ಇದು ಸುಮಾರು ದಂಪತಿಗಳ ಬದುಕಿನ ಪ್ರಲಾಪ. ಇದರಲ್ಲಿ ಹೆಚ್ಚಾಗಿ ಹೆಂಡತಿಗೆ ಲೈಂಗಿಕ ಆಸಕ್ತಿ ಸತ್ತುಹೋಗಿರುತ್ತದೆ ಅಥವಾ ವಿರಳ ಪ್ರಕರಣಗಳಲ್ಲಿ ಗಂಡನಿಗೆ ಲೈಂಗಿಕ ಆಸಕ್ತಿ ಬತ್ತಿಹೋಗಿರುತ್ತದೆ. ಹೀಗಾಗಿ ಜೀವನದಲ್ಲಿ ಸಂಸಾರದ ಹೊರೆ ಮಾತ್ರ ಇರುತ್ತದಷ್ಟೇ ಹೊರತು ಬೇರ್ಯಾವ ರೋಚಕತೆಯೂ ಇರುವುದಿಲ್ಲ. ಹೀಗಾದಾಗ ಏನು ಮಾಡಬೇಕು?
ಪ್ರಶ್ನೆ: ನಾನು ವಿವಾಹಿತ. ನನಗೀಗ 42 ವರ್ಷ ಹಾಗೂ ಪತ್ನಿಗೆ ೩೮ ವರ್ಷ. ನಮಗೆ ಇಬ್ಬರು ಮಕ್ಕಳು. ಆದರೆ ಕಿರಿಯ ಮಗ ಹುಟ್ಟಿದ ಮೇಲಿಂದ ನಮ್ಮದು ಅಕ್ಷರಶಃ 'ಸೆಕ್ಸ್‌ಲೆಸ್' ದಾಂಪತ್ಯವಾಗಿದೆ. ಸುಮಾರು 3 ವರ್ಷಗಳ ಹಿಂದೆ ಪತ್ನಿ ಗರ್ಭ ಧರಿಸಿದ್ದಳು. ಆವಾಗಿನಿಂದ ನಾವು ಲೈಂಗಿಕ ಕ್ರಿಯೆಯನ್ನೇ ನಡೆಸಿಲ್ಲ. ನನ್ನ ಹೆಂಡತಿಗೆ ಈಗ 40 ವರ್ಷ ವಯಸ್ಸು. ಅವಳದೂ ವೈರಾಗ್ಯ ಬರುವ ವಯಸ್ಸಲ್ಲ. ಅವಳಿಗೂ ಲೈಂಗಿಕ ಆಸಕ್ತಿ ಇರುವ ಪ್ರಾಯ. ಆದರೆ ಅವಳಿಗೆ ಸೆಕ್ಸ್ ಬಗ್ಗೆ ಯಾವ ಲೆವೆಲ್‌ನ ಹಿಂಜರಿಕೆ ಇದೆ ಅಂದರೆ ಸೆಕ್ಸ್ ಬಿಡಿ, ದೈಹಿಕ ಪ್ರೀತಿಯನ್ನೂ ಅವಳು ಸಹಿಸೋದಿಲ್ಲ. ಯಾವುದೇ ರೀತಿಯ ದೈಹಿಕ ಪ್ರೀತಿಯಿಂದ ದೂರ ಸರಿಯುತ್ತಾಳೆ. ನಾನು ಮುದ್ದಾಡುವುದನ್ನು ಚುಂಬಿಸುವುದನ್ನೂ ವಿರೋಧಿಸುತ್ತಾಳೆ. ಹತ್ತಿರ ಬಂದರೆ ದೂರ ಓಡಿಸುತ್ತಾಳೆ. ಅವಳಿಗೆ ಈ ಥರ ಮುದ್ದಾಡಿದರೂ ಅದು ಲೈಂಗಿಕತೆಯನ್ನು ಪ್ರಚೋದಿಸಬಹುದು ಅನ್ನೋ ಭಯ ಇದಕ್ಕೆ ಕಾರಣ. ಆದರೆ ಇದರಿಂದ ನನ್ನ ಬದುಕು ಮಾತ್ರ ಅಸಹನೀಯವಾಗಿದೆ. ನಮ್ಮದು ಸೆಕ್ಸ್‌ಲೆಸ್ ದಾಂಪತ್ಯ ಎಂದು ಹೇಳಿಕೊಳ್ಳಲೇ ಬೇಕಾದ ಅನಿವಾರ್ಯತೆಗೆ ನಾನು ಬಿದ್ದಿದ್ದೇನೆ.
ನನ್ನ ಹೆಂಡತಿ ಮಕ್ಕಳಿಗಾಗಿ ನಾವು ಸೆಕ್ಸ್ ಅನ್ನು ಬಿಡಬೇಕು ಅನ್ನುತ್ತಾಳೆ. ನನ್ನ ಕಾಮಾಸಕ್ತಿಯನ್ನೂ ದೂಷಿಸುತ್ತಾಳೆ, ಎರಡು ಬಾರಿ ಮಗುವಿಗೆ ಜನ್ಮ ನೀಡಿದ ನಂತರ ಇನ್ನು ಮುಂದೆ ಯಾವುದೇ ರೀತಿಯಲ್ಲಿ ಲೈಂಗಿಕತೆಯನ್ನು ಅನುಭವಿಸುವುದಿಲ್ಲ ಎಂದು ಹೇಳುತ್ತಾಳೆ. ನಮ್ಮ ಸಂಬಂಧವು ಪ್ರಾರಂಭವಾದಾಗ ಅವಳ ಲೈಂಗಿಕಾಸಕ್ತಿ ಚೆನ್ನಾಗಿಯೇ ಇತ್ತು. ಮೊದಲ ಕೆಲವು ವರ್ಷಗಳಲ್ಲಿ ನಾವು ವಾರಕ್ಕೊಮ್ಮೆ ಲೈಂಗಿಕತೆಯನ್ನು ಹೊಂದಿದ್ದೇವೆ ಮತ್ತು ನಾವಿಬ್ಬರೂ ಅದನ್ನು ಆನಂದಿಸಿದ್ದೇವೆ. ಹನಿಮೂನ್ ಅವಧಿಯ ನಂತರ, ಇದು ತಿಂಗಳಿಗೊಮ್ಮೆ ಕುಸಿಯಿತು. ನಂತರ ಪ್ರತಿ ತಿಂಗಳಿಗೊಮ್ಮೆ ಅಂತಾಯ್ತು. ಆಮೇಲೆ ನಾವು ಮಗು ಬೇಕು ಅಂತ ಲೈಂಗಿಕತೆ ನಡೆಸುತ್ತಿದ್ದೆವು. ಆಗ, ಲೈಂಗಿಕತೆಯು ಗರ್ಭಧಾರಣೆಯ ಸೇವೆಯ ಹಾಗಷ್ಟೇ ಇತ್ತು. ಆಮೇಲಿನ ವರ್ಷಗಳಲ್ಲಿ ಆನಂದ ಪಡುವಂಥಾ ಲೈಂಗಿಕತೆಯನ್ನು ನಾವು ಅನುಭವಿಸಿಲ್ಲ. ಕಾರಣ ಅವಳಲ್ಲಿ ಆಸಕ್ತಿ ಇರಲಿಲ್ಲ. ಅವಳು ಆಸಕ್ತಿ ಹೊಂದಿಲ್ಲದಿದ್ದರೆ, ನನಗೂ ಬಲಾತ್ಕಾರದಿಂದ ಸೆಕ್ಸ್ ಮಾಡುವ ಆಸಕ್ತಿಯಿಲ್ಲ. ಹೀಗಾಗಿ ಈಗ, ನನ್ನ ಲೈಂಗಿಕ ಜೀವನವು ಕೇವಲ ಹಸ್ತಮೈಥುನವನ್ನು ಒಳಗೊಂಡಿದೆ.
ಹಾಗಂತ ಅವಳಿಗೆ ಬೇರೊಬ್ಬರ ಜೊತೆಗೆ ಸಂಬಂಧ ಇಲ್ಲ. ಅವಳು ಲೆಸ್ಬಿಯನ್ ಸಹ ಅಲ್ಲ. ನಾವು ಯಾವಾಗಲೂ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಇರುತ್ತೇವೆ, ಮಕ್ಕಳನ್ನು ಜೊತೆಯಾಗಿ ಬೆಳೆಸುತ್ತೇವೆ. ಮಕ್ಕಳಿಗಾಗಿ ಮನೆಯಿಂದ ಕೆಲಸ ಮಾಡುತ್ತೇವೆ. ಮನೆಕೆಲಸ ಮತ್ತು ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ನಾನು ಅವಳಿಗೆ ಸಹಕರಿಸುತ್ತೇನೆ. ನಿಜ ಹೇಳಬೇಕೆಂದರೆ ಸಣ್ಣ ಮಕ್ಕಳನ್ನು ಬೆಳೆಸೋದರಲ್ಲಿ ನಾವಿಬ್ಬರೂ ಹೆಚ್ಚಿನ ಸಮಯ ನೀಡಿ ದಣಿದಿದ್ದೇವೆ. ಹೀಗಿದ್ದರೂ ಆರೋಗ್ಯಕರ ಸೆಕ್ಸ್ ಡ್ರೈವ್ ಇರಬೇಕೆಂದು ನಾನು ಬಯಸುತ್ತೇನೆ.
ಅವಳ ಮೇಲೆ ನನಗೆ ಬಹಳ ಪ್ರೀತಿ ಇರುವುದರಿಂದ ಅವಳನ್ನು ಬಿಡಲು, ಬೇರೆ ಸಂಬಂಧ ಹೊಂದಲು ನನಗೆ ಮನಸ್ಸಿಲ್ಲ. ಆದರೆ ಲೈಂಗಿಕತೆ ಇಲ್ಲದ ಬದುಕಿನಿಂದ ರೋಸಿ ಹೋಗಿದ್ದೇನೆ. ನಾನೇನು ಮಾಡಲಿ ಅನ್ನೋದೆ ಗೊತ್ತಾಗುತ್ತಿಲ್ಲ.
ನಾಚಿಕೆ ಬಿಟ್ಟು ಮಹಿಳೆಯರು ಗಂಡನ ಕಿವಿಯಲ್ಲಿ ಪಿಸುಗುಡಬೇಕಾದ ರೊಮ್ಯಾಂಟಿಕ್ ಮಾತುಗಳು!
ಉತ್ತರ : ನೀವೀಗ ಮಾಡಬೇಕಾದ ಮೊದಲ ಕೆಲಸ ಒಬ್ಬ ಸೆಕ್ಸಾಲಜಿಸ್ಟ್ ಅನ್ನು ಭೇಟಿ ಮಾಡುವುದು. ಆಪ್ತ ಸಹಾಯಕರನ್ನು ಭೇಟಿ ಮಾಡಿ ಕೌನ್ಸಿಲಿಂಗ್ ಪಡೆದರೆ ಸರಿ ಹೋಗುತ್ತಾ ಅಂತಲೂ ನೋಡಬಹುದು. ಇದು ಸುಮಾರು ದಂಪತಿಗಳ ಬದುಕಿನ ಪ್ರಲಾಪ. ಇದರಲ್ಲಿ ಹೆಚ್ಚಾಗಿ ಹೆಂಡತಿಗೆ ಲೈಂಗಿಕ ಆಸಕ್ತಿ ಸತ್ತುಹೋಗಿರುತ್ತದೆ ಅಥವಾ ವಿರಳ ಪ್ರಕರಣಗಳಲ್ಲಿ ಗಂಡನಿಗೆ ಲೈಂಗಿಕ ಆಸಕ್ತಿ ಬತ್ತಿಹೋಗಿರುತ್ತದೆ. ಹೀಗಾಗಿ ಜೀವನದಲ್ಲಿ ಸಂಸಾರದ ಹೊರೆ ಮಾತ್ರ ಇರುತ್ತದಷ್ಟೇ ಹೊರತು ಬೇರ್ಯಾವ ರೋಚಕತೆಯೂ ಇರುವುದಿಲ್ಲ. ಸಾಮಾನ್ಯ ಹೆಣ್ಣು ಮಕ್ಕಳಿಗೆ ಸೆಕ್ಸ್‌ನಲ್ಲಿ ನಿರೀಕ್ಷಿತ ತೃಪ್ತಿ ಸಿಗದಿದ್ದರೆ, ಲೈಂಗಿಕತೆ ಹಿಂಸೆ ಅನಿಸತೊಡಗುತ್ತದೆ. ಮಕ್ಕಳ ಆರೈಕೆಯಲ್ಲೂ ಸೆಕ್ಸ್ ಅನ್ನು ಅವರು ಮರೆಯುತ್ತಾರೆ. ಇದಲ್ಲದೇ ಇನ್ನಿಲ್ಲದ ಹಿಡನ್ ಕಾರಣಗಳೂ ಇರಬಹುದು. ನಿಮ್ಮ ಸಮಸ್ಯೆ ಬಹಳ ಸೂಕ್ಷ್ಮವಾದದ್ದು. ಹೀಗಾಗಿ ಸಮಸ್ಯೆಯ ಹಿಂದಿರುವ ಅಂಶಗಳನ್ನು ಪತ್ತೆ ಹಚ್ಚಿ ಅದನ್ನು ನಿವಾರಿಸುವುದು ಬಹಳ ಮುಖ್ಯ ಎನಿಸುತ್ತದೆ. ಹೀಗಾಗಿ ತಜ್ಞರನ್ನು ಆದಷ್ಟು ಬೇಗ ಭೇಟಿಯಾಗೋದು ಉತ್ತಮ.
ಎರಡು ಮಕ್ಕಳಾದ್ಮೇಲೆ ಅಕ್ಕನ ಗಂಡನ ಮೇಲೆ ಪ್ರೀತಿ ! ಎಲ್ಲ ಬಿಟ್ಟು ಭಾವನ ಹಿಂದೆ ಹೋದ ಮಹಿಳೆ