ಒಂದಿಪ್ಪತ್ತು ಇಪ್ಪತ್ತೆರಡು ವರ್ಷದ ಹುಡುಗಿ ಬಳಿ ಹೋಗಿ, ನನ್ನನ್ನು ನಿಮ್ಮ ಅಮ್ಮ ಮಾಡಿಕೊಳ್ತಿಯಾ ಅಂದ್ರೆ ಹೇಗಿರುತ್ತೆ ಹೇಳಿ? ಈ ಹುಡುಗಿ ಬಳಿ ಬರೋ ಮಹಿಳೆಯರು ಇದೇ ಮಾತನಾಡ್ತಾರೆ. ಯಾಕೆ ಎಂಬುದಕ್ಕೆ ಕಾರಣ ಇಲ್ಲಿದೆ.
ಒಂದು ವಸ್ತು ಖರೀದಿ ಮಾಡ್ಬೇಕು ಎಂದಾಗ್ಲೇ ನಾವು ಹತ್ತಾರು ಬಾರಿ ಆಲೋಚನೆ ಮಾಡ್ತೇವೆ. ಇನ್ನು ಹೊಸ ಸಂಬಂಧ ಬೆಳೆಸುವ ವೇಳೆ ಯೋಚನೆ ದುಪ್ಪಟ್ಟಾಗುತ್ತದೆ. ಮದುವೆ ವಿಷ್ಯದಲ್ಲಿ ಜನರು ನಾನಾ ರೀತಿಯಲ್ಲಿ ಆಲೋಚನೆ ಮಾಡಿ ನಿರ್ಧಾರಕ್ಕೆ ಬರುತ್ತಾರೆ. ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಸ್ವಭಾವ, ಆಸ್ತಿ, ಸೌಂದರ್ಯ ಎಲ್ಲವನ್ನೂ ಜನರು ಗಣನೆಗೆ ತೆಗೆದುಕೊಳ್ತಾರೆ. ಎರಡನೇ ಬಾರಿ ಮದುವೆಯಾಗುವ ಜನರು ಮತ್ತಷ್ಟು ಗಂಭೀರವಾಗಿರುತ್ತಾರೆ. ತಮಗೆ ಅದ್ರಿಂದ ಪ್ರಯೋಜನವಿದೆ ಎಂದಾಗ ಮಾತ್ರ ಮುಂದಿನ ಹೆಜ್ಜೆ ಇಡುತ್ತಾರೆ. ಈಗಾಗಲೇ ಮೂರ್ನಾಲ್ಕು ಮದುವೆ ಆಗಿರುವ, ವಯಸ್ಸಿಗೆ ಬಂದ ಮಗಳಿರುವ ವ್ಯಕ್ತಿಯನ್ನು ಮದುವೆ ಆಗಲು ಆಸಕ್ತಿ ತೋರಿಸುವವರ ಸಂಖ್ಯೆ ಬಹಳ ಅಪರೂಪ. ಮಲತಾಯಿ ಆಗೋದು ಸುಲಭದ ಮಾತಲ್ಲ. ಆದ್ರೆ ಈ ಹುಡುಗಿ ಅನುಭವ ವಿಚಿತ್ರವಾಗಿದೆ. ಈ ಹುಡುಗಿಯನ್ನು ಅನೇಕ ಮಹಿಳೆಯರು ಮುತ್ತಿಕೊಳ್ತಿದ್ದಾರೆ. ಆಕೆ ಸ್ನೇಹ ಬೆಳೆಸಲು ಮುಂದಾಗ್ತಿದ್ದಾರೆ. ಅದಕ್ಕೆ ಕಾರಣ ಆಕೆಯಲ್ಲ, ಆಕೆಯ ತಂದೆ. ಹುಡುಗಿ ಅಪ್ಪನ ಸೌಂದರ್ಯ. ಸಾಮಾಜಿಕ ಜಾಲತಾಣದಲ್ಲಿ ಹುಡುಗಿ ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ. ಅನೇಕರು ಇದಕ್ಕೆ ಕಮೆಂಟ್ ಮಾಡಿದ್ದಾರೆ.
ಅವಳ ಹೆಸರು ಇಸಾನ್ ಎಲ್ಬಾ. ಟಿಕ್ ಟಾಕ್ (Tik Tok) ನಲ್ಲಿ ಇಸಾನ್ ಎಲ್ಬಾ ತನ್ನ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಅದ್ರಲ್ಲಿ ತನ್ನ ಅನುಭವವನ್ನು ಹೇಳಿದ್ದಾಳೆ. ಆಕೆಯನ್ನು ಮೆಚ್ಚಿಸಲು ಅನೇಕ ಮಹಿಳೆಯರು ಆಸಕ್ತಿ ತೋರುತ್ತಾರೆ. ಇಸಾನ್ ಎಲ್ಬಾ ಸ್ನೇಹ ಬೆಳೆಸಲು ಎಲ್ಲ ಮಹಿಳೆಯರು ಹತ್ತಿರ ಬರ್ತಾರೆ. ಇದು ಇಸಾನ್ ಎಲ್ಬಾ ಮೇಲಿರುವ ಪ್ರೀತಿ (love) ಅಥವಾ ಆಕರ್ಷಣೆಗಲ್ಲ. ಇಸಾನ್ ಎಲ್ಬಾ ಅವರ ತಂದೆಗಾಗಿ. ಹೌದು, ಇಸಾನ್ ಎಲ್ಬಾ ತಂದೆ ತುಂಬಾ ಸುಂದರವಾಗಿದ್ದಾರೆ. ಇಸಾನ್ ಎಲ್ಬಾ ಮೂಲಕ ಅವರ ಸ್ನೇಹ (friendship) ಬೆಳೆಸಲು, ಅವರಿಗೆ ಹತ್ತಿರ ಆಗಲು ಮಹಿಳೆಯರು ಈ ಕೆಲಸ ಮಾಡ್ತಾರೆ. ಇಸಾನ್ ಎಲ್ಬಾಗೆ ಇದು ನಿತ್ಯದ ಕಥೆಯಾಗಿದೆ. ಪ್ರತಿ ದಿನ ಒಂದಲ್ಲ ಒಂದು ಮಹಿಳೆಯರು ಆಕೆ ಬಳಿ ಬರ್ತಾರೆ.
ಬಾಯ್ಸ್ ಈ ರೀತಿ ಪ್ರಪೋಸ್ ಮಾಡಿದ್ರೆ ಹುಡುಗೀರು ರಿಜೆಕ್ಟ್ ಮಾಡೋ ಛಾನ್ಸೇ ಇಲ್ಲ!
ಇಸಾನ್ ಎಲ್ಬಾ ಯಾರು? : ಇಸಾನ್ ಎಲ್ಬಾ, ಇಸಾನ್ ಮಗಳು. ಇಸಾನ್, ಇಂಗ್ಲಿಷ್ ನಟ, ರಾಪರ್ ಮತ್ತು ಗಾಯಕ. ಇಸಾನ್ ಈ ಹಿಂದೆ ಮೂರು ಬಾರಿ ಮದುವೆಯಾಗಿದ್ದಾರೆ. ಇಸಾನ್ ಅವರ ಮೊದಲ ಪತ್ನಿ ಕಿಮ್ ಅವರ ಮಗಳು. ಅವರ ಎರಡನೇ ಪತ್ನಿ ನಿಕೋಲ್. ಅವರು 2006 ರಲ್ಲಿ ವಿಚ್ಛೇದನ ಪಡೆದಿದ್ದರು. 2019 ರಲ್ಲಿ ಸಬ್ರಿನಾ ಆಲ್ಬಾ ಅವರನ್ನು ಮದುವೆಯಾದರು. ಮೂರು ಮದುವೆ ಆದ್ರೂ ಇಸಾನ್ ಪ್ರೀತಿಸುವ ಮಹಿಳೆಯರ ಸಂಖ್ಯೆ ಕಡಿಮೆ ಆಗಿಲ್ಲ. ಇಸಾನ್ ಫಿಟ್ನೆಸ್, ಸೌಂದರ್ಯ ಎಲ್ಲರ ಗಮನ ಸೆಳೆಯುತ್ತದೆ.
ನನ್ನ ತಂಗಿಗೆ ಬ್ರೇಕಪ್ ಆಗಿದೆ, ಆಕೆಯೊಂದಿಗೆ ಮಲಗುವಂತೆ ಗೆಳೆಯನನ್ನು ಕೇಳಿದ ಗರ್ಲ್‌ಫ್ರೆಂಡ್!
ಇಸಾನ್ ಎಲ್ಬಾ ಬಳಿ ಬರುವ ಮಹಿಳೆಯರು, ತನ್ನನ್ನು ಮಲತಾಯಿ ಮಾಡಿಕೊಳ್ಳುವಂತೆ ಕೇಳ್ತಾರೆ. ನಿನ್ನ ತಂದೆಯನ್ನು ಪ್ರೀತಿ ಮಾಡ್ತಿದ್ದೇವೆ ಎಂದು ಮಗಳ ಮುಂದೆ ಹೇಳ್ತಾರೆ. ತಂದೆ ಬಳಿ ಕರೆದುಕೊಂಡು ಹೋಗುವಂತೆ ರಿಕ್ವೆಸ್ಟ್ ಮಾಡ್ತಾರೆ. ಇದೆಲ್ಲವನ್ನೂ ಇಸಾನ್ ಎಲ್ಬಾ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾಳೆ.
ಇಸಾನ್ ಎಲ್ಬಾ ಟಿಕ್ ಟಾಕ್ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ಸ್ ಬಂದಿದೆ. ಅನೇಕರು ಲೈಕ್ ಬಟನ್ ಒತ್ತಿದ್ದಾರೆ. ನಾನು ನಿಮ್ಮ ತಂದೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ ಇನ್ನೊಬ್ಬರು ಹದಿನೈದು ವರ್ಷದಿಂದ ತಂದೆ ಮೇಲೆ ಕ್ರಶ್ ಇದೆ ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ತಂದೆ ಅವಶ್ಯಕತೆ ನಮಗೂ ಇದೆ. ಅವರ ಬಳಿ ನೀವೇ ನಮ್ಮನ್ನು ಕರೆದುಕೊಂಡು ಹೋಗ್ಬೇಕು ಎಂದು ಮತ್ತೆ ಕೆಲವರು ಇಸಾನ್ ಎಲ್ಬಾ ಸಹಾಯ ಕೇಳಿದ್ದಾರೆ.