
ಪ್ರೀತಿಯನ್ನು ಜೈಲು ಎಂದು ಕರೆಯಲಾಗುತ್ತದೆ. ಮದುವೆಯನ್ನು ವಿನಾಶ ಎನ್ನುವವರಿದ್ದಾರೆ. ಆದ್ರೆ ಪ್ರೇಮಿಗಳಿಗೆ ಪ್ರೀತಿ ಸ್ವರ್ಗ. ಪ್ರೀತಿಸುವವರು ಜೈಲಿನ ದಿನವನ್ನೂ ಆನಂದಿಸಬಲ್ಲರು. ಪ್ರತಿ ದಿನವೂ ಅವರಿಗೆ ಪ್ರೇಮಿಗಳ ದಿನವೇ ಆಗಿರುತ್ತದೆ. ಫೆಬ್ರವರಿ 14 ರಂದು ಸ್ವಲ್ಪ ವಿಶೇಷ. ಈ ದಿನವನ್ನು ಮತ್ತಷ್ಟು ಖುಷಿಯೊಂದಿಗೆ ಆಚರಿಸಲು ಪ್ರೇಮಿಗಳು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ವ್ಯಾಲಂಟೈನ್ ವೀಕ್ ಶುರುವಾಗಿದ್ದು, ಒಂದೊಂದು ದಿನ ಒಂದೊಂದು ಡೇ ಆಚರಣೆ ಮಾಡಲಾಗ್ತಿದೆ. ಪ್ರೇಮಿಗಳ ದಿನಕ್ಕೆ ಅನೇಕ ಕಡೆ ಸ್ಪೇಷಲ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಪ್ರೇಮಿಗಳು ಅದ್ರಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುತ್ತಾರೆ. ಮತ್ತೆ ಕೆಲವರು ಶಾಂತವಾದ ಪ್ರದೇಶಕ್ಕೆ ಪ್ರವಾಸಕ್ಕೆ ಹೋದ್ರೆ ಇನ್ನು ಕೆಲವರು ಹೊಟೇಲ್, ರೆಸ್ಟೋರೆಂಟ್ ಗೆ ಹೋಗಿ ರುಚಿಯಾದ ಡಿನ್ನರ್ ಮುಗಿಸಿ ಬರ್ತಾರೆ. ಇದೇ ಕಾರಣಕ್ಕೆ ಹೊಟೇಲ್, ರೆಸ್ಟೋರೆಂಟ್ ಗಳು ಅಲಂಕಾರಗೊಳ್ಳುತ್ತವೆ. ವಿಶೇಷ ಆಫರ್ ಗಳಿರುತ್ತವೆ. ಈ ಬಾರಿ ವ್ಯಾಲಂಟೈನ್ಸ್ ಡೇಯನ್ನು ಸ್ಪೇಷಲ್ ಆಗಿ ಆಚರಣೆ ಮಾಡಬೇಕು ಎಂದಾದ್ರೆ ಇಲ್ಲೊಂದು ಆಫರ್ ಇದೆ.
ಜೈಲಿನಲ್ಲಿ ವ್ಯಾಲಂಟೈನ್ ಡೇ (Valentines Day) : ಈ ಬಾರಿ ಜೈಲಿನಲ್ಲಿ ನೀವು ವ್ಯಾಲೆಂಟೈನ್ಸ್ ಡೇ ಆಚರಣೆ ಮಾಡಬಹುದು. ಜೈಲಿನಲ್ಲಿ ಮದುವೆ ಆಗುತ್ತೆ ಅಂದ್ರೆ ಪ್ರೇಮಿಗಳ ದಿನದ ಆಚರಣೆ ಏಕೆ ಮಾಡ್ಬಾರದು ಎಂಬ ಆಲೋಚನೆಯಲ್ಲೇ ಇದು ಶುರುವಾಗಿದೆ. ದೆಹಲಿಯಿಂದ ಸುಮಾರು 6700 ಕಿಲೋಮೀಟರ್ ದೂರದಲ್ಲಿರುವ ಇಂಗ್ಲೆಂಡ್ ನ ಆಕ್ಸ್‌ಫರ್ಡ್ (Oxford) ಜೈಲಿನಲ್ಲಿ ನೀವು ವ್ಯಾಲಂಟೈನ್ಸ್ ಡೇ ಆಚರಣೆ ಮಾಡಬಹುದು. ಇದನ್ನು ಇಂಗ್ಲಿಷ್ ಜೈಲು (Prison) ಅಥವಾ ಪ್ರಾಚೀನ ಆಕ್ಸ್‌ಫರ್ಡ್ ಜೈಲು ಎಂದೂ ಕರೆಯುತ್ತಾರೆ. ಬ್ರಿಟನ್‌ನ 1000 ವರ್ಷಗಳಷ್ಟು ಹಳೆಯದಾದ ಆಕ್ಸ್‌ಫರ್ಡ್ ಜೈಲು ದಂಪತಿಗೆ ಜೈಲಿನಲ್ಲಿ ಆಹಾರ ಸೇವಿಸಲು ವಿಶೇಷ ವ್ಯವಸ್ಥೆ ಮಾಡಿದೆ. ಫೆಬ್ರವರಿ 14 ರಂದು ದಂಪತಿ ಇಲ್ಲಿಗೆ ಬಂದು ಆಹಾರ ಸೇವನೆ ಮಾಡಬಹುದು.
ಸಂತು-ಪಂತು ಬಿಗ್ಬಾಸ್ ಪಯಣ ಹೇಗಿತ್ತು? ತುಕಾಲಿ ಮಾತು ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಾ!
ಇಂಗ್ಲೆಂಡಿನ ಆಕ್ಸ್‌ಫರ್ಡ್ ಕಾರಾಗೃಹವನ್ನು ಸಾವಿರಾರು ವರ್ಷಗಳ ಹಿಂದೆ ಗೋಪುರವಾಗಿ ಬಳಸಲಾಗುತ್ತಿತ್ತು. ಈಗ ಅದೇ ರೆಸ್ಟೋರೆಂಟ್ ಆಗ್ತಿದೆ. ಅನೇಕಾನೇಕ ಖೈದಿಗಳು ಕಳೆದ ಈ ಜೈಲನ್ನು ಏಕೆ ರೆಸ್ಟೋರೆಂಟ್ ಆಗಿ ಸಿದ್ಧಪಡಿಸಬಾರದು ಎಂದು ಆಲೋಚನೆ ಮಾಡಲಾಯ್ತು. ನಂತ್ರ ಜೈಲು ರೆಸ್ಟೋರೆಂಟ್ ಆಗಿ ಬದಲಾಯ್ತು.
ಆಕರ್ಷಕ ರೀತಿಯಲ್ಲಿ ಹುಡುಗಿಗೆ ಪ್ರಪೋಸ್ ಮಾಡಿದ ಹುಡುಗ; ನೆಟ್ಟಿಗರು ಫಿದಾ
ಈಗ ಕುಖ್ಯಾತ ಆರೋಪಿಗಳ ಸೆಲ್‌ಗಳಲ್ಲಿ ಅತಿಥಿಗಳು ಆಹಾರ ತಿನ್ನುವ ಅವಕಾಶ ಕೊಡಲಾಗುತ್ತಿದೆ. ಕೊಲೆ ಆರೋಪಿಗಳಾದ ಮೇರಿ ಬ್ಲಾಂಡಿ ಮತ್ತು ಆನ್ ಗ್ರೀನಿ ಕೂಡ ಈ ಸೆಲ್‌ಗಳಲ್ಲಿ ಉಳಿದಿದ್ದರು. ಅವರ ಸೆಲ್ ನಲ್ಲಿ ಅಲಂಕಾರಗೊಂಡ ಟೇಬಲ್, ಖುರ್ಚಿ ಮೇಲೆ ಕುಳಿತು ನೀವು ಆಹಾರ ಸೇವನೆ ಮಾಡಬಹುದು. ಇಲ್ಲಿಗೆ ಬರುವ ಅತಿಥಿಗಳಿಗೆ ವೆಜ್ ಮತ್ತು ನಾನ್ ವೆಜ್ ಎರಡೂ ಸಿಗುತ್ತದೆ. ರೆಸ್ಟೊರೆಂಟ್ ಅನ್ನು ಕೆಂಪು ಗುಲಾಬಿಗಳಿಂದ ಅಲಂಕರಿಸಲಾಗುತ್ತದೆ.
1073 ರಲ್ಲಿ ಈ ಕಾರಾಗೃಹವನ್ನು ಔಷಧಕ್ಕಾಗಿ ಬಳಸಲಾಗುವ ಕೋಟೆ ಎಂದು ಕರೆಯಲಾಗುತ್ತಿತ್ತು. 1642 ರಿಂದ 1651 ರವರೆಗಿನ ಇಂಗ್ಲಿಷ್ ಅಂತರ್ಯುದ್ಧದ ಸಮಯದಲ್ಲಿ ಕಟ್ಟಡವು ಭಾರೀ ಹಾನಿಗೊಳಗಾಗಿತ್ತು. ನಂತರ ಇದನ್ನು 1785 ರಿಂದ 1996 ರವರೆಗೆ ಸೆರೆಮನೆಯಾಗಿ ಬಳಸಿದ್ರು. ಆಕ್ಸ್‌ಫರ್ಡ್ ಕಾರಾಗೃಹವು ಹಲವಾರು ವಿಶೇಷ ಕೊಠಡಿಗಳೊಂದಿಗೆ ಪ್ರವಾಸಿ ತಾಣ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ.
ಆಕ್ಸ್‌ಫರ್ಡ್ ಕ್ಯಾಸಲ್ ಮತ್ತು ಜೈಲ್ ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಪ್ರೇಮಿಗಳ ದಿನದಂದು ಆಕ್ಸ್‌ಫರ್ಡ್ ಕ್ಯಾಸಲ್, ಜೈಲಿನಲ್ಲಿ ಉತ್ತಮ ಡೇಟ್ ಮಾಡಿ ಎಂದು ಬರೆದಿದ್ದಾರೆ. ದಂಪತಿ ಟೇಬಲನ್ನು ಹೂವುಗಳಿಂದ ಹಾಗೂ ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ದಿನವನ್ನು ಮರೆಯಲಾಗದ ದಿನದಂತೆ ಕಳೆಯಬೇಕು ಅಂದ್ರೆ ಐತಿಹಾಸಿಕ ಪ್ರಸಿದ್ಧ ಈ ಸ್ಥಳದಲ್ಲಿ ನೀವು ಕಳೆಯಬಹುದು ಎಂದು ವೆಬ್ಸೈಟ್ ನಲ್ಲಿ ಬರೆಯಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.