'ಯಾರ ಜೊತೆ ಬೇಕಾದರೂ ಮಲಗೋಕೆ ರೆಡಿ..' ವಿವಾದ ಸೃಷ್ಟಿಸಿದ ವಡಾಪಾವ್‌ ಗರ್ಲ್‌ ಚಂದ್ರಿಕಾ ದೀಕ್ಷಿತ್‌ ಮಾತು!

Published : Mar 16, 2026, 12:11 PM IST
chandrika dixit

ಸಾರಾಂಶ

"ವಡಾ ಪಾವ್ ಗರ್ಲ್" ಖ್ಯಾತಿಯ ಚಂದ್ರಿಕಾ ದೀಕ್ಷಿತ್, ಸಂದರ್ಶನವೊಂದರಲ್ಲಿ ತಮ್ಮ ಮಕ್ಕಳ ಪಾಲನೆಗಾಗಿ ಹಣ ಸಂಪಾದಿಸಲು ಯಾರೊಂದಿಗಾದರೂ ಮಲಗಲು ಸಿದ್ಧ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ನವದೆಹಲಿ (ಮಾ.16): "ವಡಾ ಪಾವ್ ಗರ್ಲ್" ಎಂದು ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದ ಚಂದ್ರಿಕಾ ದೀಕ್ಷಿತ್ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಆಕೆ ಮಾತನಾಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಅದರಲ್ಲಿ ಅವರು ಆಡಿರುವ ಮಾತು ಹೆಚ್ಚಿನವರಿಗೆ ಹಿಡಿಸಿಲ್ಲ. ಹಾಗೇನಾದರೂ ಸಂಕಷ್ಟ ಬಂದು ಸಮಸ್ಯೆ ಆದರೆ, ಮಕ್ಕಳನ್ನು ಪಾಲನೆ ಮಾಡುವ ಸಲುವಾಗಿ ಹಣ ಸಂಪಾದನೆ ಮಾಡಲು ಯಾರ ಜೊತೆ ಬೇಕಾದರೂ ಮಲಗೋಕೆ ರೆಡಿ ಎಂದು ಹೇಳಿದ್ದಾರೆ.

ಶಲ್ಲು ನಿಶಾ ಪಾಡ್‌ಕ್ಯಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಚಂದ್ರಿಕಾ ದೀಕ್ಷಿತ್ ತಮ್ಮ ಮಗುವನ್ನು ಬೆಳೆಸುವುದು ಮತ್ತು ಆರ್ಥಿಕ ತೊಂದರೆಗಳ ಬಗ್ಗೆ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.

ಚಂದ್ರಿಕಾ ದೀಕ್ಷಿತ್‌ ಹೇಳಿದ್ದೇನು?

"ವಡಾ ಪಾವ್ ಗರ್ಲ್" ಎಂದೇ ಫೇಮಸ್‌ ಆಗಿರುವ ಚಂದ್ರಿಕಾ ದೀಕ್ಷಿತ್, "ನನಗೆ ಯಾವುದೇ ನಾಚಿಕೆ ಇಲ್ಲ. ಒಬ್ಬ ತಾಯಿಯಾಗಿ, ನಾನು ತುಂಬಾ ಗಂಭೀರವಾದ ವಿಷಯವನ್ನು ಹೇಳುತ್ತಿದ್ದೇನೆ. ಜನರು ನನ್ನನ್ನು ಹೇಗೆ ನಿರ್ಣಯಿಸುತ್ತಾರೆಂದು ನನಗೆ ತಿಳಿದಿಲ್ಲ. ಆದರೆ ನನ್ನ ಮಗುವನ್ನು ಬೆಳೆಸಲು ನಾನು ಬೇರೊಬ್ಬನ ಜೊತೆ ಮಲಗಬೇಕಾದ ಸಂದರ್ಭ ಬಂದರೆ, ನಾನು ಅದನ್ನು ಮಾಡುತ್ತೇನೆ. ಅದರಿಂದ ಬಂದ ಹಣದಲ್ಲಿಯೇ ನಾನು ನನ್ನ ಮಗುವನ್ನು ಬೆಳೆಸುತ್ತೇನೆ' ಎಂದು ಹೇಳಿದ್ದಾರೆ.

ಮಕ್ಕಳನ್ನು ಪಾಲನೆ ಮಾಡಲು ನನಗೆ ಆ ರೀತಿಯ ಸಂದರ್ಭ ಏನಾದರೂ, ಬೇರೊಬ್ಬನ ಜೊತೆ ಖಂಡಿತವಾಗಿಯೂ ಮಲಗುತ್ತೇನೆಸ ಎಂದು ಕಣ್ಣೀರಿಡುತ್ತಲೇ ಹೇಳಿದ್ದಾರೆ. ಆಕೆಯ ಈ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ಕ್ವಿಕ್‌ ಆಗಿ ವೈರಲ್‌ ಆಗಿದೆ.

ಈ ಕ್ಲಿಪ್ ವೈರಲ್ ಆದ ನಂತರ, ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಚಂದ್ರಿಕಾ ಅವರ ಹೇಳಿಕೆಗೆ ಕೋಪದಿಂದ ಪ್ರತಿಕ್ರಿಯೆ ನೀಡಿದ್ದಾರೆ, ಇನ್ನೂ ಕೆಲವರು ಈಕೆ ಏನು ಹೇಳುತ್ತಿದ್ದಾಳೆ ಅನ್ನೋದು ಆಕೆಗೇ ಗೊತ್ತಿಲ್ಲ. ಸಾರ್ವಜನಿಕವಾಗಿ ಏನು ಮಾತನಾಡಬೇಕು, ಮಾತನಾಡಬಾರದು ಅನ್ನೋ ಪ್ರಜ್ಞೆಯೇ ಆಕೆಗಿಲ್ಲ ಎಂದಿದ್ದಾರೆ. ಪ್ರಾಮಾಣಿಕವಾಗಿ ದುಡಿದು, ಜೀವನ ಸಾಗಿಸಲು, ಮಕ್ಕಳನ್ನು ಬೆಳೆಸಲು ಸಾಧ್ಯವಿದೆ. ಅದಕ್ಕಾಗಿ ಇಂಥ ಮಾರ್ಗ ಹಿಡಿಯುವ ಅಗತ್ಯವೇ ಇಲಲ ಎಂದಿದ್ದಾರೆ. ಇಂಥ ಹೇಳಿಕೆಗಳನ್ನು ನೀಡುವ ಬದಲು ಕಷ್ಟಪಟ್ಟು ಕೆಲಸ ಮಾಡಿದರೆ, ಎಲ್ಲೂ ಸಾಧ್ಯವಿದೆ ಎಂದಿದ್ದಾರೆ. ಇನ್ನೂ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಲು ಆಕೆಯ ಗಿಮಿಕ್‌ ಇದು ಎಂದಿದ್ದಾರೆ.

 

 

ಇಂತಹ ಹೇಳಿಕೆಗಳು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತವೆ ಮತ್ತು ಯಾವುದೇ ಸಂದರ್ಭದಲ್ಲೂ 'ಸಾಮಾನ್ಯ' ಎಂದು ಪರಿಗಣಿಸಬಾರದು ಎಂದು ಅನೇಕ ಜನರು ಪೋಸ್ಟ್ ಮಾಡಿದ್ದಾರೆ.

ಯಾರೀಕೆ ಚಂದ್ರಿಕಾ ದೀಕ್ಷಿತ್‌

"ವಡಾ ಪಾವ್ ಗರ್ಲ್" ಎಂದೂ ಕರೆಯಲ್ಪಡುವ ಚಂದ್ರಿಕಾ ದೀಕ್ಷಿತ್ ಸೋಶಿಯಲ್‌ ಮೀಡಿಯಾ ಇನ್ಫ್ಲುಯೆನ್ಸರ್‌.ದೆಹಲಿಯಲ್ಲಿ ವಡಾ ಪಾವ್ ಸ್ಟಾಲ್ ತೆರೆದ ನಂತರ ಅವರು ಸೋಶಿಯಲ್‌ ಮೀಡಿಯಾದಲ್ಲಿ ಖ್ಯಾತಿ ಗಳಿಸಿದರು. ನಂತರ ಆಕೆ "ಬಿಗ್ ಬಾಸ್ OTT 3" ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದರು. ಇತ್ತೀಚೆಗೆ ಈಕೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಆರೋಪ ಹೊರಿಸಿದ್ದರು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆಯಾಗೋದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ 9.35 ಕೋಟಿ ರೂ. ನಾಮ: ಬಿಗ್‌ ಬಾಸ್ ನಟಿ ವಿರುದ್ಧ ವಂಚನೆ ಕೇಸ್ ದಾಖಲು!
Viral Video: ಗಂಡನಿಗೆ ಜಾಮೀನು ಕೊಡಿಸೋಕೆ ಬಂದು ಜಗಳವಾಡಿದ ಹೆಂಡತಿಯರು; ಗಂಡ ಹೊರಗೆ, ಆ ಇಬ್ಬರೂ ಒಳಗೆ!