
ಸಾಮಾನ್ಯವಾಗಿ ಅಜ್ಜಿ ಅಂದರೆ ನಮ್ಮ ಕಣ್ಣ ಮುಂದೆ ಬರೋದು ತಲೆ ಎಲ್ಲಾ ಬೆಳ್ಳಗಾಗಿರುವ ಸುಮಾರು 60 ವರ್ಷ ಮೇಲ್ಪಟ್ಟ ಹೆಂಗಸು. ಆದರೆ, 39ನೇ ವಯಸ್ಸಿನಲ್ಲಿ ಅಜ್ಜಿಯಾದ ಚೀನಾದ ಮಹಿಳೆ ಮತ್ತು ಮೊಮ್ಮಗುವಿನ ಫೋಟೋ ನೋಡಿ ಸೋಶಿಯಲ್ ಮೀಡಿಯಾದವರೆಲ್ಲಾ ಶಾಕ್ ಆಗಿದ್ದಾರೆ. ಈ ಫೋಟೋ ಮತ್ತು ವಿಡಿಯೋ ನೋಡಿದವರೆಲ್ಲಾ ಆಕೆ ಅಜ್ಜಿಯಲ್ಲ, ಮಗುವಿನ ಅಮ್ಮ ಅಂತ ಅಂದುಕೊಂಡಿದ್ದಾರೆ. ಆದರೆ, ಸತ್ಯಾಂಶ ಬೇರೆಯೇ ಆಗಿದೆ ಎಂದು ನಂತರ ತಿಳಿದುಬಂದಿದೆ.
ಚೀನಾದ ಈಶಾನ್ಯ ಪ್ರಾಂತ್ಯದ ಅನ್ಹುಯಿಯ ಸುಚೌವ್‌ನಿಂದ ಬಂದ ಯುವತಿ ಮತ್ತು ಮೊಮ್ಮಗುವಿನ ವಿಡಿಯೋ ಚೀನೀ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವತಿ ತನ್ನ ಮೊಮ್ಮಗುವಿಗೆ ಊಟ ಬಡಿಸುತ್ತಿದ್ದಳು. ಆದ್ರೆ, ಫೋಟೋದಲ್ಲಿರೋದು ಮಗುವಿನ ಅಮ್ಮ ಅಲ್ಲ, ಅಜ್ಜಿ ಅನ್ನೋ ಸತ್ಯನ ಮಾತ್ರ ತುಂಬಾ ಜನ ನಂಬೋಕೆ ತಯಾರಿಲ್ಲ. ಅದು ನಂಬೋಕೆ ಸಾಧ್ಯವಿಲ್ಲ ಅಂತ ಸೋಶಿಯಲ್ ಮೀಡಿಯಾ ಬಳಕೆದಾರರು ವಾದಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಬಿಜೆಪಿ ಸರ್ಕಾರದ 1 ಗ್ಯಾರಂಟಿ ಸ್ಕೀಂಗೆ ‘ಅರ್ಧ ಕೊಕ್’!
1985ರಲ್ಲಿ ಹುಟ್ಟಿದ ಯುವತಿ ಫೋಟೋದಲ್ಲಿ ಇದ್ದಾರೆ ಅಂತ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ರಿಪೋರ್ಟ್ ಮಾಡಿದೆ. ಅಂದ್ರೆ ಆ ಯುವತಿಗೆ ಈಗ 39 ವರ್ಷ ವಯಸ್ಸು. ಕೂದಲು ಪೋನಿಟೆಲ್ ಹಾಕಿ, ಸ್ವಲ್ಪ ಮೇಕಪ್ ಹಾಕೊಂಡು, ಯಂಗ್ ಆಗಿರೋ ತರ ಕಾಣೋ ಯುವತಿ ತನ್ನ ಮೊಮ್ಮಗುವಿಗೆ ನಗುತ್ತಾ ಊಟ ಬಡಿಸುತ್ತಿರೋ ಫೋಟೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಗುವನ್ನ ಎತ್ತಿಕೊಂಡು ಮನೆಯ ಕೆಲಸ ಮಾಡೋದು, ಮಗುವಿನ ನ್ಯಾಪ್ಕಿನ್ ಚೇಂಜ್ ಮಾಡೋದು, ಅವನ ಬೇರೆ ಅವಶ್ಯಕತೆಗಳಿಗೆ ಮತ್ತು ಊಟ ಮಾಡೋಕೆ ಓಡಾಡೋ ಯುವತಿಯನ್ನ ನೋಡಬಹುದು.
ಮಹಿಳೆಗೆ ಇದು ಮೊದಲ ಮೊಮ್ಮಗು ಅಂತ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ರಿಪೋರ್ಟ್ ಮಾಡಿದೆ. ಈ ಮಧ್ಯೆ ಯುವತಿಯ ಸೊಸೆ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಬ್ಬರ ವಯಸ್ಸೆಷ್ಟು ಅಂತ ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ಆ ಯುವತಿ ಇನ್ನೂ ಮದುವೆ ಆಗಿಲ್ಲ ಅಂತ ಹೇಳುತ್ತಿದ್ದಾರೆ. 'ನಾನು ಕೂಡ ಅವಳ ವಯಸ್ಸಿನವಳೇ. ಆದರೆ, ಇನ್ನೂ ಮದುವೆ ಆಗಿಲ್ಲ. ನಾನೇನ್ ಹೇಳೋದು?' ಅಂತ ಒಬ್ಬ ಯುವತಿ ಬರೆದಿದ್ದಾರೆ.
ಇದನ್ನೂ ಓದಿ: Betting Apps ಪ್ರಚಾರ: 11 ಇನ್‌ಫ್ಲುಯೆನ್ಸರ್‌ಗಳ ವಿರುದ್ಧ ಕೇಸ್ ದಾಖಲಿಸಿದ ಪೊಲೀಸ್, ಕಾರಣವಾಗಿದ್ದು ಯೂಟ್ಯೂಬರ್ ಅನ್ವೇಷ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.