ಮನುಷ್ಯರಲ್ಲಿರುವ ಕೆಟ್ಟ ಗುಣಗಳ ಬಗ್ಗೆ ಅರಿತುಕೊಂಡಾಗ ನಾವು ಎಂತಹ ಜನರ ಒಡನಾಟದಲ್ಲಿರಬೇಕು ಎನ್ನುವ ಅರಿವಾಗುತ್ತದೆ. ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು (Physical Health) ರಕ್ಷಿಸಿಕೊಳ್ಳಲು ಕೆಟ್ಟ ಜನರಿಂದ ದೂರವಿರುವುದು ಅಗತ್ಯ. ಜನರಲ್ಲಿರುವ ಯಾವ ಗುಣಗಳು ನಮಗೆ ಹಿಂಸೆ ನೀಡುತ್ತವೆ ಎನ್ನುವುದನ್ನು ಅರಿತುಕೊಂಡು ಅವರಿಂದ ದೂರವಾಗಿಬಿಡಬೇಕು.
ದಿನವೂ ನಾವು ಸಾಕಷ್ಟು ಜನರ ಸಂಪರ್ಕಕ್ಕೆ ಬರುತ್ತೇವೆ. ಕಚೇರಿ, ಮಾರುಕಟ್ಟೆ, ನೆರೆಹೊರೆ, ನೆಂಟರಿಷ್ಟರ ನಡುವೆ ಒಡನಾಡುವ ಸಂದರ್ಭಗಳು ಎದುರಾಗುತ್ತಲೇ ಇರುತ್ತವೆ. ಎಷ್ಟೋ ಜನರ ವರ್ತನೆ, ಉದ್ದೇಶಗಳು ನಮಗೆ ಸರಿಬಾರದೆ ಇರಬಹುದು. ಅವರ ವರ್ತನೆ ನಮ್ಮಲ್ಲಿ ಏನೋ ಒಂದು ರೀತಿಯ ಕಸಿವಿಸಿ ಉಂಟುಮಾಡಬಹುದು. ನೆಗೆಟಿವ್ ಧೋರಣೆ ಹೊಂದಿರುವ ಜನರ ಕೆಲವು ಅಂಶಗಳನ್ನು ಅರಿತುಕೊಂಡರೆ ಅವರೊಂದಿಗೆ ಒಡನಾಡುವ ಸಮಯದಲ್ಲಿ ಸಹಾಯವಾಗುತ್ತದೆ. ಯಾರೊಬ್ಬರೂ ಕೆಟ್ಟವರಲ್ಲ ಅಥವಾ ದುಷ್ಟರಲ್ಲ. ಆದರೆ, ಅವರ ಎನರ್ಜಿಯ ಕಾರಣದಿಂದ ನಮಗೆ ಅವರ ಸಹವಾಸ ಹಿತ ಎನಿಸುವುದಿಲ್ಲ. ಅಂಥವರ ಒಡನಾಟದಿಂದ ಖುಷಿಯಾಗುವುದಿಲ್ಲ. ಅಂಥವರು ಉದ್ದೇಶಫೂರ್ವಕವಾಗಿ ನೆಗೆಟಿವ್ ವರ್ತನೆ ಮಾಡದಿರಬಹುದು, ಆದರೆ ಅವರ ಪ್ರಭಾವಳಿ ಎಂದು ಹೇಳಬಹುದಾದ ಎನರ್ಜಿ ನಮಗೆ ಸರಿಹೊಂದುವುದಿಲ್ಲ. ಇಂತಹ ಗುಣಗಳು ಎಲ್ಲರಲ್ಲೂ ಒಂದೇ ರೀತಿಯಾಗಿ ಇರುವುದಿಲ್ಲ, ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗಿರಬಹುದು. ಪ್ರತಿಯೊಬ್ಬರೂ ತಮ್ಮದೇ ಪ್ರಕೃತಿ ಹೊಂದಿದ್ದು, ಅದರ ಪ್ರಕಾರ ವರ್ತಿಸುತ್ತಾರೆ. ಅಂಥವರ ಬಗ್ಗೆ ಎಚ್ಚರಿಕೆ ಹೊಂದಿರುವುದು ಹಾಗೂ ಅವರಿಂದ ದೂರವೇ ಇರುವುದು ಕ್ಷೇಮಕರ.
• ಸಹಾನುಭೂತಿ (Empathy) ಇಲ್ಲದವರು
ಕರುಣೆ, ದಯೆ, ಸಹಾನುಭೂತಿಯಂತಹ ಮಾನವೀಯ (Humanity) ಗುಣಗಳಿಗೆ ಭಾರೀ ಮೌಲ್ಯವಿದೆ. ಇವುಗಳನ್ನು ಹೊಂದಿರದವರು ಕೆಟ್ಟವರಂತೆ ಭಾಸವಾಗುತ್ತಾರೆ. ಮತ್ತೊಬ್ಬರ ಅನುಭವ, ಭಾವನೆಗಳ (Feelings) ಬಗ್ಗೆ ಅವರಿಗೆ ಯಾವುದೇ ಸ್ಪಂದನೆ ಹೊಂದಿರುವುದಿಲ್ಲ. ಅತಿಯಾಗಿ ವಿರಕ್ತರಾಗಿರುತ್ತಾರೆ. ಮತ್ತೊಬ್ಬರ ನೋವನ್ನು ಎಂಜಾಯ್ (Enjoy) ಕೂಡ ಮಾಡಬಹುದು. ಅವರಲ್ಲಿರುವ ಕ್ರೌರ್ಯದಿಂದಾಗಿ ದೈಹಿಕ ಹಲ್ಲೆಗೂ (Physical Aggression) ಹಿಂಜರಿಯುವುದಿಲ್ಲ. ಈ ಮನಸ್ಥಿತಿಯಿಂದ ಅವರು ಉದ್ದೇಶಪೂರ್ವಕವಾಗಿ ಮತ್ತೊಬ್ಬರಿಗೆ ತೊಂದರೆ ನೀಡುತ್ತಾರೆ ಎನಿಸುವಂತೆ ಮಾಡುತ್ತದೆ. ಅಂಥವರಿಂದ ದೂರವಿದ್ದುಬಿಡಬೇಕು.
ನಿಮಗೆ ಗೊತ್ತಾ? ಈ ನಾಲ್ಕು ಹಾರ್ಮೋನ್ ನಿಮ್ಮನ್ನು ಯಾವಾಗ್ಲೂ ಖುಷ್ ಖುಷಿಯಾಗಿಡುತ್ತೆ!
• ಜವಾಬ್ದಾರಿ ಇಲ್ಲದವರು (Irresponsible)
ತಮ್ಮ ವರ್ತನೆ, ಕೃತ್ಯಗಳ (Actions) ಬಗ್ಗೆ ಯಾವುದೇ ಹೊಣೆಗಾರಿಕೆ ಹೊಂದಿರದ ಜನ ಸಹ ಅಪಾಯಕಾರಿ. ಇವರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು ಬೇರೆಯವರ ಮೇಲೆ ಆರೋಪ (Blame) ಮಾಡಲು ಮುಂದಿರುತ್ತಾರೆ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಇತರರ ಮೇಲೆ ದೋಷಾರೋಪ ಮಾಡುತ್ತಲೇ ಇರುತ್ತಾರೆ. ಇವರಲ್ಲಿ ಅಪರಾಧಿ ಪ್ರಜ್ಞೆ (Guilt) ಇರುವುದಿಲ್ಲ. ತಮ್ಮ ಉದ್ದೇಶಗಳನ್ನು ಪದೇ ಪದೆ ಬದಲಿಸಿಕೊಳ್ಳುತ್ತಿರುತ್ತಾರೆ.
• ಪ್ರಾಣಿಗಳ ಬಗ್ಗೆ ಕ್ರೌರ್ಯ (Cruelty)
ಪ್ರಾಣಿಗಳ ಬಗ್ಗೆ ಕ್ರೌರ್ಯ ತೋರುವ ಯಾರನ್ನಾದರೂ ನೀವು ನೋಡಿದ್ದೀರಾ? ತಮ್ಮದೇ ಸಾಕುಪ್ರಾಣಿಗಳನ್ನು ಕೆಟ್ಟದಾಗಿ ಟ್ರೀಟ್ ಮಾಡುವವರು, ನಿರ್ದಯದಿಂದ ಅವುಗಳನ್ನು ಹೊಡೆಯುವವರಲ್ಲಿ ಆಳವಾದ ಕೆಟ್ಟ (Bad) ಭಾವನೆ ಇರುತ್ತದೆ. ಪ್ರಾಣಿಗಳ ಬಗ್ಗೆ ಕರುಣೆಯಿಲ್ಲದಂತೆ ವರ್ತಿಸುವವರು, ಅವುಗಳಿಗೆ ನೋವುಂಟುಮಾಡುವವರು ಕೆಟ್ಟ ಲಕ್ಷಣ.
• ದುರುದ್ದೇಶ ಮತ್ತು ಅಗೌರವ (Dishonest)
ಕೆಲವರು ತಮ್ಮ ಸ್ವಾರ್ಥಕ್ಕಾಗಿ ಎಂತಹ ಸುಳ್ಳನ್ನಾದರೂ (Lie) ಹೇಳುತ್ತಾರೆ. ಇತರರನ್ನು ಪ್ರಚೋದಿಸುತ್ತಾರೆ, ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಮಾನಸಿಕವಾಗಿ ದುರ್ಬಲರಾಗಿರುವವನ್ನು ಇಂಥವರು ಪ್ರಚೋದಿಸಿ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುತ್ತಾರೆ. ಸತ್ಯವನ್ನು ಮರೆಮಾಚುತ್ತಾರೆ, ಬೇರೊಬ್ಬರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮಾನಸಿಕವಾಗಿ (Mentally) ವಿವಿಧ ರೀತಿಯಲ್ಲಿ ಪ್ರಚೋದಿಸುತ್ತಾರೆ. ನಿಮ್ಮದೇ ವಿಚಾರಗಳ ಬಗ್ಗೆ ಅಪನಂಬಿಕೆ ಬರುವಂತೆ ಮಾಡುತ್ತಾರೆ.
Mental Health : ರಾತ್ರಿ ನಿದ್ರೆ ಸೊಂಪಾಗಿ ಆಗ್ಬೇಕು ಅಂದ್ರೆ ಈ ವಸ್ತು ಬಳಸಿ ನೋಡಿ
• ನೆಗೆಟಿವ್ ಅಲೆ (Negative Vibes)
ನೆಗೆಟಿವ್ ಭಾವನೆಗಳನ್ನು ಹೊಂದಿರುವವರ ಜತೆಗಿರುವಾಗ ಕಂಫರ್ಟ್ (Comfort) ಎನಿಸುವುದಿಲ್ಲ. ಈ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗುತ್ತದೆ. ಇಂಥವರ ಜತೆಗಿರುವಾಗ ಅರಿವಿಲ್ಲದೇ ಮಾನಸಿಕವಾಗಿ ಕಿರಿಕಿರಿ ಎನಿಸುತ್ತದೆ, ದುಗುಡವಾಗುತ್ತದೆ, ಶಕ್ತಿ ಕುಂದಿದಂತೆ ಭಾಸವಾಗುತ್ತದೆ. ಅವರ ನೆಗೆಟಿವ್ ಧೋರಣೆ ನಿಮ್ಮ ಮೂಡ್ (Mood), ವಿಚಾರ, ಆರೋಗ್ಯವನ್ನು (Health) ಹಾಳು ಮಾಡಬಹುದು.
• ದ್ವೇಷವೇ (Hatred) ಉಸಿರು
ಕೆಲವರನ್ನು ನೋಡಿ, ಅವರು ಯಾವಾಗಲೂ ಯಾರನ್ನಾದರೂ ದ್ವೇಷಿಸುತ್ತಿರುತ್ತಾರೆ. ವಿಪರೀತ ಟೀಕೆ (Criticism) ಮಾಡುತ್ತಾರೆ. ಯಾರಲ್ಲೂ ಸಕಾರಾತ್ಮಕ (Positive) ಅಂಶಗಳನ್ನು ನೋಡುವುದಿಲ್ಲ. ನಿರಂತರವಾಗಿ ನೆಗೆಟಿವ್ ಅಂಶಗಳನ್ನು ಗುರುತಿಸುತ್ತ ಲೇವಡಿ ಮಾಡುತ್ತಾರೆ.