ಮೊದಲ ಡೇಟ್‌ನಲ್ಲಿ ಪರ್ಸ್ ಮರೆತ ಟೆಕ್ಕಿ ಫಜೀತಿ, 10 ವರ್ಷವಾದ್ರೂ ಈಗಲೂ ಪಾವತಿ ಮಾಡ್ತಾಳೆ ಕಾಫಿ ಬಿಲ್

Published : Oct 14, 2026, 02:13 PM IST
Techie First-Date Embarrassment changed life AI image

ಸಾರಾಂಶ

ಕೆಫೆ ಕಾಫಿ ಡೇನಲ್ಲಿ ಮೊದಲ ಡೇಟಿಂಗ್. ಪರ್ಸ್ ಮರೆತು ಹೋದ ಟೆಕ್ಕಿ ಬಿಲ್ ಪಾವತಿಸುವಾಗ ಮುಜುಗರಕ್ಕೀಡಾಗಿದ್ದಾನೆ. ಬಳಿಕ ಯುವತಿ ಪಾವತಿಸಿದ್ದಾಳೆ. ಇದೀಗ 10 ವರ್ಷ ಉರುಳಿಸಿದೆ. ಆದರೆ ಟೆಕ್ಕಿ ಎಲ್ಲೇ ಕಾಫಿ ಕುಡಿದರೂ ಬಿಲ್ ಮಾತ್ರ ಆಕೆಯೆ ಪಾವತಿ ಮಾಡುತ್ತಿದ್ದಾಳೆ.

ಪುಣೆ (ಅ.14) ಕೆಫೆ ಕಾಫಿ ಡೇನಲ್ಲಿ ಭೇಟಿಯಾಗೋಣ ಎಂದು ಟೆಕ್ಕಿ ಗೆಳತಿಯನ್ನು ಕರೆದಿದ್ದಾನೆ. ಅದು ಅವರ ಮೊದಲ ಡೇಟಿಂಗ್. ಆಕೆಯೂ ಪ್ರೀತಿಯಿಂದ ಆಗಮಿಸಿದ್ದಾಳೆ. ಹೋಗೋ ಗಡಿಬಿಡಿ, ಆಕೆಯ ಜೊತೆ ಮಾತನಾಡುವ ಭರದಲ್ಲಿ ಟೆಕ್ಕಿ ಪರ್ಸ್ ಮರೆತು ಹೋಗಿದ್ದಾನೆ. ಕೆಫೆ ಕಾಫಿ ಡೇನಲ್ಲಿ ಇಬ್ಬರು ಕುಳಿತು ಒಂದಷ್ಟು ಮಾತನಾಡಿದ್ದಾರೆ, ಆಸಕ್ತಿ, ಮುಂದಿನ ಭವಿಷ್ಯ ಕುರಿತು ಮಾತುಕತೆ ಆಡಿದ್ದಾರೆ. ಬಿಲ್ ಬಂದಾಗ ಟೆಕ್ಕಿಗೆ ಮುಜುಗರ ಆಗಿದೆ. ಆಗಷ್ಟೇ ಯುಪಿಐ ಭಾರತದಲ್ಲಿ ಜಾರಿಯಾಗಿತ್ತು. ಆದರೆ ಟೆಕ್ಕಿ ಬಳಿ ಸ್ಮಾರ್ಟ್‌ಫೋನ್ ಇರಲಿಲ್ಲ. ತಡಬಡಾಯಿಸುತ್ತಿದ್ದ ಟೆಕ್ಕಿ ನೋಡಿ, ಗೆಳತಿ ಪರ್ಸ್‌ನಿಂದ ಹಣ ತೆಗೆದು ಕಾಫಿ ಡೇ ಬಿಲ್ ಪಾವತಿಸಿದ್ದಾಳೆ. ಸಾರಿ, ನಾನು ಪರ್ಸ್ ಮರೆತು ಬಂದೆ ಹಣ ನಿಮಗೆ ಕೊಡುತ್ತೇನೆ ಎಂದು ಪಾವತಿ ಮಾಡಿದ್ದಾಳೆ. ಇದೀಗ 10 ವರ್ಷ ಉರುಳಿದೆ. ಈಗಲೂ ಟೆಕ್ಕಿ ಎಲ್ಲೇ ಕಾಫಿ ಕುಡಿದರೂ ಆಕೆಯೇ ಪಾವತಿ ಮಾಡುತ್ತಿದ್ದಾಳೆ.

ಏನಿದು ಕಾಫಿ ಹಾಗೂ ಡೇಟ್ ಕತೆ

ಪುಣೆ ಮೂಲದ ಕುನಾಲ್ ಗಾಂಧಿ 10 ವರ್ಷಗಳ ಹಿಂದೆ ಆಸ್ತಾ ಪಾಲ್ ನಡುವಿನ ಡೇಟಿಂಗ್ ಹಾಗೂ ಈಗಲೂ ಕಾಫಿ ಬಿಲ್ ಕತೆ ಬಿಚ್ಚಿಟ್ಟಿದ್ದಾರೆ. ಆಸ್ತಾ ಪಾಲ್ ಪರಿಚಯವಾಗಿ ಮಾತುಕತೆ ಶುರುವಾಗಿದೆ. ಹೀಗಿರುವಾಗ ಮೊದಲ ಡೇಟ್‌ಗೆ ಕೆಫೆ ಕಾಫಿ ಡೇಗೆ ಕುನಾಲ್ ಗಾಂಧಿ ಆಹ್ವಾನ ನೀಡಿದ್ದಾನೆ. ಆಸ್ತಾ ಪಾಲ್ ಕೂಡ ಖುಷಿಯಾಗಿದ್ದಾಳೆ. ಕುನಾಲ್ ಜೊತೆಗಿನ ಮಾತುಕತೆಯಲ್ಲಿ ಹೊಸ ವೈಬ್ ಫೀಲ್ ಮಾಡಿದ್ದಳು. ಹೀಗಾಗಿ ತಕ್ಷಣವೇ ಒಪ್ಪಿಕೊಂಡು ದಿನಾಂಕವನ್ನು ಫಿಕ್ಸ್ ಮಾಡಿದ್ದಾರೆ.

ಕುನಾಲ್ ಗಾಂಧಿಗೆ ಆಕೆಯ ಮೇಲೆ ಕ್ರಶ್ ಇತ್ತು. ಆಕೆಯೇ ತನ್ನ ಬಾಳ ಸಂಗಾತಿಯಾಗಿ ಬಂದರೆ ಉತ್ತಮ ಎಂದು ಭಾವಿಸಿದ್ದು. ಮೊದಲ ಡೇಟ್‌ನಲ್ಲಿ ಏನು ಮಾತನಾಡಬೇಕು, ಹೀಗಿರಬೇಕು ಎಂದೆಲ್ಲಾ ಯೋಚಿಸಿ ಸಮಯ ಕಳೆದು ಹೋಗಿತ್ತು. ಅವಸರ ಅವಸರದಲ್ಲಿ ಕಾಫಿ ಡೇಗೆ ತೆರಳಿದ್ದ. ಆಕೆಯೂ ಬಂದಿದ್ದಳು. ಇಬ್ಬರು ಕಾಫಿ ಡೇನಲ್ಲಿ ಕಾಫಿ ಆರ್ಡರ್ ಮಾಡಿ ಒಂದಷ್ಟು ಹೊತ್ತು ಹರಟೆ ಹೊಡೆದಿದ್ದಾರೆ. ಬಳಿಕ ಬಿಲ್ ಬಂದಾಗ ತಾನು ಪರ್ಸ್ ಮರೆತು ಬಂದಿದ್ದೇನೆ ಅನ್ನೋ ಸತ್ಯ ಅರಿವಾಗಿದೆ. ಹೀಗಾಗಿ ಆಸ್ತಾ ಪಾಲ್ ಬಿಲ್ ಪಾವತಿ ಮಾಡಿದ್ದಾಳೆ. ಮುಂದಿನ ಭೇಟಿಯಲ್ಲಿ ಹಣ ಮರಳಿ ಕೊಡುತ್ತೇನೆ ಎಂದು ಕುನಾಲ್ ಗಾಂಧಿ ಹೊರಟಿದ್ದಾನೆ.

ಎರಡನೇ ಡೇಟ್, ಮತ್ತೆ ಆಕೆಯೇ ಪಾವತಿ

ಎರಡನೇ ಡೇಟ್‌ಗೆ ಮತ್ತೆ ಕೆಫೆ ಕಾಫಿ ಡೇ ಬಂದಿದ್ದಾರೆ. ಈ ಬಾರಿ ಕುನಾಲ್ ಗಾಂಧಿ ಎರಡು ಕಂಡೀಷನ್ ಹಾಕಿದ್ದ. ಮೊದಲ ಡೇಟ್ ಪಾವತಿಯನ್ನು ನಿಮಗೆ ಕೊಡುತ್ತೇನೆ, ಈ ಬಾರಿ ಡೇಟ್ ನಾನು ಪಾವತಿಸುತ್ತೇನೆ ಎಂದಿದ್ದಾನೆ. ಬಳಿಕ ಕಾಫಿ ಹೀರುತ್ತಾ ಮಾತುಕತೆ ನಡೆಸಿದ್ದಾರೆ. ಆದರೆ ಕಾಫಿ ಬಿಲ್ ನಾನೇ ಪಾವತಿಸುತ್ತೇನೆ ಎಂದು ಆಸ್ತಾ ಪಾಲ್ ಪಾವತಿಸಿದ್ದಾಳೆ. ಇಷ್ಟೇ ಅಲ್ಲ ಮೊದಲ ಡೇಟ್‌ನಲ್ಲಿ ಕೊಟ್ಟ ಬಿಲ್ ಹಣ ಕುನಾಲ್ ಗಾಂಧಿಯಿಂದ ಪಡೆಯಲು ನಿರಾಕರಿಸಿದ್ದಾಳೆ.

10 ವರ್ಷದ ಬಳಿಕವೂ ಆಕೆಯೆ ಕಾಫಿ ಬಿಲ್ ಪಾವತಿ

ಹೀಗೆ ಡೇಟ್ ಮೂರಾಯಿತು, ನಾಲ್ಕಾಯಿತು. ಇದೀಗ 10 ವರ್ಷ ಉರುಳಿಸಿದೆ. ಈಗ ಕುನಾಲ್ ಗಾಂಧಿ ಹಾಗೂ ಆಸ್ತಾ ಪಾಲ್ ಗಂಡ ಹೆಂಡತಿ. ವಿಶೇಷ ಅಂದರೆ ಕುನಾಲ್ ಹಾಗೂ ಆಸ್ತಾ ಎಲ್ಲೆ ಹೋಗಿ ಕಾಫಿ ಕುಡಿದರೆ ಅದರ ಬಿಲ್ ಆಸ್ತಾ ಪಾಲ್ ಪಾವತಿಸುತ್ತಾಳೆ ಎಂದು ಕುನಾಲ್ ಗಾಂಧಿ ಹೇಳಿಕೊಂಡಿದ್ದಾರೆ. ಈ ಸಂಪ್ರದಾಯ ನಮ್ಮ ಮೊದಲ ಡೇಟಿಂಗ್‌ನ್ನು ಜೀವಂತವಾಗಿರಿಸಿದ್ದು ಮಾತ್ರವಲ್ಲ, ಅದೇ ಪ್ರೀತಿ, ಅದೇ ಖುಷಿ, ಸಂಬ್ರಮ ನಮ್ಮಲ್ಲಿ ಇನ್ನು ಹಾಗೇ ಇದೆ ಎಂದು ಕುನಾಲ್ ಗಾಂಧಿ ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿನ್ನ ಗುಡಿಸಲೇ ನನ್ನ ಅರಮನೆ, ಜೋಪಡಿಯಲ್ಲಿರುವ ಬಿಹಾರದ ಬಡ ಹುಡುಗನನ್ನು ಮದುವೆಯಾಗಲು ಭಾರತಕ್ಕೆ ಬಂದ ರಷ್ಯಾದ ಯುವತಿ!
Bigg Bossನಲ್ಲಿ ಗೊಂಬೆ ಹಿಡಿದು, ಮಗು ಮಾಡಿಕೊಳ್ಳೋ ಮನಸ್ಸು ಮಾಡಿದ್ರಾ ಸಂಗೀತಾ ಭಟ್​? ನಟಿ ಹೇಳಿದ್ದೇನು