ಫೆಬ್ರವರಿ 8, ಪ್ರಪೋಸ್ ಡೇ. ಈ ದಿನ ಪ್ರೇಮಿಗಳು ತಾವು ಪ್ರೀತಿಸುವವರಿಗೆ ತಮ್ಮ ಪ್ರೀತಿ ಹೇಳಿಕೊಳ್ಳುವ ದಿನ. ಆದ್ರೆ ಎಲ್ಲರ ಪ್ರೀತಿ ಆಸೆಪ್ಟ್ ಆಗಬೇಕೆಂದಿಲ್ಲ. ಕೆಲವರು ರಿಜೆಕ್ಟ್ ಸಹ ಮಾಡುತ್ತಾರೆ. ಬಾಯ್ಸ್, ಪ್ರಪೋಸ್ ಮಾಡುವಾಗ ಈ ಕೆಲವು ವಿಚಾರ ಗಮನದಲ್ಲಿಟ್ಟುಕೊಂಡ್ರೆ ಹುಡುಗೀರು ರಿಜೆಕ್ಟ್ ಮಾಡೋ ಛಾನ್ಸೇ ಇರಲ್ಲ ನೋಡಿ.
ಪ್ರೇಮಿಗಳು, ಪ್ರಪೋಸ್ ಮಾಡಬೇಕೆಂದಿರುವವರು, ಪ್ರಪೋಸ್ ಪಡೆದುಕೊಳ್ಳೋ ನಿರೀಕ್ಷೆಯಲ್ಲಿರೋ ಸಿಂಗಲ್‌ಗಳು ಎಲ್ಲರೂ ಕಾಯುತ್ತಿರುವ ವಾರ ಹತ್ತಿರ ಬಂದಿದೆ. ಜೋಡಿಹಕ್ಕಿಗಳು ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಫೆಬ್ರವರಿ 7, ಅಂದರೆ ನಿನ್ನೆ ರೋಸ್ ಡೇಯೊಂದಿಗೆ ವ್ಯಾಲೆಂಟೈನ್ಸ್ ವೀಕ್ ಆರಂಭವಾಗಿದೆ. ಇದು ಪ್ರೀತಿಯ ಟೈಮ್‌ಲೆಸ್ ಸಂಕೇತವಾದ ಗುಲಾಬಿಗೆ ಮೀಸಲಾದ ದಿನ. ಈ ದಿನ, ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಗುಲಾಬಿಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಫೆಬ್ರವರಿ 8, ಪ್ರಪೋಸ್ ಡೇ. ಈ ದಿನ ಪ್ರೇಮಿಗಳು ತಾವು ಪ್ರೀತಿಸುವವರಿಗೆ ತಮ್ಮ ಪ್ರೀತಿ ಹೇಳಿಕೊಳ್ಳುವ ದಿನ ಇದು. ಪ್ರಪೋಸ್ ಮಾಡಿದಾಗ ಹುಡುಗ-ಹುಡುಗಿ ಒಪ್ಪಿಕೊಳ್ಳಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಪ್ರಪೋಸ್ ಮಾಡಿದ ಎಲ್ಲರ ಪ್ರೀತಿಯೂ ಸಕ್ಸಸ್ ಆಗುವುದಿಲ್ಲ. ಕೆಲವರು ರಿಜೆಕ್ಟ್ ಮಾಡುತ್ತಾರೆ. ಲವ್ ಫೈಲ್ಯೂರ್ ಅನುಭವಿಸುತ್ತಾರೆ. ಹೀಗಾಗಿ ಹೆಚ್ಚಿನವರು ಪ್ರಪೋಸ್ ಮಾಡಲು ಭಯಪಡುತ್ತಾರೆ. ಆದ್ರೆ ಪ್ರಪೋಸ್ ಮಾಡಿದಾಗ ಯೆಸ್ ಅಥವಾ ನೋ ಯಾವ ಆನ್ಸರ್ ಬರುತ್ತೆ ಅನ್ನೋದು ಕೆಲವೊಂದು ವಿಚಾರದಿಂದ ನಿರ್ಧರಿಸಲ್ಪಡುತ್ತದೆ. ಹೀಗಾಗಿ ಮೊದಲೇ ಕೆಲವು ತಯಾರಿ ಮಾಡಿಕೊಳ್ಳೋದು ಮುಖ್ಯ. ಬಾಯ್ಸ್ ಪ್ರಪೋಸ್ ಮಾಡುವಾಗ ಈ ಕೆಲವು ವಿಚಾರ ಗಮನದಲ್ಲಿಟ್ಟುಕೊಂಡ್ರೆ ಹುಡುಗೀರು ರಿಜೆಕ್ಟ್ ಮಾಡೋ ಛಾನ್ಸೇ ಇರಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.
ವ್ಯಾಲೆಂಟೈನ್ಸ್ ವೀಕ್‌ಗೆ ಇನ್ನೊಂದೇ ವಾರ ಬಾಕಿ; ರೋಸ್ ಡೇಯಿಂದ ಕಿಸ್ ಡೇ ತನಕ ಇಲ್ಲಿದೆ ಪಟ್ಟಿ
ಸುಂದರವಾದ ಸ್ಥಳದಲ್ಲಿ ಪ್ರಪೋಸ್ ಮಾಡಿ
ಪ್ರಪೋಸ್ ಡೇಗೆ ನೀವು ನಿಮ್ಮ ಸಂಗಾತಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಸಿದ್ಧವಾಗಿದ್ದರೆ ಸುಂದರವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ನೀವು ಪ್ರಪೋಸ್ ಮಾಡುವ ಸ್ಥಳ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಹೀಗಾಗಿ ಉತ್ತಮವಾಗಿರುವ, ಅಚ್ಚುಕಟ್ಟಾಗಿರುವ ಜಾಗ ನಿಮ್ಮ ಸಂಗಾತಿಯ ಮನಸ್ಸನ್ನು ಖುಷಿಪಡಿಸುತ್ತದೆ. ಅವರು ನಿಮ್ಮ ಪ್ರೀತಿಗೆ ಓಕೆ ಹೇಳುವ ಸಾಧ್ಯತೆ ಹೆಚ್ಚಿರುತ್ತದೆ.
ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ತಿಳಿಸಿ
ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುದನ್ನು ನಿಮ್ಮ ಸಂಗಾತಿಗೆ ಮನವರಿಕೆ ಮಾಡಿಸುವುದು ಮುಖ್ಯ. ಎಲ್ಲರೂ ಪ್ರೀತಿಸುತ್ತಾರೆ. ಆದರೆ ಆತನ, ಆಕೆಯ ಬಗೆಗಿರುವ ನಿಮ್ಮ ಪ್ರೀತಿ ಯಾಕೆ ತುಂಬಾ ಸ್ಪೆಷಲ್ ಅನ್ನೋದನ್ನು ಸ್ಪಷ್ಟವಾಗಿ ತಿಳಿಸಿ. ಇದು ಅವರಿಗೆ ನಿಮ್ಮ ಮೇಲೆ ಉತ್ತಮ ಭಾವನೆ ಮೂಡಲು ನೆರವಾಗುತ್ತದೆ. ನಿಮ್ಮ ಪ್ರೀತಿಯ ಆಳವನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ.
Valentine's Day: ಕೆಂಪಲ್ಲ, ಈ ಬಣ್ಣಗಳ ಗುಲಾಬಿಗಳು ಸಹ ವಿಶೇಷವಾಗಿದೆ!
ಪ್ರೇಮ ಪತ್ರ ಬರೆಯಿರಿ
ಸೋಷಿಯಲ್ ಮೀಡಿಯಾದಲ್ಲಿ ಹಾಯ್, ಹಲೋ, ಹಾರ್ಟ್, ಲವ್ ಯೂ, ಮಿಸ್ ಯೂ ಕಳುಹಿಸುವ ಕಾಲದಲ್ಲಿ ಅದೇ ಫ್ಲಾಟ್‌ಫಾರ್ಮ್‌ನಲ್ಲಿ ಪ್ರಪೋಸ್ ಮಾಡಿದರೆ ಯಾವ ಹುಡುಗ ಅಥವಾ ಹುಡುಗಿಯ ಮನಸ್ಸನ್ನೂ ಗೆಲ್ಲೋಕೆ ಸಾಧ್ಯವಿಲ್ಲ. ಬದಲಿಗೆ ಸ್ಪೆಷಲ್ ಅನಿಸುವಂತೆ ಏನಾದರೂ ಮಾಡಬೇಕು. ಹಸ್ತಾಕ್ಷರದಲ್ಲಿ ಪ್ರೇಮ ಪತ್ರ ಬರೆಯುವುದು ಯಾರ ಮನಸ್ಸನ್ನಾದರೂ ಸುಲಭವಾಗಿ ಗೆಲ್ಲಬಹುದು. ಅದಕ್ಕಾಗಿ ನೀವು ಹಾಕಿದ ಎಫರ್ಟ್ ಗಮನ ಸೆಳೆಯುತ್ತದೆ.
ಉಡುಗೊರೆ ನೀಡಿ
ಉಡುಗೊರೆ, ಯಾರದ್ದೇ ಮನಸ್ಸಾನ್ನಾದರೂ ಗೆಲ್ಲಲು ಸುಲಭ ಮಾರ್ಗ. ಅವರಿಗೆ ಇಷ್ಟವಾದ ವಸ್ತುವನ್ನು ಆರಿಸಿ ಉಡುಗೊರೆಯಾಗಿ ನೀಡಿ. ಈ ಗಿಫ್ಟ್ ಹಳೆಯ ನೆನಪುಗಳ ಫೋಟೋಸ್, ಅಥವಾ ಅವರು ಹೆಚ್ಚು ಬಯಸುವ ವಸ್ತುವಾಗಿದ್ದರೆ ಅವರಿಗೆ ಬೇಗ ಇಷ್ಟವಾಗುತ್ತದೆ. ನಿಮ್ಮ ಬಗ್ಗೆ ಅವರಲ್ಲಿ ಪ್ರೀತಿಯ ಭಾವನೆ ಮೂಡಲು ಇದು ಸಹಕಾರಿಯಾಗಿದೆ.
ಡಿನ್ನರ್‌ಗೆ ಕರೆದುಕೊಂಡು ಹೋಗಿ
ಪ್ರಪೋಸ್ ಡೇ ದಿನ ತಪ್ಪದೇ ಡಿನ್ನರ್‌ಗೆ ಕರೆದುಕೊಂಡು ಹೋಗಿ. ಇದು ಹೆಚ್ಚು ಸಮಯ ಜೊತೆಯಾಗಿ ಕಳೆಯಲು ನೆರವಾಗುತ್ತದೆ. ಇದರಿಂದ ಪರಸ್ಪರ ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂಥಾ ಸಂದರ್ಭದಲ್ಲಿ ಪ್ರಪೋಸ್ ಮಾಡಿದಾಗ ಹುಡುಗಿ ಸುಲಭವಾಗಿ ನಿಮ್ಮ ಪ್ರಪೋಸಲ್‌ಗೆ ಓಕೆ ಹೇಳುತ್ತಾಳೆ.