿಡಿಯೋ ಆಗಾಗ ವೈರಲ್ ಆಗುತ್ತಿರುತ್ತದೆ. ಈಗ ಇಂಡಿಯನ್‌ ರೈಲ್ವೇ ಸರದಿ. ಜೋಡಿ ರೈಲಿನ ಬಾಗಿಲಿಗೆ ನೇತಾಡಿಕೊಂಡು (Hanging) ಕಿಸ್ ಮಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟ್ವೀಟ್‌ನಲ್ಲಿ ವ್ಯಕ್ತಿಯೊಬ್ಬರು 'ನಿಮ್ಮ ಪ್ರೇಮಿ (Lover)ಯೊಂದಿಗೆ ನೀವು ಯಾಕೆ ಹೀಗೆ ಮಾಡಬಾರದು' ಎಂಬ ಶೀರ್ಷಿಕೆ ನೀಡಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 

Tap to resize

Latest Videos

ಇದು ಟ್ರೈನೋ, ಓಪನ್‌ ಶವರ್‌ ಬೋಗಿಯೋ: ಎಸಿ ಕೋಚ್‌ನಲ್ಲಿ ನೀರು ಸೋರಿಕೆ ವಿರುದ್ಧ ನೆಟ್ಟಿಗರ ವ್ಯಂಗ್ಯ

ಒಬ್ಬ ಬಳಕೆದಾರರು, 'ನನಗೆ ಈಗಾಗಲೇ ಹೆಂಡತಿಯಿದ್ದಾಳೆ, ಹೀಗಾಗಿ ನಾನು ಪ್ರೇಮಿಯ ಜೊತೆ ಇದನ್ನು ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು 'ಹೀಗೆಲ್ಲಾ ಮಾಡಲು ಆಕೆ ಒಪ್ಪುವುದಿಲ್ಲ' ಎಂದು ಕಮೆಂಟಿಸಿದ್ದಾರೆ. ಕೆಲವೊಬ್ಬರು ಈ ಫೋಟೋವನ್ನು ಹಂಚಿಕೊಂಡು ಮೀಮ್ಸ್ ಮಾಡಿ ಶೇರ್ ಮಾಡಿದ್ದಾರೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ (Indian forest officer) ಪರ್ವೀನ್ ಕಸ್ವಾನ್, ಈ ರೀತಿ ಚಲಿಸುವ ರೈಲಿನಲ್ಲಿ ವಿಡಿಯೋ ಮಾಡುವುದರಿಂದ ಆಗೋ ದುಷ್ಕೃತ್ಯದ ಪರಿಣಾಮಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. 'ರೈಲ್ವೆ ಕಾಯಿದೆಯ ಸೆಕ್ಷನ್ 154-, ಇದು "ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಯನ್ನು (Safety) ದುಡುಕಿನ ಅಥವಾ ನಿರ್ಲಕ್ಷ್ಯದ ಕ್ರಿಯೆ ಅಥವಾ ಲೋಪದಿಂದ ಅಪಾಯಕ್ಕೆ ಒಳಪಡಿಸುತ್ತದೆ' ಎಂದು ತಿಳಿಸಿದ್ದಾರೆ. 

ಪೋಸ್ಟ್ ಅನ್ನು ಜುಲೈ 1 ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ, ಇದು ಹಲವಾರು ತಮಾಷೆಯ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ ಮತ್ತು ಕೆಲವರು ಜೋಡಿ ಚಲಿಸುತ್ತಿರುವ ರೈಲಿನಲ್ಲಿ ಈ ಅಪಾಯಕಾರಿ (Dangerous) ವಿಡಿಯೋ ಮಾಡಿರುವುಕ್ಕೆ ಕಳವಳವನ್ನು ತೋರಿಸಿದ್ದಾರೆ. ಟ್ವೀಟ್ 4.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು 1,300 ಲೈಕ್‌ಗಳನ್ನು ಸಂಗ್ರಹಿಸಿದೆ.

ಸರ್‌ಪ್ರೈಸ್‌ ಕೊಡಲು ಬಂದ ಯುವಕ, ರೂಮಲ್ಲಿ ಇನ್ನೊಬ್ಬನ ಜೊತೆ ಚಕ್ಕಂದವಾಡ್ತಿದ್ಲು ಲವರ್!

ದೆಹಲಿ ಮೆಟ್ರೋದಲ್ಲಿ ಜೋಡಿಯ ಕಿಸ್ ಮಾಡಿದ ಜೋಡಿ, ಮುಜುಗರದಿಂದ ತಬ್ಬಿಬ್ಬಾದ ಪ್ರಯಾಣಿಕರು!
ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಜೋಡಿ ಕಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ದೆಹಲಿಯ ಹುಡಾ ಸಿಟಿ ಸೆಂಟರ್​ ಮಾರ್ಗವಾಗಿ ಈ ಮೆಟ್ರೋ ಚಲಿಸುತ್ತಿದ್ದು, ವಿಡಿಯೋದಲ್ಲಿ ಲವರ್‌ಗಳು ಕೈಕೈ ಹಿಡಿದುಕೊಂಡು ಮೆಟ್ರೋದ ಸೀಟ್‌ನಲ್ಲಿ ಕುಳಿತಿದ್ದು, ಸುತ್ತಲಿನ ಜನರ ಪರಿವೇ ಇಲ್ಲದೇ, ಲಿಪ್‌ಲಾಕ್‌ ಮಾಡುತ್ತಾ, ರೊಮಾನ್ಸ್ ಮಾಡುತ್ತಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಚಿತ್ರಗಳನ್ನು ಕ್ಲಿಕ್ಕಿಸಿ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು.

click me!