ಹೊಸ ತಾಯಂದಿರಲ್ಲಿ ನಿದ್ರಾಹೀನತೆಯ ಸಮಸ್ಯೆ, ಮೂಡ್ ಸ್ವಿಂಗ್ಸ್‌ಗೂ ಇದುವೇ ಕಾರಣ !

By Suvarna News  |  First Published May 4, 2022, 2:54 PM IST

ಹೊಸ ತಾಯಂದಿರಲ್ಲಿ (New Mom) ನಿದ್ರಾಹೀನತೆಯ ಸಮಸ್ಯೆ ಅಚ್ಚರಿ ಪಡುವಂಥದ್ದೇನಲ್ಲ. ಮಗುವಿಗೆ ಹಾಲೂಡಿಸುವುದು, ಲಾಲನೆ ಪೋಷಣೆಯೆಂದು ಹೊಸ ತಾಯಂದಿರು ಹೆಚ್ಚಾಗಿ ಮಗುವಿನ ಆರೈಕೆಯಲ್ಲೇ  (Baby care) ಸಮಯ ಕಳೆಯಬೇಕಾಗುತ್ತದೆ. ಹೀಗಾಗಿ ಹೊಸ ತಾಯಂದಿರಲ್ಲಿ ಮೂಡ್ ಸ್ವಿಂಗ್ಸ್ (Mood swings) ಅತಿಯಾದ ಸಿಟ್ಟು (Angry) ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.


ಸಾಕಷ್ಟು ನಿದ್ರೆ (Sleep) ಪಡೆಯುವುದು ಹೊಸ ಪೋಷಕರಿಗೆ (Parents) ನಿಜವಾಗಿಯೂ ಕಷ್ಟ. ರಾತ್ರಿಯಲ್ಲಿ ಆಗಾಗ ಮಗುವಿನ ಹಾಲೂಡಿಸಲು, ಡೈಪರ್‌ಗಳನ್ನು ಬದಲಾಯಿಸುವುದು ಈ ಎಲ್ಲಾ ಕೆಲಸಗಳ ಮಧ್ಯೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೊಸ ತಾಯಂದಿರಲ್ಲಿ (New Mom) ನಿದ್ರಾಹೀನತೆಯ ಸಮಸ್ಯೆಯೂ ಸಾಮಾನ್ಯವಾಗಿದೆ.  ಇತ್ತೀಚಿನ ನ್ಯಾಷನಲ್ ಸ್ಲೀಪ್ ಫೌಂಡೇಶನ್ ಸಮೀಕ್ಷೆಯಲ್ಲಿ, ಸುಮಾರು 76% ಪೋಷಕರು ನಿರಂತರ ನಿದ್ರೆಯ ಸಮಸ್ಯೆಗಳನ್ನು ಹೊಂದಿದ್ದಾರೆಂದು ಕಂಡುಬಂದಿದೆ. ನವಜಾತ ಶಿಶುವಿನ ಜನನದ ನಂತರ, ಪೋಷಕರು ತಮ್ಮ ನಿದ್ರೆಯ ಮೇಲೆ ಗಮನ ಕೇಂದ್ರೀಕರಿಸಲು ನಿಜವಾಗಿಯೂ ಕಷ್ಟವಾಗಬಹುದು. ಮಗುವಿನ ಜನನದ ನಂತರದ ಮೊದಲ ವರ್ಷದಲ್ಲಿ, ತಾಯಂದಿರು ಕೇವಲ ನಾಲ್ಕು ಗಂಟೆಗಳ ನಿದ್ರೆ ಪಡೆಯಲು ಸಾಧ್ಯವಾಗುತ್ತದೆ, ಇದು ತುಂಬಾ ಕಡಿಮೆಯಾಗಿದೆ. ತಜ್ಞರು ಕನಿಷ್ಠ ಎಂಟು ಗಂಟೆಗಳ ಕಾಲ ಮಲಗಲು ಶಿಫಾರಸು ಮಾಡುತ್ತಾರೆ.

ನಿದ್ರೆಯ ಕೊರತೆಯಿಂದ ಆರೋಗ್ಯದ ಮೇಲೆ ಪರಿಣಾಮ
ನಿದ್ರೆಯ ಕೊರತೆಯು ತಾಯಿಯ ಭಾವನಾತ್ಮಕ ಆರೋಗ್ಯದ (Health) ಮೇಲೆ ಪರಿಣಾಮ ಬೀರಬಹುದು. ಕೆಲವೊಮ್ಮೆ ಇದು ಮನಸ್ಥಿತಿಯನ್ನೂ  ಕೆರಳಿಸಬಹುದು. ಮಲಗುವ ಅಭ್ಯಾಸ ಮತ್ತು ದಿನಚರಿಯ ಬದಲಾವಣೆಗಳು ತಾಯಂದಿರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಮಗುವಿನ (Baby) ಆಗಮನದ ನಂತರ, ಪೋಷಕರ ಜೀವನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಾಯಿಯ ಜೀವನ ಬದಲಾಗುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.

Tap to resize

Latest Videos

New Mom Debina Bonnerjee Tips: ಗರ್ಭಧಾರಣೆಗಾಗಿ ಫ್ಲವರ್‌ ಥೆರಪಿ ಟ್ರೈ ಮಾಡ್ಬೋದು

ಸಂಶೋಧನೆ ಯಾವಾಗ ನಡೆಯಿತು ?
ಮೇ 8ರಂದು ಆಚರಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಬೆಡ್ಡಿ ಬೈ ಸೆಂಚುರಿ ಮ್ಯಾಟ್ರೆಸ್, ಶಿಶುಗಳು ಮತ್ತು ಅಂಬೆಗಾಲಿಡುವವರ ಬೆಳೆಯುತ್ತಿರುವ ಅಗತ್ಯಗಳನ್ನು ಬೆಂಬಲಿಸಲು ಮೀಸಲಾಗಿರುವ ಬೇಬಿ ಮತ್ತು ಮಕ್ಕಳ ಹಾಸಿಗೆಗಳ ಬ್ರ್ಯಾಂಡ್, ಮಾಮ್ಸ್‌ಪ್ರೆಸ್ಸೊ ಸಹಯೋಗದೊಂದಿಗೆ ಸಮೀಕ್ಷೆಯನ್ನು ನಡೆಸಿತು. ಹೊಸ ತಾಯಂದಿರ ಮಲಗುವ ಮಾದರಿಯಲ್ಲಿನ ಬದಲಾವಣೆಗಳು ಮತ್ತು ಅವರ ದೈನಂದಿನ ಜೀವನದಲ್ಲಿ ಅದು ಬೀರುವ ಪರಿಣಾಮಗಳ ಮೇಲೆ ಸಮೀಕ್ಷೆಯು ಬೆಳಕು ಚೆಲ್ಲುತ್ತದೆ.

ಈ ಸಮೀಕ್ಷೆಯನ್ನು ಭಾರತದ ನಾಲ್ಕು ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಡೆಸಲಾಯಿತು. 0 ರಿಂದ 5 ವರ್ಷ ವಯಸ್ಸಿನ ಮಕ್ಕಳ ಕೆಲಸ ಮಾಡುವ ತಾಯಂದಿರು ಮತ್ತು ಗೃಹಿಣಿಯರನ್ನು ಈ ಸಮೀಕ್ಷೆಯಲ್ಲಿ ಸೇರಿಸಲಾಗಿದೆ.

ಫಲಿತಾಂಶ ಏನು ?
ಈ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, 64% ಹೊಸ ತಾಯಂದಿರು ನಿದ್ರೆಯ ಕೊರತೆಯನ್ನು ಹೊಂದಿದ್ದಾರೆ. ಅಂದರೆ ಶೇಕಡ 64ರಷ್ಟು ತಾಯಂದಿರು ತಜ್ಞರು ಶಿಫಾರಸು ಮಾಡಿದಷ್ಟು ನಿದ್ರೆ ಮಾಡುವುದಿಲ್ಲ ಎಂಬುದು ತಿಳಿದುಬಂತು.. ಅದೇ ಸಮಯದಲ್ಲಿ, 91% ತಾಯಂದಿರು ತಮ್ಮ ಮಗುವಿಗೆ ಪ್ರತ್ಯೇಕ ಹಾಸಿಗೆಯನ್ನು ಹೊಂದಿದ್ದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ಒಪ್ಪಿಕೊಂಡರು. ಮಗುವಿನ ಜನನದ ನಂತರ ನಗರಗಳಲ್ಲಿ ವಾಸಿಸುವ ತಾಯಂದಿರಲ್ಲಿ ನಿದ್ರಾಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಮುಂಬೈ ಮತ್ತು ಹೈದರಾಬಾದ್‌ನಲ್ಲಿ 31% ತಾಯಂದಿರು ನಿದ್ರೆಯ ಕೊರತೆಯಿಂದ ತಮ್ಮ ದೈನಂದಿನ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ.

ನಿಮಗೆ ಯಾರೂ ಹೇಳದ 8 ವಿಲಕ್ಷಣ ಗರ್ಭಧಾರಣೆಯ ಲಕ್ಷಣಗಳು!!!

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ
ನಿದ್ರೆಯ ಕೊರತೆಯು ದಿನವಿಡೀ ಪ್ರಸವಾನಂತರದ ಮನಸ್ಥಿತಿ ಮತ್ತು ಆಲಸ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಹೇಗಾದರೂ, ಸಾಕಷ್ಟು ನಿದ್ರೆ ಮಾಡದಿರುವುದು ದೊಡ್ಡ ಸಮಸ್ಯೆಯಾಗಿದೆ. ನವಜಾತ ಶಿಶುವಿನ ಆರೈಕೆಯಿಂದಾಗಿ ನಿಮಗೆ ಸಾಕಷ್ಟು ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ಸಂಗಾತಿ ಅಥವಾ ಕುಟುಂಬದ ಸದಸ್ಯರ ಸಹಾಯವನ್ನು ನೀವು ತೆಗೆದುಕೊಳ್ಳಬಹುದು ಎಂದು ತಜ್ಞರು ಸೂಚಿಸಿದ್ದಾರೆ.

click me!