ಪ್ರೇಮಿಗಳ ವಾರ ಶುರುವಾಗಿದೆ. ಜನರು ತಮ್ಮ ಪ್ರೇಮಿಗಳಿಗೆ ಉಡುಗೊರೆ, ಸರ್ಪ್ರೈಸ್, ಚಾಕೋಲೇಟ್ ನೀಡಲು ಶುರು ಮಾಡಿದ್ದಾರೆ. ಪ್ರಪೋಸ್ ಮಾಡುವವರು ಇದಕ್ಕೆ ಸಿದ್ಧವಾಗ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಕೆಲವರ ಪ್ರೀತಿ ವಿಷ್ಯ ವೈರಲ್ ಆಗ್ತಿದೆ.
ಇನ್ನೇನು ಕೆಲವೇ ದಿನಗಳಲ್ಲಿ ವ್ಯಾಲೆಂಟೈನ್ ಡೇ ಸಮೀಪಿಸುತ್ತಿದೆ. ಈ ವಾರವನ್ನು ವ್ಯಾಲೆಂಟೈನ್ ವೀಕ್ ಎಂದೇ ಹೇಳಲಾಗುತ್ತದೆ. ಪರಸ್ಪರ ಪ್ರೀತಿಯನ್ನು ಹೇಳಿಕೊಳ್ಳಲು ಕಾತುರರಾಗಿರುವ ಅನೇಕ ಪ್ರೇಮಿಗಳು ವ್ಯಾಲೆಂಟೈನ್ ಡೇ ಅಥವಾ ವ್ಯಾಲೆಂಟೈನ್ ವೀಕ್ ನಲ್ಲಿ ಪ್ರಪೋಸ್ ಮಾಡುವುದು ಈಗಿನ ಟ್ರೆಂಡ್. ಈಗಾಗಲೇ ಪ್ರೀತಿಯಲ್ಲಿ ಇರುವವರು ಪ್ರೇಮಿಗಳ ದಿನದಂದು ಮದುವೆಯಾಗುವ ನಿರ್ಧಾರಕ್ಕೂ ಬರುತ್ತಾರೆ. ಹೀಗೆ ಪ್ರೇಮಿಗಳ ದಿನದಂದು ತಮ್ಮ ಪ್ರೀತಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಅದು ಅವರ ಪಾಲಿಗೆ ಮರೆಯಲಾಗದ ದಿನವಾಗಿರುತ್ತದೆ.
ಮರೆಯಲಾಗದ ದಿನ, ಮರೆಯಲಾಗದ ವ್ಯಕ್ತಿಗಳು ತಮ್ಮ ದೇಹದ ಮೇಲೂ ಶಾಶ್ವತವಾಗಿ ಇರಬೇಕು ಎಂದು ಅನೇಕ ಮಂದಿ ತಮ್ಮ ಪ್ರೇಮಿ (Lover)ಯ ಹೆಸರನ್ನು ಟ್ಯಾಟೂ (Tattoo) ಮೂಲಕ ದೇಹದ ಮೇಲೆ ಮೂಡಿಸಿಕೊಳ್ಳುತ್ತಾರೆ. ಈಗಂತೂ ಟ್ಯಾಟೂ ಸರ್ವೇ ಸಾಮಾನ್ಯವಾಗಿದೆ. ಕೆಲವರು ತಾವು ಇಷ್ಟಪಡುವ ಹುಡುಗ ಹುಡುಗಿಯರ ಹೆಸರನ್ನು ಬರೆಸಿಕೊಳ್ಳುತ್ತಾರೆ. ಇನ್ಕೆಲವರು ಯಾವುದಾದರೂ ಚಿತ್ರವನ್ನೋ ಇಲ್ಲವೇ ತಾವು ಇಷ್ಟಪಡುವ ದೇವರ ಹೆಸರನ್ನೋ ಅಥವಾ ಖ್ಯಾತ ವ್ಯಕ್ತಿಗಳ ಹೆಸರನ್ನೋ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಬ್ರಿಟನ್ (Britain) ನ ನಿವಾಸಿಯೊಬ್ಬ ತನ್ನ ಪ್ರೇಮಿಯನ್ನು ವಿಶೇಷ ರೀತಿಯ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಪ್ರಪೋಸ್ ಮಾಡಿದ್ದಾನೆ. ಈತನ ಟ್ಯಾಟೂ ಮತ್ತು ಈತ ಪ್ರಪೋಸ್ ಮಾಡಿದ ರೀತಿ ಹೆಚ್ಚು ವೈರಲ್ ಆಗಿದೆ.
ಲೈಂಗಿಕ ಕ್ರಿಯೆಯ ನಂತರ ಮಹಿಳೆಯರೇ ನಿಮ್ಮ ದೇಹದಲ್ಲೂ ಈ ಬದಲಾವಣೆಯಾಗುತ್ತಿದೆಯೇ?
ತನ್ನ ಪ್ರೇಮಿಗೆ ಪರ್ಮನೆಂಟ್ ಪ್ರಪೋಸಲ್ ಮಾಡಿದ : 33 ವರ್ಷದ ಜೋ ಮೂರೆ ಎಂಬಾತ ಬ್ರಿಟನ್ ನಿವಾಸಿಯಾಗಿದ್ದಾನೆ. ವೃತ್ತಿಯಲ್ಲಿ ಈತ ಕ್ಷೌರಿಕನಾಗಿದ್ದು, ಈತ ತಾನು ಪ್ರೀತಿಸುತ್ತಿರುವ ಹುಡುಗಿಗೆ ಪ್ರಪೋಸ್ ಮಾಡಿದ ರೀತಿಯನ್ನು ಸ್ಥಳೀಯ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾನೆ. ಮೂರೆ ಕಳೆದ ಮೂರು ವರ್ಷದಿಂದ 36 ವರ್ಷದ ಸಾರಾ ಗ್ರಾಹಂ ಎನ್ನುವವಳನ್ನು ಪ್ರೀತಿಸುತ್ತಿದ್ದ. ಇವರಿಬ್ಬರೂ 3 ವರ್ಷಗಳಿಂದ ಸ್ನೇಹಿತರಾಗಿದ್ದರು. ಸಾರಾಳನ್ನು ಪ್ರೀತಿಸುತ್ತಿದ್ದ ಜೋ ಮೂರೆ ಎಲ್ಲರಿಗಿಂತ ಭಿನ್ನವಾಗಿ ತನ್ನ ಪ್ರೇಮಿಗೆ ಪ್ರಪೋಸ್ ಮಾಡಿದ್ದಾನೆ.
ಸಲಿಂಗಿ ಮಗನ ಅಂತ್ಯಕ್ರಿಯೆಗೆ ಒಪ್ಪದ ಕುಟುಂಬ; ಸಂಗಾತಿಯ ಪಾರ್ಥಿವ ಶರೀರ ಕೋರಿ ಕೋರ್ಟ್ ಮೆಟ್ಟಿಲೇರಿದ ಗೆಳೆಯ
ಮೂರೆ ತನ್ನ ತೊಡೆಯ ಮೇಲೆ 10 ಇಂಚಿನ ಪರ್ಮನೆಂಟ್ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಈತನ ತೊಡೆಯ ಮೇಲಿರುವ ಟ್ಯಾಟೂನಲ್ಲಿ ಎರಡು ಕಾರ್ಟೂನ್ ಇದೆ. ಇದರಲ್ಲಿ ಒಬ್ಬ ಹುಡುಗ ತನ್ನ ಮೊಣಕಾಲನ್ನು ಊರಿ ಕುಳಿತುಕೊಂಡು ತನ್ನ ಎದುರು ನಿಂತಿರುವ ಹುಡುಗಿಗೆ ಹೃದಯವನ್ನು ಕೊಡುತ್ತಿದ್ದಾನೆ. ಹುಡುಗಿ - ಹುಡುಗಿ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ನೋಡಿ ನಗುತ್ತಿರುವ ಅಪರೂಪದ ಟ್ಯಾಟೂ ಇದಾಗಿದೆ. ಹುಡುಗ ಹುಡುಗಿಯ ಚಿತ್ರದ ಕೆಳಗೆ “marry me then…yes or no” ಎಂದು ಕೂಡ ಬರೆಯಲಾಗಿದೆ. ಈ ಟ್ಯಾಟೂ ಹಾಕಿದ ವ್ಯಕ್ತಿ ಕೂಡ, “ಈ ಟ್ಯಾಟೂ ನಾನು ಯಾವಾಗಲೂ ಹಾಕುವ ಟ್ಯಾಟೂಗಿಂತ ಬಹಳ ಭಿನ್ನವಾಗಿದೆ” ಎಂದು ಹೇಳಿದ್ದಾನೆ.
ಟ್ಯಾಟೂ ಹಾಕಿಸಿಕೊಳ್ಳಲು ನಿರ್ಧರಿಸಿದಾಗ ಮೊದಲು ನನಗೆ ಹೆದರಿಕೆಯಾಯಿತು. ನನ್ನ ಕೈಗಳು ಕೂಡ ನಡುಗಲು ಆರಂಭಿಸಿತ್ತು. ಆದರೆ, ಕೊನೆಗೆ ನಾನು ಈ ಕುರಿತು ಗಂಭೀರವಾಗಿ ಚಿಂತಿಸಿದೆ. ಒಂದು ಆನ್ ಲೈನ್ ವಿಡಿಯೋ ನೋಡಿದ ನಂತರ ನಾನು ಟ್ಯಾಟೂ ಮೂಲಕ ಪ್ರಪೋಸ್ ಮಾಡಲು ನಿರ್ಧರಿಸಿದೆ ಎಂದು ಮೂರೆ ಹೇಳಿದ್ದಾನೆ. “ತನ್ನ ಇಂತಹ ಟ್ಯಾಟೂ ನೋಡಿ ಸಾರಾಳಿಗೆ ಮೊದಲು ಹೆದರಿಕೆಯಾಯಿತು, ಆಕೆಗೆ ಏನು ಹೇಳಬೇಕೆಂದು ತಿಳಿಯಲೇ ಇಲ್ಲ. ಯಾರಾದರೂ ಹೀಗೆ ಪ್ರಪೋಸ್ ಮಾಡ್ತಾರಾ ಎಂದು ಏಕೆಗೆ ಅನಿಸಿತ್ತು. ಆದರೆ ಕೊನೆಗೆ ಆಕೆ ತನ್ನ ತಲೆಯನ್ನು ಹಿಡಿದು ಎತ್ತಿ ನನ್ನ ಪ್ರೀತಿಗೆ ಒಪ್ಪಿಗೆ ನೀಡಿದಳು” ಎಂದು ಮೂರೆ ಹೇಳಿದ್ದಾನೆ.